Advertisement

Tag: ಸುಕನ್ಯಾ ಕನಾರಳ್ಳಿ

ಪದವಿರಲಿ ಎದೆಯಲ್ಲಿ, ಪ್ರೀತಿ ಹರಿದೀತು!: ಸುಕನ್ಯಾ ಕನಾರಳ್ಳಿ ಅಂಕಣ

ಬದುಕಿನ ಸಂಕಷ್ಟಗಳ ಸಮಯದಲ್ಲಿ ಹೈಸ್ಕೂಲಿನಲ್ಲಿ ಕಲಿತ ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು’ ಎಂಬ ಬಿ ಎಂ ಶ್ರೀ ಅವರ ಅನುವಾದಿತ ಇಂಗ್ಲಿಷ್ ಕವಿತೆಯನ್ನು ಆರ್ತತೆಯಿಂದ ನೆನಪಿಸಿಕೊಂಡಿದ್ದೇನೆ. ಕೆ. ಎಸ್. ನರಸಿಂಹಸ್ವಾಮಿಯವರ ‘ದೀಪವೂ ನಿನ್ನದೇ, ಗಾಳಿಯೂ ನಿನ್ನದೇ, ಆರದಿರಲಿ ಬೆಳಕು’ ಎಂದು ಬೇಡಿಕೊಂಡಿದ್ದೇನೆ. ಊರಿನಲ್ಲಿ ಗಣಪತಿ ಕೂರಿಸುತ್ತಿದ್ದ ಒಂದು ತಿಂಗಳಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಪಿ. ಕಾಳಿಂಗರಾಯರ ‘ಬಾರಯ್ಯ ಬೆಳದಿಂಗಳೇ…’ ಕೇಳುತ್ತಾ ಸುತ್ತಮುತ್ತಲ ಹಳ್ಳಿಗಳಿಂದ ಗಾಡಿ ಹೂಡಿಕೊಂಡು ಬರುತ್ತಿದ್ದ ಮಂದಿ ಬೀದಿಯಲ್ಲಿ ಕಿಕ್ಕಿರಿದು ನಿಂತು ಬೆಳದಿಂಗಳಲ್ಲಿ ತೊಯ್ದಂತೆ ತನ್ಮಯರಾಗಿ ನಿಂತಿದ್ದನ್ನು ಕಂಡಿದ್ದೇನೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಭಾವಾತಿರೇಕ ಎಂಬ ಖಾಯಿಲೆ: ಸುಕನ್ಯಾ ಕನಾರಳ್ಳಿ ಅಂಕಣ

ಈಗ ಬದುಕಿನ ಈ ಹಂತದಲ್ಲಿ ಅವರ ಕಾಳಜಿ ಒಂದೇ. ಬದುಕಿನುದ್ದಕ್ಕೂ ತಮ್ಮ ತಂಗಿಯರ ಬದುಕನ್ನು ದಡ ಹತ್ತಿಸಲು ಕಳೆದಾಗಿದೆ. ಅವರೆಲ್ಲ ತನ್ನನ್ನು ಪ್ರೀತಿಯಿಂದ ನೋಡಿಕೊಂಡರೂ ಸಹ ಈಗ ತನ್ನದೇ ಒಂದು ನೆಲೆ ಬೇಕೆನ್ನಿಸಿದೆ. ತನಗೆ ನಾಲ್ಕು ಗೋಡೆ, ಒಂದು ತಾರಸಿಯಾದರೂ ಇರುವ ಮನೆ ಕಟ್ಟಿಕೊಂಡು ಉಳಿದ ಬದುಕನ್ನು ಒಬ್ಬಳೇ ಕಳೆಯಲು ಒಂದು ಸೈಟು ಬೇಕು, ಅಷ್ಟೇ. ಅಸಂಖ್ಯಾತ ವಿದ್ಯಾರ್ಥಿಗಳು, ಸಾಹಿತ್ಯ ವಲಯದ ಹಲವಾರು ಆಪ್ತರು, ಭೋಪರಾಕ್ ಹೇಳುತ್ತಿರುವ ಅಪಾರವಾದ ಸ್ನೇಹಿತರ ಬಳಗ… ಇಷ್ಟೆಲ್ಲ ಇದ್ದು ಸುಮಾರು ಎಪ್ಪತ್ತರ ದಶಕದ ವಯಸ್ಸಿನ ಆಕೆ ಹೀಗೆ ಬಹಿರಂಗವಾಗಿ ಹೇಳಿಕೊಳ್ಳಬೇಕಾಯಿತೆ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೊಂಭತ್ತನೆಯ ಬರಹ

Read More

ನೀಲು ಮತ್ತು ಲೂಸಿ: ಸುಕನ್ಯಾ ಕನಾರಳ್ಳಿ ಅಂಕಣ

ಲೂಸಿ ನಿಸರ್ಗದ ಕಂದ. ಹಳ್ಳಿಗಾಡಿನ ಮಳೆಬಿಸಿಲ ಕರುಣೆಯಲ್ಲಿ ಮಿಂದು ಹದವಾಗಿ ಅರಳಿದ್ದವಳು. ಕವಿ ಹೇಳುವಂತೆ ಅವಳಿಗೆ ಮೂರು ವರ್ಷವಿರುವಾಗ ಪ್ರಕೃತಿ ಈ ಸುಂದರ ಜೀವದ ಹೊಣೆ ಸಂಪೂರ್ಣವಾಗಿ ಹೊತ್ತುಕೊಳ್ಳಲು ಮುಂದೆ ಬಂತಂತೆ. ಬೆಟ್ಟ ನದಿ, ಗಿಡ ಮರ ಎಲ್ಲವೂ ತಮ್ಮ ಸತ್ವವನ್ನು ಅವಳಿಗೆ ಧಾರೆಯೆರೆದವಂತೆ. ಪ್ರಕೃತಿಯ ಅಂತಶ್ಚೇತನವೇ ಅವಳಲ್ಲಿ ಪೂರ್ತಿಯಾಗಿ ಮೈದಳೆಯಿತಂತೆ. ಇಷ್ಟೆಲ್ಲಾ ರೀತಿಯಲ್ಲಿ ನಳನಳಿಸಿದ ಲೂಸಿ ಬದುಕಿದ್ದು ಮಾತ್ರ ಕೆಲವೇ ವರ್ಷಗಳು. ಕೊನೆಯ ಐದನೆಯ ಪದ್ಯದಲ್ಲಿ ಕವಿ ಸಾವು ಮತ್ತು ಅಗಲಿಕೆಗಳು ತರುವ ವಿಷಾದದ ಆಳವನ್ನು ತೆರೆದಿಡುತ್ತಾನೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೆಂಟನೆಯ ಬರಹ

Read More

ಸೀರೆ ಪುರಾಣ!: ಸುಕನ್ಯಾ ಕನಾರಳ್ಳಿ ಅಂಕಣ

ಸೀರೆ ಎನ್ನುವುದು ಒಬ್ಬ ಗಂಡಸಿನ ತಲೆಯಲ್ಲಿ ಹುಟ್ಟಿದ ಪರಿಕಲ್ಪನೆ ಎನ್ನುವ ಗುಮಾನಿ ನನಗಿದೆ. ದಿನನಿತ್ಯ ರೈಲಿನಲ್ಲಿ ಹೋಗುವ ಹೆಣ್ಣುಮಕ್ಕಳಿಗಂತೂ ಅದೊಂದು ಮಹಾ ಪಿರಿಪಿರಿಯೇ. ಜನರಲ್ ಬೋಗಿಯಲ್ಲಿ ಇದ್ದು ಜನಜಂಗುಳಿ ಹೆಚ್ಚಿದ್ದರಂತೂ ಸೊಂಟ ಚಿವುಟುವ, ಬೆನ್ನಿಗೆ ಕಚಗುಳಿಯಿಟ್ಟಂತೆ ಮುಟ್ಟುವ ದೌರ್ಜನ್ಯಗಳಿಗೆ ಲೆಕ್ಕವೇ ಇಲ್ಲ. ಮುಂಬಯಿಯಂತಹ ಮಹಾ ನಗರಗಳಲ್ಲಿ ದಿನನಿತ್ಯದ ಮೆಟ್ರೋ ಹೆಂಗಸರು ಬಿಗಿಯಾದ ಜೀನ್ಸ್ ಮತ್ತು ಶರ್ಟ್ ತೊಟ್ಟು ಮೇಲೊಂದು ಲಳಲಳ ಎನ್ನುವಂಥದ್ದೇನೋ ಹಾಕಿಕೊಳ್ಳಲು ಇಷ್ಟಪಡುತ್ತಾರೆ ಎಂದು ಸುದ್ದಿಪತ್ರಿಕೆಯಲ್ಲಿ ಓದಿದ ನೆನಪು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಅರಮನೆ-ಗುರುಮನೆಗಳ ನಡುವೆ: ಸುಕನ್ಯಾ ಕನಾರಳ್ಳಿ ಅಂಕಣ

ಕೊನೆಗೆ ಕುಡಿದು ಮತ್ತೇರಿದ ಅರಮನೆಯ ಸೈನಿಕರು ಬಂದು ಬೆಕೆಟ್ಟನನ್ನ ಎಲ್ಲರೆದುರು ಕೊಲ್ಲುತ್ತಾರೆ. ಬಿಷಪ್ಪನೊಬ್ಬ ಗುರುಮನೆಯೊಳಗೆ ಹುತಾತ್ಮನಾಗಿ ತನ್ಮೂಲಕ ಸಂತನೊಬ್ಬ ಉದಯಿಸಿದ್ದೇನೋ ನಿಜ. ಆದರೆ ಅರಮನೆ ಗೆದ್ದಂತಾಯಿತೆ? ಹೇಡಿ ಸೈನಿಕರು ಏನೇನೋ ಬಡಬಡಿಸುತ್ತಾ ತಾವೆಸಗಿದ ಘೋರ ಕೊಲೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಒಬ್ಬನಂತೂ ತಪ್ಪಿಸಿಕೊಳ್ಳುವ ಸಾಧ್ಯತೆಯಿದ್ದರೂ ಬಿಷಪ್ ತಪ್ಪಿಸಿಕೊಳ್ಳಲಿಲ್ಲವಲ್ಲಾ? ತಾವೇನು ಮಾಡುವ ಹಾಗಿತ್ತು? ಹಾಗಾಗಿ ಅದೊಂದು ಆತ್ಮಹತ್ಯೆ ಎಂದು ಸಹ ಅರ್ಥೈಸುತ್ತಾನೆ. ಬಡಹೆಂಗಸರ ಮೇಳ ತಮ್ಮ ಬದುಕಿನಲ್ಲಿ ಸುಖ ಸಂತೋಷಗಳೊಂದೂ ಇಲ್ಲ, ತಾವು ಏನನ್ನೂ ಬದಲಾಯಿಸಲು ಅಸಮರ್ಥರು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತಾರನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ