Advertisement

Category: ಸರಣಿ

ಅಮ್ಮನ ದ್ಯಾವ್ರು: ಸುಮಾ ಸತೀಶ್ ಸರಣಿ

ಅವು ಈಗಿನ್ ಕಾಲುದ್ ಗುಲಾಬಿ ಅಲ್ಲ್ ಕಣೇಳಿ. ರೋಜಾ ಬಣ್ದವು. ತೆಳ್ಳುಗಿರಾ ರೆಕ್ಕೆಗ್ಳು. ಬಲ್ ನಾಜೂಕು. ಗಟ್ಟಿಯಾಗಿ ಒತ್ತಿದ್ರೆ ಬಾಡೋಗೋಂತವು. ಚಿಕ್ಕದಾದ್ರೆ ಐದು ಪೈಸಾ. ದೊಡ್ಡವು ಹತ್ತು ಪೈಸಾ. ಸ್ಯಾನೇ ದೊಡ್ಡವು ನಾಕಾಣೆ. ಮನ್ಯಾಗೆ ಇರಾ ಚಿಲ್ರೆ ಹುಡುಕೀ ಹುಡುಕೀ ಅಮ್ಮ‌ ರಾತ್ರೀನೇ ರೆಡಿ ಇಕ್ಕಿರ್ತಿತ್ತು. ಮದ್ಲೇ ಗೊತ್ತಿರ್ತಿತ್ತಲ್ಲ. ಆದ್ರೂ ಸತ ಗುಲಾಬಿ ಸ್ಯಾನೆ ಇದ್ರೆ ಆಸೆ. ಅವುನ್ ತಾವ ಕೊಸರಾಡೋದು. ಇನ್ನೊಂದು ಹಾಕು, ಇದು ಚಿಕ್ದು, ಇದು ರೆಕ್ಕೆ ಕಿತ್ತೋಗದೆ, ಬಾಡೋಗದೆ, ಸಿಕ್ಕಾಪಟ್ಟೆ ಕಾಸು ಯೋಳ್ತೀಯಾ. ನಾಳಿಂದ ಬ್ಯಾಡಾಕ್ಕೆ ಬ್ಯಾಡ ಇಂಗೆ ನಮ್ಮಮ್ಮುನ್ ಕೂಗಾಟ. ಅವ್ನೂ ಕಮ್ಮಿ ಇರ್ತಿರ್ಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ ನಿಮ್ಮ ಓದಿಗೆ

Read More

ಅತಿ ವಿನಯಂ ಧೂರ್ತ ಲಕ್ಷಣಂ!!: ಬಸವನಗೌಡ ಹೆಬ್ಬಳಗೆರೆ ಸರಣಿ

ನೇರವಾದಿಯಾಗಿದ್ದರಿಂದ ನನಗೆ ಟಿಸಿಹೆಚ್ ನಲ್ಲಿ ನಮ್ಮಂತಹ ಕೆಲವರನ್ನು ಹತ್ತಿಕ್ಕುವ ಪ್ರಯತ್ನವು ನಡೆಯುತ್ತಿತ್ತೇ ವಿನಃ ಯಾರೂ ನಮಗೆ ಸಪೋರ್ಟ್ ಮಾಡಲಿಲ್ಲ. ಈ ರೀತಿಯ ಸ್ಥಿತಿ ಇದ್ದುದರಿಂದ ನಾವು ಯಾವುದೇ ಅಸೈನ್ ಮೆಂಟ್ ಅನ್ನು ಕಾಲಕಾಲಕ್ಕೆ ಬರೆದು ಕೊಡುತ್ತಿದ್ದೆವು. ಇನ್ನು ಪ್ರಾಕ್ಟೀಸ್ ಟೀಚಿಂಗ್‌ನಲ್ಲಿ ಒಂದು ಸಣ್ಣ ತಪ್ಪಿಗೂ ಅವಕಾಶ ಮಾಡಿಕೊಡ್ತಾ ಇರಲಿಲ್ಲ. ಆಗ ನಾವು ಪ್ರಾಕ್ಟಿಕಲ್ ಕ್ಲಾಸ್ ಕೊಡಬೇಕಾಗಿತ್ತು. ಅದಕ್ಕೆ ಒಂದು ಅವಧಿಯ ಪಾಠಕ್ಕೆ 50 ಅಂಕಗಳು ಇದ್ದವು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೆರಡನೆಯ ಕಂತು ನಿಮ್ಮ ಓದಿಗೆ

Read More

ಧರ್ಮ ಮತ್ತು ಮೃತ್ಯು: ಸುಮಾವೀಣಾ ಸರಣಿ

‘ವಾಲ್ಪರೈ ಅಭಿವೃದ್ಧಿ ತಂದ ದುರಂತ’ ಈ ಬರಹವನ್ನು ಓದಿದಾಗ ದಿಗ್ಭ್ರಾಂತವಾಯಿತು. ಸಿಂಹಬಾಲದ ಕೋತಿಗಳನ್ನು ಮೊದಲುಗೊಂಡಂತೆ ಅನೇಕ ಪಕ್ಷಿ ಪ್ರಭೇದಗಳು ಅಳಿವಿನಂಚಿಗೆ ಸರಿದದ್ದು. ತಮ್ಮದಲ್ಲದ ಜೀವನ ಶೈಲಿಗೆ ಹೊಂದಿಕೊಳ್ಳಹೋಗಿ ಸಿಂಹ ಬಾಲದ ಕೋತಿಗಳು ಶಾಶ್ವತ ಅಂಗವಿಕಲತೆಯನ್ನು ಪಡೆದಿದ್ದವು ಎಂದು ಅವುಗಳ ನರಳಾಟ ನೋಡದೆ ದಯಾಮರಣ ನೀಡುವ ಬಗ್ಗೆ ಮಾತನಾಡಿದರೂ ಸರಕಾರ ಅಳಿವಿನಂಚಿನಲ್ಲಿರುವ ಪ್ರಭೇದ ಎನ್ನುವ ಕಾರಣಕ್ಕೆ. ದಯಾಮೃತ್ಯು ಕೋಟಿ ಗಳಿಸಿದರು ಅಳಿದ ಸಿಂಹಬಾಲದ ಕೋತಿ ಸಂತತಿಯನ್ನು ಗಳಿಸಲಾಗುವುದಿಲ್ಲ ಅಲ್ವೆ! ಈ ದಯಾಮರಣಕ್ಕೂ ಕರ್ನಾಟಕಕ್ಕೂ ಬಿಡದ ನಂಟು ಅನ್ನಿಸುತ್ತದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ಮೂರನೆಯ ಬರಹ ನಿಮ್ಮ ಓದಿಗೆ

Read More

ತವರೆಂಬ ಬೆಚ್ಚಗಿನ ಗೂಡಿನಲ್ಲಿ ಹಿತ ತಂದ ಬಾಣಂತನ: ಭವ್ಯ ಟಿ.ಎಸ್. ಸರಣಿ

ನಾಲಗೆ‌ ಖಾರದಿಂದ ಚುರುಕ್ ಎಂದ‌ ಕೂಡಲೇ ಜೋರಾಗಿ ಅಳುವ ಮಗುವನ್ನು ಸಮಾಧಾನಿಸಿ, ತೊಟ್ಟಿಲಿಗೆ ಹಾಕಿ ತೂಗಿ ಜೋಗುಳ ಹಾಡಿದ ಕೂಡಲೇ ನಿದ್ರೆ. ಖಾರ ಹಾಕಿದ ದಿನ ತುಸು ಹೆಚ್ಚೇ ನಿದ್ರೆ. ನನ್ನಿಬ್ಬರೂ ಮಕ್ಕಳು ರಾತ್ರಿ ಹಗಲು ಎರಡೂ ಹೊತ್ತು ಗಾಢವಾಗಿ ನಿದ್ರಿಸುತ್ತಿದ್ದರು. ಇದರಿಂದಾಗಿ ನಾನು ಬಾಣಂತನದ ಏಕತಾನತೆಯ ನಡುವೆ ಲವಲವಿಕೆಯಿಂದ ಇರಲು ಸಾಧ್ಯವಾಗುತಿತ್ತು. ಮಳೆರಾಯನ ಆರ್ಭಟದ ನಡುವೆ‌ ದೊಡ್ಡ ದೊಡ್ಡ ಹಗಲುಗಳು, ದೀರ್ಘ ಇರುಳುಗಳು ಕಳೆದು ಹೋದದ್ದೇ ತಿಳಿಯುತ್ತಿರಲಿಲ್ಲ. ಎಷ್ಟೋ ರಾತ್ರಿಗಳು ಕರೆಂಟ್ ಸಹ ಇರುತ್ತಿರಲಿಲ್ಲ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ನಮ್ಮಮ್ಮ ನಾಗಮ್ಮ: ಸುಮಾ ಸತೀಶ್ ಸರಣಿ

ಒಟ್ನಾಗೆ ಅಮ್ಮ ದೋಡ್ಡ ಸಂಸಾರದಾಗೆ ಸೈ ಅನ್ನುಸ್ಕಂಡಿದ್ದು ಸಣ್ದೇನಲ್ಲ. ಅಪ್ಪ ರಾಜಕೀಯದಾಗಿತ್ತು. ಮನೇನಾಗೆ ಇರ್ತಾ ಇರ್ಲಿಲ್ಲ. ಮಾತುಕತೆಗೆ ಸಿಗುತ್ಲೇ ಇರ್ಲಿಲ್ಲ. ಮನ್ ತುಂಬಾ ಜನ. ಕೆಲ್ಸ. ಮದಮದಲು ಅತ್ತೆದೀರ್ಗೆ ಬಿಗುಮಾನ ಇತ್ತು. ನಮ್ಮ ದೊಡ್ಡತ್ತೆ ಮಾತೂ ಅಂದ್ರೆ ಮನ್ಯಾಗೆ ವೇದವಾಕ್ಯ. ಅವ್ರೂ ಒಂದಿನ ನಾವು ಎಂಟು ಜನ ಯಾವತ್ತಿದ್ರೂ ಒಂದೇನೇಯಾ ಅಂತ ಯೋಳ್ದಾಗ ಅಮ್ಮುಂಗೆ ನಾನೊಬ್ಳೇ ಅಲ್ವಾ ಅಂಗಾರೆ ಹೊರುಗ್ನೋಳು ಅಂತ ಸಂಕಟ ಆಗಿ ಮರೇನಾಗೆ ಕಣ್ಣಾಗೆ ನೀರು ಹಾಕ್ಕಂಡಿದ್ದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ತಾಯಿಯ ಕುರಿತ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ