Advertisement

Category: ಸರಣಿ

ಬದುಕು ಇರುವುದು ಬದುಕಲು.. ಕಳೆದುಕೊಳ್ಳಲಲ್ಲ: ಸುಮಾವೀಣಾ ಸರಣಿ

ಹತ್ತನೆ ತರಗತಿಗೆ ಬಂದಾಗ ಇಬ್ಬರೂ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುವ ಅವಕಾಶವಿತ್ತು. ಅದೂ ಬೋರ್ಡಿಂಗ್ ಶಾಲೆಯಲ್ಲಿ. ಇಬ್ಬರೆ ಕುಳಿತುಕೊಳ್ಳುವ ಬೆಂಚ್ ನಮಗೆ ಹೇಳಿ ಮಾಡಿಸಿದಂತಿತ್ತು.. ನಮಗೆ ಆಗೆಲ್ಲ ಇಂಕ್ ಪೆನ್ನಿನಲ್ಲೇ ನೋಟ್ಸ್ ಬರೆಸುತ್ತಿದ್ದರು. ಒಂದುವೇಳೆ ಇಂಕ್ ಖಾಲಿಯಾದರೆ ಒಬ್ಬರ ಪೆನ್ನಿನಿಂದ ಇನ್ನೊಬ್ಬರ ಪೆನ್ನಿಗೆ ಇಂಕ್ ಹಾಕಿಕೊಳ್ಳುತ್ತಿದ್ದೆವು. ಗೊರಟೆ ಹೂ, ದುಂಡುಮಲ್ಲಿಗೆ ಮುಡಿಯಲು ಪೈಪೋಟಿ ನಡೆಸುತ್ತಿದ್ದೆವು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ

Read More

ಮಂಜು ಎನ್ನುವ ಮುಗ್ಧರೂಪದ ಅವಸಾನ..: ಅನುಸೂಯ ಯತೀಶ್ ಸರಣಿ

ಮಕ್ಕಳ ಮನಸ್ಸು ಬಿಳಿ ಕಾಗದದಂತೆ. ನಾವು ಏನು ತುಂಬಿದರೂ ಅದನ್ನೆ ಬರೆದುಕೊಳ್ಳುತ್ತದೆ. ಹಾಗಾಗಿ ಶಿಕ್ಷಕರಾದವರು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸುವಾಗ ಬಹಳ ಎಚ್ಚರಿಕೆಯಿಂದ, ಸೂಕ್ಷ್ಮಮತಿಯಾಗಿ ಆರೋಗ್ಯಕರವಾಗಿ ತಿದ್ದಬೇಕು. ಆದ್ದರಿಂದ ಒಂದಷ್ಟು ಕಡಕ್ ದನಿಯನ್ನು ಸೇರಿಸಿ ಇನ್ನೂ ಮುಂದೆ ಅವನನ್ನು ತಿಕ್ಕಲು ಮಂಜ ಅನ್ನಬಾರದು‌.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿಯಲ್ಲಿ ಮಂಜು ಎಂಬ ಹುಡುಗನ ಬಾಳಿನ ಕತೆ

Read More

ಕೇರಿಯ ಕುಟುಂಬವೊಂದರ ನೆನಪು: ಮಾರುತಿ ಗೋಪಿಕುಂಟೆ ಸರಣಿ

ಪಕ್ಕದ ಊರಿಗೆ ಒಂದೆರಡು ಬಾರಿ ಹೋದಾಗ ಅವರ ಮನೆಗೆ ನಾವು ಹೋಗಿದ್ದೆವು. ಆದರೆ ಹಿರಿಮಗ ಪಾಂಡುರಂಗನ ಮೇಲೆ ಬಹಳಷ್ಟು ಜವಾಬ್ದಾರಿ ಇತ್ತು. ಆತ ದುಡಿದ… ದುಡಿಯುತ್ತಲೆ ಇದ್ದ. ತಂಗಿಯ ಮದುವೆಯನ್ನು ಬಹಳ ಜೋರಾಗಿಯೆ ಮಾಡಿದ. ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ತಮ್ಮನ ಮದುವೆಯೂ ಆಗಿ ಆತ ಬೇರೆಯಾದನು. ಪಾಂಡುರಂಗ ಎಲ್ಲ ಜವಾಬ್ದಾರಿಗಳ ನಡುವೆ ಒಂದಿಷ್ಟು ಸಾಲಗಾರನಾದ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ

Read More

ಸತ್ತ ಕವಿಯ ನೆನೆದು ಅಳುವ ದೇವರು..: ಎಸ್. ಜಯಶ್ರೀನಿವಾಸ ರಾವ್ ಸರಣಿ

ಲ್ಯಾಟ್ವಿಯಾದ ಪ್ರಮುಖ ಕವಿ ಮಾರಿಸ್ ಸಲೇಯ್ಸ್-ರ ಪ್ರಕಾರ ರೊನಲ್ಡ್ಸ್ ಬ್ರಾಯ್ಡಿಸ್-ರು ತಮ್ಮ ನಾಲ್ಕನೆಯ ಸಂಕಲನ “ಜೀರೋ ಸಮ್”-ನಲ್ಲಿ ತಮ್ಮ ಹಿಂದಿನ ಕವನ ಸಂಕಲನಗಳ ಪ್ರತಿಧ್ವನಿಗಳನ್ನು ಸಮತೋಲಿತ ವಿನ್ಯಾಸದಲ್ಲಿ ಹೊಸ ಮೋಟೀಫ಼್-ಗಳೊಂದಿಗೆ ಸಂಯೋಜಿಸುವ ಮೂಲಕ ತನ್ನ ಕಾವ್ಯ-ಕಾರ್ಯದ ಒಂದು ಹಂತಕ್ಕೆ ಮುಕ್ತಾಯದ ಗಂಟು ಹಾಕುತ್ತಾರೆ. ಆದರೆ ನಗುವಿನ ಮೂಲ ಸ್ವರೂಪ ಮತ್ತು ನಗುವ ಸಾಮರ್ಥ್ಯದ ಪ್ರಶ್ನೆಯು ಇಲ್ಲಿಯೂ ಕೇಂದ್ರದಲ್ಲೇ ನೆಲೆಸಿದೆಯೆಂದನ್ನುತ್ತಾರೆ ಸಲೇಯ್ಸ್.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಜೈಲಿಗೇಕೆ ರಂಗಾಯಣ?: ಕೆ.ಸತ್ಯನಾರಾಯಣ ಸರಣಿ

ಪಾಟೀಲರೇ ಮತ್ತೆ ಮತ್ತೆ ಸಂದರ್ಶನಗಳಲ್ಲಿ ಹೇಳುತ್ತಿದ್ದ ಹಾಗೆ, ಖೈದಿಗಳಿಗೆ ನಟನೆಯಲ್ಲಿ ಇನ್ನಿಲ್ಲದಷ್ಟು ಪ್ರಬುದ್ಧತೆ, ತೀವ್ರತೆ, ತನ್ಮಯತೆ ಬಂದಿತ್ತು. ನಾಟಕದ ಮಾತುಗಳಿಗೆ ಅವರು ನೂರಕ್ಕೆ ನೂರರಷ್ಟು ಜೀವ ತುಂಬುತ್ತಿದ್ದರು. ನಾಟಕ ಪ್ರದರ್ಶನ ಮುಗಿದ ಮೇಲೂ, ಶ್ರೀರಾಮ, ಶ್ರೀಕೃಷ್ಣ, ಧರ್ಮರಾಯ, ವಿಭೀಷಣ, ಬುದ್ಧ, ಇಂಥವರ ವೇಷಭೂಷಣಗಳಲ್ಲೇ ಇರಲು ಆಸೆ ಪಡುತ್ತಿದ್ದರು. ಕೇಂದ್ರ ಕಾರಾಗೃಹದ ಗ್ರಂಥಾಲಯ ಪುರಾತನವಾದದ್ದು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಏಳನೆಯ ಬರಹ ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ