Advertisement

Tag: kendasampige

ಮಕ್ಕಳನ್ನು ಓದಿಸಿದ ಮಾವಿನಮರಗಳು

ಅಡ್ವಾನ್ಸ್ ಕೊಟ್ಟೋದ ಸಾಬರು ಕೆಲವೊಮ್ಮೆ ರೇಟ್ ಬಿದ್ದೋಗಿದೆ ಎಂದು ಮರದಿಂದ ಹಣ್ಣು ಉದುರಿ ಹೋಗುತ್ತಿದ್ದರೂ ಬರುತ್ತಿರಲಿಲ್ಲ. ಅಪ್ಪ ಇನ್ನೂರೊ ಮುನ್ನೂರೊ ಅಡ್ವಾನ್ಸ್‌ಗೆ ಕಟಿಬಿದ್ದು ಉದುರುವ ಹಣ್ಣುಗಳನ್ನು ನೋಡಿಕೊಂಡು ಇನ್ನೊಬ್ಬರಿಗೂ ಕೊಡದೆ ಲಾಸ್ ಮಾಡಿಕೊಂಡದ್ದೂ ಇದೆ. ಸಾಬರು ಮರಗಳಿಗೆ ಕೊಟ್ಟೋದ ಅಡ್ವಾನ್ಸ್‌ ಹಣದಲ್ಲಿ ಅಪ್ಪ ಪ್ರತಿ ವರ್ಷ ನಮಗೆ ಬರೆಯುವ ನೋಟ್ ಬುಕ್ಕು ಕೊಡಿಸುತ್ತಿತ್ತು, ಪೂರ್ತಿ ಹಣ ಕೊಟ್ಟ ಮೇಲೆ ಅಕ್ಕಂದಿರಿಗೆ ಮತ್ತು ನಮಗೆ ಯೂನಿಫಾರ್ಮ್‌ ಕೊಡಿಸುತ್ತಿತ್ತು.

Read More

‘ಕಾವ್ಯದ ಕನ್ನಡಿಯಲ್ಲಿ ಕಂಡ ಜೀವನಪಥ’

ಅನುಭವಕ್ಕೆ ಸ್ವತಃ ಯಾವುದೇ ರೀತಿಯ ಆಕೃತಿ ಇಲ್ಲ. ಆದರೆ ನಾವು ಮಾತ್ರ ಇದು ಸುಖದ ಅನುಭವ, ಇದು ದುಃಖದ ಅನುಭವ, ಇದು ವಿಹ್ವಲತೆ, ತಲ್ಲಣ, ಇದು ವಿಷಾದದ ಅನುಭವ ಎಂದೆಲ್ಲ ಹೆಸರಿಡುತ್ತೇವೆ ಎಂದು  ಹೇಳುವ ಆನಂದ ಝುಂಜರವಾಡ ಮೂಲತಃ ಕಾವ್ಯಶಕ್ತಿಯನ್ನು ಒಲಿಸಿಕೊಂಡ ಕವಿ. ಇತ್ತೀಚೆಗೆ ಅವರ ಹೊಸ ಕವನ ಸಂಕಲನ ಶಬ್ದ ಸುಪಾರಿ ಬಿಡುಗಡೆಯಾಯಿತು.

Read More

ಕಂಬಾರರಿಗೆ ಒದಗಿ ಬಂದ ಮತ್ತೊಂದು ಕತೆ ಚಾಂದಬೀ ಸರ್ಕಾರ

ದೇಶಪಾಂಡೆ ಅವರ ಮನೆಯಿಂದ ಖಾನ್ ಇದ್ದ ಸ್ಥಳಕ್ಕೆ ತಲುಪುವತನಕ ಚಾಂದಬೀ ಭೂಮಿಯ ಮೇಲೆ ಕಾಲೂರಲೇ ಇಲ್ಲ. ಕ್ಷಣಕ್ಕೊಮ್ಮೆ ಗರ್ಭವ ಮುಟ್ಟಿ ನೋಡಿಕೊಳ್ಳುತ್ತ ಪ್ರತಿಸಲವೂ ಹೊಸ ಹೊಸದಾಗಿ ಕೃಷ್ಣನ ತಾಯಿ ಯಶೋಧೆಯಾಗಿ ಕನಸು ಕಾಣತೊಡಗಿದಳು. ಖಾನನ ಬಳಿಗೆ ಹೋದೊಡನೆ ದೇಶಪಾಂಡೆ ದಂಪತಿಗಳ ಪ್ರೀತಿ, ಗೌರವಾದರಗಳನ್ನು ಹತ್ತು ಸಲ ಹೇಳಿದಳು. ಬಸಿರಾದ ವಿಷಯವನ್ನು ಹತ್ತು ಬಾರಿ ಹೇಳಿದಳು. ಪ್ರತಿಯೊಂದು ಸಲವೂ ಇದೇ ಮೊದಲನೇ ಸಲವೆಂಬಂತೆ ಪ್ರತಿಸಲವೂ ಹೊಸ ಹೊಸ ವಿವರಗಳೊಂದಿಗೆ ಹೇಳಿದಳು.
ಡಾ. ಚಂದ್ರಶೇಖರ ಕಂಬಾರರ ಹೊಸ ಕಾದಂಬರಿ ‘ಚಾಂದಬೀ ಸರ್ಕಾರ’ದ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಉನ್ಮಾದಕತೆಯನ್ನು ಬದಿಗಿರಿಸಿದ ಮೆಕ್ಸಿಕೋ ಸಿನಿಮಾ ʻರೋಮಾʼ

ಕ್ಲಿಯೋಳ ಪ್ರಿಯಕರ ಮಾರ್ಷಿಯಲ್ ಆರ್ಟ್ಸ್‌ ಪ್ರವೀಣ. ಕ್ಲಿಯೋಳ ಎದುರು, ಬಹುಶಃ ಅನಗತ್ಯವಾಗಿ, ನಗ್ನನಾಗಿ ಅದರ ವೈಖರಿಯನ್ನು ಪ್ರದರ್ಶಿಸುತ್ತಾನೆ. ಕ್ಲಿಯೋ ತನ್ನ ಪ್ರಿಯಕರನ ಜೊತೆ ಇದ್ದಾಗಲೂ ಹೆಚ್ಚು ಉನ್ಮಾದಕರ ಭಾವ ಪ್ರಕಟಿಸುವುದಿಲ್ಲ. ನಸುನಗೆಯಲ್ಲಿಯೇ ವರ್ತಿಸುತ್ತಾಳೆ. ಅವಳದು ಚೌಕು ಎನ್ನಬಹುದಾದ ಮುಖದ ಆಕಾರ. ಕಂದು ಬಣ್ಣದ ಅವಳ ಮುಖದಲ್ಲಿ ಎದ್ದು ಕಾಣುವುದು ಕಣ್ಣು ಮಾತ್ರ. ಅದರ ಸೂಕ್ಷ್ಮವಾದ ಚಲನೆಯೇ ಭಾವ ಪ್ರಕಟಣೆಗೆ ಬೆಂಬಲ.

Read More

ಸೂರ್ಯನ ಕೃಪೆ ಧರಿಸುವ ಕ್ಲಾರಾ

ಚೇತರಿಸಿಕೊಳ್ಳಲೇ ಸಾಧ್ಯವಾಗದಷ್ಟು ಬಲಹೀನಳಾಗಿದ್ದ ಜೋಸಿ ಒಮ್ಮೆ ಸೂರ್ಯನ ಕಿರಣ ತಾಕಿದ್ದೇ ಚೈತನ್ಯಶೀಲಳಾಗಿದ್ದು ಹೇಗೆ? ಅವಳು ನಿಜದ ಜೋಸಿಯೇ ಅಥವಾ ರೋಬೋ ಜೋಸಿಯೇ? ಮನುಷ್ಯ ಚೈತನ್ಯವನ್ನು ಎಷ್ಟರ ಮಟ್ಟಿಗೆ ಅನುಕರಿಸಬಹುದು? ವ್ಯಕ್ತಿಯೊಬ್ಬಳ ಇರುವು ಆಕೆಗೆ ಮಾತ್ರ ಸಂಬಂಧಿಸಿದ್ದೋ ಅಥವಾ ಅದು ಆಕೆಯ ಸುತ್ತಲಿರುವ, ಆಕೆಯನ್ನು ಬಹುವಾಗಿ ಪ್ರೀತಿಸುವ ಸಮುದಾಯಕ್ಕೆ ಸಂಬಂಧಿಸಿದ್ದೋ? ಮುಂತಾದ ಸಂಕೀರ್ಣ ಪ್ರಶ್ನೆಗಳಿಗೆ ಈ ಕಾದಂಬರಿ ಒಡ್ಡಿಕೊಳ್ಳುತ್ತದೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ