Advertisement

Tag: ಸುಕನ್ಯಾ ಕನಾರಳ್ಳಿ

‘ವಿಧವೆ’ ನಿಮ್ಮನ್ನು ತುಂಬ ಕಾಡಿದಳೆ?: ಕಾಸರವಳ್ಳಿಯವರೊಂದಿಗೆ ಒಂದು ಸಂದರ್ಶನ: ಸುಕನ್ಯಾ ಕನಾರಳ್ಳಿ ಅಂಕಣ

‘ನಾಯಿನೆರಳು’ ವಿನ ಮೂರನೆಯ ಭಾಗದಲ್ಲಿ ಪ್ರಭುತ್ವ ಹೆಚ್ಚು ಹೆಚ್ಚು ಮೂಗು ತೂರಿಸೋದನ್ನ ತೋರಿಸೋದಕ್ಕೆ ಪ್ರಯತ್ನಪಟ್ಟಿದೀನಿ. ಪೋಲೀಸು, ಕೋರ್ಟು, ಕೇಸು… ಅವು ಮಂದಿಯ ವೈಯುಕ್ತಿಕ ಜೀವನದ ನಿರ್ಧಾರಗಳು ಅನ್ನೋ ಅಂಶವನ್ನ ಗಣನೆಗೇ ತಗೊಳಲ್ಲ. ವೆಂಕಟಲಕ್ಷ್ಮಿಗೆ ವ್ಯವಸ್ಥೆಯ ಆಯಾಮಗಳ ಪರಿಚಯ ಇದೆ. ಜೊತೆಗೆ, ಸಮುದಾಯದ ಒಂದು ಪಾತ್ರ ‘ಸ್ವಲ್ಪ ದಿನ ಹಿಟ್ಲರ್ ಕಾಟ ಕೊಟ್ಟ. ಈಗ ಗಾಂಧಿ ಕಾಟ,’ ಅಂತ ಹೇಳುತ್ತೆ. ಅವರಿಬ್ಬರ ನಡುವಿನ ವ್ಯತ್ಯಾಸವೂ ಅವರಿಗೆ ಗೊತ್ತಿಲ್ಲ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೈದನೆಯ ಬರಹ

Read More

ಈ ಬದುಕಿನ ಪ್ರೀತಿ ಪ್ರೇಮ ಪ್ರಣಯ…: ಸುಕನ್ಯಾ ಕನಾರಳ್ಳಿ ಅಂಕಣ

ಮದುವೆಯಾಗಲು ಕಾಯುತ್ತಿದ್ದ ದಿನಗಳಲ್ಲಿ ಭ್ರಮೆ ನಿಧಾನವಾಗಿ ಕರಗುತ್ತಿತ್ತು. ಈ ನನ್ನ ಮಗ ಮತ್ತು ನನ್ನ ನಡುವೆ ಇರುವ ಸಮಾನ ಆಸಕ್ತಿಗಳಾದರೂ ಏನು ಎಂದು ಉತ್ತರವೇ ಇಲ್ಲದ ಪ್ರಶ್ನೆಗಳಲ್ಲಿ ದಿನ ಕಳೆಯುತ್ತಿತ್ತು. ಹತ್ತಿರ ಬಂದರೂ ದೇಹ ಸ್ಪಂದಿಸದಿರುವಾಗ ಬದುಕೆಲ್ಲ ಸಿಕ್ಕಿ ಬಿದ್ದು ಏನು ಗತಿ ಎಂದು ಕಳವಳಿಸಲು ಪ್ರಾರಂಭಿಸಿದ್ದೆ. ಒಮ್ಮೆ ಸುಷ್ಮಾ ಸ್ವರಾಜಳ ಅವಳಿಯಂತೆ ಕಾಣಿಸುವ ಅವನ ಅಮ್ಮನನ್ನು ಭೇಟಿಯಾದೆ. ಡಿ ಎಚ್ ಲಾರೆನ್ಸನ ಸನ್ಸ್ ಅಂಡ್ ಲವರ್ಸ್ ಕಾದಂಬರಿ ನೆನಪಿಗೆ ಬಂತು. ಈಕೆ ಉಡದ ಹಿಡಿತದವಳು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ನಾಲ್ಕನೆಯ ಬರಹ

Read More

ತೇಜಸ್ವಿ ನಮ್ಮನ್ನಗಲಿದ ತಿಂಗಳಲ್ಲಿ, ಅವರಿದ್ದ ಊರಿನಲ್ಲಿ…: ಸುಕನ್ಯಾ ಕನಾರಳ್ಳಿ ಅಂಕಣ

ಭಾಷೆ ಅರ್ಥ ಮಾಡಿಸುವುದಕ್ಕಿಂತ ಅಪಾರ್ಥಕ್ಕೆ ಹಾದಿಯನ್ನು ಬಿಚ್ಚುತ್ತದೆ ಎನ್ನುವುದು ನನಗೆ ಗೊತ್ತು. ಕಲೆಯ ಸೃಷ್ಟಿಗೆ ಗ್ರಾಮೀಣ ಮತ್ತು ಪ್ರಕೃತಿ ತೆರೆದುಕೊಂಡಷ್ಟು ನಗರ ಮತ್ತು ಆಧುನಿಕ ತೆರೆದುಕೊಳ್ಳುವುದಿಲ್ಲವೊ ಏನೊ ಅಂತಷ್ಟೇ ಹೇಳಬೇಕಿತ್ತು. ಯಾಕೆಂದರೆ ಗ್ರಾಮೀಣ ಮತ್ತು ಪ್ರಕೃತಿಗಳಲ್ಲಿ ಸೌಂದರ್ಯ ಇರುತ್ತದೆ. ನಾವು ಕ್ಲಿಕ್ಕಿಸಲು ಮಾಲ್‌ಗೆ ಹೇಗೆ ಹೋಗುವುದಿಲ್ಲವೋ ಹಾಗೆಯೇ ಸ್ಲಮ್ಮಿಗೂ ಹೋಗುವುದಿಲ್ಲ. ಅದು ಫೋಟೋಗ್ರಾಫಿಕ್ ಸೌಂದರ್ಯವನ್ನು ಶುದ್ಧನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಪರಿಣಿತರಿಗೆ ಮಾತ್ರ ಸಾಧ್ಯವೋ ಏನೋ. ಯಾಕೆಂದರೆ ಫೋಟೋಗ್ರಫಿ ಕೇವಲ ಹವ್ಯಾಸವಾದಾಗ ಕಣ್ಣಿಗೆ ಹಿತವಾದದ್ದನ್ನು ಮಾತ್ರ ಆರಿಸಿಕೊಳ್ಳುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಅಪ್ಪಂತನದ ವ್ಯವಸ್ಥೆಗೆ ಬೆತ್ತಲೆಯ ಗೀಳು!: ಸುಕನ್ಯಾ ಕನಾರಳ್ಳಿ ಅಂಕಣ

ನಮ್ಮ ಮಟ್ಟಿಗೆ ಹೇಳುವುದಾದರೆ ಇಂದೊಂದು ತೀರಾ ಅಸಂಭಾವ್ಯವೂ, ಅಸಂಬದ್ಧವೂ ಆದ ಕಲ್ಪನೆಯಾಗಿದೆ. ಹನ್ನೆರಡನೆಯ ಶತಮಾನದಷ್ಟು ಹಿಂದಿನ ಆ ಪರಿಸರದಲ್ಲಿ ಹೆಣ್ಣೊಬ್ಬಳು ಅವಳೆಂಥ ಅನುಭಾವಿಯಾಗಿದ್ದರೂ, ಬೆತ್ತಲೆಯಾಗಿ, ಕೂದಲನ್ನು ಮರೆಮಾಡಿಕೊಂಡು ಸಂಚರಿಸಿದಳೆಂಬುದು ಅತ್ಯಂತ ಅಸಂಗತವೂ, ಅನುಚಿತವೂ ಆದ ಭ್ರಮಾಕಲ್ಪನೆಯಾಗಿ ಮಾತ್ರ ತೋರುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೆರಡನೆಯ ಬರಹ

Read More

ಕನ್ನಡ ಸಿನಿಮಾದ ನಿಜವಾದ ‘ಹೊಸ ಹೆಣ್ಣು’ ಹುಟ್ಟಿದ್ದು ತ್ರಿವೇಣಿಯ ‘ಬೆಳ್ಳಿಮೋಡ’ದಲ್ಲಿ: ಸುಕನ್ಯಾ ಕನಾರಳ್ಳಿ ಅಂಕಣ

ಲೀಲಾಳ ಅಣ್ಣ ಈಗ ಮಧ್ಯ ಪ್ರವೇಶಿಸಿ ಕುಟುಂಬವೆಂಬ ಸಂಸ್ಥೆಯ ‘ಸಹಜತೆ’ಯನ್ನು ಮರಳಿಸುವ ಪ್ರಯತ್ನ ಮಾಡುತ್ತಾನೆ. ಎಲ್ಲದಕ್ಕೂ ತನ್ನ ಅಪ್ಪನೇ ಕಾರಣ ಎಂದು ದೂರುತ್ತಾನೆ. ಸಾಯುವ ಮುನ್ನ ಲೀಲಾ ತನ್ನ ತಾಯಿಯನ್ನು ಕಾಣುವ ಹಂಬಲದಲ್ಲಿ ಕೊರಗುತ್ತಾಳೆ. ಅಪ್ಪ ತಾನು ಮಾಡಿದ ತಪ್ಪಿನ ಅರಿವಾಗಿ ಹುಚ್ಚು ಹಿಡಿದು ಬೀದಿ ಬೀದಿ ಅಲೆಯುತ್ತಾ ಕೊನೆಯ ಉಸಿರೆಳೆಯುತ್ತಾನೆ. ಲೀಲಾಳ ಅಣ್ಣ ಅತ್ತಿಗೆ ಮಕ್ಕಳೆಲ್ಲರೂ ‘ಒಳ್ಳೆಯ’ ಕುಟುಂಬದಲ್ಲಿ ಬದುಕಬೇಕು ಎಂದು ನೀತಿಪಾಠ ಹೇಳುವುದರೊಂದಿಗೆ ಚಿತ್ರ ಮುಗಿಯುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೊಂದನೆ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ