ಬೀಜಾವೃತ ಅಪಘಾತ ವೃತ್ತಾಂತ!: ಕ್ಷಮಾ ವಿ ಭಾನುಪ್ರಕಾಶ್ ಕಥಾ ಸರಣಿ
ವಿಭಾ, “ಅಲ್ಲ ಬಾವ, ಬೀಜಗಳು ಇಲ್ಲದ ಕಲ್ಲಂಗಡಿ, ದ್ರಾಕ್ಷಿ ಇವೆಲ್ಲಾ ತಿನ್ನಕ್ಕೇನೋ ಚೆನ್ನಾಗಿರತ್ತೆ. ಆದ್ರೆ, ಒಂದು ಸಲ ಹಣ್ಣು ಬಿಟ್ರೆ, ಆ ಗಿಡದ ಕಥೆ ಮುಗೀತಾ? ಬೀಜಗಳೇ ಇಲ್ದೇ ಆ ಗಿಡ ಮರಿ ಹಾಕೋದು ಹೇಗೆ? ಅಂದ್ರೆ, ಹೊಸ ಗಿಡ ಬೆಳೆಯೋದು ಹೇಗೆ? ಪ್ರಕೃತಿ ಇಂಥಾ ಕೆಲ್ಸ ಯಾಕೆ ಮಾಡ್ತು ಅಂತ ಆಶ್ಚರ್ಯ ಆಗತ್ತೆ” ಎಂದಳು. ಆಗ ಪ್ರಕಾಶ್, “ನೀನು ಹೇಳಿದ್ದು ನಿಜವೇ ವಿಭಾ. ಯಾವುದೇ ಪ್ರಭೇದವಾಗ್ಲೀ, ತನ್ನ ಉಳಿವಿನ ಕಡೆ, ತನ್ನ ಸಂತತಿಯನ್ನ ಬೆಳೆಸೋ ಕಡೆ ಸಹಜವಾಗಿಯೇ ಗಮನ ಇರತ್ತೆ. ಪ್ರತೀ ಜೀವಿಯ, ಪ್ರತೀ ‘ಸ್ಪೀಶೀ’ ಅಂದ್ರೆ ಪ್ರಭೇದದ ಮೂಲಭೂತ ಕೆಲಸ ಅದು. ಆದ್ರೆ, ನಿಸರ್ಗದಲ್ಲಿ ಕೂಡ ಕೆಲವೊಮ್ಮೆ ‘ಆಕ್ಸಿಡೆಂಟ್’ ಆಗತ್ತೆ!” ಎಂದ.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನಾರನೆಯ ಕತೆ

