Advertisement

Category: ಸರಣಿ

ಮನೆಯಂಗಳದ ನಾಕವೀ ಹೂವಿನಲೋಕ: ಭವ್ಯ ಟಿ.ಎಸ್. ಸರಣಿ

ಈ ಹೂ ಮುಡಿಯುವ ವಿಷಯದಲ್ಲಿ ಒಂದು ರೀತಿಯ ಸ್ಪರ್ಧೆಯಿದ್ದ ಕಾಲವದು. ತಾವು ಮುಡಿದು, ಗೆಳತಿಯರಿಗೂ ತರುವವರೂ ಇದ್ದರು. ಆದರೆ ನನ್ನ ಜಡೆ ಏರುತ್ತಿದ್ದ ಈ ಸೊಬಗಿನ ಡೇರೆ ಹೂಗಳ ಮೇಲೆ ಗೆಳತಿಯರ ಕಣ್ಣು. ಅವರ ಆಸೆಗೆ ಮಣಿದು ಸಂಜೆಯಾದರೂ ಬಾಡದೇ ನಗುತ್ತಿದ್ದ ಡೇರೆ ಹೂವನ್ನು ಮುಡಿಯಿಂದ ತೆಗೆದು ಕೊಟ್ಟು ಬಂದದ್ದು ಇತ್ತು. ಈ ಡೇರೆಯ ವೈಜ್ಞಾನಿಕ ಹೆಸರು ಡೇಲಿಯಾ. ಇದು ಬೇಸಿಗೆಯಲ್ಲಿ ಬೆಳೆಯಲಾರದು. ಬೇಸಿಗೆಯಲ್ಲಿ ಇದರ ಗೆಡ್ಡೆಗಳನ್ನು ಒಣ ಮಣ್ಣಿನಲ್ಲಿ ಸಂಗ್ರಸಿಟ್ಟು, ಮಳೆ ಬಿದ್ದೊಡನೆ ನೆಲಕ್ಕೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಟ್ಟು ಬೆಳೆಯುತ್ತಾರೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ನಾಟಕಗಳ ನಾಟಕ: ಸುಮಾ ಸತೀಶ್ ಸರಣಿ

ನಮ್ಮಪ್ಪುಂಗೆ ನಾಟಕ ಅಂದ್ರೆ ಹುಚ್ಚು. ನಮ್ಮೂರ್ನಾಗೇನೂ ನಾಟಕದ ಕಂಪನಿ ಇರ್ಲಿಲ್ಲವಲ್ಲ. ವರ್ಸುಕ್ಕೆ ಒಂದೋ ಎಲ್ಡೋ ಆಟೇಯಾ. ಮಾಸ್ಟರ್ ಹಿರಣ್ಣಯ್ಯ ಅವುರ್ದು ಎಲ್ಲಾ ನಾಟಕದ ಕ್ಯಾಸೆಟ್ಟೂ ಇದ್ವು. ಟೇಪ್ ರೆಕಾರ್ಡರ್ ನಾಗೆ ಜಿನಾ ಅದ್ನೇ ಕೇಳೋದು. ಒಂದೊಂದು ನಾಟಕವೂ ನೂರಾರು ಸತಿ ಕೇಳಿದ್ವಿ. ಎಚ್ಚಮ ನಾಯಕ, ಕಪಿಮುಷ್ಟಿ, ಭ್ರಷ್ಟಾಚಾರ, ಲಂಚಾವತಾರ, ಫೋನಾವತಾರ, ದೇವದಾಸಿ, ನಡುಬೀದಿ ನಾರಾಯಣ…ಕೇಳೀ ಕೇಳೀ ನಮ್ಗೆ ಬಾಯಿ ಪಾಟ ಆಗೋಗ್ತಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ಊರಿನಲ್ಲಿ ನಡೆಯುತ್ತಿದ್ದ ನಾಟಕಗಳ ಕುರಿತು ಬರೆದಿದ್ದಾರೆ

Read More

ಉಪವಾಸ ವ್ರತದ ಅನುಭವಗಳು: ದರ್ಶನ್‌ ಜಯಣ್ಣ ಸರಣಿ

ನನ್ನ ಹೆಂಡತಿಯನ್ನು ತೋರಿಸಿ “ಆಕೆ ಕ್ಯಾರಿಯಿಂಗ್” ಅಂದೆ. ಆಕೆಯ ಮುಖ ಪೆಚ್ಚಾಯಿತು! ಅವಳ ಸೂಪರ್ವೈಸರ್‌ಗೆ ಫೋನಾಯಿಸಿ ಕೇಳಿದಳು. ಒಂದಷ್ಟು ಮಾತೂ ಕಥೆಯಾದಮೇಲೆ ಕೊಟ್ಟಳು. ನಾನು ಧನ್ಯವಾದ ಹೇಳಿ ಅದನ್ನು ಪಡೆದು ಕ್ಯಾಪ್ ತೆಗೆಯುವಾಗ “ಸರ್ ಮ್ಯಾಡಂ ಪ್ಲೀಸ್ ಅದನ್ನು ಇಲ್ಲಿ ಕುಡಿಯಬೇಡಿ” ಅಂದಳು. ನಾನು “ಇದು ಕ್ಯಾಂಟೀನ್, ಇಲ್ಲಿ ಬೇಡ ಎಂದರೆ ಹೊರಗೆ ಸಾಧ್ಯವೇ ಇಲ್ಲ” ಎಂದು ನನ್ನ ಅಸಹಾಯಕತೆ ತೋರಿದೆ. ಅದಕ್ಕವಳು ನನ್ನ ಹೆಂಡತಿಯನ್ನು ಕುರಿತು “ಮ್ಯಾಡಂ ನೀವು ಅದನ್ನು ನಿಮ್ಮ ವ್ಯಾನಿಟಿ ಬಾಗ್‌ನಲ್ಲಿ ಇಟ್ಟುಕೊಂಡು, ಟಾಯ್ಲೆಟ್‌ನ ಒಳಗೆ ಹೋಗಿ ಕುಡಿದು ಬನ್ನಿ ಪ್ಲೀಸ್!” ಅಂದಳು.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಆರನೆಯ ಕಂತು

Read More

ಮೌನ ಮಾತಾಡಿದಾಗ ಹೊತ್ತಾಗಿತ್ತು: “ದಡ ಸೇರದ ದೋಣಿ” ಸರಣಿಯಲ್ಲಿ ನಾರಾಯಣ ಯಾಜಿ ಬರಹ

ಇದ್ದಕ್ಕಿದ್ದಂತೆ ರಾಮಕೃಷ್ಣ ನನ್ನನ್ನು ಹುಡುಕಿಕೊಂಡು ಬಂದ, ಅಳುತ್ತಿದ್ದ, ಏನಾಯ್ತು ಎಂದರೆ “ಸುಮಾಳ ಮದುವೆ ಫಿಕ್ಸ್ ಆಯಿತು.. ಹುಡುಗ ದೆಹಲಿಯಲ್ಲಿದ್ದಾನೆ. ಸಿಕ್ಕಾಪಟ್ಟೆ ದೊಡ್ಡ ಉದ್ಯೋಗವಂತೆ” ಎಂದವನೇ “ನನ್ನನ್ನು ಕ್ಷಮಿಸು, ನಿನಗೂ ಅನ್ಯಾಯ ಮಾಡಿದೆ. ನಿನಗೆ ಅಶ್ವಿನಿಯ ಮೇಲೆ ಮನಸ್ಸಾದರೆ ಸುಮಾ ನನ್ನನ್ನು ಒಲಿಯಬಹುದು ಅಂದುಕೊಂಡೆ” ಎಂದವನೇ ಅಪ್ಪಿ ಅಳತೊಡಗಿದ. ನಾನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಮದುವೆಗೆ ಆಮಂತ್ರಣವೂ ಬರಲಿಲ್ಲ. ಮುಕೇಶ್‌ ನೆನಪಾದ. ಹಾಡಬೇಕೆಂದರೆ ಕೇಳುವವರು ಯಾರು ಎಂದೆನಿಸಿತು.
“ದಡ ಸೇರದ ದೋಣಿ” ಸರಣಿಯಲ್ಲಿ ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

Read More

ಮಲೆನಾಡ ಸಂಪತ್ತು, ಗೋ ಸಂಪತ್ತು: ರೂಪಾ ರವೀಂದ್ರ ಜೋಶಿ ಸರಣಿ

ನಮಗೆಲ್ಲ ಮನುಷ್ಯರಿಗಿಂತ ಕೊಟ್ಟಿಗೆಯಲ್ಲಿರುತ್ತಿದ್ದ ದನ ಕರುಗಳ ಜೊತೆಗೇ ಹೆಚ್ಚು ಸ್ನೇಹ. ನಮ್ಮ ಕೊಟ್ಟಿಗೆಯಲ್ಲಿ ಸುಮಾರು ಹತ್ತು ಹದಿನೈದು ದನಗಳಿದ್ದವು. ಅವೆಲ್ಲವಕ್ಕೂ ಒಂದೊಂದು ಹೆಸರು. ಆಯಿ ಕೊಟ್ಟಿಗೆಯ ಹೊರಗೆ ನಿಂತು, ಅವುಗಳಲ್ಲಿ ಯಾವುದಾದರೂ ಒಂದರ ಹೆಸರು ಹಿಡಿದು ಕರೆದರೆ ಸಾಕು. ಅವು ತಕ್ಷಣ “ಅಂಬಾ” ಎಂದು ದನಿಯೆತ್ತಿ ಓಗುಡುತ್ತಿದ್ದವು. ನಮ್ಮಲ್ಲಿ ಆಕಳು ಕರು ಹಾಕಿತೆಂದರೆ, ನಮಗೆ ಎಲ್ಲಿಲ್ಲದ ಸಂಭ್ರಮ. ಮೊದಲು ಅದಕ್ಕೊಂದು ಚಂದವಾದ ಹೆಸರಿಡುವುದು. ಅದು ಬೆಳಗ್ಗೆ ಹೊಟ್ಟೆ ತುಂಬ ಹಾಲು ಕುಡಿದು ಇಡೀ ಕೊಟ್ಟಿಗೆ ತುಂಬ ಮರಿ ಜಿಂಕೆಯಂತೇ ಜಿಗಿಯುತ್ತ ಓಡುವುದನ್ನು ನೋಡುವುದೇ ಒಂದು ಸಂಭ್ರಮ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ನಾಲ್ಕನೆಯ ಕಂತು

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ