Advertisement

Tag: ಸುಮಿತ್‌ ಮೇತ್ರಿ

ಒಳದನಿಗೆ ಕಿವಿಯಾಗುವ ಕವಿತೆಗಳು: ಆನಂದ ವಿ. ಪಾಟೀಲ ಬರಹ

“ಮಹಾಶೂನ್ಯದ ಮಹಾಶೂನ್ಯತ್ವ ಮಹಾಸಾಗರದಲಿ/ಪ್ರತಿಯೊಬ್ಬರೂ ಒಂಟಿ!’ ಎನ್ನುವ ಅಖೈರು ಸತ್ಯ ಇಷ್ಟು ಬೇಗನೆ ಕೈಗೆ ಬಂತೆ ಅಚ್ಚರಿಯನ್ನುಂಟು ಮಾಡುತ್ತದೆ. ಬಹಳಷ್ಟು ಸಲ ಇಲ್ಲಿನ ಕವಿತೆ ಆಂತರ್ಯಕ್ಕೆ ಲಗ್ಗೆ ಇಟ್ಟುದೇ ಆಗಿದೆ ಅನ್ನಿಸಿತು. ಹಾಗಿರುವಾಗ ಅದು ಗುಂಗಾಗಿ ಕಾಡುತ್ತಿದೆಯಾ ಎಂತಲೂ ಗುಮಾನಿಯಾಗಿ ಕಾಡುವಂತೆ ಇಲ್ಲಿನ ಸಾಲುಗಳು ಕಾಣುತ್ತವೆ.
ಸುಮಿತ್‌ ಮೇತ್ರಿ ಕವನ ಸಂಕಲನ “ಈ ಕಣ್ಣುಗಳಿಗೆ ಸದಾ ನೀರಡಿಕೆ” ಕುರಿತು ಆನಂದ ವಿ. ಪಾಟೀಲ ಬರಹ

Read More

ಹಂಗಿಲ್ಲದ ಹಾದಿಯಲ್ಲಿ…

ಇಲ್ಲಿಯೂ ಅವನ ಮತ್ತು ಅವಳ ನಡುವಿನ ಪ್ರೀತಿ, ಪ್ರೇಮ, ವಿರಹ ಇವೆ. ಪ್ರೀತಿಯ ಆಳ-ಅಗಲ, ವಿರಹದ ಸುಡುವ ಯಾತನೆ ಮತ್ತೆ ಮತ್ತೆ ಚಿತ್ರಿತವಾಗಿದೆ. ಹಾಗೆಯೇ ಇವರಿಬ್ಬರ ಸುತ್ತ ಇರುವ ಲೋಕವೂ ಇದೆ; ಭೂತ, ವರ್ತಮಾನಗಳೂ ಇವೆ. ಸುಮಿತ್‌ ಇವುಗಳನ್ನು ಈಗಾಗಲೇ ಬಳಕೆಯಾಗಿರುವ ಮಾತುಗಳಲ್ಲಿ, ಪ್ರತಿಮೆ ರೂಪಕಗಳಲ್ಲಿ ಚಿತ್ರಿಸುತ್ತ ಕಾವ್ಯವನ್ನು ಸವೆದ ದಾರಿಯಲ್ಲಿ ನಡೆಸುವುದಿಲ್ಲ. ಪ್ರತಿ ಹೆಜ್ಜೆಯನ್ನು ಇಡುವಾಗಲೂ ಹೊಸ ರೀತಿಯಲ್ಲಿ, ಹೊಸ ದಾರಿಯಲ್ಲಿ ನಡೆಯಲು ಸಾಧ್ಯವೇ ಎಂದು ನೋಡುತ್ತಾರೆ.
ಸುಮಿತ್‌ ಮೇತ್ರಿ ಕವನ ಸಂಕಲನ “ಈ ಕಣ್ಣುಗಳಿಗೆ ಸದಾ ನೀರಡಿಕೆ” ಕುರಿತು ಜಿ.ಪಿ. ಬಸವರಾಜು ಬರಹ

Read More

ಏನೋ ಹೇಳಬೇಕು…

ನೂರಾರು ಪ್ರಶ್ನೆಗಳೊಂದಿಗೆ, ಮಗ್ಗಲು ಬದಲಿಸುವ ಬದುಕಿನ ಬದುವಿನಲ್ಲಿ ಹುಡುಕಾಟ ತೀವ್ರಗೊಂಡ ನೆಲೆಯಲ್ಲಿ ಆಧ್ಯಾತ್ಮದ ಗವಿಯೊಳಗೆ ಬೆಳಕು ಕಾಣಲು ಹಂಬಲಿಸಿ, ಬದುಕನ್ನು ಭಿನ್ನ ಪಾತಾಳಿಯಲ್ಲಿ ಕಾಣುವ ಹಠಕ್ಕೆ ಬಿದ್ದವನಿಗೆ ಈ ಕವಿತೆಗಳ ಕಡೆ ಅದೇನೋ ತದೇಕ ಸೆಳೆತ ಮತ್ತು ದಿನದಿಂದ ದಿನಕ್ಕೆ ಎಲ್ಲರಿಂದಲೂ ಬಹುದೂರ ಸಾಗುತ್ತಿದ್ದೇನೆ ಅನಿಸಿದರೂ; ನನಗೆ ನಾನು ತುಂಬಾ ಹತ್ತಿರವಾಗುತ್ತಿದ್ದೇನೆ ಎಂದೆನಿಸಿದೆ. ದ್ರುತಗತಿಯ ಹಾದಿ ತುಳಿಯದೇ ಒಂದೊಂದಾಗಿ ಕಳಚಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದ್ದೇನೆ. ಸುಮಿತ್‌ ಮೇತ್ರಿ ಬರಹ

Read More

ಹೃದಯದ ಕಲ್ಲು ಮತ್ತು ನದಿಯೊಂದು ನಿದ್ರಿಸಿದಾಗ

ನಿದ್ರಿಸುವ ನದಿಯೆಡೆಗೆ ಹೋಗುವವರ ಎದೆಯಲ್ಲಿ ಎಳ್ಳಷ್ಟೂ ಭಯ ಇರಬಾರದು. ಅಕಸ್ಮಾತ್ ನಿನ್ನ ಮನಸ್ಸಿನಲ್ಲಿ ಒಂದೇ ಒಂದು ಕ್ಷಣ ಭಯ ಹೊಕ್ಕರೆ ನೀನು ಸತ್ತಂತೆ ಸರಿ, ನಿನ್ನ ಆತ್ಮಕ್ಕೆ ಅವುಗಳನ್ನು ಎದುರಿಸಲು ಆಗುವುದಿಲ್ಲ. ನೀನು ಪಾಪದ ಕೆಲಸ ಮಾಡಿದ್ದರೆ ಆ ಆತ್ಮಗಳು ನಿನ್ನನ್ನು ಸುಲಭವಾಗಿ ಮುಗಿಸಿಬಿಡುತ್ತವೆ. ಭಯಾನಕ ಅಂತ್ಯ ನಿನ್ನದಾಗುತ್ತದೆ. ಶುದ್ಧ ಮನಸ್ಸು ಮತ್ತು ಒಳ್ಳೆಯ ಹೃದಯ ನಿನ್ನ ರಕ್ಷಣೆ, ನಿದ್ರಿಸುವ ನದಿಯೆಡೆಗೆ ಹೋಗುವಾಗ ಯಾರೊಡನೆಯೂ ದ್ವೇಷ ಹೊಂದಿರಬಾರದು. ಮನಸ್ಸಿನಲ್ಲಿ ಕೆಡುಕು, ದುಷ್ಟತನ ಇರಬಾರದು.
ರವಿಕುಮಾರ್ ಹಂಪಿ ಅನುವಾದಿತ “ನದಿಯೊಂದು ನಿದ್ರಿಸಿದಾಗ” ಕಾದಂಬರಿಯ ಕುರಿತು ಸುಮಿತ್‌ ಮೇತ್ರಿ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ