Advertisement

Category: ಪುಸ್ತಕ ಸಂಪಿಗೆ

ಹಳ್ಳಿಗಾಡಿನ ಹೊಸ ಕತೆಗಳು: ಸಂಗೀತ ರವಿರಾಜ್ ಬರಹ

ಇಲ್ಲಿರುವ ನಾಲ್ಕು ಕಥೆಗಳು ಕಟ್ಟುಕಥೆಗಳೆಂದು ನಮಗನಿಸುವುದೇ ಇಲ್ಲ. ಗ್ರಾಮ ಜೀವನವೇ ಹೀಗೆ…. ನೀರಿಗೆಂದು ಮೈಲುದೂರ ಕೊಡಪಾನ ಹಿಡಿದು ಸಾಗಿ ಮನೆಗೆ ನೀರು ತುಂಬಬೇಕು. ಮತ್ತೆ ಮನೆಯಿಂದ ಚೆಂಬು ಹಿಡಿದುಕೊಂಡು ಇನ್ನೆಲ್ಲಿಗೋ ನಡೆದು ಹೋಗುವಂತಹ ವಿಪರ್ಯಾಸಗಳು ಹಳ್ಳಿಯಲ್ಲಿ ಮಾತ್ರವೇ ನಡೆಯುತ್ತಿತ್ತು. ಇದು ಹಳ್ಳಿ ಬದುಕಿನ ನೋವಿನ ಚಿತ್ರಣ. ಕಥೆಗಾರರ ಬಾಲ್ಯವೇ ಇಲ್ಲಿನ ಕಥೆಗಳಿಗೆ ಸ್ಪೂರ್ತಿ, ಪ್ರೇರಣೆ ಕೊಟ್ಟಿರಲೂಬಹುದು. ಏಕೆಂದರೆ ಹಳ್ಳಿಯ ಬಾಲ್ಯವೆಂಬುದು ಅನುಭವಗಳನ್ನು ಮೊಗೆ ಮೊಗೆದು ಕೊಡುವ ತಾಣ.
ಮಲ್ಲಿಕಾರ್ಜುನ ತೂಲಹಳ್ಳಿ ಕಥಾ ಸಂಕಲನ “ಅಗಸ್ತ್ಯ ನಕ್ಷತ್ರ” ಕುರಿತು ಸಂಗೀತಾ ರವಿರಾಜ್‌ ಚೆಂಬು ಬರಹ

Read More

ಎದೆಗೆ ಬಿದ್ದ ಕಲ್ಲು!: ಮಧು ವೈ.ಎನ್.‌ ಹೊಸ ಕಾದಂಬರಿಯ ಪುಟಗಳು

ಅವತ್ತು ಎಗ್ಸಿಬಿಶನ್ ಇತ್ತು. ನಾವೆಲ್ಲ ಕ್ಲಾಸ್ ರೂಮಲ್ಲಿ ಮಾಡೆಲ್ ಜೋಡಿಸ್ಕೊಂಡು ನಿಂತಿದ್ವಿ. ನನ್ ಪಕ್ಕ ಹಾಸನದೋನು ಇದ್ದ. ಯೂಕಲಿಪ್ಟಸ್ ಆಯಿಲ್‌ನಿಂದ ಸೊಳ್ಳೆ ಓಡಿಸ್ತೀನಿ ಅನ್ನೊ ಪ್ರಾಜೆಕ್ಟ್ ಮಾಡ್ಕಂಡ್ ಬಂದಿದ್ದ. ಹೆದರಬೇಡಿ ಅಂಗಂದ್ರೆ ನೀಲಗಿರಿ ಎಣ್ಣೆ ಆಟೆಯಾ. ನಾನು ಇಂಗ್ಲೀಷಲ್ಲಿ ಏನೇನು ಒದರಬೇಕು ಅಂತ ಮನ್ಸಲ್ಲೆ ಮಗ್ ಹೊಡಿತಿದ್ದೆ. ಬರಂಗಿಲ್ವಲ್ಲ. ಆ ಕ್ಷಣಕ್ಕೆ ಒಳ್ಳೆ ಸಿನಿಮಾ ಸೀನ್ ತರಹ ಈ ಹುಡುಗಿ ಬಂದ್ ಬಿಡ್ತು. ಎಗ್ಸಿಬಿಶನ್ ಇದ್ದಾಗ ಸ್ಪೋರ್ಟ್ಸ್ ಇರಲ್ಲ. ಹಂಗಾಗಿ ನಾನು ಯುನಿಫಾರ್ಮಲ್ಲಿದ್ರೆ ಅದು ಟ್ರ್ಯಾಕ್ ಸೂಟಲ್ಲಿ ಮಿಂಚ್ತಾ ಇತ್ತು.
ಮಧು ವೈ.ಎನ್.‌ ಬರೆದ ಹೊಸ ಕಾದಂಬರಿ “ಕನಸೇ ಕಾಡುಮಲ್ಲಿಗೆ”ಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಆರ್ಯಕನೆಂಬ ನಾಯಕ: ಸತೀಶ್‌ ತಿಪಟೂರು ಬರಹ

ನಾವು ಮಾಡುವ ರಂಗಕೃಷಿಯು ಪ್ರಾಮಾಣಿಕವಾಗಿದ್ದರೆ ಪ್ರತಿಕ್ಷಣವೂ ಹುಟ್ಟುವ ಅಹಂಕಾರವನ್ನು ವಿಸರ್ಜಿಸುತ್ತಲೇ ಇರುತ್ತದೆ ಎಂದು ಹೇಳಿದೆ. ಯಾರ ಸ್ಮೃತಿಗಳು ಸಮಾಜದ ನೋವಿನಿಂದ ಅದ್ದುಕೊಂಡಿರುತ್ತದೋ, ಸಮುದಾಯದ ಕಾಳಜಿಗಳಲ್ಲಿ ಬೆಸೆದುಕೊಂಡಿರುತ್ತದೋ, ಅಂತಹ ಪ್ರಕೃತಿಗಳು ಹಣ, ಅಧಿಕಾರ, ಪ್ರಭಾವಳಿಗಳಿಂದ ಒದಗಿಬರಬಹುದಾದ ಅಹಂಕಾರದಿಂದ ಮುಕ್ತವಾಗಿರುತ್ತದೆ. ಇಲ್ಲಿ ಯಾರ ಬೇರುಗಳು ಸಡಿಲವಾಗಿರುತ್ತದೋ ಅಂತಹವರ ಪ್ರಕೃತಿ ಪಲ್ಲಟವಾಗುತ್ತದೆ; ಮತ್ತು ಹಾಗೆ ಆದುದಕ್ಕೆ ಇರುವ ಕಾರಣಗಳನ್ನು ದೊಡ್ಡದು ಮಾಡುತ್ತಾ ತಮ್ಮ ಇರುವಿಕೆಗೆ ಸಮರ್ಥನೆಯನ್ನು ನೀಡುತ್ತದೆ ಎಂದು ಹೇಳಿದೆ. ಹಣ, ಅಧಿಕಾರ, ಪ್ರಭಾವಳಿಗಳನ್ನು ಧಾರಣೆ ಮಾಡಿಕೊಂಡು ಜೀರ್ಣಿಸಿಕೊಳ್ಳುವ ಶಕ್ತಿಬೇಕು.
ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ

Read More

‘ಕೊನೆಗೆ ಉಳಿಯುವುದು ಕಾವ್ಯವೇ’: ಸಂಗೀತ ರವಿರಾಜ್ ಬರಹ

ಕಾವ್ಯ ಸೃಷ್ಠಿಯಲ್ಲಿ ಮಾಗುತ್ತ ಸಾಗುವುದೇ ಕವಿತೆ ಉತ್ತಮವಾಗುತ್ತ ಹೋಗುವುದರ ಲಕ್ಷಣ. ಅದು ಸಿದ್ಧಿಸಿದ್ದು ಇಲ್ಲಿಯೇ ನಮಗೆ ಸಂಕಲನದುದ್ದಕ್ಕೂ ತೋಚಿದಂತಾಗುತ್ತದೆ. ಬರೆದ ಕಾವ್ಯವೆಂಬ ಹೊರೆಯನ್ನು ಮೆಲ್ಲನೆ ಇಳಿಬಿಟ್ಟು ಹಗುರಾಗಿ, ಮತ್ತೆ ಹೊಚ್ಚ ಹೊಸ ಬಹುದೊಡ್ಡ ಹೊರೆ ಹೊತ್ತು ಮತ್ತೆ ಹಗುರಾಗುತ್ತಾರೆ ಎಂಬಂತೆ ನಮಗಿಲ್ಲಿ ಭಾಸವಾಗುತ್ತದೆ. ಪ್ರೇಮವೆನುದರ ಕುರಿತು ಹಲವು ರೀತಿಯ ಭಿನ್ನ ಭಿನ್ನ ವ್ಯಾಖ್ಯಾನಗಳು ನಮ್ಮನ್ನು ದಂಗುಬಡಿಸುತ್ತವೆ.
ನಂದಿನಿ ಹೆದ್ದುರ್ಗ ಕವನ ಸಂಕಲನ “ಒಂದು ಆದಿಮ ಪ್ರೇಮ” ಕುರಿತು ಸಂಗೀತ ರವಿರಾಜ್‌ ಚೆಂಬು ಬರಹ

Read More

ಆದಿವಾಸಿಗಳ ಜಗತ್ತು: ಸತೀಶ್‌ ತಿಪಟೂರು ಬರಹ

ಇಲ್ಲಿ ನಮಗರಿವಿಲ್ಲದಂತೆ ರಂಗ ಕ್ರಿಯೆಯೊಂದು ಜರಗುತ್ತಿರುವುದನ್ನು ನಾನು ಗಮನಿಸಿದೆ. ಪ್ರತಿಯೊಂದು ತಂಡ ಅವರ ಕ್ರಿಯಾವಿಧಿ ಆಚರಣೆಗಳನ್ನು ತೋರುವಾಗ, ಕಥನಗಳನ್ನು ಹೇಳುವಾಗ, ನೃತ್ಯ ಪ್ರದರ್ಶಿಸುವಾಗ ಉಳಿದ ತಂಡದವರು ಪ್ರೇಕ್ಷಕರಾಗಿರುತ್ತಿದ್ದರು. ಇದನ್ನೆಲ್ಲ ಗಮನಿಸುತ್ತಿದ್ದ ನನಗೆ ಒಂದು ರೀತಿಯ ಕಳವಳ ಶುರುವಾಯಿತು. ಕಾಡಿನೊಳಗಿನ ಇವರ ಆಚರಣೆಯ, ಸಂಪ್ರದಾಯ, ಕ್ರಿಯಾವಿಧಿ, ನೃತ್ಯ ಸಂಭ್ರಮಗಳೆಲ್ಲವೂ ಹೊರಗೆ ನೋಡಲು ಕುತೂಹಲವೆನಿಸಿದರೂ ಶುಷ್ಕವೆನಿಸುತ್ತಿತ್ತು. ಸಂದರ್ಭಗಳಿಲ್ಲದೆ ವಾತಾವರಣವಿಲ್ಲದೆ ಭಾವನೆಗಳು ಅರಳುವುದಿಲ್ಲ. ಅನುಕರಿಸಿದರೂ ಅಣಕವೆಂಬಂತೆ ಕಾಣುತ್ತಿತ್ತು.
ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ