ಮಕ್ಕಳನ್ನು ಓದಿಸಿದ ಮಾವಿನಮರಗಳು
ಅಡ್ವಾನ್ಸ್ ಕೊಟ್ಟೋದ ಸಾಬರು ಕೆಲವೊಮ್ಮೆ ರೇಟ್ ಬಿದ್ದೋಗಿದೆ ಎಂದು ಮರದಿಂದ ಹಣ್ಣು ಉದುರಿ ಹೋಗುತ್ತಿದ್ದರೂ ಬರುತ್ತಿರಲಿಲ್ಲ. ಅಪ್ಪ ಇನ್ನೂರೊ ಮುನ್ನೂರೊ ಅಡ್ವಾನ್ಸ್ಗೆ ಕಟಿಬಿದ್ದು ಉದುರುವ ಹಣ್ಣುಗಳನ್ನು ನೋಡಿಕೊಂಡು ಇನ್ನೊಬ್ಬರಿಗೂ ಕೊಡದೆ ಲಾಸ್ ಮಾಡಿಕೊಂಡದ್ದೂ ಇದೆ. ಸಾಬರು ಮರಗಳಿಗೆ ಕೊಟ್ಟೋದ ಅಡ್ವಾನ್ಸ್ ಹಣದಲ್ಲಿ ಅಪ್ಪ ಪ್ರತಿ ವರ್ಷ ನಮಗೆ ಬರೆಯುವ ನೋಟ್ ಬುಕ್ಕು ಕೊಡಿಸುತ್ತಿತ್ತು, ಪೂರ್ತಿ ಹಣ ಕೊಟ್ಟ ಮೇಲೆ ಅಕ್ಕಂದಿರಿಗೆ ಮತ್ತು ನಮಗೆ ಯೂನಿಫಾರ್ಮ್ ಕೊಡಿಸುತ್ತಿತ್ತು.
Read More

