Advertisement

Tag: ಕೆಂಡಸಂಪಿಗೆ

ದೈನಿಕತೆಯಲ್ಲೆ ದೈವಿಕತೆ..

ಕಾಯ್ಕಿಣಿಯವರ ಕಾವ್ಯಗಳಲ್ಲಿ ದಂತಗೋಪುರದ ವಾಸಿ, ವಿಲಾಸಿ, ಪ್ರವಾಸಿಗರು ಕಾಣಸಿಗಲಾರರು; ಏಕೆಂದರೆ, ನಮ್ಮ-ನಿಮ್ಮ ನಡುವೆ, ಆಚೆ-ಈಚೆ, ಕಣ್ಣಿಗೆ ಬಿದ್ದರೂ ಬೀಳದಂತಿರುವ, ಅಥವಾ ನಾವು ನೋಡಿದರೂ ನೋಡದಂತೆ ಮುಂದೆ ಸಾಗುವುದಕ್ಕೆ ಯಾವ ಆಕ್ಷೇಪಣೆಯನ್ನೂ ಮಾಡದ- ಕಷ್ಟವೋ-ಕಾರ‍್ಪಣ್ಯವೋ ಎಲ್ಲಕ್ಕೂ ಎದೆಗೊಡುತ್ತ ಕಾಲ್ಪನಿಕ ರೇಖೆಗಳನ್ನು ಧಿಕ್ಕರಿಸುತ್ತ, ಅಲ್ಲಗಳೆಯುತ್ತ, ತಮ್ಮದೇ ಜೀವನಚಿತ್ರವ ಮೂಡಿಸುವ ಜೀವಭಂಡಾರಿಗಳು- ಕಾಯ್ಕಿಣಿಯವರ ಕಾವ್ಯಪ್ರಪಂಚವನ್ನು ನಿರಾಯಾಸ, ನಿರಪೇಕ್ಷ್ಯವಾಗಿ ಧರಿಸುತ್ತಾರೆ; ಭರಿಸುತ್ತಾರೆ.
ಜಯಂತ ಕಾಯ್ಕಿಣಿಯವರ “ವಿಚಿತ್ರಸೇನನ ವೈಖರಿ” ಕವನ ಸಂಕಲನದ ಕುರಿತು ಗೀತಾ ಹೆಗಡೆ ಬರಹ

Read More

ಸಾಮಾಜಿಕ ಜನಜೀವನ: ಭಾಗ ಒಂದು

ರಾಜರ ಸಹಾಯಕ್ಕಾಗಿ ಒಂದು ಬೋಧಕ ಮಂಡಳಿಯಿತ್ತು. ಪುರೋಹಿತನು ಇದರ ಪ್ರಧಾನಿಯಾಗಿದ್ದನು. ಸೇನಾನಿ ಮತ್ತು ಗ್ರಾಮದ ಮುಖ್ಯಸ್ಥ ಗ್ರಾಮಣಿಯು ಯುದ್ಧದಲ್ಲಿ ರಾಜನಿಗೆ ಸಹಾಯಕರಾಗಿರುತ್ತಿದ್ದರು. ಸಮಿತಿ ಮತ್ತು ಸಭ ಎಂಬ ಎರಡು ಸಂಸ್ಥೆಗಳಿದ್ದುವು. ರಾಜ್ಯವು ವಿಸ್ತಾರವಾಗುತ್ತ, ರಾಜನ ಅಧಿಕಾರವು ಹೆಚ್ಚುತ್ತಾ ಬಂದು, ವಾಜಪೇಯ, ರಾಜಸೂಯ, ಅಶ್ವಮೇಧವೆಂಬ ಯಾಗಗಳನ್ನು ಮಾಡುವ ಅರಸರ ರಾಜ್ಯಗಳು ರಾಜ್ಯ, ವೈರಾಜ್ಯ, ಸಾಮ್ರಾಜ್ಯಗಳೆಂದು ಕರೆಯಲ್ಪಡುತ್ತಿದ್ದುವು. ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿ

Read More

ತೀರಿಹೋದವರನ್ನು ಕುರಿತು ಮಾತು ಬೇಕೆ?

ತೀರಿಹೋದವರನ್ನು ಎಷ್ಟು ನೆನಸಿಕೊಳ್ಳಬೇಕು, ಹೇಗೆ, ಯಾವಾಗ ನೆನಸಿಕೊಳ್ಳಬೇಕು ಎಂಬುದು ಒಂದು ಕಲೆ, ವಿಜ್ಞಾನ ಮತ್ತು ಕೈಗಾರಿಕೆ. ಸದ್ಯವನ್ನೇ ತೆಗೆದುಕೊಳ್ಳಿ. ಗಾಂಧಿ, ನೆಹರು, ಸಾವರ್ಕರ್‌, ಟಿಪ್ಪು, ಇವರನ್ನೆಲ್ಲ ಹೇಗೆ, ಎಷ್ಟು ನೆನಸಿಕೊಳ್ಳಬೇಕು, ಎಷ್ಟು ಮರೆಯಬೇಕು, ಇವರ ಬಗ್ಗೆ ಎಷ್ಟು, ಯಾವ ಮಾತನಾಡಬೇಕು ಎಂದು ನಮಗೆಲ್ಲ ಪಾಠ ಹೇಳಿ ಕೊಡಲು ಜ್ಞಾನವಂತರ ಎಷ್ಟು ದೊಡ್ಡ ಪಡೆಯೇ ಇದೆ. ಶ್ರಾದ್ಧ ಕರ್ಮಗಳನ್ನು ಮಾಡಿಸುವ ಪುರೋಹಿತರ ಸಂಖ್ಯೆಗಿಂತ ಈ ಪಡೆಯಲ್ಲೇ ಹೆಚ್ಚು ಜನ ಉದ್ಯೋಗ ಪಡೆದಿದ್ದಾರೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿ

Read More

ಮಾನವೀಯತೆಗಾಗಿಯೇ ಜೀವ ತೇದವರ ನೆನೆಯುತ್ತಾ…

‘ವರ್ಣ’ ಅಪ್ಪಟ ದಲಿತ ಜಗತ್ತಿನ ಪ್ರಾತಿನಿಧಿಕ ಕವಿತೆ. ಕವಿ ಸುಮ್ಮನೆ ಎಲೆಮರೆಯ ಕಾಯಿಯಂತಿದ್ದರೂ ಬಿಡದೆ ಪ್ರಚೋದಿಸಿ ಅಖಾಡಕ್ಕೆ ಕರೆದು ಕೊನೆಗೆ ಮಣ್ಣುಮುಕ್ಕುವ ಉಢಾಳರಿಗೆ ಎಚ್ಚರಿಕೆಯಂತಿದೆ ಈ ಕವಿತೆ. “ಹಸಿರು, ಕೆಂಪು, ಕಪ್ಪು, ಬಣ್ಣಗಳೊಳಗೆ ಕರಗಿಹೋದ ದಲಿತರ ನೆತ್ತರು ಮತ್ತು ಬೆವರು ಉಳ್ಳವರನ್ನು ಉಸಿರುಗಟ್ಟಿ ಸಾಯಿಸಿದರೆ ಆಶ್ಚರ್ಯಪಡಬೇಕಿಲ್ಲ”. ‘ಹಸಿವು’ ಕವಿತೆ ಅವ್ವನ ಉದಾರತನವನ್ನೂ ಆಕೆಯ ಸಂಸ್ಕಾರವನ್ನೂ ದರ್ಶಿಸಿ ದಂಗುಬಡಿಸುತ್ತದೆ. ಹಸಿವು ಎಂದು ಬಂದವರಿಗೆ ತನ್ನ ಪಾಲಿನ ತಟ್ಟೆಯಲ್ಲಿದ್ದ ಹಿಟ್ಟನ್ನು ಕೊಟ್ಟುಬಿಡುತ್ತಾಳೆ. ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣ

Read More

ಫಾತಿಮಾ ರಲಿಯಾ ಬರೆದ ಈ ಭಾನುವಾರದ ಕತೆ

ರೂಡಿ ಯಾರು, ಏನು, ಎತ್ತ ಎಂಬುವುದು ಗೊತ್ತೇ ಇರದಿದ್ದರೂ ಯಾವುದೋ ಅಸಹಾಯಕತೆಯೊಂದು ಅವನನ್ನು ಇನ್ನಿಲ್ಲದಂತೆ ಕಾಡುತ್ತಿದೆ ಎಂದು ಅವಳಿಗೆ ಆಗಾಗ ಅನ್ನಿಸುತ್ತಿತ್ತು. ಪ್ರತಿ ಬೆಳಗೂ ‘ಈವತ್ತು ಹೇಗಾದರೂ ಸರಿ, ಅವನನ್ನು ಕೇಳಲೇಬೇಕು’ ಎಂಬ ಪ್ರತಿಜ್ಞೆಯೊಂದಿಗೆ ಹಾಸಿಗೆಯಿಂದ ಏಳುತ್ತಿದ್ದಳು. ಆದರೆ ಹಾಗೆ ಕೇಳಬೇಕೆಂದು ಹೊರಟಾಗೆಲ್ಲಾ ಗಂಟಲಲ್ಲಿ ಒಂದು ಮುಳ್ಳು ಸಿಕ್ಕಿಹಾಕಿಕೊಂಡಂತಾಗಿ ಕೇಳಲಾಗದೆ ಇದ್ದುಬಿಡುತ್ತಿದ್ದಳು. ಹೋಗಲಿ, ತಾನು‌ ನಲವತ್ತರ ಹೊಸ್ತಿಲು ದಾಟಿದವಳು…
ಫಾತಿಮಾ ರಲಿಯಾ ಬರೆದ ಕತೆ “ರೂಡಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ