Advertisement

Category: ವಾರದ ಕಥೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವಗೌಡ ಎಂ.ಜೆ. ಮೇಲೂರು ಕತೆ

ಹೆಜ್ಜೆಯಿಡಲೂ ಎಲ್ಲರೂ ಭಯಬೀಳುತ್ತಿದ್ದ ಕಾಡಿನ ಆ ಅಭೇಧ್ಯ ಕಣಿವೆಗೆ ಅವನು ಹೊಸದೇ ಆದ ಒಂದುದಾರಿ ಮಾಡಿಕೊಂಡು ಬಂದಾಗ, ಅಲ್ಲಿ ಕೆನೆಗಟ್ಟಿದ್ದ ಸೌಂದರ್ಯಕ್ಕೆ ಮಾರುಹೋಗಿದ್ದ. ಅಲ್ಲೇನಿದೆ ಕೇವಲ ಮರ, ಗಿಡ, ಬಳ್ಳಿ, ವಿಷಜಂತುಗಳು, ಕ್ರೂರಪ್ರಾಣಿಗಳು, ರಕ್ತ ಹೀರುವ ಜಿಗಣಿಗಳು ಎನ್ನುತ್ತಿದ್ದವರ ಮಧ್ಯದಲ್ಲಿದ್ದಾಗ ಇಂತಹಕಡೆ ಸೌಂದರ್ಯ ಕಾಣಲು ಬೇರೆಯದೇ ಆದ ಕಣ್ಣಗಳಿರಬೇಕು. ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವಗೌಡ ಎಂ.ಜೆ. ಮೇಲೂರು ಕತೆ “ಸ್ವೇದಗಂಧಿ”

Read More

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಕೆಂಪು ಬಣ್ಣದ ರೇಷ್ಮೆ ಸೀರೆಯನ್ನು ಹಿಂದಿನೆರಡು ಬಟ್ಟೆ ತುಂಡುಗಳ ಜೊತೆಗೆ ಜೋಡಿಸುತ್ತಿದ್ದ ಶಂಕ್ರಜ್ಜಿಗೆ ಮದುವೆಯ ನೆನಪು ಬಂದರೂ ಅದು ಮನಸ್ಸಿಗೆ ಖುಷಿ ಕೊಡಲಿಲ್ಲ. ಹಸಿರು, ಹಳದಿ, ಕೆಂಪು ಬಣ್ಣಗಳಿಂದ ತಯಾರಾಗುತ್ತಿದ್ದ ಕೌದಿಗೆ ಸೇರಿಸಲು ಇನ್ನೊಂದೆರಡು ಬಟ್ಟೆಗಳಷ್ಟೇ ಬೇಕಿದ್ದದ್ದು. ಅವಳ ಮಡಿಲ ಬುಡದಲ್ಲಿಯೇ ಇತ್ತು ನೀಲಿ ಬಣ್ಣದ ಫ್ಯಾನ್ಸಿ ಸೀರೆ. ಅದನ್ನು ಎತ್ತಿಕೊಂಡು ಉಳಿದವುಗಳ ಜೊತೆಗೆ ಸೇರಿಸಿ ಹೊಲಿಯಲಾರಂಭಿಸಿದಳು.
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಕೌದಿ” ನಿಮ್ಮ ಓದಿಗೆ

Read More

ಲತಾ ಶ್ರೀನಿವಾಸ್‌ ಬರೆದ ಈ ಭಾನುವಾರದ ಕತೆ

ಆ ದಿನ ರಾತ್ರಿ ಎಂಟಕ್ಕೆ ಮನೆಗೆ ಬಂದ ಇವರ ಕೆನ್ನೆಯ ಮೇಲೆ ಸ್ಪಷ್ಟವಾಗಿ ಮೂಡಿದ ಲಿಪ್ಸ್ಟಿಕ್‌ನ ಗುರುತು ನನಗೆ ನೋಡಿ ಇಡೀ ಮೈಯೆಲ್ಲಾ ಕರೆಂಟು ಹೊಡೆದ ಅನುಭವ. ಹೃದಯ ಸ್ಥಂಭನವಾಗುವುದೊಂದು ಬಾಕಿ… ಕೆನ್ನೆಯ ಮೇಲೆ ಯಾರೋ ಕಿಸ್ ಮಾಡಿದ್ದಾರೆ. ನನ್ನ ಕಣ್ಣಿನಲ್ಲಿ ತಕ್ಷಣ ಧಾರಾಕಾರವಾಗಿ ಸುರಿಯುವ ಕಣ್ಣೀರಿನಲ್ಲಿ ನಮ್ಮ ದಾಂಪತ್ಯ ಕೊಚ್ಚಿ ಹೋಗುವ ಸೂಚನೆ. ಕೈಯಲ್ಲಿದ್ದ ಮೊಬೈಲ್‌ನಲ್ಲಿ ಅವರಿಗೆ ಅರಿವಾಗುವ ಮೊದಲೇ ಅವರ ಕೆನ್ನೆಯ ಮೇಲಿನ ಕಿಸ್‌ನ ಫೋಟೋ ತೆಗೆದುಕೊಂಡೆ.
ಲತಾ ಶ್ರೀನಿವಾಸ್‌ ಬರೆದ ಈ ಭಾನುವಾರದ ಕತೆ “ಒಂದು ಮುತ್ತಿನ ಕಥೆ”

Read More

ರವಿ ಮಡೋಡಿ ಬರೆದ ಈ ಭಾನುವಾರದ ಕತೆ

ಮುಂದೆ ಮುಂದೆ ಸಾಗಿದರೂ ಮನೆಗಳು ಮುಗಿಯುವ ಲಕ್ಷಣ ಕಾಣಿಸಿರಲಿಲ್ಲ. ರಮೇಶ ತಾನು ಈ ದಾರಿಯಲ್ಲಿ ಬರಲೇಬಾರದಿತ್ತು, ಬೇರೆಯೊಂದು ದಾರಿಯಲ್ಲಿ ಹೋಗಿದ್ದರೆ ಇಷ್ಟು ಹೊತ್ತಿಗಾಗಲೇ ತನ್ನ ಕೆಲಸವನ್ನು ಪೂರೈಸಿಕೊಳ್ಳಬಹುದಿತ್ತೋ ಏನೋ ಎಂದುಕೊಳ್ಳುತ್ತ ಹಳಿದುಕೊಂಡ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಯಾವಾಗಲೂ ಹೇಳಿಕೊಳ್ಳುತ್ತಿದ್ದ ಮಾತು ಸತ್ಯವೆನಿಸಿ ಯೋಚಿಸುವುದಕ್ಕೆ ತೊಡಗಿದ.
ರವಿ ಮಡೋಡಿ ಬರೆದ ಈ ಭಾನುವಾರದ ಕತೆ “ಜೀವದೊಳಗಿನ ಆಟ” ನಿಮ್ಮ ಓದಿಗೆ

Read More

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ಮಹಾನ್‌ ಬುದ್ಧರು ತೀರಿಹೋದ ಮೇಲೂ ಭಿಕ್ಷುಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಸ್ತೂಪಗಳನ್ನು ವಿಸ್ತರಿಸುವುದಕ್ಕೆ, ಹೊಸದಾಗಿ ನಿರ್ಮಾಣ ಮಾಡುವುದಕ್ಕೆ, ಆಶ್ರಮ, ಉದ್ಯಾನವನಗಳನ್ನು ರೂಪಿಸುವುದಕ್ಕೆ, ವರ್ತಕರಲ್ಲಿ, ಸೇನಾಧಿಪತಿಗಳಲ್ಲಿ, ಚಕ್ರವರ್ತಿಗಳಲ್ಲಿ ಒಂದು ಸ್ಪರ್ಧೆಯೇ ಏರ್ಪಟ್ಟಂತಿತ್ತು. ಇದೆಲ್ಲವನ್ನೂ ನೋಡಿಕೊಳ್ಳುವುದಕ್ಕೆ ಆನಂದನೊಬ್ಬನಿಗೇ ಸಮಯವಿರುತ್ತಿರಲಿಲ್ಲ, ದಣಿವಾಗುತ್ತಿತ್ತು. ಜವಾಬ್ದಾರಿಯನ್ನು ಹಂಚಿಕೊಳ್ಳಲು ನಂಬುಗೆಯ ಜನರು ಸಮೀಪದಲ್ಲಿರಲಿಲ್ಲ.
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ ‘ಸಾರಿಪುತ್ರನ ಸಂಸಾರ ಸಾಮ್ರಾಜ್ಯ’

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ