Advertisement

Category: ವಾರದ ಕಥೆ

ಶಂಕರ-ಪಾರ್ವತಿ: ಶ್ರೀದೇವಿ ಕೆರೆಮನೆ ಬರೆದ ಕತೆ

“ಕೊನೆಗೆ ಅದ್ಯಾವ ಮಾಯದಲ್ಲಿ ಕಣ್ಣೋಟ ಮಾತಾಯ್ತೋ. ಮಾತು ಪ್ರೀತಿಯಾಯ್ತೋ ಯಾರಿಗೂ ಗೊತ್ತಾಗಲಿಲ್ಲ. ಮುಂದಿನ ವರ್ಷ ಹತ್ತನೇ ಕ್ಲಾಸಿನಲ್ಲಿ ಫೇಲಾಗಿ ಶಂಕರ ಮೀನು ಹಿಡಿಯಲು ಹೋದರೆ, ಪಾರ್ವತಿಯೂ ಶಾಲೆ ಬಿಟ್ಟು ಅವ್ವಿಯೊಡನೆ ಮೀನು ಮಾರಲು ಹೊರಟಳು.”

Read More

ಪಂಜೆ ಮಂಗೇಶರಾವ್ ಬರೆದ ಕತೆ “ವೈದ್ಯರ ಒಗ್ಗರಣೆ”

ಪಟೇಲ ಪದ್ಮರಾಜನಿಗೆ ಮತ್ತೊಬ್ಬ ಅಡಿಗೆಯವನು ಇನ್ನೂ ಸಿಕ್ಕಲಿಲ್ಲ. ಅದು ಕಾರಣದಿಂದ ಹುದ್ದೇದಾರರು ಇದ್ದಷ್ಟು ದಿನ ವೈದ್ಯರು ಒಲೆಯ ಬಳಿ ಹೆಂಗಸಿನಂತೆ ಬೇಯಬೇಕಾಯಿತು. ಮೂರನೆಯ ದಿನ ಮಧ್ಯಾಹ್ನದಲ್ಲಿ ಕೃಷ್ಣ ವೈದ್ಯರು ಯಾವುದನ್ನೋ ನೆನೆಸುತ್ತ ಕುಳಿತಿದ್ದರು. “

Read More

ಲೋಕಕೆ ಬಿಡುವಿಲ್ಲ ನಿನ್ನೆ ಚಿಂತಿಸುತಿರಲು: ಶುಭಾ ಎ.ಆರ್. ಬರೆದ ಕತೆ

“ಏಳು ಲಾಖಿ… ಈ ಆಸ್ಪತ್ರೆಯಲ್ಲಿ ಎಷ್ಟೆಂದು ಮಲಗುತ್ತೀಯ ನಡೀ” ಎನ್ನುತ್ತಾ ಜೀತೂ ಮೈಮೇಲೆ ಖಬರಿಲ್ಲದವನಂತೆ ಲಾಖಿಯ ಭುಜ ಹಿಡಿದು ಅಲುಗಾಡಿಸುತ್ತಿದುದನ್ನ ನೋಡಿ ಅಲ್ಲೇ ಓಡಾಡುತ್ತಿದ್ದ ಬಿಳಿಸೀರೆಯ ದಾದಿ ಕನಿಕರಗೊಂಡು “ತಮ್ಮಾ ನೀನು ಎಷ್ಟು ಎಬ್ಬಿಸಿದ್ರೂ ಅವಳಿನ್ನ ಏಳಲಾರಳು, ನೋಡಲ್ಲಿ ನಿನ್ನ ಮಕ್ಕಳು ಕಂಗಾಲಾಗಿ ನಿನ್ನನ್ನೇ ನೋಡ್ತಿವೆ” ಎಂದು ಅವನ ಭುಜ ಹಿಡಿದು ಸಂತೈಸಿದಳು. ಜೀತೂ ಮತ್ತೆ ವಾಸ್ತವದಲ್ಲಿ ಬಿದ್ದ. ಲಾಖಿ ಕ್ಯಾರೇ ಎನ್ನದಂತೆ ಮಲಗಿಯೇ ಇದ್ದಳು.”

Read More

ಓಬೀರಾಯನ ಕಾಲದ ಕತೆಗಳ ಸರಣಿಯಲ್ಲಿ ಎಂ. ಎನ್. ಕಾಮತ್ ಬರೆದ ಕತೆ “ಕದ್ದವರು ಯಾರು?”

“ಮಂತ್ರವಾದಿಯೂ ಗಂಡನೂ ಕೇಳುತ್ತಲೇ ಇದ್ದ ಪ್ರಶ್ನೆಗಳಿಗೆ “ನಾನೊಂದೂ ಅರಿಯೆ”, ಎಂದೇ ಉತ್ತರ ಕೊಡುತ್ತಿದ್ದಂತೆ, – ಕುಂಡದ ಬಳಿ ಅವಳು ಕೂತಿರಬೇಕೆಂದಾಯಿತು. ಮಿಂದುಟ್ಟ ಒದ್ದೆ ಸೀರೆಯು ಮೈಮೇಲೆಯೇ ಒಣಗಹತ್ತಿತು. ಕೂದಲು ಕಟ್ಟಿಕೊಂಡಿರಲಿಲ್ಲ, ಒಣಗಲೆಂದು; ಅದೆಲ್ಲ ಬೆಂಕಿಯ ಧಗೆಗೆ ಒಣಗುತ್ತ ಗಾಳಿಗೆ ತೂಗುತ್ತ, ಬೆಂಕಿಯ ನಾಲಿಗೆಗಳನ್ನು ಸೋಕುತ್ತ, ಅಷ್ಟಷ್ಟೇ ತುದಿಗಳು ಸುಡುತ್ತ ಕರಿಯಾದುವು.”

Read More

ಬಿಡುಗಡೆ: ಮೀರಾ ಸಂಪಿಗೆ ಬರೆದ ಈ ವಾರದ ಕತೆ

“ಮುಂದೆ, ಆ ಮನೆಯಲ್ಲಿರಲಿಕ್ಕಾಗದೆ ಆಕೆ ಮನೆ ಖಾಲಿ ಮಾಡಿ ಹೋದಳು. ಅಡಿಗೆ ಮಾಡುವ ಕೆಲಸ ಸಿಕ್ಕಿದೆಯೆಂದು, ಸಂಬಳ ಚೆನ್ನಾಗಿದ್ದು, ಊಟ ಬಟ್ಟೆ ಖರ್ಚು ಕಳೆಯುತ್ತದೆಂದೂ, ಗಂಡನ ಖಾಯಿಲೆಗಾಗಿ ಮಾಡಿದ ಸಾಲ ತೀರಿಸುವುದಕ್ಕೆ ಸಹಾಯವಾಗುತ್ತದೆಂದು ಹೇಳಿದಳು. ಸಾಲ ಮುಗಿಯಲು ಅನೇಕ ವರ್ಷಗಳೇ ಬೇಕಾಗಬಹುದೆಂದೂ ತಿಳಿಸಿದಳು. ಅವಳ ಸಮಾಧಾನ, ಸ್ಥೈರ್ಯಗಳನ್ನು ಮೆಚ್ಚಿ ನಾನೂ ಕೆಲವು ಧೈರ್ಯದ ಮಾತನ್ನಾಡಿ ಅವಳಿಗೆ ವಿದಾಯ ಹೇಳಿದೆ. ಅಂತೂ ಹಲವು ವರುಷಗಳ ಹೊಡೆತ, ಬಡಿತದ ನರಕದಿಂದ ಆ ಜೀವಿಗೆ ಶಾಶ್ವತ ಬಿಡುಗಡೆ ದೊರೆಯಿತಲ್ಲಾ ಎಂದು ನೆಮ್ಮದಿಯ ಉಸಿರೆಳೆದೆ.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ