Advertisement

Category: ದಿನದ ಪುಸ್ತಕ

ಭಾಷಾಸತ್ರದ ಕಡೆಗಿನ ಪಯಣದಲ್ಲಿ ಜ್ಞಾನವಿಕಾಸದ ಹೆಜ್ಜೆಗುರುತುಗಳು

ನಾಲ್ಕು ವರ್ಷಗಳ ದೀರ್ಘಕಾಲದ ಬರಹದೊಂದಿಗೆ ರೂಪುಗೊಂಡ ಕಾದಂಬರಿ ಎನ್ನಬಹುದಾದ ಪ್ರಕಾರದಲ್ಲಿರುವ ಕೃತಿ ‘ವರ್ಣಕ’. ಹಾಗೆ ನೋಡಿದರೆ, ಇದನ್ನು ಕಾದಂಬರಿ ಎಂದರೆ ತುಸು ಹೃಸ್ವವಾದದಂತೆ ಭಾಸವಾಗುತ್ತದೆ. ಬಣ್ಣದ ಹೂವುಗಳ ಮಾಲೆಯನ್ನು ನೇಯ್ದಂತೆ, ಭಾಷಾ ಕ್ಷೇತ್ರದ ವೈವಿಧ್ಯಮಯ ಬೆಳವಣಿಗೆಗಳನ್ನು ಕಥೆಯೆಂಬ ಸೂತ್ರದಲ್ಲಿ ಲೇಖಕರು ಬಂಧಿಸಿದ್ದಾರೆ . ಅಲ್ಲಿ ಕಥೆಯ ಮುನ್ನಡೆಗೋಸ್ಕರ ವಿಸ್ಮಯ, ಭ್ರಮೆಯೆಂಬಂತಹ ಕಲ್ಪನೆಗಳ ನೆರವನ್ನು ಪಡೆದಿದ್ದಾರೆ. ಭಾರತೀಯ ಭಾಷಾ ಗಣಕ ಪಿತಾಮಹ ಕಿನ್ನಿಕಂಬಳ ಪದ್ಮನಾಭ ರಾವ್‍ ಬರೆದ ‘ವರ್ಣಕ’ ಕಾದಂಬರಿಯ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ  ಇಲ್ಲಿದೆ. 

Read More

ಡಾ. ಗೀತಾ ಶೆಣೈ ಅನುವಾದಿಸಿರುವ “ಅದೃಷ್ಟ” ಕಾದಂಬರಿಯ ಒಂದು ಅಧ್ಯಾಯ

ಇದನ್ನು ಯಾರು, ಯಾವಾಗ ಕಟ್ಟಿಸಿದರೋ? ಯಾವ ತಲೆಕೆಟ್ಟ ಮನುಷ್ಯ ಇದರ ವಿನ್ಯಾಸ ರೂಪಿಸಿದನೋ? ಮೂರು ಮನೆವಾಳ್ತೆಗಳು ಇರಲು ಅನುಕೂಲವಾಗುವ ಹಾಗೆ ಹೇಗೇಗೋ ಕೋಣೆಗಳನ್ನು ಹೊಂದಿಸಿ ಈ ಕಾವಲುಮನೆಯನ್ನು ಕಟ್ಟಲಾಗಿದೆ. ಆದರೆ ಇದಕ್ಕೆ ಸರಿಯಾದ ಕಿಟಿಕಿಗಳಾಗಲೀ, ಬಾಗಿಲುಗಳಾಗಲೀ ಇಲ್ಲ. ಕೆಲವು ಕೋಣೆಗಳಲ್ಲಿಯಂತೂ ನಡುಮಧ್ಯಾಹ್ನವೂ ಕತ್ತಲೆ ತುಂಬಿರುತ್ತದೆ. ಇದಕ್ಕೆ ಸುಣ್ಣಬಣ್ಣ ಬಳಿದಿರುವುದು ಯಾವ ಕಾಲಕ್ಕೋ.
ಕೊಂಕಣಿ ಲೇಖಕ ಮಹಾಬಳೇಶ್ವರ ಸೈಲ್‌ ಅವರ ಕಾದಂಬರಿಯನ್ನು ಡಾ. ಗೀತಾ ಶೆಣೈ “ಅದೃಷ್ಟ” ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದು, ಅದರ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಗಾಢ ವಿಷಾದದ ನೆರಳಿನಂತಿರುವ ‘…. ಮಳೆಹನಿ’

ಪ್ರಕೃತಿ ಬದುಕು ಮತ್ತು ಕಾವ್ಯದ ನಡುವಿನ ಸಾವಯವ ಸಂಬಂಧದ ತಾತ್ವಿಕ ಜಿಜ್ಞಾಸೆ ಸಂಕಲನದುದ್ದಕ್ಕೂ ಕಾಣುತ್ತದೆ. ಕೆಲವೆಡೆ ಸರಳವೆನಿಸುವ ವಸ್ತು ಮತ್ತು ತಂತ್ರಗಳಿಂದ ಹುಟ್ಟುವ ಪ್ರತಿಮೆಗಳಲ್ಲಿ ಸಂಕೀರ್ಣವಾದ ವಿಷಯಗಳನ್ನು ದಾಟಿಸುವ ಶಕ್ತಿ ಇಲ್ಲಿಯ ಕವನಗಳಲ್ಲಿದೆ ಎನಿಸುತ್ತದೆ. ಭಾಷೆಯೆಂಬುದು ಪ್ರಾಣಘಾತುಕವೆಂಬ ಎಚ್ಚರ ಇಲ್ಲಿಯ ಕವಿತೆಗಳಲ್ಲಿ ಎದ್ದುಕಾಣುತ್ತದೆ. ಇದು ಭಾಷೆಗೆ ಒಂದು ಬಿಗುವು ತಂದಿದೆ.
ಕವಿ ಕಾಜೂರು ಸತೀಶ್ ರವರ “ಕಣ್ಣಲ್ಲಿಳಿದ ಮಳೆಹನಿ” ಕವನ ಸಂಕಲನದ ಕುರಿತು ಡಾ. ಸಿ. ಬಿ. ಐನಳ್ಳಿ ಬರಹ

Read More

ನೆಲವ ಬಿಟ್ಟು ನೀರ ಮೇಲೆ ಇಪ್ಪತ್ತು ದಿನಗಳು

ಬೇಗುವಳ್ಳಿ ಮನೆಯಿಂದ ಹೊರಡುವ ಮೊದಲ ದಿನ ರಾತ್ರಿ ನಾವು ಮನೆಯ ಹೊರಗಿನ ವೆರಾಂಡದಲ್ಲಿಯೇ ಮಲಗಿದ್ದೆವು. ಮನೆ ಬಿಡಲು ಬೆಳಿಗ್ಗೆ ಬೇಗನೆ ಮುಹೂರ್ತವಿತ್ತು, ಅದಕ್ಕಾಗಿ ರಾತ್ರಿಯೇ ಮನೆಯಿಂದ ಹೊರಗೆ ಇರುವಂತೆ ವ್ಯವಸ್ಥೆ ಮಾಡಿದ್ದರೆಂದು ನನಗೆ ನೆನಪು. ಇಂಥ ಸಂದರ್ಭದಲ್ಲಿ ಮನೆಯವರಿಗೆ ಬೇಸರ ಮಾಡುವುದು ಬೇಡವೆಂದು ಅನಂತಮೂರ್ತಿ ಇದನ್ನು ಮೌನವಾಗಿ ಒಪ್ಪಿದ್ದರು.
ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ

Read More

ದಿಟ್ಟ ಮಹಿಳೆಯರ ಹೋರಾಟದ ಪ್ರತಿಮೆ

ಮಹಿಳೆಯರ ಜೀವನದಲ್ಲಿ ಎರಡು ವಿಷಯಗಳು ಸತ್ಯ. ಅದೆಂದರೆ, ಹರಿವ ನದಿಯಂತೆ ಬದುಕುವುದು ಹಾಗೂ ಪುರುಷನಿಗಿಂತ ಹೆಚ್ಚು ಧೈರ್ಯವಾಗಿ ಬದುಕನ್ನು ಎದುರಿಸುವುದು. ಹುಟ್ಟಿದ ಮನೆಯನ್ನೇ ಬಿಟ್ಟು ಬರುವ ಮಹಿಳೆಯರಿಗೆ ಮತ್ತೊಂದು ಊರನ್ನು ಬಿಡುವುದು, ಬೇರೊಂದು ಊರಿನಲ್ಲಿ ನೆಲೆ ನಿಲ್ಲುವುದು ಹೆಚ್ಚು ಕಷ್ಟವಾಗುವುದಿಲ್ಲವೇನೋ. ಹೀಗಾಗಿಯೇ ಅವರು ಅಕ್ಷರಶಃ ಹರಿವ ನದಿಯಾಗುತ್ತಾರೆ. ‘ಹರಿವ ನದಿ’ ಕೃತಿಯು ಮೇಲ್ನೋಟಕ್ಕೆ ಮೀನಾಕ್ಷಿ ಭಟ್ಟರ ಕಥನ ಎನಿಸಿದರೂ, ಇದು ದಿಟ್ಟ ಮಹಿಳೆಯರ ಹೋರಾಟದ ಪ್ರತಿಮೆಯಂತೆ ನಿಲ್ಲುತ್ತದೆ. ತಾವು ಓದಿದ ಕೃತಿಯ ಕುರಿತು ಸುಮನಾ ಲಕ್ಷ್ಮೀಶ್ ಬರೆದ ಬರಹ  ಇಲ್ಲಿದೆ. 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ