ಬೆರಳಿಗಂಟಿದ ರಕ್ತ ಹಾಗೇ ಇತ್ತು..: “ಕಲ್ಯಾಣ ಕೆಡುವ ಹಾದಿ”ಯ ಕೆಲವು ಪುಟಗಳು
ತಹಸಿಲ್ದಾರರು ಹೊರಟ ನಂತರ ದಲಿತರ ಮೇಲೆ ಹಲ್ಲೆ ಮಾಡಿದ ಮುನಿಪಾಪಣ್ಣನ ಕಡೆಯವರು, ಅವನಿಗೆದುರಾಗಿ ಯಾರ್ಯಾರು ಅರ್ಜಿಯಲ್ಲಿ ಎಡ ಹೆಬ್ಬೆಟ್ಟು ಒತ್ತಿದ್ದಾರೆ ಎಂದು ಖಾತ್ರಿ ಪಡಿಸಿಕೊಂಡಿದ್ದಾರೆ. ನಂತರ ಆತ ಮತ್ತು ಆತನ ಮಕ್ಕಳು ಆ ಐದು ಜನರನ್ನೂ ಹಿಡಿದು, ಅವರೆಲ್ಲರ ಹೆಬ್ಬೆಟ್ಟುಗಳನ್ನೂ ಕತ್ತರಿಸಿ, ‘ಈಗ ಡಿಸಿ ಸಾಹೇಬರಿಗೆ ಹೇಗೆ ಅರ್ಜಿ ಕೊಡುತ್ತೀರೋ ನೋಡೋಣ!’ ಎಂದು ಕೂಗಾಡಿದ್ದಾರೆ. ಆ ಐದೂ ದಲಿತರೂ ಬ್ಯಾಂಡೇಜ್ ತೆಗೆದು, ನನ್ನ ಮುಂದೆ ತಮ್ಮ ಎಡಗೈ ಚಾಚಿದರು.
ಎನ್. ಸಂಧ್ಯಾರಾಣಿ ಅನುವಾದಿಸಿರುವ ರೆಬೆಲ್ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಅವರ ಆತ್ಮಕಥನ “ಕಲ್ಯಾಣ ಕೆಡುವ ಹಾದಿ”ಯ ಕೆಲವು ಪುಟಗಳು