Advertisement

Category: ಸರಣಿ

ಆಪ್ತವಾಗಿದ್ದ ಆಪ್ತರಂಗ ಪ್ರಯೋಗಗಳು: ಚಿತ್ರಾ ವೆಂಕಟರಾಜು ಸರಣಿ

ಮೂರನೇ ಬೆಲ್‌ ಆದ ತಕ್ಷಣ ನಟ ನಿಧಾನವಾಗಿ ಪ್ರೇಕ್ಷಕರ ಕೈಹಿಡಿದು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ನಟ ಪಾತ್ರದಲ್ಲಿ ಇಳಿಯುತ್ತಿದ್ದಂತೆ ಪ್ರೇಕ್ಷಕನೂ ತನ್ನನ್ನು ಮರೆಯುತ್ತಾನೆ. ನಟರೊಂದಿಗೆ – ನಿರ್ದೇಶಕರು ತಮ್ಮ ತಮ್ಮ ಕಲ್ಪನೆಯಲ್ಲಿ ಇಷ್ಟು ತಿಂಗಳೂ ಕಟ್ಟಿದ ನಾಟಕ ಪ್ರೇಕ್ಷಕರೊಂದಿಗೆ ಸಂವಾದಕ್ಕಿಳಿಯುತ್ತದೆ. ನೋಡಿದ ನಾಟಕಗಳಲ್ಲಿ ಕೆಲವೇ ಕೆಲವು ಪ್ರಯೋಗಗಳು ನಾಟಕ ಮುಗಿದ ಎಷ್ಟೋ ವರ್ಷಗಳ ನಂತರವೂ ನೆನಪಿನ ಭಾಗವಾಗಿ ಭದ್ರವಾಗಿರುತ್ತದೆ ಎಂದರೆ ಆ ಮಾಧ್ಯಮಕ್ಕಿರುವ ಶಕ್ತಿ ಅಂಥದ್ದು! ಆ ಪ್ರಯೋಗಗಳು ಹೇಗಿತ್ತು ಎಂದರೆ ಹೇಳಲು ಬರುವುದಿಲ್ಲ…
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಹರ್ಷದ ಕೂಳನ್ನು ನೆಚ್ಚಿಕೊಂಡು ವರ್ಷದ ಕೂಳನ್ನು  ಕಳೆದುಕೊಳ್ಳಬಾರದಂತೆ!!: ಬಸವನಗೌಡ ಹೆಬ್ಬಳಗೆರೆ ಸರಣಿ

ನನಗೆ ತೊಂದರೆ ಆಗುತ್ತಿದ್ದುದು ನನ್ನ ಸಂಬಂಧಿಕರ ಮನೆಯಿಂದ ಬರುತ್ತಿದ್ದ 3 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಲು ತುಂಬಾ ತಡವಾಗಿ ಬರುತ್ತಿದ್ದರು. ಇದರಿಂದ ನನಗೆ ಅವರು ಹೋಗುವವರೆಗೂ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಾನು ಮಾಡಿದ್ದ ರೂಮಿನಲ್ಲಿ ಒಂದೇ ಹಾಲ್ ಇದ್ದುದ್ದರಿಂದ ಮಕ್ಕಳ ಎದುರಿಗೆ ಹೋಗಿ ಅಡುಗೆ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗಿ ಅವರು ಹೋಗುವವರೆಗೂ ಕಾಯಬೇಕಾಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಪುಸ್ತಕ ಪ್ರಕಟಣೆಯ ಪ್ರಸಂಗಗಳು: ಎಚ್. ಗೋಪಾಲಕೃಷ್ಣ ಸರಣಿ

ಪುಸ್ತಕಕ್ಕೆ ಹೆಸರು ಇಡಬೇಕಿತ್ತಲ್ಲ. ಮುಖಪುಟ ಬರೆದಾಗ ಪುಸ್ತಕದ ಹೆಸರೂ ಕೊಟ್ಟರೆ ಕಲರ್ ಕಾಂಬಿನೇಷನ್‌ಗೆ ಉತ್ತಮ ಎನ್ನುವ ಅಭಿಪ್ರಾಯ ಬಂದಿತ್ತು. ನನ್ನ ಕತೆಗಳ ಹಸ್ತಪ್ರತಿಯ ಒಂದು ಕತೆ ಹೆಸರು ವೈಶಾಖ ಎಂದು. ಈಗಾಗಲೇ ಚದುರಂಗ ಅವರು ವೈಶಾಖ ಎನ್ನುವ ಕಾದಂಬರಿ ಬರೆದು ಅದು ಪ್ರಖ್ಯಾತವಾಗಿತ್ತು. ನನ್ನ ಸಂಕಲನಕ್ಕೂ ವೈಶಾಖ ಹೆಸರು ಇಟ್ಟರೆ ಓದುಗರು ಕನ್ಫ್ಯೂಸ್ ಮಾಡಿಕೊಳ್ಳುವ ಸಂಭವ ಹೆಚ್ಚಿರುತ್ತೆ ಅನಿಸಿತು. ಆದರೂ ಚದುರಂಗರ ವೈಶಾಖ ಕಾದಂಬರಿಯು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೬ನೇ ಬರಹ ನಿಮ್ಮ ಓದಿಗೆ

Read More

ಸುಂದರ ಕಾಡಿನ ರೋಚಕ ಕಥೆಗಳು (೬): ರೂಪಾ ರವೀಂದ್ರ ಜೋಶಿ ಸರಣಿ

ಬೆಟ್ಟದ ಬಲಬದಿಯ ಕಿರುದಾರಿ ಹಿಡಿದು ಸಾಗಿದರೆ, ಅಲ್ಲೊಂದು ನೆಲ್ಲಿ ಮರ. ಅದರ ಬುಡದಲ್ಲಿ ನಮ್ಮ ನಾಯಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದುಕೊಂಡಿದೆ. ನಾನು ಗಾಬರಿಯಿಂದ ಜೋರಾಗಿ ಅಳತೊಡಗಿದೆ. ಯಾರೋ ರಾತ್ರಿ ಅಲ್ಲಿರುವ ಪೊದೆಯಲ್ಲಿ ನಾಡ ಬಾಂಬು ಇಟ್ಟಿದ್ದಾರೆ! ಮಾಂಸದ ವಾಸನೆಗೆ ಮರುಳಾಗಿ, ಅದು ಆ ಬಾಂಬನ್ನು ಬಯಲಲ್ಲಿ ತಂದಿಟ್ಟುಕೊಂಡು ಇಡಿದಾಗಿ ಕಚ್ಚದೆ, ಮೆಲ್ಲಗೆ ಒಂದು ಮೂಲೆಯನ್ನು ಬಿಡಿಸಿದೆ. ಅದಕ್ಕೇ ಸ್ವಲ್ಪಭಾಗ ಸಿಡಿದು, ಅದರ ಮೇಲ್ದವಡೆ ಸ್ವಲ್ಪ ಸೀಳಿತ್ತು. ಬಾಯೆಲ್ಲ ರಕ್ತ ಸಿಕ್ತ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹದಿನೈದನೆಯ ಕಂತು

Read More

ಹೆಣ್ಣಂದ್ರ ರಕ್ತ ಬಸೀಬೇಕು….: ಸುವರ್ಣ ಚೆಳ್ಳೂರು ಸರಣಿ

ಹಿಂಗ ಒಮ್ಮಿ ನಾನು ನಿಮ್ಮವ್ವ ಆ ದೊಡ್ಡ ಹೊಲಕ್ಕ ರಾಶಿ ಮಾಡಕಂತ ಹೋಗಿದ್ವಿ, ಹೊಲದ್ ದಗದಾ ಅಂದ್ರ ತುಸಾss ಇರತೈತ್ಯನು ಮೈ ಬಗ್ಗಿಸಿ ದುಡದ್ರಷ್ಟss ನೀಗತೈತಿ. ಅವತ್ತು ಮಟ ಮಟ ಮಧ್ಯಾಹ್ನದಾಗ ನಾನು ನಿಮ್ಮವ್ವ ಈ ಮ್ಯಾಗಳಮನಿ ಗಂಗಪ್ಪನ ಹೊಲಕ್ಕ ಆರತಾಸಿನ‌ ದಗದಕ್ಕ ಹೋಗಿದ್ವಿ, ಆಕಿ ಕೂಡ ಅದಾ‌ ನೆಲ್ಲು ಕೊಯ್ಯಾ ಕೆಲಸಕ್ಕಂತ ನಮ್ಮ್ ಜೋಡಿ ಬಂದಿದ್ಲು, ಗಂಗಪ್ಪನ ಹೊಲ ಆ‌ ಮ್ಯಾಗಡಿ ಕಡಿ ಐತ್ಯಲಾ ಆ ದುರ್ಗಮ್ಮನ ಗುಡಿತಾಕ ಅಲ್ಲೆ ಒಂದು ಸಣ್ಣ್ ಹಳ್ಳ ಹರಿತೈತಿ ಅಲಾ ಆ ಹೊಲಕ್ಕೊಗಿದ್ವಿ.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ