Advertisement

Tag: ಕೆಂಡಸಂಪಿಗೆ

ಎಸ್. ರಾಮಮೂರ್ತಿ ಬರೆದ ಈ ಭಾನುವಾರದ ಕಥೆ “ಜಾದೂ”

‘ಈಗ ನೋಡಿ ಅಸಲೀ ಝಗಡ ಷುರೂ. ಹಾವು ಮುಂಗೂಸ್ ಝಗಡʼ ಅಂದ. ಬುಟ್ಟಿ ಮುಚ್ಚಳ ತೆಗೆದ. ಹಾವು ಹೆಡೆ ಎತ್ತಿತು. ಪುಂಗಿ ಊದುತ್ತಾ ಮುಷ್ಠೀನ ಹಿಡಿದು, ಕಚ್ಚಲಿ ಅನ್ನೋ ಥರ ಆಡಿಸಿದ. ಅದು ಕಚ್ಚೋಕೆ ಬಂದರೆ ಮುಷ್ಠೀನ್ನ ಹಿಂದಕ್ಕೆಳೆದುಕೋತಾ ಇದ್ದ. ಇವನು ಹಾವು ಮುಂಗುಸಿ ಜಗಳ ತೋರಿಸ್ತಾ ಇಲ್ಲವಲ್ಲ. ಜಗಳ ತೋರಿಸ್ರೀ ಅಂತ ಕೇಳ್ಳಾ? ಬೇಡಪ್ಪಾ. ಆಮೇಲೆ ನನಗಿನ್ನೇನಾದರೂ ಮಾಡಿಬಿಟ್ಟರೆ ಕಷ್ಟ. ಅವನ ಸಹವಾಸಾನೇ ಬೇಡ. ಕಾಯ್ತಾ ನಿಂತೆ. ‘ಜೋರ್‌ ಸೇ ತಾಲಿ ಬಜಾವೋʼ ಅಂದ.
ಎಸ್. ರಾಮಮೂರ್ತಿ ಬರೆದ ಈ ಭಾನುವಾರದ ಕತೆ “ಜಾದೂ” ನಿಮ್ಮ ಓದಿಗೆ

Read More

ಮೆಜೆಸ್ಟಿಕ್‌ ಎಂಬ ಚಿತ್ರಮಂದಿರಗಳ ನಗರ: ಎಚ್. ಗೋಪಾಲಕೃಷ್ಣ ಸರಣಿ

ಜಯಶ್ರೀ ಚಿತ್ರಮಂದಿರ ಚಾಮರಾಜಪೇಟೆ ಒಂದನೇ ರಸ್ತೆಯ ಕೊನೆಯಲ್ಲಿ ಇತ್ತು. ಅದು ಕಳ್ಳೇಕಾಯಿ ಟಾಕೀಸ್ ಎಂದೇ ಪ್ರಖ್ಯಾತವಾಗಿತ್ತು. ಸುಮಾರಾಗಿ ಹಳೆಯ ಚಿತ್ರಗಳೇ ಅಲ್ಲಿ ಪ್ರದರ್ಶನವಾಗುತ್ತಿತ್ತು. ಆ ಟಾಕೀಸ್‌ಗೆ ಬರುತ್ತಿದ್ದವರು ಬಹುತೇಕ ಕಾರ್ಮಿಕ ವರ್ಗದವರು. ದೂರದೂರದ ಪ್ರದೇಶದವರು. ಅವರು ಹಾಗೆ ಬರುವಾಗ ಟೈಮ್ ಪಾಸ್‌ಗಾಗಿ ಕಳ್ಳೇಕಾಯಿ ತಂದು ತಿನ್ನುತ್ತಿದ್ದರಂತೆ. ಒಂದೊಂದು ಪ್ರದರ್ಶನವಾದಾಗಲೂ ರಾಶಿ ರಾಶಿ ಸಿಪ್ಪೆ ಬಿದ್ದಿರುತ್ತಿತ್ತಂತೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಘಾಂದ್ರುಕ್‌ ಮತ್ತು ಸೋಫಿಯ ಎನ್ನುವ ಸೂಜಿಮಲ್ಲಿಗೆ: ಎಚ್.ಆರ್.‌ ರಮೇಶ್‌ ಬರಹ

ಕತೆಗಳು ಹಿಂದಕ್ಕು ಮುಂದಕ್ಕು ಹೋಗುವ ಶೈಲಿ ಹಿಂದುಸ್ತಾನಿ ಸಂಗೀತದ ಯಾವುದೋ ಹೊಸ ರಾಗವೊಂದು ಹೊಮ್ಮಿದಂತೆ ಸಾಗುತ್ತದೆ. ಅದು ಕಾಲದ ಚಲನೆಯಾಗಿ ಓದುಗರನ್ನು ತನ್ನ ಜೊತೆ ಎಳೆದುಕೊಳ್ಳುತ್ತದೆ. ಕ್ಯಾಂಟರ್ ಬರಿ ಟೇಲ್ಸ್‌ನಲ್ಲಿ ಥಾಮಸ್ ಬಕೆಟ್‌ನ ಪುಣ್ಯಕ್ಷೇತ್ರಕ್ಕೆ ಯಾತ್ರೆ ಕೈಗೊಂಡ ಯಾತ್ರಿಕರು ಒಬ್ಬೊಬ್ಬರು ಒಂದೊಂದು ಬದುಕಿನ ಅನನ್ಯ ಅನುಭವದ ಕತೆಯನ್ನು ಹೇಳುವಂತೆ ಇಲ್ಲಿ ಸಿದ್ಧಾರ್ಥ ಮತ್ತು ಸೋಫಿಯಾ ತಮ್ಮ ಬದುಕಿನ ಜೊತೆ ತಮ್ಮ ಬದುಕನ್ನು ಮತ್ತು ಅದನ್ನು ಆವರಿಸಿರುವ ವ್ಯಕ್ತಿಗಳ ಕತೆಯನ್ನು ಹೇಳುತ್ತ ಹೋಗಿರುವ ಪರಿ ಚುಂಬಕ ಶಕ್ತಿಯಂತೆ ಸೆಳೆಯುತ್ತದೆ.
ಸತೀಶ್‌ ಚಪ್ಪರಿಕೆ ಅವರ “ಘಾಂದ್ರುಕ್”‌ ಕಾದಂಬರಿ ಕುರಿತು ಎಚ್.ಆರ್.‌ ರಮೇಶ್‌ ಬರಹ ನಿಮ್ಮ ಓದಿಗೆ

Read More

“ಯಾಕ್‌ ಫೋನ್‌ ತಗೀಲಿಲ್ಲ..” ಅಂತ ಕೇಳೋದಿಲ್ಲ!: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಈ ಬೋರಿನ ಗಾಡಿಯ ರಹಸ್ಯ ಇನ್ನೂ ಬಗೆಹರಿಯಲಿಲ್ಲ. ಪಕ್ಕದ ಹೊಲದ ಗೌಡರಿಗೆ ಫೋನ್ ಮಾಡಿದಾಗ ಅದೊಂದು ಗಾಡಿ ಬೇರೆ ಎಲ್ಲೋ ಬೋರ್ ಹೊಡೆಯಲು ಬಂದಿದ್ದು ಸ್ವಲ್ಪ ಹೊತ್ತು ನಮ್ಮ ಹೊಲದಲ್ಲಿ ನಿಂತಿತ್ತು ಅಂತ ಹೇಳಿದರು. ಇವರನ್ನೇ ಫೋನ್‌ ಮಾಡಿ ಕೇಳಿದ್ದರೆ ಈ ಗುಡ್ಡಪ್ಪನ ಮಾತು ಕೇಳಿ ಇಷ್ಟು ಅಡ್ಡಾಟ ಮಾಡೋದು ತಪ್ಪುತಿತ್ತು ಅಂತ ನನಗೆ ನಾನೇ ಹಳಿದುಕೊಂಡೆ. ಆದರೂ ಅವನ ದೆಸೆಯಿಂದ ನನ್ನ ಹೊಲಕ್ಕಾದರೂ ಹೊಕ್ಕು ಬಂದೆನಲ್ಲ ಎಂಬ ಸಮಾಧಾನವೂ ಆಯ್ತು!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ಯಾರು ಕುರುಡರು?: ಮಹಮ್ಮದ್‌ ರಫೀಕ್‌ ಕೊಟ್ಟೂರು ಬರಹ

ಅಂಧರಾಗಿದ್ದರಿಂದ ಬಹುಶಃ ಅವರಿಗೆ ಕನ್ ಫ್ಯೂಸ್ ಆಗಿರಬಹುದು ಎಂದು ‘ಅಲ್ಲ ಸರ್ ಗೇಟ್ ಈ ಕಡೆ ಇದೆ ನೀವು ವಿರುದ್ಧ ದಿಕ್ಕಿನಲ್ಲಿ ಕೈ ತೋರುತ್ತಿದ್ದೀರಲ್ಲʼ ಎಂದೆ. ಆಗ ಅವರು ನಕ್ಕು ತಮ್ಮ ಕೈಯಲ್ಲಿನ ವಾಕಿಂಗ್ ಸ್ಟಿಕ್ ಓಪನ್ ಮಾಡಿ ಬನ್ನಿ ನನ್ನ ಹಿಂದೆ ಎಂದು ಮುಂದೆ ನಡೆದರು. ನಾನು ಆ ಅಂಧ ವ್ಯಕ್ತಿಯನ್ನು ಅನಿವಾರ್ಯವಾಗಿ ಅಪನಂಬಿಕೆಯಿಂದ ಹಿಂಬಾಲಿಸತೊಡಗಿದೆ. ಎದುರಿನ ರೂಮುಗಳ ಎಡಕ್ಕೆ ನಮ್ಮ ಕಣ್ಣಿಗೆ‌ ಮರೆಯಲ್ಲಿದ್ದ ದಿಕ್ಕಿನಲ್ಲಿ ತಿರುಗಿದಾಗ ಅವರು ಮಾತನಾಡುತ್ತಿದ್ದ ಗೇಟ್ ಕಂಡಿತು.
ಮಹಮ್ಮದ್‌ ರಫೀಕ್‌ ಕೊಟ್ಟೂರು ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ