Advertisement

Tag: ಕತೆ

ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಡಾ।। ಮಧು ಚಿತ್ತರ್ವು ಕತೆ

ಎಲಿಜಿಯಂ ಕಾಲಮಾನ ಮಧ್ಯರಾತ್ರಿ 12:00. ಕತ್ತಲೆ. ಮಧ್ಯರಾತ್ರಿಯಾಗಿದೆ. ತಗ್ಗದ ಬಿರುಗಾಳಿ, ತೀವ್ರವಾಗಿ ಮಳೆ. ಪವರ್ ಇಲ್ಲ. ಯಾವ ವ್ಯವಸ್ಥೆಗಳೂ ಕೆಲಸ ಮಾಡುತ್ತಿಲ್ಲ. ಎಲ್ಲರೂ ಹೋಗಿದ್ದಾರೆ. ಆದರೆ ನಾನು ಹೋಗಲು ಸಾಧ್ಯವಾಗುತ್ತಿಲ್ಲ. ನನಗೆ ಏನೋ ಆಗಿದೆ. ನನ್ನ ದೇಹವೆಲ್ಲಾ ದುರ್ಬಲವಾಗಿದೆ. ನನ್ನ ಅಂಗಾಂಗಗಳು ಚಲಿಸುತ್ತಿಲ್ಲ. ಆ ಮಳೆ ನೀರಿಗೆ ಆಶ್ಚರ್ಯಕರವಾಗಿ ನನ್ನ ದೇಹವೆಲ್ಲಾ ಗಾಯಗಳಾಗಿವೆ. ಅವು ಹಸಿರು ಬಣ್ಣದಲ್ಲಿವೆ. ಬಹುಶಃ ಇದೇ ನನ್ನ ಕೊನೆಯ ದಿನ. ಇದೇ ಕೊನೆಯ ಸಂದೇಶ… ಏಕೆಂದರೆ ಕೈಗಳು, ಮೆದುಳು ಮಾತ್ರ ಕೆಲಸ ಮಾಡುತ್ತಿವೆ.
ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಡಾ।। ಮಧು ಚಿತ್ತರ್ವು ಕತೆ “ಸಿಂಬಯಾಸಿಸ್” ನಿಮ್ಮ ಈ ಭಾನುವಾರದ ಓದಿಗೆ

Read More

ಆರ್. ಪವನ್‌ ಕುಮಾರ್ ಬರೆದ ಈ ಭಾನುವಾರದ ಕತೆ

ಈಗ ಮಾತಿಗೆ ಬರಗಾಲ ಬಂದಂತೆ ಪ್ರತಿ ಸಂತೆಯ ವಾತಾವರಣಗಳು ನಿರ್ಮಾಣವಾಗುತ್ತಿದ್ದವು. ಇದೇಕೆಂದು ಅವನಿಗೆ ಈ ಕ್ಷಣಕ್ಕೂ ಅರ್ಥವಾಗಿರಲಿಲ್ಲ. ಜನರೇಕೇ ತನ್ನನ್ನೂ ಆಗುಂತುಕನಂತೆ ಕಂಡು ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿರುವರೆಂದು ಆಗಾಗ ಯೋಚಿಸುತ್ತಿದ್ದನಾದರು ಅದಕ್ಕೆ ಪೂರಕವೆನಿಸುವ ಉತ್ತರಗಳು ಸಿಗುತ್ತಿರಲಿಲ್ಲ. ಸಂತೆ ಮುಗಿಸಿ ಬರುವಾಗ ಕಾಸೀಂ ಇವತ್ತು ವ್ಯಾಪಾರ ಅಂಥದ್ದು ಏನಿಲ್ಲವಾದರು, ತನಗೆ ಅಪಾರ ಮೀನು ತಿನ್ನುವ ಬಯಕೆಯಾಗಿದೆ. ತನ್ನ ಪೈಜಾಮಾದ ಕಳ್ಳ ಜೇಬಿನೊಳಗೆ ಮುದುರಿ ಮಡಿಸಿಟ್ಟಿದ್ದ ನೂರರ ಒಂದು ನೋಟು ತಗೆದು ಸಂಜೆಯಷ್ಟೇ ಹಿಡಿದು ರಸ್ತೆ ಬದಿಯಲ್ಲಿ ನಿಂತು ಮಾರುತ್ತಿದ್ದ ಜಿಲೇಬಿ ಮೀನುಗಳ ಜತೆ ಬಂದಿದ್ದ. ಈ ಮಾತುಕತೆಯಲ್ಲಿ ಇಬ್ಬರಿಗೂ ಅದರ ಕಡೆ ಗಮನವಿರಲಿಲ್ಲ.
ಆರ್. ಪವನ್‌ ಕುಮಾರ್ ಬರೆದ ಈ ಭಾನುವಾರದ ಕತೆ “ಕಾರ್ಮೋಡ” ನಿಮ್ಮ ಓದಿಗೆ

Read More

ಕೋಡೀಹಳ್ಳಿ ಮುರಳೀಮೋಹನ್ ಅನುವಾದಿಸಿದ ತೆಲುಗಿನ ಎಸ್.ವಿ. ಕೃಷ್ಣ ಕತೆ

“ಏಕೆಂದರೆ.. ಒಂಟಿತನ! ಯಾರೂ ನನ್ನ ಜೊತೆ ಮಾತನಾಡುವುದಿಲ್ಲ. ಯಾರೂ ನನ್ನನ್ನು ನೋಡಲು ಸಹ ಬಯಸುವುದಿಲ್ಲ. ನಾನು ಒಂಟಿತನಕ್ಕೆ ರೂಢಿಯಾಗಿದ್ದೇನೆ. ಹೇಗೋ ‘ಏಕಾಂತತೆ’ಯಂತೆ ಭಾಸವಾಗುವ ಈ ಮನಸ್ಥಿತಿಗೆ ನಾನು ರೂಢಿಸಿಕೊಂಡಿದ್ದೇನೆ. ಈ ಸ್ಥಿತಿ.. ಈ ಒಂಟಿತನ.. ಈ ಏಕಾಂತತೆಯಲ್ಲಿ ಮಾತ್ರ ನಾವು ಶಾಂತಿಯಿಂದ ಇರಲು ಸಾಧ್ಯ. ಯಾರೂ ನಮ್ಮನ್ನು ನೋಡುವುದಿಲ್ಲ, ಯಾರೂ ನಮ್ಮ ಬಳಿಗೆ ಬರುವುದಿಲ್ಲ, ಯಾರೂ ನಮ್ಮನ್ನು ನೋಯಿಸುವುದಿಲ್ಲ, ಯಾರೂ ಕೋಪಗೊಳ್ಳುವುದಿಲ್ಲ..”
ಕೋಡೀಹಳ್ಳಿ ಮುರಳೀಮೋಹನ್ ಅನುವಾದಿಸಿದ ತೆಲುಗಿನ ಎಸ್.ವಿ. ಕೃಷ್ಣ ಬರೆದ ಕತೆ “ಅಂತರ್ ನೇತ್ರ” ನಿಮ್ಮ ಈ ಭಾನುವಾರದ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿನಯಾ ಒಕ್ಕುಂದ ಕತೆ

ಲ್ಲಯ್ಯ, ನಮ್ಮ ಅಜ್ಜಿಮನೆಯ ಮಾವಿನ ಮರದ ಕೆಳಗೆ ಸೈಕಲ್ ನಿಲ್ಲಿಸಿ ಎಲ್ಲಿಗೆ ಹೋಗುತ್ತಿದ್ದೆ ಮಾರಾಯ? ನಾನು ಪಿಯುಸಿ ಓದುತ್ತಿದ್ದ ಒಂದು ಮೇ ರಜೆಯ ಮಧ್ಯಾಹ್ನ ಚಿಪ್ಪಿಕಲ್ಲಿನ ಸಾರು ಕುದಿಸ್ತಾ ಇರುವಾಗ- ಅಮ್ಮ ದಿಕ್ಕಬಳ್ಳಿ ಮೆಟ್ಟಿ ಬಂದವಳಂತೆ ಬಂದು ‘ಹಡಬೆ ಹೆಣ್ಣೆ! ಮರ್ಯಾದೆ ಕಳೀತಿಯೇನೇ?’ ಎಂದವಳೇ ಒಲೆಮೇಲಿನ ಸಾರೆತ್ತಿ ತೊಡೆ ಮೇಲೆ ಸುರಿದುಬಿಟ್ಟಳು! ನನ್ನ ನೋವುಗಳೇ ಹೀಗೆ. ಇಲ್ಲಿದೆ ಅಂತ ತೋರಿಸಿಕೊಳ್ಳಲು ಆಗದೆ ಹಾಗೆ! ಹೇಳು, ನಾ ಮಾಡಿದ ತಪ್ಪೇನು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿನಯಾ ಒಕ್ಕುಂದ ಕತೆ “ಒಂದು ಖಾಸಗಿ ಪತ್ರ” ನಿಮ್ಮ ಈ ಭಾನುವಾರದ ಓದಿಗೆ

Read More

ರಾಜಲಕ್ಷ್ಮಿ ಎನ್. ರಾವ್ ಬರೆದ ಕತೆ “ಆಗಸ್ಟ್ ಹದಿನೈದು”

ಎಲ್ಲಿಂದಲೋ ಸಿನೆಮಾ ಹಾಡು ಕೇಳಿ ಬಂತು. ಕಡೆಯ ಆಟ ಮುಗಿಯಿತೇನೋ ‘ತಾರಾ ಗಗನಮೇ…’ ತಲೆಯೆತ್ತಿ ನೋಡಿದ. ಆಕಾಶದಲ್ಲೂ ಸ್ವಾತಂತ್ರ್ಯೋತ್ಸವದ ಸಂಭ್ರಮ. ಲಕ್ಷೋಪಲಕ್ಷ ನಕ್ಷತ್ರಗಳು, ಬೊಂಬಾಯಿನಲ್ಲಿ ವಿದ್ಯುದ್ದೀಪಮಾಲೆಗಳ ನಡುವಿನಲ್ಲಿ ಇವುಗಳನ್ನು ಗಮನವಿಟ್ಟು ನೋಡಿರಲಿಲ್ಲ. ಇಲ್ಲಿ ನಿಸರ್ಗಕ್ಕೆ ಮಾನವನ ಸ್ಪರ್ಧೆಯಿಲ್ಲ. ಬೊಂಬಾಯಿನಲ್ಲಿ ವಿದ್ಯುದ್ದೀಪಗಳ ಗೊಂದಲಕ್ಕೆ ಸಿಕ್ಕಿ ಆಕಾಶ ಕೆಂಪಾಗಿತ್ತು.
ಹಿರಿಯ ಕತೆಗಾರ್ತಿ ರಾಜಲಕ್ಷ್ಮಿ ಎನ್. ರಾವ್ ಬರೆದ ಸಮಗ್ರ ಕತೆಗಳನ್ನು ಚಂದನ್‌ ಗೌಡ “ಸಂಗಮ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದು, ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಈ ಸಂಕಲನದ “ಆಗಸ್ಟ್ ಹದಿನೈದು” ಕತೆ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ