ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಪ್ರಜ್ಞಾ ಮಾರ್ಪಳ್ಳಿ ಕತೆ
ಸೂರ್ಯನಿಗೋ ಯಾರು ಹುಟ್ಟಿದರೆಷ್ಟು? ಯಾರು ಸತ್ತರೆಷ್ಟು? ಅವನ ಕೆಲಸ ಅವನದ್ದೇ. ಬೆಳಗಿನ ಮೋಟಾರು ಗಾಡಿ ಬಂದು ಹೋದ ಸದ್ದಾಯಿತು. ಬಸವಣ್ಣನ ಅಣ್ಣನ ಮಗ ಮಲ್ಲೇಶ ಬಾಗಿಲಲ್ಲಿ ಬಂದು ನಿಂತಿದ್ದ. ನಿಧಾನಕ್ಕೆ ಬಸವಣ್ಣನ ಬಳಿಗೆ ಬಂದ. ಬೆನ್ನು ಸವರಿದ. ಅವರಿಬ್ಬರೆ ತಾನೆ ಗೋಪುವನ್ನು ಕೊನೆಯ ಬಾರಿಗೆ ನೋಡಿದವರು. ಕಾಣುತ್ತಿದ್ದಂತೇ ಕೈಜಾರಿ ಬಿದ್ದ ಗೋಪು ಅಪ್ಪಾ ಅಪ್ಪಯ್ಯಾ ಎಂದು ಕೂಗಿದ್ದೊಂದೇ ಗೊತ್ತು.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಪ್ರಜ್ಞಾ ಮಾರ್ಪಳ್ಳಿ ಕತೆ “ಭೂಮಿಯೊಳಗಿದೆ ಬದುಕು” ನಿಮ್ಮ ಓದಿಗೆ