ಒಂಟಿತನ, ಖೋಖೋ, ಕಪ್ಪುಬಿಳುಪಿನ ಗಾಂಧಿ ಚಿತ್ರ: ಮಾರುತಿ ಗೋಪಿಕುಂಟೆ ಸರಣಿ
ಮೊದಮೊದಲು ಮೂವತ್ತು ನಲವತ್ತು ಸೆಕೆಂಡ್‌ಗಳಲ್ಲಿ ಔಟಾಗುತ್ತಿದ್ದ ನಾನು ಕ್ರಮೇಣ ಆಟದ ಪಟ್ಟುಗಳನ್ನು ತಿಳಿದುಕೊಂಡು ಒಂದೊಂದೆ ಕಲಿಯುತ್ತಾ ಹೋದೆ. ದಿನಕಳೆದಂತೆ ಎರಡು ನಿಮಿಷ ಓಡುವಷ್ಟರ ಮಟ್ಟಿಗೆ ತರಬೇತಾದೆ. ಹಂತ ಹಂತವಾಗಿ ಆಡುತ್ತಾ ಮೊದಲನೆ ಬ್ಯಾಚ್‌ಗೆ ಶಿಫ್ಟಾದೆ. ಕೊನೆಗೆ ಗಂಡು ಮಕ್ಕಳ ಖೊಖೋ ಪಂದ್ಯಕ್ಕೆ ಕ್ಯಾಪ್ಟನ್ ಆಗುವಷ್ಟರಮಟ್ಟಿಗೆ ಪ್ರಾವೀಣ್ಯತೆ ಪಡೆದೆ.
ಮಾರುತಿ ಗೋಪಿಕುಂಟೆ ಬರೆಯುವ ಸರಣಿ