Advertisement

Tag: kendasampige

ಸುವರ್ಣ ಚೆಳ್ಳೂರು ಹೊಸ ಸರಣಿ “ಆಕಿ” ಇಂದಿನಿಂದ

ಆ ಕತಿ ಮತ್ತೆ ಆ ಬಾಯೊಳಗೆ ಮುರಿದ ಕಾಲಿಟ್ಟ ಚಿತ್ರ ನನ್ನೊಳಾಗ ಒಂದಷ್ಟು ಪ್ರಶ್ನೆಗಳನ್ನ ಹುಟ್ಟಿಸಿತು. ಅದನ್ನೆ ಯೋಚಿಸ್ತಿರುವಾಗ ಊರೊಳಾಗ ದೇವಿ ಮೆರವಣಿಗೆ ಬಂದಿತ್ತು, ನೋಡೊಕಂತ ಹೋದಾಗ ಹಳೆ ಗೆಳತ್ಯಾರೆಲ್ಲ ಸಿಕ್ಕಿದ್ದು, ಮನಿಯೊಳಾಗ ಕೆಲಸ ಮಾಡಿ ಅಲ್ಲೆ ಇರ್ತಿದ್ದ ಹೆಣ್ಮಕ್ಕಳು ಜಾತ್ರಿ ನೆಪದಾಗ ಹೊರಾಗ ಬಂದು ಒಬ್ರನ್ನೊಬ್ರು ಖುಷಿಯಿಂದ ಮಾತಾಡಿಸ್ತಾ ನಿಂತಿದ್ದು, ಊರಿನ ಹಾದಿಯೊಳಾಗ ಜಾತಿ ಜನಾಂಗ ಎಲ್ಲಾ ಮರತು ಎಲ್ಲಾರೂ ಒಟ್ಟಾಗಿ ಸೇರಿ ಒಂದೆ ಮನ್ಯಾರೇನೊ ಅನ್ನುವಂಗ ಜಾತ್ರಿ ಕೆಲಸಾನ ಎಲ್ಲಾರೂ ಸೇರಿ ಹಂಚಿಗ್ಯಂಡು ಮಾಡಿದ್ದು ನೋಡಿ, ಎಲ್ಲಾರೂ ಒಟ್ಟಿಗೆ ಸೇರಾಕ ನಾವೆಲ್ಲಾರೂ ಒಂದSS ಅನ್ನೊದು ಮನದಟ್ಟು ಮಾಡಿಕ್ಯಳಾಕ ಜಾತ್ರಿ ಒಂದು ನೆಪ… ಅದ್ರಲ್ಲಿರೊ ಆಕಿ ಕೂಡ!
ಸುವರ್ಣ ಚೆಳ್ಳೂರು ಹೊಸ ಸರಣಿ “ಆಕಿ”

Read More

ಹೊಸ, ಹಳೇ ಕಥೆಗಳಾಗುವ ನಾವು: ವಿನತೆ ಶರ್ಮ ಅಂಕಣ

ಹೊಸ ವರ್ಷದ ಮೊದಲ ದಿನದಂದು ಸಿಡ್ನಿ ಆಕಾಶದಲ್ಲಿ ಮೋಡಗಳು, ಸಣ್ಣನೆ ಮಳೆ, ಚಳಿ. ಸಮುದ್ರ ಭುಸುಗುಡುತ್ತಿತ್ತು. ಅಲೆಗಳ ರಭಸವನ್ನು ನೋಡಿದಾಗ ಮನುಷ್ಯರು ಮಾಡಿಕೊಂಡಿದ್ದ ಹಿಂದಿನ ದಿನದ ಪಾರ್ಟಿಯ ಗಮ್ಮತ್ತು ಅವಕ್ಕೆ ಇಷ್ಟವಾಗಲಿಲ್ಲವೇನೋ ಎಂಬಂತಿತ್ತು. ಅಲೆಗಳ ಹೊರಳಾಟ ಯಾಕೋ ನನ್ನಲ್ಲಿ ದುಃಖ ಉಕ್ಕಿಸಿತ್ತು. ನಗರದ ಪೂರ್ವ ತೀರದಲ್ಲಿರುವ ಸುಂದರ ಸಮುದ್ರತೀರದ ಸುಮಾರು ಮೂವತ್ತಕ್ಕೂ ಹೆಚ್ಚು ಬೀಚ್‌ಗಳನ್ನ ಮುಚ್ಚಿದ್ದರು. ಹೊಸವರ್ಷದ ಆಗಮನವನ್ನು ಅತಿಯಾಗೆ ಆಚರಿಸಲು ಹೋಗಿ ಹಲವಾರು ಕಡೆ ಸಮುದ್ರಕ್ಕಿಳಿದ್ದಿದ್ದ ಜನರು ಆಪತ್ತಿಗೀಡಾಗಿದ್ದು ವರದಿಯಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

 ಲೋಕೋಭಿನ್ನ ರುಚಿಃ – ಲೋಕೋಭಿನ್ನ ಖುಷಿಃ!: ಎಲ್.ಜಿ. ಮೀರಾ ಅಂಕಣ

ಒಬ್ಬೊಬ್ಬರ ಖುಷಿಯ ನಿರ್ವಚನವೂ ಬೇರೆ ಬೇರೆ. ಒಬ್ಬರಿಗೆ ಮಾತಿನಲ್ಲಿ ಖುಷಿ, ಇನ್ನೊಬ್ಬರಿಗೆ ಮೌನದಲ್ಲಿ. ಒಬ್ಬರ ಖುಷಿ ಹಾಡು ಕೇಳುವುದರಲ್ಲಾದರೆ, ಇನ್ನೊಬ್ಬರ ಖುಷಿ ಪದಬಂಧ ಬಿಡಿಸುವುದರಲ್ಲಿ. ಒಬ್ಬರ ಖುಷಿ ಹೊಸರುಚಿಯ ಅಡುಗೆಗಳನ್ನು ಸವಿಯುವುದರಲ್ಲಾದರೆ ಇನ್ನೊಬ್ಬರ ಖುಷಿ ಹೊಸ ಅಡುಗೆಗಳನ್ನು ಕಲಿತು ಮಾಡುವುದರಲ್ಲಿ. ಒಬ್ಬರಿಗೆ ದೇಶವಿದೇಶ ತಿರುಗುವ ಪ್ರವಾಸ ಇಷ್ಟ, ಇನ್ನೊಬ್ಬರಿಗೆ ಮನೆಯ ಆರಾಮಕುರ್ಚಿಯಲ್ಲಿ ಕುಳಿತು ದೇಶವಿದೇಶಗಳ ಬಗ್ಗೆ ಓದುವುದು ಇಷ್ಟ! ಖುಷಿಗಳು ವೈವಿಧ್ಯಮಯ. ಆದರೆ ಇವೆಲ್ಲದರ ಮೂಲದಲ್ಲಿರುವ ಒಂದು ಪ್ರಧಾನ ಸಂಗತಿಯು ಬಹುತೇಕ ಜನರ ಗಮನಕ್ಕೆ ಬರುವುದಿಲ್ಲ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಗೋಹರ್‌ಬಾಯಿ ಕತೆ ಹೇಳಿದ ‘ಪ್ರತಿಗಂಧರ್ವʼ: ಚಿತ್ರಾ ವೆಂಕಟರಾಜು ಸರಣಿ

‘ಪ್ರತಿಗಂಧರ್ವʼ ದಂತಹ ನಾಟಕದ ಅಭಿನಯ ಬಹಳ ಸವಾಲಿನದು. ಏಕೆಂದರೆ ಹೆಚ್ಚಿನ ಪಾತ್ರಗಳು ಕಲಾವಿದರದ್ದು. ಗೋಹರ್‌ ಬಾಯಿ ಪಾತ್ರ ಮಾಡುವ ಕಲಾವಿದೆ, ನಾಟಕದ ಪಾತ್ರ ಮಾಡುವುದರ ಜತೆಗೆ ನಾಟಕದೊಳಗಿರುವ ರಂಗಸ್ಥಳದಲ್ಲಿ ಅಭಿನಯ ಮಾಡಬೇಕಾಗುತ್ತದೆ. ಅಂದರೆ ನಾವು ನೋಡುತ್ತಿರುವ ಪಾತ್ರ ಗೋಹರ್‌ ಬಾಯಿ. ಗೋಹರ್‌ ಬಾಯಿ ನಾಟಕದೊಳಗೆ ಮಾಡಿದ ಪಾತ್ರ ಗೂಢಾಚಾರಿಣಿಯದು. ಗೂಢಾಚಾರಿಣಿಯ ಪಾತ್ರ ಮಾಡಿದ ಗೋಹರ್‌ ಬಾಯಿ ಪಾತ್ರಧಾರಿ, ಅದು ಮುಗಿದ ಮೇಲೆ ಮತ್ತೆ ಗೋಹರ್‌ ಆಗಬೇಕು. ಆಗ ಅಲ್ಲಿನ ಅಭಿನಯಗಳೆರಡೂ ಬೇರೆಯಾಗಬೇಕಾಗುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಪೋಸ್ಟರ್ ಬಳಿಯೋ ಕೆಲಸದಾಗಿನ ಕೆಲ ಅನುಭವಗಳು… ಬಸವನಗೌಡ ಹೆಬ್ಬಳಗೆರೆ ಸರಣಿ

ನಾವು ಪೋಸ್ಟರನ್ನು ಅಂಟಿಸುತ್ತಾ ಲಕ್ಷ್ಮೀ ಮೆಕ್ಕೆಜೋಳದ ಬೀಜಗಳ ಬಗ್ಗೆ ಪ್ರಚಾರ ಮಾಡುತ್ತಾ ಹೋಗುತ್ತಿದ್ದಾಗ ಒಂದು ಹಳ್ಳಿಯವರು ನಮ್ಮನ್ನು ಸುತ್ತುವರೆದು “ಕಳೆದ ವರ್ಷ ಇದೇ ಬೀಜಗಳನ್ನು ಬಿತ್ತಿದ್ದೆವು. ನಮಗೆ ಬೆಳೆ ಲಾಸ್ ಆಗಿದೆ. ಅವು ಸರಿಯಾಗಿ ಹುಟ್ಟಿಲ್ಲ. ಆದ್ದರಿಂದ ಆ ನಷ್ಟವನ್ನು ನೀವೇ ಭರಿಸಬೇಕು” ಎಂದು ನಮ್ಮನ್ನು ಕೇಳಲು ಶುರು ಮಾಡಿದರು. ಅದೇನೋ ಹೇಳ್ತಾರಲ್ಲಾ. ‘ಮದುವೆ ಆಗೋ ತಿಮ್ಮ ಅಂದ್ರೆ ನೀನೇ ನನ್ನ ಹೆಂಡ್ತಿ ಆಗೋ ಅಂದ್ನಂತೆ’ ಅನ್ನೋ ಹಾಗಾಯ್ತು ನಮ್ಮ ಪರಿಸ್ಥಿತಿ. ನಮ್ಮನ್ನು ಹಳ್ಳಿಯವರು ಹಾಗೇ ಕೇಳಿದಾಗ ನಾವು ನಮ್ಮ “ಮ್ಯಾನೇಜರ್‌ನ ಕರೆದುಕೊಂಡು ಬರ್ತೀವಿ” ಎಂದು ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಓಡಿದೆವು!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ