ಕೋಟಿಗೊಬ್ಬರು “ಎಂ.ಎಸ್.ರಾಮಯ್ಯ”: ಎಚ್. ಗೋಪಾಲಕೃಷ್ಣ ಸರಣಿ
ಮತ್ತಿಕೆರೆ ಎನ್ನುವ ಬೆಂಗಳೂರಿನ ಹೊರ ಮೂಲೆಯಲ್ಲಿದ್ದ ಒಂದು ಪುಟ್ಟ ಹಳ್ಳಿ ಇವತ್ತು ಜಗತ್ತಿನ ಒಂದು ಪ್ರಮುಖ ಸ್ಥಳವಾಗಿ ಮಾರ್ಪಾಟು ಆಗಿರುವಲ್ಲಿ ಎಂ ಎಸ್ ರಾಮಯ್ಯ ಅವರ ಕಾರ್ಯಕ್ಷೇತ್ರ ಎದ್ದು ಕಾಣುತ್ತದೆ. ಮತ್ತಿ ಕೆರೆ ಸಂಪಂಗಪ್ಪ ರಾಮಯ್ಯ ಹೀಗೆ ಜಗತ್ತಿನ ಭೂಪಟದಲ್ಲಿ ಬೆಂಗಳೂರು ಮತ್ತು ಮತ್ತಿ ಕೆರೆಗೆ ಒಂದು ವಿಶಿಷ್ಠ ಸ್ಥಾನ ದೊರಕಿಸಿ ಕೊಟ್ಟಿದ್ದಾರೆ. ಬಹುಶಃ ಜಗತ್ತಿನಲ್ಲಿ ಇಂತಹ ಉನ್ನತ ಮಟ್ಟಕ್ಕೆ ಏರಿದ ವ್ಯಕ್ತಿ ಅಪರೂಪದಲ್ಲಿ ಅಪರೂಪವೇ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ನಾಲ್ಕನೆಯ ಕಂತು ನಿಮ್ಮ ಓದಿಗೆ