Advertisement

Tag: ಕೆಂಡಸಂಪಿಗೆ

ಮಾರ್ಟಿನ್ ಲೂಥರ್ ಕಿಂಗ್ ನೆನಪಿನಲ್ಲಿ ಹಾಕಿದ ಹೆಜ್ಜೆಗಳು

ನಾನು ವಿದೇಶದಲ್ಲಿರುವ ಪರದೇಶಿ ಎನ್ನಿಸಲಿಲ್ಲ. ಅಮೆರಿಕ  ದೇಶವನ್ನು ನೋಡುವ ದೃಷ್ಟಿಕೋನವೇ ಬದಲಾಯ್ತು. ಆ ದಿನ ನನ್ನುಸಿರಿಗೆ ಉಸಿರು ಕೊಟ್ಟ ಮಾರ್ಟಿನ್. ನನಗೀಗ ಜೀವನ ಬೇಕು ಅನಿಸಲು ಶುರುವಾಯ್ತು. ಒಳಗಿನ ಕಣ್ಣು ಇಂಚಿಂಚೇ ತೆರೆಯ ಹತ್ತಿತು. ಮುಂದಿನ ಎಲ್ಲಾ ದಿನಗಳ ಪ್ರಯಾಣದಲ್ಲಿ ಅಲ್ಲಿನ ಎಲ್ಲೆಡೆಯಲ್ಲೂ ಕೆಳಮಟ್ಟದ ಕೆಲಸ ಎಂದು ಗುರುತಿಸಲ್ಪಟ್ಟಿರುವ ಎಲ್ಲಾ ಕೆಲಸಗಳನ್ನು ಕಪ್ಪು ಜನರೇ ಮಾಡುತ್ತಿದ್ದದ್ದು ಎದ್ದು ಕಾಣುತ್ತಿತ್ತು. ಬಿಳಿಯರ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಳಬೇಕೆನ್ನುವ ಹಪಾಹಪಿ ಅವರಲ್ಲಿ ಇನ್ನೂ ಜೀವಂತವಿರುವುದನ್ನು ಕಂಡೆ.
‘ಕಂಡಷ್ಟು ಪ್ರಪಂಚ’ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ನಿರ್ಭಾಗ್ಯರ ಲಂಡನ್ ನಗರ ಮತ್ತು ನಿರ್ಲಕ್ಷ್ಯಕ್ಕೊಳಗಾದ ಕವಿಮಹಾಶಯ

ಈ ಕಾಲ ವಿಲಿಯಮ್ ಬ್ಲೇಕ್ ನನ್ನು ಆಂಗ್ಲ ಕವಿ, ಚಿತ್ರಕಾರ, ಮುದ್ರಣಕಾರ ಎಂದು ಗೌರವದಿಂದ ನೆನೆಯುತ್ತದೆ. ಬದುಕಿದ್ದಾಗ ವಿಶೇಷವಾದ ಗುರುತು ಪ್ರಸಿದ್ಧಿ ಇಲ್ಲದವನನ್ನು ಈ ಕಾಲ, ಕಾವ್ಯ ಚರಿತ್ರೆಯಲ್ಲಿ ಕ್ರೀಯಾಶೀಲ, ರೋಮ್ಯಾಂಟಿಕ್ ಕಾಲದ ದೃಶ್ಯ ಕಲೆಯನ್ನು ಪ್ರತಿನಿಧಿಸುವವನು ಎಂದೆಲ್ಲ ಸ್ಮರಿಸುತ್ತದೆ. ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ

Read More

ಸುಳಿಯ ಸೆಳವಿಗೆ ಸಿಲುಕದೇ…

ಮನುಷ್ಯ ಮುಕ್ತವಾಗಿ ಮತ್ತು ಸ್ವಚ್ಛಂದವಾಗಿ ಬೇರೆಯವರ ಜೊತೆ ಕಲೆಯಲು ರಂಗಭೂಮಿಗೆ ಬರಬೇಕು. ಅಲ್ಲಿ ಇರುವ ಮಜವೇ ಬೇರೆ. ಪ್ರೀತಿಯಲ್ಲಿ, ಸಲಿಗೆಯಲ್ಲಿ ಮತ್ತು ಸ್ನೇಹದಲ್ಲಿ ಕಾಲೆಳೆಯುವ ಬಗೆಗಳು ಇಲ್ಲಿ ಪಡೆದುಕೊಳ್ಳುವ ಆಯಾಮವೇ ಬೇರೆ. ಮೇಕಪ್‍ಗೆ ಕೂತರೆ ಮತ್ತು ರಂಗಕ್ಕೆ ಬಂದರೆ ಅಲ್ಲಿ ಅವರ ಚಹರೆ ಬೇರೆ. ಈ ಎಲ್ಲ ತಿಳಿದು ಮತ್ತು ಸಮುದ್ರದ ಬಗೆಗೆ ನನ್ನಲ್ಲಿ ಮೊದಲಿಂದ ಇರುವ ಸೆಳೆತದಿಂದ ಹೊರಟೆ. ಟಿಟಿಯಲ್ಲಿ ಹುಡುಗರ ಗೇಲಿ. ಪರಸ್ಪರ ಕಾಲೆಳೆಯುವ ಗುಣ ನಗು ತರಿಸುತ್ತಿತ್ತು.
ಎನ್.ಸಿ. ಮಹೇಶ್‌ ಬರೆಯುವ “ರಂಗ ವಠಾರ” ಅಂಕಣ

Read More

ತೊರೆಯಲಾಗದ ಮಾಯೆ ಹಿಯಾ ಯಾಂಗ್ಕೆ

ದೂರವಾಗಿರುವ ತನ್ನ ಸಂಸಾರದ ಸದಸ್ಯರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತನಾದ ಹಾನ್ ದೈನಂದಿನ ನಿರ್ವಹಣೆಗಾಗಿ ಅತಿ ಕಳಪೆ ಮಟ್ಟದ ವಸತಿ ಮತ್ತು ಉದರ ಪೋಷಣೆಯಿಂದ ತೃಪ್ತನಾಗುತ್ತಾನೆ ಮತ್ತು ತನ್ನ ಶೋಧ ಕಾರ್ಯ ಮುಂದುವರಿಸುತ್ತಾನೆ. ಚಿತ್ರದುದ್ದಕ್ಕೂ ಕಟ್ಟಡ ಕೆಡವುತ್ತಿರುವ ಹಾಗೂ ಅದರ ಅವಶೇಷಗಳ ನಡುವೆಯೇ ಹಾನ್ ಸೇರಿದಂತೆ ಕೆಲಸಗಾರರ ಚಲನೆ ಕಾಣುತ್ತಿದ್ದು ಅವು ಅವನ ಅಂತರಂಗದ ತುಮುಲ ಮತ್ತು ಕಳವಳಗಳ ರೂಪಕಗಳಾಗುತ್ತವೆ. ಎ.ಎನ್. ಪ್ರಸನ್ನ ಬರೆಯುವ ಸಿನಿಮಾ ವಿಶ್ಲೇಷಣೆ

Read More

ಅಚಲ ಅಸಾಮಾನ್ಯ ಸುಧಾರಕನ ಅಳಿಯದ ನೆನಪುಗಳು

ರಾಜಾರಾಮಮೋಹನ ರಾಯರು ಇಂಗ್ಲೆಂಡ್ ನ ಉತ್ತರಕ್ಕಿರುವ ಬಂದರು ನಗರ ಲಿವರ್ಪೂಲ್ ಅನ್ನು ತಲುಪಿದರು. ಲಿವರ್ಪೂಲ್ ಬಂದರನ್ನು ಜಗತ್ತಿನ ಮೊದಲ ಜಲ ಹಡಗುಕಟ್ಟೆ ಎನ್ನುತ್ತಾರೆ.  ಭಾರತದಿಂದ ಹೊರಟು ಲಿವರ್ಪೂಲ್ ಸೇರಿದ ಹಡಗಿನಲ್ಲಿ ರಾಮಮೋಹನರಾಯರ ಜೊತೆಯಲ್ಲಿ, ಸಾಕು ಮಗ ,ಇಬ್ಬರು ನೌಕರರು ಹಾಗು ಅವರ ನಿತ್ಯದ ಹಾಲಿನ ಬೇಡಿಕೆಯನ್ನು ಪೂರೈಸಲು ಕೆಲವು ದನಗಳು ಇದ್ದವಂತೆ. ಯೋಗೀಂದ್ರ ಮರವಂತೆ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ