ಸತ್ತವರೆಲ್ಲ ಮತ್ತೆ ಬಂದಾಗ: ಸುಧಾ ಆಡುಕಳ ಅಂಕಣ
ಅದು ಅಜ್ಜಿಗೆ ಮೀಸಲಿಡುವ ದಿನವಾಗಿತ್ತು. ಮಕ್ಕಳೆಲ್ಲರೂ ಒಟ್ಟಿಗೆ ಸೇರುವುದು ವಾಡಿಕೆಯಾಗಿತ್ತು. ಅಜ್ಜಿಗೆ ಪರಮ ಪ್ರಿಯಳಾಗಿದ್ದ ಕೊನೆಯ ಮಗಳು ಮಾತ್ರ ಗಂಡನ ಮನೆಯಿಂದ ಬಂದಿರಲಿಲ್ಲ. ಅಣ್ಣಂದಿರು ಒತ್ತಾಯ ಮಾಡಿ ಕರೆದಿದ್ದರೂ ಅವಳ ಗಂಡ ಅದೇನೋ ಹಳೆಯ ಮುನಿಸಿನಿಂದಾಗಿ ಹೆಂಡತಿಯನ್ನು ತವರಿಗೆ ಕಳಿಸಿರಲಿಲ್ಲ. ಅಕ್ಕಂದಿರೆಲ್ಲ ಅವಳನ್ನು ನೆನೆಸಿಕೊಂಡು ಕಣ್ಣೀರಿಡುತ್ತಲೇ ಅಮ್ಮನಿಗೆ ಮೀಸಲಿಟ್ಟಿದ್ದರು. ಆ ರಾತ್ರಿ ಎಲ್ಲರೂ ಮಲಗಿದಾಗ ನಡುರಾತ್ರಿಯಲಿ ನೀಲಿಯ ದೊಡ್ಡಮ್ಮ ಇದ್ದಕ್ಕಿದ್ದಂತೆ ಕುಣಿದು ಕುಪ್ಪಳಿಸಿದ್ದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ
