Advertisement

Category: ವಾರದ ಕಥೆ

ಮೀರಾ ಪಿ.ಆರ್. ಬರೆದ ಈ ಭಾನುವಾರದ ಕಥೆ: ಮೌನ

‘ಅದ್ಯಾಕೋ ಅಜ್ಜಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ತೀರಾ ಅಸಮಾಧಾನವಿತ್ತು. ತಾತನೂ ಒಮ್ಮೊಮ್ಮೆ ಮಾವ ಸೈಕಲ್ ತೆಗೆದುಕೊಂಡು ಶಾಸ್ತ್ರಿಗಳ ಮನೆಗೆ ಹೊರಟ ಕೂಡಲೇ, ‘ಹೊರಟ ಇನ್ನು ಅಲ್ಲಿ ದಾಳ ಉರುಳಿಸೋಕ್ಕೆ‘ ಎಂದು ಗೊಣಗಿ ಈ ಸ್ನೇಹಕ್ಕೆ ಅಸಮ್ಮತಿ ಸೂಚಿಸುತ್ತಿದ್ದದ್ದು ನಮ್ಮ ಗಮನಕ್ಕೆ ಬಂದಿತ್ತು. ಮಕ್ಕಳಾದ ನಮಗೆ ಇದರ ಕುರಿತು ಹೀಗೆ ಅಸಹನೆ ಪಡುವಂಥದ್ದೇನಿದೆ ಎಂಬುದಂತೂ ತಿಳಿಯುತ್ತಿರಲಿಲ್ಲ.”

Read More

ಸಚೇತನ ಭಟ್‌ ಅನುವಾದಿಸಿದ ಜಪಾನಿನ ಹರುಕಿ ಮುರಕಮಿ ಕತೆ

“ಸಿಂಬೆಯಾಗಿ ಆನೆಯ ಲಾಯದ ಬಳಿ ಬಿದ್ದಿದ್ದ ಸರಪಳಿಯನ್ನು ನೋಡಿದಾಗ ನನಗೆ ದಟ್ಟ ಕಾಡಿನಲ್ಲಿರುವ ಪಾಳುಬಿದ್ದಿರುವ ಪುರಾತನ ಅರಮನೆಯ ನಿಧಿಯನ್ನು ಕಾಯುವ ಯಾವುದೋ ಒಂದು ದೈತ್ಯ ಸರ್ಪದ ನೆನಪಾಗಿ ಬೆಚ್ಚಿಬಿದ್ದೆ. ಆನೆಯಿಲ್ಲದ ಕೆಲವೇ ತಿಂಗಳುಗಳಲ್ಲಿ ಆ ಜಾಗ ನಿರ್ಜನವಾಗಿಯೂ, ವಿನಾಶಕಾರಿಯಾಗಿಯೂ ತೋರುತ್ತ, ಒಂದು ಅಸ್ವಸ್ಥ ದೈತ್ಯ ಮೋಡ…”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅನಿತಾ ನರೇಶ್ ಮಂಚಿ ಬರೆದ ಕಥೆ

“ತಮ್ಮದೇ ಪ್ರಾಯದ ತಿಮ್ಮಕ್ಕ ಜೊತೆಯಾದಾಗ ಇಬ್ಬರೂ ಹಳೆಯ ಹೊಸ ಸುದ್ದಿಯನ್ನು ಮಾತನಾಡುತ್ತಾ ದೇವರನ್ನೂ ಮರೆತರು. ಉದ್ದದ ಊಟದ ಹಂತಿಯಲ್ಲಿ ಬಡಿಸುತ್ತಾ ಬರುವಾಗ ಪಾತಕ್ಕನ ಕಣ್ಣು ಮುಂಡಿಗಾಗಿ ಅರಸುತ್ತಿತ್ತು. ಬೀಟ್ರೂಟ್, ಕ್ಯಾಬೇಜು, ದೊಣ್ಣೆ ಮೆಣಸು, ಬದನೆ ಸೌತೆ ಇಂತದ್ದೇ ಕಂಡಿತು ವಿನಃ ಮುಂಡಿಯ ತುಂಡುಗಳು ಕಾಣಿಸಲಿಲ್ಲ…”

Read More

ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ವಾರದ ಕಥೆ: ಹೊರೆ

“ತಾನು ಕುಳಿತ ಬೆಂಚಿನ ಹಿಂದಿನಿಂದ ಸರಕ್ಕನೆ ಗಾಳಿ ಬೀಸಿದಂತಾಗಿ ಶಬ್ದವೂ ಆಯಿತು. ನೋಡಿದರೆ ನಾಯಿಯೊಂದು ಏನನ್ನೊ ಅಟ್ಟಿಸಿ ಹೋದಂತಾಯಿತು. ತನ್ನ ಪಾಲಿನ ಆಹಾರವನ್ನು ಇನ್ಯಾವುದೋ ನಾಯಿ ತಿನ್ನುತ್ತಿರುವುದನ್ನು ಕಂಡು ಕೆರಳಿದಂತಿತ್ತು. ಅದರ ನೆಗೆತದ ಓಟ ಹಾಗೂ ಗುರ್‍ಗುಟ್ಟುವ ಆಕ್ರಮಣಕಾರಿ ಶಬ್ದ ವಿರೋಧಿ ಬಣದ ನಾಯಿ ಕೇಳಿಸಿಕೊಂಡಿತು. ಪ್ಲಾಟ್ ಫಾರಂ ನಂಬರ್ ನಾಲ್ಕರಲ್ಲಿ ಮಲಗಿದ…”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅನಿತಾ ಪಿ ಪೂಜಾರಿ ತಾಕೊಡೆ ಬರೆದ ಕಥೆ

“ಕಾವ್ಯಳಿಗೆ ಅಪ್ಪನ ನೆನಪುಗಳು ಅತಿಯಾಗಿ ಕಾಡಿ ನೋಡಬೇಕೆಂದೆನಿಸಿದಾಗಲೆಲ್ಲಾ ಅವಳಾಸೆಯನ್ನು ಪೂರೈಸಲು ಸಹಕರಿಸುವುದು ಸೀತಾಫಲದ ಮರವೇ… ಇಂದವಳಿಗೆ ಅಪ್ಪ ಹೇಗೆ ಕೆಲಸ ಮಾಡುತ್ತಿದ್ದಾರೆಂದು ನೋಡುವ ಆಸೆಯಿತ್ತು. ಮರವನ್ನೇರಿದ ಐದು ನಿಮಿಷದಲ್ಲಿಯೇ ಕಾವ್ಯ ಅಪ್ಪ ಕೆಲಸ ಮಾಡುವ ‘ವುಡ್‌ಲ್ಯಾಂಡ್ಸ್’ ಹೊಟೇಲ್ ಎದುರುಗಡೆ ನಿಂತಿದ್ದಳು. ಅಪ್ಪ ಮಾತ್ರ ಕಾವ್ಯಳನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ