Advertisement

Tag: kendasampige

ಕೊಳ್ಳುವ ಭರದಲ್ಲಿ ವಿವೇಕವೇ ಕಳೆದುಹೋದರೆ!

ಮುವ್ವತ್ತರ ಸುಮಾರಿಗೆ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ. ಕಂಡಿದ್ದನ್ನೆಲ್ಲಾ ಕೊಳ್ಳುವ ಶಕ್ತಿ ನೀಡುವ ಖುಷಿ, ಸವಿಯಾದ ನೆನಪಿನ ಘಮ ಹೊತ್ತ ಅರಿವೆಗಳು ನೀಡುವ ಹಿತಾನುಭವಕ್ಕೆ ಸಾಟಿಯಾಗಬಲ್ಲದೆ? ಕೊಳ್ಳುತ್ತೇನೆಂಬುದು ನಮ್ಮ ಅಹಂಕಾರವನ್ನು ತಣಿಸಬಹುದು. ಆದರೆ ಅಕ್ಕರೆಯ ಸಕ್ಕರೆಯಾಗಬಹುದೆ? ಅರವತ್ತರ ಸುಮಾರಿಗೆ ಈ ಮಟ್ಟಗಿನ ಸರಳತೆ ರೂಢಿಸಿಕೊಳ್ಳೋಣ ಅನ್ನುವಂತಿಲ್ಲ. ಇದು ಖಂಡಿತ ವೈರಾಗ್ಯದ ದಾರಿಯಲ್ಲ. ವಿವೇಚನೆಯ ಹಾದಿ.
ಎಸ್ ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ

Read More

ಇಂಟರ್‌ನೆಟ್‌ ಸೃಷ್ಟಿಸುತ್ತಿರುವ ಆಧುನಿಕ ಪುರಾಣಗಳು

ಭೂಲೋಕದಲ್ಲಿರುವ ಬೆರಗು ಹುಟ್ಟಿಸುವ ಎಲ್ಲ ಕೆಲಸಗಳನ್ನು ಅನ್ಯಲೋಕದ ಜೀವಿಗಳು ಬಂದು ಮಾಡಿದ್ದಾರೆ ಅಂತ ಎಲ್ಲವನ್ನೂ ಏಲಿಯನ್‌ ಟೆಕ್ನಾಲಜಿಗೆ ಒಪ್ಪಿಸುವ ಅಸಂಬದ್ಧತೆ ಈಗ ಎಲ್ಲಾ ಕಡೆಗಳಲ್ಲಿ ಢಾಳಾಗಿ ಕಾಣಿಸುತ್ತಿದೆ. ಅದು ಎಷ್ಟರ ಮಟ್ಟಿಗೆ ಜನರನ್ನು ನಂಬಿಸಿದೆ ಅಂದರೆ ಇತ್ತೀಚೆಗೆ ಒಬ್ಬರು ನನ್ನೊಂದಿಗೆ ಯಾರಾದರೂ ಮನುಷ್ಯರು ಅಷ್ಟು ಚೆನ್ನಾಗಿ ಕೆತ್ತಲು ಸಾಧ್ಯವೇ ಇಲ್ಲ ಅಂತ ವಾದಿಸುತ್ತಿದ್ದರು. ಅವರಿಗೆ ಈಗಲೂ ಕೆತ್ತನೆ ಮಾಡುವ ಸ್ಥಪತಿಗಳಿರುವುದು ತಿಳಿದಂತಿಲ್ಲ.
ಗಿರಿಜಾ ರೈಕ್ವ ಬರೆಯುವ ‘ದೇವಸನ್ನಿಧಿ’ ಅಂಕಣದಲ್ಲಿ ಹೊಸ ಬರಹ

Read More

ಶ್ರೀ ಡಿ.ಎನ್. ಬರೆದ ಈ ಭಾನುವಾರದ ಕತೆ

ಹೋಗಿ ನೋಡಿ ಅಪ್ಪನೆಂದು ಗುರುತು ಹಿಡಿದ. ಆತನ ಮೇಲಿದ್ದ ಕೋಪ ಆರಿರಲಿಲ್ಲ. ಜೀವನವಿಡೀ ಬೇರೆಯವರ ಪಾಪ ಕಳೆಯಲು ದಾನಗಳು ತೆಗೆದುಕೊಂಡು ಜಪತಪಗಳಲ್ಲಿ ಕಾಲ ಕಳೆಯುತ್ತಿದ್ದ ಅಪ್ಪ, ತನ್ನ ಅಪರಕರ್ಮವೂ ಸರಿಯಾಗಿ ಆಗದೆ ಯಾವುದೋ ತಿಳಿಯದ ನಗರದಲ್ಲಿ ಅನಾಥ ಹೆಣದಂತೆ ಬೂದಿಯಾಗಿದ್ದ. ಯಾರದೋ ಸಾವಿಗೆ ಗರುಡ ಪುರಾಣ ಓದುತ್ತಿದ್ದ ಅಪ್ಪ ಸತ್ತಾಗ ಅವನಿಗಾಗಿ ಯಾರೂ ಅದನ್ನು ಓದದಂತೆ ರಮೇಶ ನೋಡಿಕೊಂಡ.
ಶ್ರೀ ಡಿ.ಎನ್. ಬರೆದ ಕತೆ “ಪಾಪ”

Read More

ಚುರುಮುರಿ, ಕೋಸಂಬರಿಯಾದ ‘ಆಸ್ಟ್ರೇಲಿಯಾ ಪತ್ರ’

ದೇಶವಿಡೀ ಇನ್ನೇನು ಬರಲಿರುವ ಕ್ರಿಸ್ಮಸ್ ಹಬ್ಬದ ಮೋಡಿಗೆ ಸಿಲುಕಿ ಸಜ್ಜಾಗುತ್ತಿದೆ. ಬಣ್ಣಬಣ್ಣಗಳ ಅಲಂಕಾರಗಳು, ಕ್ರಿಸ್ಮಸ್ ಮಾರ್ಕೆಟ್, ಜನಸಂದಣಿ, ನಗರ ಕೇಂದ್ರದಲ್ಲಿರುವ ಬೃಹತ್ ಅಲಂಕೃತ ಕ್ರಿಸ್ಮಸ್ ಮರ ಎಲ್ಲವೂ ಜನರನ್ನು ಕುಣಿದಾಡಿಸುತ್ತಿವೆ. ಕ್ರಿಸ್ಮಸ್ ದಿನದ ವಿಶೇಷ ಆಹಾರವಾದ ಟರ್ಕಿ ಕೋಳಿ ಮತ್ತು ಸಾಮನ್ ಮೀನು ಮಿಂಚಿನ ವೇಗದಲ್ಲಿ ಮಾರಾಟವಾಗುತ್ತಿವೆ.
ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ದಡ ಮುಟ್ಟದ ದೋಣಿಗಳಲ್ಲಿ ಕೂತು…

ಒಂದಾದ ನಂತರ ಒಂದರಂತೆ ಮೂರು ಮಕ್ಕಳನ್ನು ಮಾಡಿಕೊಂಡು ನಂತರ ತಮ್ಮತಮ್ಮ ಕೆಲಸ, ಕಾರ್ಯಗಳ ಬಗ್ಗೆ ಗಮನ ಹರಿಸಬೇಕು ಎಂದು ಕೇವಲ ಒಂದು ದಿನದ ಹಿಂದೆ ಮಾತಾಡಿದ್ದಷ್ಟೇ ಅಲ್ಲ, ಮನೆಗೆ ಬಂದು ಸಹಾಯ ಮಾಡಬೇಕು ಎಂದು ನನ್ನನ್ನು ದುಂಬಾಲುಬಿದ್ದ ಅಪ್ಪಟ ಶ್ರೀಸಂಸಾರಿಯಂತೆ ಕಾಣುವ ವಿನಯ, ಅಲಿಶಾ ಜತೆ ನಿಜವಾಗಿಯೂ ಒಂದು ಬದ್ಧ ಸಂಬಂಧದಲ್ಲಿದ್ದಾನೆಯೇ?
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ಆರನೆಯ ಕಂತು ನಿಮ್ಮ ಓದಿಗಾಗಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ