Advertisement

Tag: ಕೆಂಡಸಂಪಿಗೆ

ಆರೋಗ್ಯವನ್ನೂ ದುಡ್ಡಿನಿಂದ ಕೊಳ್ಳುವ ಹಾಗಿದ್ದಿದ್ದರೆ!: ಎಸ್.‌ ನಾಗಶ್ರೀ ಅಜಯ್‌ ಅಂಕಣ

ಸಂಬಳ ಕೊಡುವ ಕೆಲಸವನ್ನು, ಹುದ್ದೆ ನೀಡುವ ಅಧಿಕಾರವನ್ನು, ಹಣ ತಂದುಕೊಡುವ ಸವಲತ್ತನ್ನು, ಸುಲಭಕ್ಕೆ ಬೆರಳತುದಿಗೆ ದಕ್ಕಿಸುವ ಆಧುನಿಕ ಜೀವನಶೈಲಿಯನ್ನು ಪ್ರೀತಿಸುವ, ಅದನ್ನು ಉಳಿಸಿಕೊಳ್ಳಲು ವಿಶ್ವಪ್ರಯತ್ನ ಮಾಡುವ ನಮಗೆ ಆರೋಗ್ಯ ಕಾಡಿಸುವ ಮರೀಚಿಕೆ. ಆರೋಗ್ಯವನ್ನೂ ಹಣ ಕೊಟ್ಟು ಕೊಳ್ಳುವ ಹಾಗಿದ್ದರೆ, ಸರಿಯಾಗುತ್ತಿತ್ತೇನೋ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ಸಾಮಾಜಿಕ ಸಾಮರಸ್ಯದ ಸೂಚಕ ‘ಭರಮದೇವರು’: ತೇಜಾವತಿ ಡಿ.ಎಸ್.‌ ಬರಹ

ಪುರಾಣ ಕಥೆಗಳು ನಮ್ಮ ಪೂರ್ವಜರ ಕಥೆಗಳೆಂದು ನಂಬಿರುವ ಜನಪದರು ಅವುಗಳನ್ನು ತಮ್ಮ ಜ್ಞಾನ ಮಾರ್ಗಗಳೆಂದು ಒಪ್ಪಿಕೊಂಡಿದ್ದಾರೆ. ಬಹುತೇಕ ಇವು ಮತ ಧರ್ಮಗಳನ್ನಾಧರಿಸಿ ಬೆಳೆಯುತ್ತವೆ. ಬಹು ಸಂಸ್ಕೃತಿಯ ದೇಶವಾಗಿರುವ ನಮ್ಮಲ್ಲಿ ಸೃಷ್ಟಿ ಸ್ಥಿತಿ ಲಯದ ರೂಪಗಳಾದ ತ್ರಿಮೂರ್ತಿಗಳ ಕುರಿತು ಅನೇಕ ಪುರಾಣ ಕಥೆಗಳಿವೆ. ಅದರಲ್ಲಿ ಬ್ರಹ್ಮನನ್ನು ಕುರಿತು ಅವನ ಹುಟ್ಟು, ಶಿರಶ್ಚೇದನ, ಸ್ತ್ರೀ ಸಂಬಂಧ ಆಪಾದನೆಗಳು ಬಹಳಷ್ಟು ಇದ್ದು ಬ್ರಹ್ಮನಿಗೆ ಪೂಜೆ ಸಲ್ಲದಿರಲಿ ಎಂಬ ಶಾಪವಿದೆ. ಇವೆಲ್ಲವೂ ಆಯಾ ಕಾಲಮಾನಕ್ಕೆ ತಕ್ಕಂತೆ ಬ್ರಹ್ಮನ ಪ್ರಸಿದ್ಧಿಯನ್ನು ಕಡಿಮೆ ಮಾಡುವ ಹುನ್ನಾರದಿಂದ ಹುಟ್ಟಿಕೊಂಡ ಕಥೆಗಳಾಗಿ ನಮಗೆ ತೋರುತ್ತವೆ.
ಶ್ರೀರಾಮ ಇಟ್ಟಣ್ಣವರ ಬರೆದ “ಭರಮದೇವರು” ಕೃತಿಯ ಕುರಿತು ತೇಜಾವತಿ ಡಿ.ಎಸ್.‌ ಬರಹ

Read More

ಕೆಂಪೆಂದರೆ ಕೆಟ್ಟದ್ದೂ ಅಲ್ಲ… ಭಯವೂ ಅಲ್ಲ…: ಮಾಲತಿ ಶಶಿಧರ್‌ ಅಂಕಣ

ಆ ತರಗತಿಯಲ್ಲಿ ಬೋಧಿಸಬೇಕಾದ ಪಾಠವನ್ನು ಅಂದಿನ ಮಟ್ಟಕ್ಕೆ ಮುಂದೂಡಿ ಇಂಥ ಅದೆಷ್ಟು ಮಕ್ಕಳು ಹೀಗೆ ಹಿಂಸೆ ಅನುಭವಿಸುತ್ತಿದ್ದಾರೋ ಅನಿಸಿ ನಡೆದ ಎಲ್ಲವನ್ನೂ ಮತ್ತಷ್ಟು ನನ್ನ ಆ ದಿನಗಳ ಉದಾಹರಣೆ ಕೊಟ್ಟು, ಆ ದಿನಗಳಲ್ಲಿ ಆಗುವ ಬದಲಾವಣೆಗಳೇನು, ಹೇಗೆ ಸಿದ್ಧವಿರಬೇಕು, ಸಮಸ್ಯೆಗಳಾದಾಗ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದೆಲ್ಲ ತಿಳಿಸಿ, ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಮುಕ್ತವಾಗಿ ಹೇಳಿಕೊಳ್ಳಿ ಎಂದಿದ್ದೆ. “ಹೊಳೆವ ನದಿ” ಅಂಕಣದಲ್ಲಿ ಮಾಲತಿ ಶಶಿಧರ್ ಬರಹ ನಿಮ್ಮ ಓದಿಗೆ

Read More

ಋಣಾನುಬಂಧದ ಎರಡು ಕತೆಗಳು: ಮಾರುತಿ ಗೋಪಿಕುಂಟೆ ಸರಣಿ

ಆತ ಆಗಾಗ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ. ಸುಮ್ಮನೆ ಊಟಮಾಡಬೇಕಲ್ಲ ಎಂಬ ಸ್ವಾಭಿಮಾನದ ಧೋರಣೆ ಆತನದ್ದಿರಬೇಕು. ಮನೆಯಲ್ಲಿ ಮಲಗು ಎಂದು ಎಷ್ಟು ಹೇಳಿದರೂ ಆತ ಕಿರಾಣಿ ಅಂಗಡಿಯ ಬಾಗಿಲ ಮುಂದೆಯೇ ಮಲಗುತ್ತಿದ್ದ. ಯಾಕೆಂದು ನಮಗೂ ತಿಳಿಯಲಿಲ್ಲ. ಅಡಿಗೆ ಆದಮೇಲೆ ನಾನೆ ತೆಗೆದುಕೊಂಡು ಹೋಗಿ ಕೊಡುತಿದ್ದೆ. ಊಟ ಮಾಡುತ್ತಿದ್ದ. ಮಾತಿಗಿಂತ ಮೌನವೆ ಹೆಚ್ಚು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಭಾವನೆಗಳ ಬಿರುಕ ಹೊಲಿಯಲಾರ ಸಿಂಪಿಗ: ಚಂದ್ರಶೇಖರ ಪೂಜಾರ ಬರಹ

ಪ್ರೇಮ ಮೋಹ ವ್ಯಾಮೋಹಗಳ ನಡುವೆ ಇದ್ದ ಗಜ಼ಲ್ ಕಾಲ ಹೊರಳಿದಂತೆ ಜೀವನದ ಎಲ್ಲ ಆಯಾಮಗಳನ್ನು ಹೊಂದಿ ಬದುಕಿನ ಸಮಗ್ರ ಕಾವ್ಯವಾಯಿತು. ಗಜ಼ಲ್ ಬರಿ ಶಬ್ಧಾಲಂಕಾರಗಳ ಸರಪಳಿಯಲ್ಲ, ಅಲ್ಲೊಂದು ಕಾವ್ಯದ ಗುಣವಿರಬೇಕು. ಪ್ರತಿಮೆ, ರೂಪಕಗಳ ಮೂಲಕ ಮಾತನಾಡಬೇಕು. ಬೇಟೆಗೆ ಸಿಲುಕಿದ ಜಿಂಕೆಯ ಆಕ್ರಂದನದಂತೆ ಕಾಣುವ ಗಜ಼ಲ್ ಹೃದಯದ ಬಡಿತವಾಗಬೇಕು. ಓದಿದ ಕೂಡಲೇ ಹೃದಯವನ್ನು ಚಕಿತಗೊಳಿಸುವ ಗುಣ, ಓದುಗನೊಬ್ಬನಿಗೆ ನಿಲುಕದ ಅನುಭವಗಳನ್ನು ಒಂದುಗೂಡಿಸುವ ಶಕ್ತಿ ಪಡೆದಿರಬೇಕು. ವ್ಯಕ್ತಿಯೊಬ್ಬನ ಯೋಚನಾ ಲಹರಿಯನ್ನೇ ಬದಲಿಸುವ ಗುಣವನ್ನು ಅದು ಒಳಗೊಂಡಿರಬೇಕು.
ಶಿವಕುಮಾರ ಮೋ. ಕರನಂದಿ ಗಜ಼ಲ್‌ ಸಂಕಲನ “ನೆರಳಿಗಂಟಿದ ನೆನಪು” ಕುರಿತು ಚಂದ್ರಶೇಖರ ಯ. ಪೂಜಾರ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ