Advertisement

Category: ದಿನದ ಕವಿತೆ

ಆಶಾ ಜಗದೀಶ್ ಬರೆದ ಈ ದಿನದ ಕವಿತೆ

“ಮುಗಿಲ ಸಂಗ ತೊರೆದ
ಮಳೆ ಹನಿಯಂತೆ
ನಾನಿಲ್ಲಿ ನೋಯುತ್ತಿರುವೆ
ನಿನ್ನನೇ ನೆನೆದು
ನಾನೇ ಹತ್ತಿರುವ ಚಕ್ರ
ತಿರುಗುತ್ತದೆ
ರೂಢಿಯಂತೆ
ಹಲವು ನಿಲ್ದಾಣಗಳಲ್ಲಿ
ಹಂಚಿಹೋಗಿರುವ
ಬದುಕಿನ ತುಣುಕುಗಳನ್ನು
ಆರಿಸಿಕೊಳ್ಳುತ್ತಾ”- ಆಶಾ ಜಗದೀಶ್ ಬರೆದ ಈ ದಿನದ ಕವಿತೆ

Read More

ಎಚ್ ವಿ ಶ್ರೀನಿಧಿ ಬರೆದ ಈ ದಿನದ ಕವಿತೆ

“ಪೇಟೆಯ ಧಾರಣೆ ದುರಾಸೆಗೆ
ಬಟವಾಡೆ ಆಗದೆ ಬೀದಿಪಾಲಾದ
ಹೂವುಗಳೆ, ಕೊಂಡು ತಂದು
ವಾರಕ್ಕೆ ಬೋರಾದ ವಸ್ತುಗಳೆ
ಹಣದ ಅರ್ಥವೇನು

ಷೇರುಪೇಟೆಯ ಗುಡ್ಡಗೆರೆಗಳೆ
ಹಾಳುಕೋಟೆಯ ಟಂಕಸಾಲೆಗಳೆ
ಯಾರು ಮುಟ್ಟದ ಹರಿದ ನೋಟುಗಳೆ
ಹಣದ ಅರ್ಥವೇನು”- ಎಚ್ ವಿ ಶ್ರೀನಿಧಿ ಬರೆದ ಈ ದಿನದ ಕವಿತೆ

Read More

ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

“ನಾನು ಅಂಗಳಕ್ಕೆ ನೀರು ಚೆಲ್ಲುತ್ತಿದ್ದೆ
ಅವಳು ರಂಗೋಲಿ
ಬರೆಯುತ್ತಿದ್ದಳು
ನಾನು ಹೂವು ಕೊಯ್ಯುತ್ತಿದ್ದೆ
ಅವಳು ದಾರ ಹಿಡಿದು ನಿಲ್ಲುತ್ತಿದ್ದಳು
ಅವಳು ಉಸಿರು ಬಿಡುತ್ತಿದ್ದಳು
ನಾನು ಆ ಉಸಿರು ಕುಡಿದು ಬದುಕುತ್ತಿದ್ದೆ
ಅವಳು ಸವಿನಿದ್ದೆ ಉಣ್ಣುತ್ತಿದ್ದಳು”- ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

Read More

ಶಾಂತಾ ಜಯಾನಂದ ಬರೆದ ಈ ದಿನದ ಕವಿತೆ

“ಬಿಡಿಸಿ ನೆನಸಿ,
ಬೀಜವಾಗಿಸಿ,
ಒಣಗಿಸಿ ಹುರಿದು,
ಲಿಂಗ ತತ್ವದಲ್ಲಿ ಮುಳುಗಿ
ಶರಣನಾದಂತೆ,
ಕಪ್ಪಾಗಿ ಕಡೆಗೆ
ಪುಡಿಯಾದ,
ಕಾಫಿಯ ತತ್ವ, ಅದೂ,
ಇದೂ, ಅನುಭೂತಿ,” -ಶಾಂತಾ ಜಯಾನಂದ ಬರೆದ ಈ ದಿನದ ಕವಿತೆ

Read More

ಚಾಂದ್ ಪಾಷ ಎನ್. ಎಸ್. ಬರೆದ ಈ ದಿನದ ಕವಿತೆ

“ಕಿಸೆಯಲ್ಲಿ ಕಡಲಿಟ್ಟುಕೊಂಡ ಅಲ್ಲಮನ ಅಂಗೈಯಲ್ಲಿ
ಗೆರೆಗಳಂತೆಯೇ ಕಿಲುಬುಗಾಸೂ ಇಲ್ಲ!
ಕಣ್ಣಲ್ಲೇ ತಿಂದು ತೇಗಿದರೂ ಹಸಿವು ಹಿಂಗಲೇ ಇಲ್ಲ!
ಎಲ್ಲೆಂದರಲ್ಲಿ ಕಾಮಲತೆಯ ನರ್ತನ
ಚಪ್ಪರಿಸಿ ತಿನ್ನುವವರ ನಾಲಿಗೆಯ ಮೇಲೆ
ರಸಸಿದ್ಧಾಂತದ ಧ್ಯಾನ!”- ಚಾಂದ್ ಪಾಷ ಎನ್. ಎಸ್. ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ