Advertisement

Tag: ಮಳೆ

ಹೊಳೆಸಾಲಿಗೆ ಕರೆಂಟ್ ಶಾಕ್: ಸುಧಾ ಆಡುಕಳ ಅಂಕಣ

ಇದಾಗಿ ವಾರದೊಳಗೆ ನಡುರಾತ್ರಿಯಲ್ಲಿ ಪಕ್ಕದ ಮನೆಯಿಂದ ಅರಚಿದ ಶಬ್ದಕ್ಕೆ ನೀಲಿಯ ಮನೆಯವರೆಲ್ಲರೂ ಎಚ್ಚೆತ್ತರು. ಅಕ್ರಮವಾಗಿ ಎಳೆದ ಕರೆಂಟು ವೈಯರಿನ ಹೊರಗಿನ ಕವಚವನ್ನು ಇಲಿಯೊಂದು ಕತ್ತರಿಸಿಬಿಟ್ಟಿದ್ದರಿಂದ ನಡುರಾತ್ರಿಯಲ್ಲಿ ಸ್ವಿಚ್ ಹಾಕಲು ಕೈಹಾಕಿದ ನಾಗಿ ಶಾಕ್ ಹೊಡೆದು ಮಾರುದೂರ ಹೋಗಿ ಬಿದ್ದಿದ್ದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿಮೂರನೆಯ ಕಂತು ನಿಮ್ಮ ಓದಿಗೆ

Read More

ಬದುಕಿನ ವರ್ಷಕಾಲದ ವಸಂತೋತ್ಸವ: ಸುಮಾವೀಣಾ ಸರಣಿ

ಇಂಥ ಮಳೆಯಲ್ಲಿ ಶಾಲೆಗೆ ಹೋಗುವುದೇ ದೊಡ್ಡ ಸಮಸ್ಯೆ. ಎಂಥ ಚಿಕ್ಕ ಹೊಂಡವಿದ್ದರೂ ಸರಿ ಪೇಪರಿನ ದೋಣಿಗಳನ್ನು ತೇಲಿಬಿಡುವ ನಗರದ ಹುಡುಗರ ಆಟ ಒಂದೆಡೆಯಾದರೆ ಬೆಟ್ಟ ಗುಡ್ಡಗಳ ತಪ್ಪಲಲ್ಲಿ ಹಳ್ಳ ತೋಡಿನ ಪಕ್ಕದಲ್ಲಿ ತೋಟದ ಮನೆಗಳವರ ಕಷ್ಟ ಹೇಳತೀರದು. ರಭಸದ ಮಳೆ ಬಂದರೆ ಒಂದೋ ಗುಡ್ಡ ಕುಸಿಯುವ ಭೀತಿ. ಇಲ್ಲವೇ ಮಳೆ ನೀರು ಮನೆಗೆ ನುಗ್ಗುವ ಭೀತಿ ಸ್ವಲ್ಪ ಮಳೆ ಬಂದರೂ ಸೇತುವೆಗಳು ತೇಲುವ ಹಾಗಾಗುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಮಳೆರಾಯ ಬಂದ ಮಲ್ಲೆಹೂವು ತಂದ: ಚಂದ್ರಮತಿ ಸೋಂದಾ ಸರಣಿ

ಚೌತಿಹಬ್ಬ ಮುಗಿಯಿತು ಎಂದರೆ ಮಳೆಗೆ ತುಸು ಬಿಡುಗಟ್ಟು. ಎಲ್ಲಕಡೆ ಬಣ್ಣಬಣ್ಣದ ಚಿಟ್ಟೆಗಳ ಮೇಳ. ನಮ್ಮೊಳಗೆ ಅವುಗಳನ್ನು ಹಿಡಿಯುವ ಸ್ಪರ್ಧೆ. ಇನ್ನೇನು ಕೈಗೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಮಾಯ. ಆಗ ಮರಳಿ ಯತ್ನವ ಮಾಡು. ಅವು ಅಷ್ಟು ಸುಲಭವಾಗಿ ನಮ್ಮ ಕೈಗೆ ಸಿಗುತ್ತಿರಲಿಲ್ಲ. ಇನ್ನೊಂದು ಬಗೆಯ ಚಿಟ್ಟೆಗಳು ಹಾರಾಡುತ್ತಿದ್ದವು. ಅವು ನಮಗೆ ಆಕರ್ಷಕವಾಗಿ ಕಾಣಿಸುತ್ತಿರಲಿಲ್ಲ. ನಾವು ಅವನ್ನು ಕರೆಯುತ್ತಿದ್ದದು ವಿಮಾನ ಎಂದು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಐದನೆಯ ಕಂತಿನಲ್ಲಿ ಆಗಿನ ಮಳೆ ದಿನಗಳ ಕುರಿತ ಬರಹ

Read More

ಸವಾರಿ ಹೊರಟಳು ಮಳೆ ಮಹಾರಾಜ್ಞಿ

ಅಲ್ಲಿಯವರೆಗೆ ಹೂವುಗಳೆಲ್ಲ ಮಳೆಮಾಯಿಯನ್ನೇ ಭಜಿಸುತ್ತ, ಮಳೆಗಾಲದಲ್ಲೇ ಅರಳುತ್ತಿದ್ದವು. ಆದರೆ ಒಂದು ದಿನ  ಪುಷ್ಪರಾಜ ತನ್ನವರನ್ನೆಲ್ಲ ಕರೆದು ಆಜ್ಞಾಪಿಸಿದ. “ನೋಡಿ ಹೂಗಿಡಗಳೆ, ಇನ್ನುಮುಂದೆ ನೀವೆಲ್ಲಾ ಬೇಸಿಗೆಯಲ್ಲಿಯೇ ಅರಳಬೇಕು. ಬೇಸಿಗೆಯಲ್ಲಿ ಭೂಮಿಯಮ್ಮ ತುಂಬ ಬಳಲಿರುತ್ತಾಳೆ. ನಮಗೆಲ್ಲ ಆಧಾರವಾಗಿರುವ ಭೂಮಿಯಮ್ಮನಿಗೆ ನಾವು ಸ್ವಲ್ಪವಾದರೂ ಸಂತೋಷವನ್ನು ಮೂಡಿಸಬೇಕು’’ ಎಂದು ಆದೇಶಿಸಿದ.  ಅಂದಿನಿಂದ ಹೂವುಗಳೆಲ್ಲ ಬೇಸಿಗೆಯಲ್ಲಿ ಅರಳಲು ಶುರುವಾದವು. ‘ಹೂ ತುಂಬಿದ ಮರದ ನೆರಳು ಹೂವಿಗಿಂತ ಹಗುರ’ ಎಂದು ಭೂಮಿಯಮ್ಮ ನಕ್ಕಳು. ಮಳೆಮಾಯಿಯ ಸವಾರಿ ಕತೆಯೊಂದನ್ನು ಹೆಣೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

Read More

ರಾಣಿಯ ರಾಜ್ಯದಲ್ಲಿ ಅತಿವೃಷ್ಟಿ ಅನಾವೃಷ್ಟಿ ರಾದ್ಧಾಂತಗಳು

“ರಾಣಿಯ ರಾಜ್ಯದಲ್ಲಿ ಯಾವಾಗಲೂ ಸಮೃದ್ಧಿ ತುಂಬಿತುಳುಕುವುದಿಲ್ಲ.ಹಾಗೇ ಬರಗಾಲ ಅಪರೂಪವೇನಲ್ಲ.ಒಲ್ಲದ ನೆಂಟನಂತೆ ಆಗಾಗ ಭೇಟಿ ಕೊಡುತ್ತದೆ.ಯಾಕೋ ಈ ಬರಗಾಲ ಮತ್ತು ಅತ್ತಕಡೆ ನಮ್ಮ ಕರ್ನಾಟಕದ ಪಶ್ಚಿಮಘಟ್ಟಗಳನ್ನು ಆವರಿಸಿದ ಅತಿ ಮಳೆ ಎರಡೂ ಕಣ್ಣ ಪಾಪೆಯ ಚಿತ್ರವಾಗಿವೆ.”

Read More
  • 1
  • 2

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಜರ್ಮನಿಯಿಂದ ಕನ್ನಡಕ್ಕೆ ಬಂದ ‘ಈಡಾ’

ಕ್ಷಣ ಮೌನ. ಉರ್ಸುಲಾಳ ಜೊತೆ ಮಾತನಾಡದೆಯೇ ಹಾಯಾಗಿ ಕುಳಿತಿರಬಹುದು. ಅವಳು ಪೆದ್ದುಪೆದ್ದಾಗಿ ಏನೇನೋ ಪ್ರಶ್ನೆಗಳನ್ನು ಕೇಳುವುದಿಲ್ಲ. ತನ್ನ ಮೇಲೆ ಹುಡುಗನೊಬ್ಬ ಬಂದೆರಗಿದ ಘನವಾದ ವಿಷಯವನ್ನು ಹಂಚಿಕೊಳ್ಳಲು ಮಾತ್ರ…

Read More

ಬರಹ ಭಂಡಾರ