Advertisement

Category: ವಾರದ ಕಥೆ

ಸಚೇತನ ಭಟ್‌ ಅನುವಾದಿಸಿದ ಜಪಾನಿನ ಹರುಕಿ ಮುರಕಮಿ ಕತೆ

“ಸಿಂಬೆಯಾಗಿ ಆನೆಯ ಲಾಯದ ಬಳಿ ಬಿದ್ದಿದ್ದ ಸರಪಳಿಯನ್ನು ನೋಡಿದಾಗ ನನಗೆ ದಟ್ಟ ಕಾಡಿನಲ್ಲಿರುವ ಪಾಳುಬಿದ್ದಿರುವ ಪುರಾತನ ಅರಮನೆಯ ನಿಧಿಯನ್ನು ಕಾಯುವ ಯಾವುದೋ ಒಂದು ದೈತ್ಯ ಸರ್ಪದ ನೆನಪಾಗಿ ಬೆಚ್ಚಿಬಿದ್ದೆ. ಆನೆಯಿಲ್ಲದ ಕೆಲವೇ ತಿಂಗಳುಗಳಲ್ಲಿ ಆ ಜಾಗ ನಿರ್ಜನವಾಗಿಯೂ, ವಿನಾಶಕಾರಿಯಾಗಿಯೂ ತೋರುತ್ತ, ಒಂದು ಅಸ್ವಸ್ಥ ದೈತ್ಯ ಮೋಡ…”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅನಿತಾ ನರೇಶ್ ಮಂಚಿ ಬರೆದ ಕಥೆ

“ತಮ್ಮದೇ ಪ್ರಾಯದ ತಿಮ್ಮಕ್ಕ ಜೊತೆಯಾದಾಗ ಇಬ್ಬರೂ ಹಳೆಯ ಹೊಸ ಸುದ್ದಿಯನ್ನು ಮಾತನಾಡುತ್ತಾ ದೇವರನ್ನೂ ಮರೆತರು. ಉದ್ದದ ಊಟದ ಹಂತಿಯಲ್ಲಿ ಬಡಿಸುತ್ತಾ ಬರುವಾಗ ಪಾತಕ್ಕನ ಕಣ್ಣು ಮುಂಡಿಗಾಗಿ ಅರಸುತ್ತಿತ್ತು. ಬೀಟ್ರೂಟ್, ಕ್ಯಾಬೇಜು, ದೊಣ್ಣೆ ಮೆಣಸು, ಬದನೆ ಸೌತೆ ಇಂತದ್ದೇ ಕಂಡಿತು ವಿನಃ ಮುಂಡಿಯ ತುಂಡುಗಳು ಕಾಣಿಸಲಿಲ್ಲ…”

Read More

ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ವಾರದ ಕಥೆ: ಹೊರೆ

“ತಾನು ಕುಳಿತ ಬೆಂಚಿನ ಹಿಂದಿನಿಂದ ಸರಕ್ಕನೆ ಗಾಳಿ ಬೀಸಿದಂತಾಗಿ ಶಬ್ದವೂ ಆಯಿತು. ನೋಡಿದರೆ ನಾಯಿಯೊಂದು ಏನನ್ನೊ ಅಟ್ಟಿಸಿ ಹೋದಂತಾಯಿತು. ತನ್ನ ಪಾಲಿನ ಆಹಾರವನ್ನು ಇನ್ಯಾವುದೋ ನಾಯಿ ತಿನ್ನುತ್ತಿರುವುದನ್ನು ಕಂಡು ಕೆರಳಿದಂತಿತ್ತು. ಅದರ ನೆಗೆತದ ಓಟ ಹಾಗೂ ಗುರ್‍ಗುಟ್ಟುವ ಆಕ್ರಮಣಕಾರಿ ಶಬ್ದ ವಿರೋಧಿ ಬಣದ ನಾಯಿ ಕೇಳಿಸಿಕೊಂಡಿತು. ಪ್ಲಾಟ್ ಫಾರಂ ನಂಬರ್ ನಾಲ್ಕರಲ್ಲಿ ಮಲಗಿದ…”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅನಿತಾ ಪಿ ಪೂಜಾರಿ ತಾಕೊಡೆ ಬರೆದ ಕಥೆ

“ಕಾವ್ಯಳಿಗೆ ಅಪ್ಪನ ನೆನಪುಗಳು ಅತಿಯಾಗಿ ಕಾಡಿ ನೋಡಬೇಕೆಂದೆನಿಸಿದಾಗಲೆಲ್ಲಾ ಅವಳಾಸೆಯನ್ನು ಪೂರೈಸಲು ಸಹಕರಿಸುವುದು ಸೀತಾಫಲದ ಮರವೇ… ಇಂದವಳಿಗೆ ಅಪ್ಪ ಹೇಗೆ ಕೆಲಸ ಮಾಡುತ್ತಿದ್ದಾರೆಂದು ನೋಡುವ ಆಸೆಯಿತ್ತು. ಮರವನ್ನೇರಿದ ಐದು ನಿಮಿಷದಲ್ಲಿಯೇ ಕಾವ್ಯ ಅಪ್ಪ ಕೆಲಸ ಮಾಡುವ ‘ವುಡ್‌ಲ್ಯಾಂಡ್ಸ್’ ಹೊಟೇಲ್ ಎದುರುಗಡೆ ನಿಂತಿದ್ದಳು. ಅಪ್ಪ ಮಾತ್ರ ಕಾವ್ಯಳನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ.”

Read More

ಸುವರ್ಣ ಚೆಳ್ಳೂರು ಬರೆದ ಈ ಭಾನುವಾರದ ಕಥೆ ʼಗುರುತುʼ

“ಬಣವಿ ಹಾಕಿ ಕೈ ಸೋತಂಗಾದವು, ಬಿಸಲು ನೆತ್ತಿಗೆ ಬಂದು ನೆರಳೆಲ್ಲ ನೆಟ್ಟಗಾಗಿದ್ವು. ಹೊಲದ ಬದಿಗಿದ್ದ ಒಂದೆರಡು ಸೂರೆಪಾನ ಹೂವ್ವುಗಳಿಗೆ ದಿಕ್ಕು ತಪ್ಪಿದಂಗಾಗಿ ಮ್ಯಾಗ ಮೊಕ ಮಾಡಿಕ್ಯಂದು ನಿಂತಿದ್ವು. ಹುಲ್ಲು ಬಣವಿ ಹಾಕಿ ಸುರುಳಿ ಸುತ್ತಿ ಅವುಗಳ ನಡುವಿಗೆ ಉರಿಕೆನ್ನಿ ಬಿಗುತ್ತನಂಗ ಬಿಗುದು, ಒಂದರ ಮ್ಯಾಗೊಂದು ಹುಲ್ಲಿನ ದಂಡು ಸೇರಿಸಿ ದೊಡ್ಡ ಬಣವಿಗೆ ಕಮಾನಿನ ಆಕಾರ ಕೊಟ್ಟು, ನೆತ್ತಿ ಮ್ಯಾಗಳ ಬೆವರನ್ನ ಬೆರಳಿಂದ ಸವರಿ ಒರೆಸಿಗ್ಯಂದು…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ