ನುಡಿ ರಂಗವಲ್ಲಿ: ಶ್ರುತಿ ಬಿ.ಆರ್. ಕಥಾಸಂಕಲನಕ್ಕೆ ಡಾ. ರಾಜೇಂದ್ರ ಚೆನ್ನಿ ಮುನ್ನುಡಿ
‘ಎಲ್ಲೆಗಳ ದಾಟಿದವಳು’ ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ಹಾಗೂ ತುಂಟತನದ ಸಂಬಂಧವನ್ನು ಕತೆಯ ಅರ್ಥಪೂರ್ಣ ಭಾಗವನ್ನಾಗಿಸುತ್ತದೆ. ಏಕೆಂದರೆ ಕತೆಯ ಮುಖ್ಯ ಭಾಗವನ್ನು ನಿರೂಪಿಸುವ ಅಜ್ಜಿ ಕೂಡ ಎಲ್ಲೆಗಳ ದಾಟದವಳು. ತನ್ನ ಸ್ವಂತ ವ್ಯಕ್ತಿತ್ವ, ಸ್ವಾತಂತ್ರ್ಯಗಳನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಹಟಮಾರಿ, ಹಾಗೆ ನೋಡಿದರೆ ಗಂಡಾಳ್ವಿಕೆ, ಕುಟುಂಬದೊಳಗಿನ ಕ್ರೌರ್ಯ ಇವೆಲ್ಲವುಗಳ ನಿರಂತರತೆಯ ನಡುವೆ ಹೆಣ್ಣು ಕೇವಲ ಗುಲಾಮಳಲ್ಲವೆನ್ನುವುದನ್ನು ಕತೆಯು ಪ್ರತಿಪಾದಿಸುತ್ತದೆ.
ಶ್ರುತಿ ಬಿ.ಆರ್. ಕಥಾಸಂಕಲನ “ಎಲ್ಲೆಗಳ ದಾಟಿದವಳು” ಕೃತಿಗೆ ಡಾ. ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ ಇಲ್ಲಿದೆ