ಸಹಜತೆಯ ಚೆಲುವಿನ ಕಥೆಗಳು: ಅನುಪಮಾ ಪ್ರಸಾದ್ ಕೃತಿಗೆ ಕೇಶವ ಮಳಗಿ ಮಾತುಗಳು
ಸಂಕಲನದ ಕಥೆಗಳು ವಿಷಯ, ವ್ಯಾಪ್ತಿ ಹಾಗೂ ಹರಹುಗಳ ದೃಷ್ಟಿಯಿಂದಲೂ ಗಮನಾರ್ಹ. ಅನುಭವದಿಂದ ಮಾಗಿದ ಕಥೆಗಾರ್ತಿಯ ಈ ಬಗೆಯ ಸೂಕ್ಷ್ಮ ಆಯ್ಕೆಯಿಂದಾಗಿ ಸಂಕಲನಕ್ಕೊಂದು ಸಹಜ ವೈವಿಧ್ಯತೆ ದೊರಕಿ ಓದುಗರು ಪ್ರತಿ ಕಥೆಯ ವಾಚನದಲ್ಲಿಯೂ ಹೊಸ ಅನುಭವವನ್ನು ಪಡೆಯಬಲ್ಲರು. ಯಾವುದೇ ಸಂವೇದನಾಶೀಲ ಲೇಖಕ ಇಂಥದ್ದನ್ನು ಸಾಧಿಸುವುದು ಗರಿಮೆಯ ಸಂಗತಿಯೇ. ಇಲ್ಲಿನ ಹದಿಮೂರು ಕಥೆಗಳು ಓದುಗರಿಗೆ ನೀಡುವ ಅನುಭವ, ಲೋಕದೃಷ್ಟಿ, ಆರ್ದ್ರತೆಯ ಸ್ಪರ್ಶದಿಂದಾಗಿ ಅವರು ನಮ್ಯವಾಗಬಲ್ಲರು. ಅರೆಚಣ ಚಿಂತಿತರಾಗಬಲ್ಲರು.
ಅನುಪಮಾ ಪ್ರಸಾದ್ ಕಥಾ ಸಂಕಲನ “ಚೋದ್ಯ”ಕ್ಕೆ ಕೇಶವ ಮಳಗಿ ಬರೆದ ಮಾತುಗಳು