Advertisement

Category: ಸರಣಿ

ಸೂರ್ಯಕಾಂತಿಯ ಕವಿತೆಗಳು…: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಬ್ರುಂಡ್‌ಜಾಯಿಟೆ ಅವರ ಕಾವ್ಯದ ಪ್ರಮುಖ ಹಾಗೂ ಆಕರ್ಷಕ ಗುಣವೆಂದರೆ ಅವರು ಚಿತ್ರಿಸುವ ಪ್ರಪಂಚದ ಪ್ರಾಮಾಣಿಕತೆ ಮತ್ತು ಗೀತಾತ್ಮಕ ವಿಷಯದ ಸತ್ಯತೆ ಮತ್ತು ಶ್ರದ್ಧೆ. ಇಲ್ಲಿ ಮುಖವಾಡ ಧರಿಸುವ ಅಥವಾ ಅಲಂಕಾರಿಕ ಸರಸೋಕ್ತಿಗಳನ್ನು ಬಳಸುವ ಮತ್ತು ಅನಗತ್ಯವಾಗಿ ಚತುರರಾಗುವ ಯಾವುದೇ ಪ್ರಯತ್ನವಿಲ್ಲ. ಬ್ರುಂಡ್‌ಜಾಯಿಟೆ ಭಾಷೆ ಮತ್ತು ಇತರರ ಕೃತಿಗಳ ಉಲ್ಲೇಖಗಳೊಂದಿಗೆ ಶಬ್ದವಾಟವಾಡುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಊರೆಂಬ ಹರಿಗೋಲು: ಚಂದ್ರಮತಿ ಸೋಂದಾ ಸರಣಿ

ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಗಳಂದು ನಮಗೆಲ್ಲ ಸಂಭ್ರಮವೋ ಸಂಭ್ರಮ. ಹಿಂದಿನ ದಿನವೇ ನಮ್ಮ ಮೇಷ್ಟ್ರು ಯಾರ‍್ಯಾರಿಗೆ ಏನೇನು ಕೆಲಸ ಎಂದು ತಿಳಿಸುತ್ತಿದ್ದರು. ಸ್ವಲ್ಪ ದೊಡ್ಡ ಮಕ್ಕಳು ಹಿಂದಿನ ಸಂಜೆಯೇ ತಮ್ಮನೆಯ ಹಿತ್ತಲಿನಲ್ಲಿರುವ ಮಾವಿನ ಗಿಡದಿಂದ ಮಾವಿನ ಸೊಪ್ಪನ್ನು ತಂದು ಅದನ್ನು ದಾರದಲ್ಲಿ ಪೋಣಿಸಿ ಶಾಲೆಯ ಬಾಗಿಲಿಗೆ ಕಟ್ಟುತ್ತಿದ್ದರು. ಹೆಚ್ಚಾಗಿ ಇದು ಗಂಡುಮಕ್ಕಳ ಕೆಲಸವಾಗಿತ್ತು. ಆಗ ನಮಗೆ ಸಮವಸ್ತ್ರದ ಕಟ್ಟುಪಾಡಿರಲಿಲ್ಲ. ಹಾಗಾಗಿ ನಮ್ಮ ಬಳಿ ಇರುವ ಒಳ್ಳೆಯ ಬಟ್ಟೆಯನ್ನು ಧರಿಸಿ, ಎಂಟುಗಂಟೆಗೆ ನಾವು ಶಾಲೆಯಲ್ಲಿರುತ್ತಿದ್ದೆವು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಜೈಲಲ್ಲಿ ನೀತಿಶಾಸ್ತ್ರ: ಕೆ. ಸತ್ಯನಾರಾಯಣ ಸರಣಿ

ಸೆರೆಮನೆಯಲ್ಲಿರುವ, ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ಖೈದಿಗಳಿಗೆ ಮನರಂಜನೆ ಇರಬೇಕು, ಅದಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂಬ ಮಾತನ್ನು ನಾನು ಇದುವರೆಗೆ ಎಲ್ಲೂ ಕೇಳಿಲ್ಲ. ಅವರ ಮನೋಧರ್ಮದಲ್ಲಿ ಏನಾದರೂ ಸುಧಾರಣೆ ಆಗಬೇಕು ಎನ್ನುವುದಾದರೆ, ಧಾರ್ಮಿಕ ಪ್ರವಚನಗಳನ್ನು ಏರ್ಪಡಿಸಲಿ, ಭಗವದ್ಗೀತೆ ಮೇಲೆ ಉಪನ್ಯಾಸ ನೀಡಲಿ, ಭಜನೆ ಇರಲಿ, ಹಾಡುಗಾರರನ್ನು ಕರೆಸಿ ದೇವರನಾಮ ಹೇಳಿಸಿ, ಪ್ರಾರ್ಥನೆ ಇರಲಿ.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿ

Read More

ಕಾರೂ… ಕಾರ್‌ ಬಾರೂ..: ಗುರುಪ್ರಸಾದ ಕುರ್ತಕೋಟಿ ಸರಣಿ

ಕಾರನ್ನ ಮನೆಗೆ ನಾನೇ ಓಡಿಸಿಕೊಂಡು ಬಂದೆ. ಜೊತೆಗೆ ಅಜ್ಜಂಪುರ ಸರ್ ಕೂಡ ಬಂದರು. ಅವರ ಧೈರ್ಯ ಮೆಚ್ಚಲೇಬೇಕು! ನನಗೆ ಅಮೆರಿಕೆಯಲ್ಲಿ ಮೊದಲೇ ಕಾರ್ ಓಡಿಸಿದ ಅನುಭವ ಇತ್ತು. ಹಿಂದೆ ಒಂದೆರಡು ಬಾರಿ ಕೆಲವು ತಿಂಗಳಿಗೆ ಅಂತ ಅಮೆರಿಕೆಯ ಯುಟಾ (Utah) ಗೆ ಹೋಗಿದ್ದಾಗ ಅಲ್ಲಿ ನನ್ನ ಮ್ಯಾನೇಜರ್ ನನಗೆ ಒತ್ತಾಯ ಮಾಡಿ ಕಾರ್ ಓಡಿಸಲು ರೂಡಿ ಮಾಡಿಸಿದ್ದು ಈಗ ಪ್ರಯೋಜನಕ್ಕೆ ಬಂದಿತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಎಂಟನೆಯ ಬರಹ

Read More

ಕಾಲದೊಂದಿಗೆ ಇಲ್ಲಿ ಕೆಲವೊಂದು ಬದಲಾಗುತ್ತವೆ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಆಗ ಊರಲ್ಲಿ ಯಾವುದೇ ಮನೆಯ ಮದುವೆಯಾದ್ರೂ ನಮಗೆ ಊರ ಹಬ್ಬದ ವಾತಾವರಣದಂತೆ ಅನಿಸುತ್ತಿತ್ತು. ಮದುವೆ ಮನೆ ಊಟದ ಖುಷಿ ಒಂದೆಡೆಯಾದರೆ ಅಲ್ಲಿ ಮೈಕಿನಲ್ಲಿ ಹಾಕಿರುತ್ತಿದ್ದ ಚಲನಚಿತ್ರ ಗೀತೆಗಳನ್ನು ಕೇಳುವುದೂ ಖುಷಿ ಕೊಡುತ್ತಿತ್ತು. ಮೊದಲಿಗೆ ‘ಮೂಷಿಕ ವಾಹನ ಮೋದಕ ಹಸ್ತ’ ಹಾಡಿನಿಂದ ಮದುವೆಯ ಮನೆಯ ಹಾಡುಗಳು ಶುರುವಾಗುತ್ತಿದ್ದವು. ಆಗ ಊರಲ್ಲಿ ಮದುವೆಯಾದರೆ ಆ ಮದುವೆಯಲ್ಲಿ ಊಟ ಬಡಿಸೋಕೆ ಅಂತಾ ದುಡ್ಡು ಕೊಟ್ಟು ಜನರನ್ನು ಕರೆಸುತ್ತಿರಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ