Advertisement

Tag: ಅಂಕಣ

ಒದ್ರೆ ತಾನೇ ಬೀಳೋದೂ…!: ಎಚ್. ಗೋಪಾಲಕೃಷ್ಣ ಸರಣಿ

ಅದು ಹೇಗೋ ಮನೆ ಒಂದು ರೂಪ ತಳೆದಿತ್ತು. ಅದೂ ಹೇಗೆ ಅಂದರೆ ಕಾಸ್ಟ್ ರೆಡಕ್ಷನ್‌ಗೆ ಒಂದು ಪ್ಲಾನ್ ಹಾಕಿದ್ದೆ ಅಂತ ಹೇಳಿದ್ದೆ ಅಲ್ಲವೇ? ಅದರ ಪ್ರಕಾರ ಶೋ ಕೇಸು ಕೆಲಸ ಬೇಡ ಅಂತ ನಿಲ್ಲಿಸಿದೆ. ಆದರೆ ಮಧ್ಯೆ ಹಲಗೆ ಬರಬೇಕಲ್ಲಾ ಅಂತ ಹಲಗೆ ಫ್ಯಾಕ್ಟರಿ ಸ್ಕ್ರ್ಯಾಪ್ ವುಡ್‌ನಲ್ಲಿ ತಂದಿದ್ದೆ ತಾನೇ? ಅದು ಈ ಸ್ಲಾಬ್‌ಗೆ ಉಪಯೋಗ ಆಯ್ತಾ? ಎರಡು ರೂಮಿನಿಂದ ಎರಡು ಕಬೋರ್ಡ್ ಆಗಬೇಕಿತ್ತು. ಅದಕ್ಕೆ ಬಾಗಿಲು ಬೇಡ ಅಂತ ನಿರ್ಧರಿಸಿ ಆಗಿತ್ತು. ಇದಕ್ಕೂ ಹಲಗೆ ಸ್ಕ್ರ್ಯಾಪ್ ವುಡ್‌ನಿಂದ ಅಡ್ಜೆಸ್ಟ್ ಆಯ್ತಾ? ಬಾಗಿಲು ಯಾಕೆ ಬೇಡ ಅಂದರೆ ಅದಕ್ಕೆ ಒಂದು ತುಂಬಾ ಬಲವಾದ ಕಾರಣ ಇತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಅಲ್ಲೊಂದು ವೇಲ್ ಸಾವು, ಇಲ್ಲೊಂದು ಪಟಾಕಿ ಸಿಡಿತ: ಡಾ. ವಿನತೆ ಶರ್ಮ ಅಂಕಣ

ಈ ವಾರದ ಕೊನೆಯಲ್ಲಿ – ಶುಕ್ರವಾರ – ಬೇರೊಂದು ಹೊಸ ಕಥೆ ಶುರುವಾಗಿದೆ. ಇದು ಮನುಷ್ಯರಿಗಿರುವ ‘ತಾನೇ ಮೇಲು’ ಅನ್ನೋ ಅಹಂಭಾವ ಸೂಚಕ ಕಥೆ. ಚೈನಾ ದೇಶಕ್ಕೆ ಸೇರಿದ ಮೂರು ಯುದ್ಧ ನೌಕೆಗಳು ಆಸ್ಟ್ರೇಲಿಯಾದ ಟಾಸ್ಮನ್ ಸಮುದ್ರಪ್ರದೇಶದಲ್ಲಿ ‘ಲೈವ್-ಫೈರ್’ ಕಸರತ್ತು ನಡೆಸಿವೆ. ಅಂದರೆ ತಮ್ಮ ನೌಕೆಗಳಿಂದ ಆಕಾಶದಲ್ಲಿ ಸುಮಾರು ಐವತ್ತು ಸಾವಿರ ಅಡಿ ಎತ್ತರಕ್ಕೆ ಯುದ್ಧಾಯುಧಗಳನ್ನು ಚಿಮ್ಮಿಸಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕಂಕುಳಲ್ಲಿ ಕತೆ ಪುಸ್ತಕ, ಎದೆಯಲ್ಲಿ ಕಥಾಸಾಗರ: ಸುಮಾ ಸತೀಶ್‌ ಸರಣಿ

ಅಂಗೆ ನೋಡಿದ್ರೆ ನಮ್ಮ‌ ನಾಗೂ ಅತ್ತೆಗೆ ಅಕ್ಷರಾನೇ ತಲೆಗೆ ಹತ್ತಲಿಲ್ಲ.‌ ಕೊನೆಗೆ ಅವರಿಗೆ ಸಂಗೀತ ಕಲಿಸಲು ಹಾರ್ಮೋನಿಯಂ ಮೇಷ್ಟ್ರನ್ನ ಕರೆಸಿದ್ರು. ಆ ಮೇಷ್ಟ್ರು ಮೊದಲು ಕಾಗುಣಿತ ತಿದ್ದಿಸಿ ಆಮೇಲೆ ಸಂಗೀತ ಹೇಳಿಕೊಟ್ಟಿದ್ದರು. ನಮ್ಮತ್ತೆಯ ಅಲ್ಪಪ್ರಾಣ ಮಹಾಪ್ರಾಣಗಳಿಗೆ ಜೀವ ತುಂಬಿದರು ಮೇಷ್ಟ್ರು. ಮೊದಲೇ ಕಲ್ಪನಾ ಚತುರೆ ಅತ್ತೆ. ಅಕ್ಷರಾನೂ ಬಂದ ಮೇಲೆ ಕತೆ ಬರೇಯೋಕೆ ಶುರು ಮಾಡಿದ್ರು. ಇಷ್ಟೇ ಅಲ್ಲ, ಅಕ್ಕಂದಿರ ಮಕ್ಕಳನ್ನು ಬಳಿ ಕೂರಿಸಿಕೊಂಡು ಸ್ವಾರಸ್ಯಕರವಾಗಿ ಕತೆ ಕಟ್ಟಿ ಹೇಳುವ ಕಲೆ ಇವರಲ್ಲಿ ಸೊಗಸಾಗಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ದಾರಿ ಯಾವುದಯ್ಯಾ….?: ಸುಧಾ ಆಡುಕಳ ಅಂಕಣ

“ನಿಮ್ಮ ದೇವರ ಜಮೀನು ಕೇಳ್ತೇನೆ ಅಂತ ತಪ್ಪು ತಿಳಿಯಬೇಡಿ. ಒಂದು ಮನೆಗಾಗುವಷ್ಟು, ಜತೆಗೆ ರಸ್ತೆಗೊಂದು ದಾರಿಯಾಗುವಷ್ಟು ಜಾಗ ಬಿಟ್ಟುಕೊಟ್ಟರೆ ನಾವು ಮುಂದಿನ ಮಳೆಗಾಲದಲ್ಲಿ ಬದುಕ್ತೀವಿ. ಇಲ್ಲಾಂದ್ರೆ ಎಲ್ಲೋ ದೂರದಲ್ಲಿ ಮನೆಕಟ್ಟಿ ಈ ಜಮೀನಿಗೆ ಓಡಿಯಾಡೋದೆಲ್ಲ ಆಗಿಹೋಗುವ ಮಾತಲ್ಲ. ನೋಡಿ, ಒಂದು ಮನಸು ಮಾಡಿ. ಮತ್ತೆ ನಂಗೆ ನೀವು ಧರ್ಮಕ್ಕೆ ಕೊಡೂದೇನೂ ಬ್ಯಾಡ…..
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನೈದನೆಯ ಕಂತು ನಿಮ್ಮ ಓದಿಗೆ

Read More

ಅಮೆರಿಕಾದ ನಗರಗಳು: ಎಂ.ವಿ. ಶಶಿಭೂಷಣ ರಾಜು ಅಂಕಣ

ಕ್ಯಾಲಿಫೋರ್ನಿಯ ರಾಜ್ಯದಲ್ಲಿರುವ ಲಾಸ್ ಏಂಜಲೀಸ್, ಅಮೆರಿಕಾದ ಎರಡನೇ ಹೆಚ್ಚು ಜನಸಂಖ್ಯೆ ಇರುವ ನಗರ. ಇಲ್ಲಿ ಸುಮಾರು ಮೂವತ್ತೊಂಬತ್ತು ಲಕ್ಷ ಜನ ವಾಸಿಸುತ್ತಿದ್ದಾರೆ. ಲಾಸ್ ಏಂಜಲೀಸ್ ಸಿನೆಮಾ ಮತ್ತು ಟಿವಿ ಜಗತ್ತಿನ ಕೇಂದ್ರಬಿಂದು. ಇಲ್ಲಿನ ಸಿನಿಮಾ ಜಗತ್ತನ್ನು ಹಾಲಿವುಡ್ ಎಂದು ಕರೆಯಲಾಗುತ್ತದೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ