Advertisement

Tag: ಸುಕನ್ಯಾ ಕನಾರಳ್ಳಿ

ಗರತಿಗಂಗಮ್ಮ ಮತ್ತು ಡಿಸ್ಕೋ ಲೈಟು!: ಸುಕನ್ಯಾ ಕನಾರಳ್ಳಿ ಅಂಕಣ

ಸಮಂಜಸತೆ ಮತ್ತು ಸಾವಯವತೆ ದೃಶ್ಯಸಂಸ್ಕೃತಿಯ ಅನಿವಾರ್ಯ ಭಾಗ ಎನ್ನುವುದನ್ನು ನಾವು ಸಾರಾಸಗಟಾಗಿ ಮರೆತಿದ್ದೇವೆ ಅಂತನ್ನಿಸುತ್ತದೆ. ಸನ್ಯಾಸಿಯೊಬ್ಬರು ಧೀಮಂತ ಭಂಗಿಯಲ್ಲಿ ನಿಂತಿರುವ ರಸ್ತೆಯುದ್ದಕ್ಕೂ ಲಲನೆಯರು ಚಿನ್ನ ವಜ್ರಗಳನ್ನು ಹೊತ್ತು ನಿಂತ ಬ್ಯಾನರುಗಳು ಕಣ್ಣಿಗೆ ಹೊಡೆಯುತ್ತವೆ. ಕಳೆದವಾರ ಶ್ರೀರಾಮಕೃಷ್ಣರ ವೃತ್ತವನ್ನೂ ಕಚ್ಚಿಕೊಂಡಂತೆ ಸುತ್ತ ಮುತ್ತಲೆಲ್ಲ ಯಾವುದೋ ಕಾರ್ಪೊರೇಟರನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಫ್ಲೆಕ್ಸ್ ಬ್ಯಾನರುಗಳು ಹಲ್ಲು ಕಿರಿದಿದ್ದೇ ಕಿರಿದಿದ್ದು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ತೆರಡನೆಯ ಬರಹ

Read More

ಇದಮಿತ್ಥಂ ಎಲ್ಲಿಹುದು ಮನುಜ ಸ್ವಭಾವದಲಿ?: ಸುಕನ್ಯಾ ಕನಾರಳ್ಳಿ ಅಂಕಣ

ಆದರೆ ನಿಜವಾದ ಹೊಡೆತ ಬೀಳುವುದು ಆ ಕಪ್ಪು ಹುಡುಗನ ತಾಯಿಯನ್ನು ಅವಳು ಭೇಟಿಯಾದಾಗ. ಕೌಟುಂಬಿಕ ಹಿಂಸೆಯಡಿ ಸಿಕ್ಕಿಬಿದ್ದ ಆ ತಾಯಿಗೆ ಕುಟುಂಬವೂ ಉಳಿಯಬೇಕು, ಮಗನ ಬರ್ಕತ್ತೂ ಆಗಬೇಕು. ಕರಿಯರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವ ಸಮಾಜ ಒಂದು ಕಡೆ, ಸ್ಕೂಲಿನಿಂದ ಹೊರಕಳಿಸಿದರೆ ಆ ಎಳೆಯನ ಭವಿಷ್ಯವನ್ನು ಕತ್ತರಿಸಿ ಬಿಸಾಕುವ ಅವನ ಕ್ರೂರಿ ಅಪ್ಪ ಇನ್ನೊಂದು ಕಡೆ, ನಿನಗೆ ಬೇಕಿದ್ದರೆ ಪಾದ್ರಿಯನ್ನು ಹೊರದಬ್ಬು, ನನ್ನ ಮಗನ ವಿದ್ಯಾಭ್ಯಾಸಕ್ಕೆ ಅಡ್ಡಿ ಮಾಡಬೇಡ, ಎಂದು ನಯವಾಗಿ ಆದರೆ ದೃಢವಾಗಿ ಹೇಳುವ ಅವಳ ಧಾರಣಶಕ್ತಿ ಮತ್ತು ಹೇಗೋ ಬದುಕುಳಿದು ತನ್ನವರನ್ನೂ ಬದುಕಿಸಿಕೊಳ್ಳುವ ಅವಳ ತಣ್ಣಗಿನ ಸ್ಥೈರ್ಯ ಈ ಸಿಸ್ಟರಿನಿಯ ಧಾರ್ಮಿಕ ಹುಂಬತನವನ್ನು ಅಲ್ಲಾಡಿಸಿಬಿಡುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಒಂಟಿಹೆಣ್ಣು ಮತ್ತು ಹಂಪೆಯಾತ್ರೆ: ಸುಕನ್ಯಾ ಕನಾರಳ್ಳಿ ಅಂಕಣ

ಮೂರನೆಯ ದಿನದ ಹೊತ್ತಿಗೆ ಮನಸ್ಸನ್ನು ಉಲ್ಲಾಸಕ್ಕೆ ಹಚ್ಚುವ, ಹರಿಯುವ, ಸೆಳೆಯುವ ನದಿಯನ್ನು ನೋಡಬೇಕೆನ್ನಿಸಿತ್ತು. ತುಂಗಭದ್ರೆಯ ಹರವನ್ನು ಕಲ್ಪಿಸಿಕೊಳ್ಳುತ್ತಾ ಬೆಳಿಗ್ಗೆಯೇ ಹೋಗಿ ಒಂದು ಮೂಲೆ ಹಿಡಿದು ಕೂತು ಎಷ್ಟೋ ಹೊತ್ತು ಆಕೆಯನ್ನು ಕಣ್ತುಂಬಿಕೊಂಡ ಮೇಲೆ ಸ್ವಲ್ಪ ಸಮಾಧಾನವೆನ್ನಿಸಿತ್ತು. ಕೃಷ್ಣದೇವರಾಯ ತನ್ನ ಆಳ್ವಿಕೆಯನ್ನು ಪ್ರಾರಂಭಿಸಿದ್ದ ಆನೆಗುಂದಿಗೆ ಹೋಗಬೇಕು ಎಂದು ಹೇಳಿದ್ದರೂ ನಮ್ಮ ಆಟೋವಾಲ ಕರೆದುಕೊಂಡು ಹೋಗಿದ್ದು ಐನೂರ ಎಪ್ಪತ್ತೈದು ಮೆಟ್ಟಿಲು ಹತ್ತಬೇಕಿದ್ದ ಅಂಜನಾದ್ರಿಗೆ. ಕಡಿದರೆ ಎರಡು ಆಳಾಗುವ ಒಬ್ಬ ಧಡಿಯ ಮೈಮೂತಿ ತುಂಬ ಹನುಮಂತನ ಬಣ್ಣ ಬಳಿದುಕೊಂಡು, ಸೊಂಟದ ಹಿಂದೆ ಒಂದು ಬಾಲವನ್ನು ಅಂಟಿಸಿಕೊಂಡು, ಗದೆ ಹಿಡಿದು ನಡುದಾರಿಯಲ್ಲಿ ಹಾದಿಗುಪ್ಪೆಯ ಮೇಲೇ ನಿಂತಿದ್ದ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಇಂದಿನ ಮಂದಿಯ ಬಿಂಬದ ಗೀಳು!: ಸುಕನ್ಯಾ ಕನಾರಳ್ಳಿ ಅಂಕಣ

ವಿಲಿಯಮ್ಸ್ ಪ್ರಕಾರ ಟೆಲಿವಿಷನ್ ಕೇವಲ ಒಂದು ತಾಂತ್ರಿಕತೆಯಲ್ಲ, ಅದು ಒಂದು ಸಾಂಸ್ಕೃತಿಕ ರೂಪವೂ ಹೌದು. ಅದರಲ್ಲಿ ಜಾಹೀರಾತುಗಳು ಧಾರಾವಾಹಿಗಳ ನಡುವೆ ‘ಅಕಸ್ಮಾತ್ತಾಗಿ’ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಅವೇ ಧಾರಾವಾಹಿಗಳನ್ನು ರೂಪಿಸುವ ಶಕ್ತಿಗಳು. ಪ್ರಾಯೋಜಕರು ತಮಗೆ ಬೇಕಾದ ನೋಡುಗರನ್ನು ಅದರ ಮೂಲಕ ಸೃಷ್ಟಿಸಿಕೊಳ್ಳುತ್ತಿರುತ್ತಾರೆ. ಆ ಪೂರಕತೆಯನ್ನು ಅರ್ಥಮಾಡಿಕೊಳ್ಳುವುದು ತುಂಬ ಮುಖ್ಯ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೇಳನೆಯ ಬರಹ

Read More

ಇಲ್ಲಿ ಮಹಾರಾಣಿಯೂ ಕೇವಲ ಒಬ್ಬ ‘ಹೆಣ್ಣೇ’ !: ಸುಕನ್ಯಾ ಕನಾರಳ್ಳಿ ಅಂಕಣ

ಜನಪದ, ಪಠ್ಯ, ದೃಶ್ಯ ಹೀಗೆ ಮಾಧ್ಯಮ ಯಾವುದೇ ಇದ್ದರೂ ವೀರಗಾಥೆ ಎಂಬ ಪ್ರಕಾರ ಸರಾಗವಾಗಿ ಸಾಗುವುದನ್ನು ಬೇಡುತ್ತದೆ. ಚೆನ್ನಮ್ಮನ ಕಥಾನಕ ಸಹ ಅದಕ್ಕೆ ಹೊರತಾಗಿಲ್ಲ. ಎಲ್ಲವನ್ನೂ ಕಳೆದುಕೊಂಡ ಚೆನ್ನಮ್ಮ ಬಂಧನದಲ್ಲಿ ಐದು ವರ್ಷ ಕಳೆದು ಸಾವನ್ನಪ್ಪುತ್ತಾಳೆ. ಕಿತ್ತೂರು ಮತ್ತು ಚೆನ್ನಮ್ಮ ತದನಂತರದಲ್ಲಿ ದೇಶದಲ್ಲೆಲ್ಲಾ ಹಬ್ಬಿದ ಸ್ವಾತಂತ್ರ್ಯ ಹೋರಾಟದ ಮುಂದಾಳುಗಳೆಂದು ಸ್ತುತಿಸಲಾಗಿದೆ. ರಾಷ್ಟ್ರೀಯ ಹೋರಾಟದಲ್ಲಿ ಚೆನ್ನಮ್ಮ ಧ್ರುವತಾರೆಯಂತೆ ಮಿನುಗುತ್ತಿರುತ್ತಾಳೆ ಎಂದು ಹೊಗಳಲಾಗಿದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತಾರನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ