ಬೆಳದಿಂಗಳಂತೆ ತಾಗುವ ಕಥೆಗಳು
ಇಲ್ಲಿ, ಮಧ್ಯಮ ವರ್ಗದ ಕುಟುಂಬಗಳಲ್ಲಿನ ಹೆಣ್ಣು ಮಕ್ಕಳನ್ನು ಪ್ರತಿನಿಧಿಸುವ ಮತ್ತು ಬದುಕಿನ ಬಗ್ಗೆ ಭವ್ಯ ಕನಸುಗಳನ್ನು ಕಟ್ಟಿಕೊಂಡಿರುವ ‘ಪೂರ್ವಿ’ ಎಂಬ ಮಗುವಿನ ತಾಯಿಯಾದ ನಳಿನಿಯು, ತನ್ನ ಗಂಡ ಅರವಿಂದನ ದೇಹ ಬಯಕೆಯನ್ನು ಈಡೇರಿಸಲು ಪ್ರತಿ ರಾತ್ರಿಯೂ ಹಿಂದೇಟು ಹಾಕುವುದಕ್ಕೆ ಅವರ ಬದುಕನ್ನು ಮುತ್ತಿಕೊಂಡಿರುವ ಆರ್ಥಿಕ ಸಮಸ್ಯೆಗಳೇ ಕಾರಣವಾಗಿರುವುದು ಪರಿಸ್ಥಿತಿಯ ವ್ಯಂಗ್ಯದಂತಿದೆ. ಆದರೆ ಕಡೆಗೂ ನಳಿನಿಯು ಆತನ ದೇಹ ಬಯಕೆಯನ್ನು ಈಡೇರಿಸಲು ಮುಂದಾಗುವ ಸಂದರ್ಭದಲ್ಲಿ ಎದುರಿಸುವ ಸಂದಿಗ್ಧಗಳೇ ಆಕೆ ಗುಲ್ ಮೊಹರ್ ಹುಡುಗನ ಕರಾಳ ಬದುಕಿನೊಂದಿಗೆ ಮುಖಾಮುಖಿಯಾಗುವುದಕ್ಕೆ ಕಾರಣವಾಗುತ್ತದೆ!
ಕಥೆಗಾರ ಅನಿಲ್ ಗುನ್ನಾಪೂರ ಬರೆದ “ಕಲ್ಲು ಹೂವಿನ ನೆರಳು” ಕಥಾ ಸಂಕಲನದ ಕುರಿತು ಕಲ್ಲೇಶ್ ಕುಂಬಾರ್ ಬರಹ