Advertisement

Tag: ಲೋಕ ಸಿನಿಮಾ

ಬದುಕೇ ಒಂದು ಓಟದ ಸ್ಪರ್ಧೆ…

ಚಿತ್ರಕ್ಕೆ ನಮ್ಮ ಪ್ರವೇಶ, ಗಡಿಯಾರವನ್ನು ತಲೆಯ ಮೇಲಿಟ್ಟುಕೊಂಡಿದ್ದ ಮರದ ಮುಖದ ಅಷ್ಟಾವಕ್ರ ಪ್ರಾಣಿ ಬಾಯಿ ತೆರೆದು ಉಂಟಾದ ಕತ್ತಲೆಯಲ್ಲಿ ಕ್ಯಾಮೆರಾ ಜೂ಼ಮ್-ಇನ್ ಮಾಡುವ ಮೂಲಕ. ಆಗ ಎದುರಾಗುತ್ತದೆ ಒಂದಕ್ಕೊಂದು ಸಂಬಂಧ ಮತ್ತು ಸಾತತ್ಯವಿರದ ಪ್ರಶ್ನೆ ಮತ್ತು ಉತ್ತರಗಳನ್ನು ಹುಡುಕಾಡುವುದೇ ಮನುಷ್ಯನ ಬದುಕು ಎನ್ನುವುದನ್ನು ಟಿ. ಎಸ್. ಎಲಿಯಟ್ ಮತ್ತು ಹೆರ್‌ಬರ್ಗರ್ ಅವರಿಂದ ಉದ್ಧರಿಸಿದ ಸಾಲುಗಳು ಮೂಡಿ, ಅಡ್ಡಾದಿಡ್ಡಿ ಓಡೋಡುತ್ತಲಿರುವ ಜನಜಂಗುಳಿ ಮರೆಯಾಗುತ್ತಿದ್ದಂತೆ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ಟೆಲಿಫೋನ್ ಬೂತಿನಲ್ಲಿ ಮಾನಿ ಲೋಲಾಗೆ ಮಾತಾಡುವ ದೃಶ್ಯದಲ್ಲಿ ಘಟನೆಯ ಮೂಲಕ್ಕೆ ಪರಿಚಿತಗೊಳ್ಳುತ್ತೇವೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ ಸರಣಿ

Read More

ಮಹಾಮರ್ಕಟ ಮನಸ್ಸಿನ ಸುತ್ತ…

ಮಾರ್ಟಿನ್‌ ಸಾಮಾನ್ಯರಂತಿರಲು ಮತ್ತು ಕಿರು ಪ್ರಮಾಣದ ಸಾವಧಾನದಿಂದಿರಲು ಬೇಕಾದ ಆಂತರಿಕ ಜೀವರಸವೇ ಇಲ್ಲದವನ ಹಾಗೆ ಕಾಣುತ್ತಾನೆ.. ಯಾವ ಬಗೆಯಲ್ಲಿ ಯೋಚಿಸಿದರೂ ಅವನ ಬುದ್ಧಿ, ಮನಸ್ಸಿನ ಎಳೆಗಳಲ್ಲಿ ಹಿಂಸಿಸುವುದಲ್ಲದೆ ಬೇರೆ ಬಣ್ಣಗಳ ಛಾಯೆಯೇ ಇರುವಂತೆ ಕಾಣುವುದಿಲ್ಲ. ಅವನು ಇತರ ಸಾಮಾನ್ಯರೊಂದಿಗೆ ಹೋಲಿಸಿಕೊಳ್ಳುವ ಮಾತಂತೂ ಹತ್ತಿರ ಸುಳಿಯುವ ಹಾಗೆಯೇ ಇರುವುದಿಲ್ಲ. ಅವನು ಸದಾಕಾಲ ಉಳಿದವರಿಗಿಂತ ಭಿನ್ನವಾಗಿ ರಚಿಸಿಕೊಂಡ ಮತ್ತು ಅದನ್ನೇ ಸಹಜವೆಂದು ನಂಬಿರುವ ಮನೋನೆಲೆಯಲ್ಲಿರುವ ವ್ಯಕ್ತಿ.
ಎ.ಎನ್. ಪ್ರಸನ್ನ ಸರಣಿ

Read More

ʻಲಿಟಲ್ ಮಿಸ್‌ ಸನ್‌ಶೈನ್‌ʼ: ಕನಸು ವಾಸ್ತವಗಳ ಜುಗಲ್ ಬಂದಿ

ಮನೆಯಲ್ಲಿ ಉಳಿದವರ ಆಲೋಚನೆ ಬೇರೆಯ ರೀತಿ. ಕನಸುಗಳನ್ನೇ ನೇಯುವ ಅವರಿಗೆ ಮನೆಯ ಪುಟಾಣಿಯೂ ಕನಸು ಕಾಣುತ್ತಿರುವುದು ವಿಶೇಷವೆನಿಸುತ್ತದೆ. ಜೊತೆಗೆ ತಮ್ಮ ಕನಸಿನ ಜಂಜಾಟದಿಂದ ಕೊಂಚ ತಪ್ಪಿಸಿಕೊಳ್ಳಲು ಹೊರದಾರಿಯೊಂದು ಸಿಕ್ಕಿತೇನೋ ಎನ್ನುವ ಕಾರಣದಿಂದ ಅವಳ ಕನಸನ್ನು ಬೆಂಬಲಿಸುತ್ತಾರೆ. ಮುಖ್ಯವಾಗಿ ಅವಳ ತಂದೆ ರಿಚರ್ಡ್‌. ಅಪ್ಪನಿಂದ ಮಿಸ್‌ ಲಿಟಲ್‌ ಸನ್‌ ಶೈನ್‌ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಒಪ್ಪಿಗೆ ಸಿಕ್ಕಿದ್ದರಿಂದಲೇ ನೆಲದಿಂದ ನೆಗೆದು ಹಾರಾಡುವಂತಾಗುತ್ತದೆ ಆಲಿವ್‌ಗೆ.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನುಡಿ ರಂಗವಲ್ಲಿ: ಶ್ರುತಿ ಬಿ.ಆರ್.‌ ಕಥಾಸಂಕಲನಕ್ಕೆ ಡಾ. ರಾಜೇಂದ್ರ ಚೆನ್ನಿ ಮುನ್ನುಡಿ

‘ಎಲ್ಲೆಗಳ ದಾಟಿದವಳು’ ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ಹಾಗೂ ತುಂಟತನದ ಸಂಬಂಧವನ್ನು ಕತೆಯ ಅರ್ಥಪೂರ್ಣ ಭಾಗವನ್ನಾಗಿಸುತ್ತದೆ. ಏಕೆಂದರೆ ಕತೆಯ ಮುಖ್ಯ…

Read More

ಬರಹ ಭಂಡಾರ