Advertisement

Tag: kendasampige

ಮತ್ತೊಮ್ಮೆ ಒಡೆಯಿತು ಹೃದಯ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅವರೇನೊ ಸುಲಭವಾಗಿ ಹೊರಟುಬಿಟ್ಟರು. ಏಕಾಂಗಿಯಾದ ನನ್ನ ಪಾಡು? ಗೋವಿಂದ ರೆಡ್ಡಿ ಅವರ ಪ್ರೀತಿಯ ಸುಳಿಯಲ್ಲಿ ಪೂರ್ತಿಯಾಗಿ ಸಿಲುಕಿಬಿಟ್ಟಿದ್ದೆ. ಅವರಿಲ್ಲದ ನಾನು ಒಂಟಿಯಾದಂತೆನಿಸಿತು. ಮದುವೆಯಾದರೆ ಇವರನ್ನೇ ಎಂದು ಮನಸ್ಸು ನಿರ್ಧರಿಸಿತ್ತಲ್ಲಾ! ಕೇಳಿ ಬರಲು ಹೋಗಿದ್ದು. ಗುರುಗಳು ಒಪ್ಪಿಗೆ ನೀಡುತ್ತಾರೆ. ಇಲ್ಲಾ, ಇವರೇ ಒಪ್ಪಿಗೆ ನೀಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ಕಾದು ಬೆಂಗಾಡಾಗಿದ್ದ ಮನಸ್ಸನ್ನು ಸಮಾಧಾನಿಸುತ್ತಲೇ ಇದ್ದೆ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತೊಂದನೆಯ ಕಂತು

Read More

ಬೃಹದೀಶ್ವರ ದೇವಾಲಯದ ಬಗೆಹರಿಯದ ನಿಗೂಢಗಳು: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಈ ಎರಡೂ ಮುಖಗಳು ಈ ದೇವಾಲಯಕ್ಕೊಂದು ವಿಕ್ಷಿಪ್ತ ನೋಟ ಒದಗಿಸುತ್ತದೆ. ಹಲವರ ಪ್ರಕಾರ ಇದು ಯುರೋಪಿನ ಮಾರ್ಕೊ ಪೋಲೋ ಮತ್ತು ಆತನ ಮಡದಿಯ ಚಿತ್ರ ಎನ್ನಲಾಗಿದೆ. 1600 ರ ಸುಮಾರಿಗೆ ಇದನ್ನು ಸೇರಿಸಲಾಗಿದೆ ಎನ್ನುತ್ತಾರೆ. ಮಾರ್ಕೊ ಪೋಲೋ ಇಟಲಿಯ ಪ್ರವಾಸಿಗ. ಎಲ್ಲಿಯ ಇಟಲಿ ಎಲ್ಲಿಯ ಭಾರತ. ಆತನ ಚಿತ್ರ ಸೇರಿಸುವ ಉದ್ದೇಶವಾದರೂ ಏನು? ಅದೂ ಒಬ್ಬ ವಿದೇಶಿ ಪ್ರವಾಸಿಗನನ್ನು ದೇವಾಲಯದ ಹೊರ ಭಿತ್ತಿಯಲ್ಲಿ ಬಿತ್ತರಿಸುವ ಉದ್ದೇಶವಾದರೂ ಏನು? ಎಲ್ಲವೂ ನಿಗೂಢ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಬೃಹದೀಶ್ವರ ದೇವಾಲಯದ ಕುರಿತ ಬರಹ ಇಲ್ಲಿದೆ

Read More

ಆಸ್ಟ್ರೇಲಿಯಾದಲ್ಲಿ ಮಹಿಳಾ ನಡಿಗೆ ಗುಂಪು: ವಿನತೆ ಶರ್ಮಾ ಅಂಕಣ

ನನಗೆ ಆಸ್ಟ್ರೇಲಿಯಾದಲ್ಲಿ ‘ಹೊರತುಪಡಿಸುವ’ ಮನೋಭಾವದ ಅನುಭವ ದಟ್ಟವಾಗಿರುವುದರಿಂದ ಈಚೀಚೆಗೆ ಆ ಮನೋಭಾವದ ಮಜಲುಗಳ, ಅದು ವ್ಯಕ್ತವಾಗುವ ಹಿನ್ನೆಲೆಗಳ ಬಗ್ಗೆ ಆಸಕ್ತಿ ಬೆಳೆದಿದೆ. ಕೆಲತಿಂಗಳ ಹಿಂದೆ ನಡಿಗೆ ಗುಂಪಿಗೆ ವಾಪಸ್ಸಾದಾಗ ನನ್ನ ಪರಿಚಯದಾಕೆ ಉತ್ಸಾಹದಿಂದ ಬರಮಾಡಿಕೊಂಡರು. ಬೇರೆಯವರಿಗೆ ನಾನು ನನ್ನ ಹೆಸರನ್ನು ಹೇಳಿಕೊಂಡು, ಕೆಲವರ್ಷಗಳ ಹಿಂದೆ ನಿಮ್ಮ ಜೊತೆ ನಡೆಯುತ್ತಿದ್ದೆ, ಎಂದೆಲ್ಲಾ ಪೀಠಿಕೆ ಕೊಟ್ಟೆ. ಇತರರಲ್ಲಿ ಅದೇ ಉದಾಸೀನತೆ. ಪುನಃ ಎಲ್ಲರೂ ಬಿಳಿಯರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಅನಕೃ ಎಂಬ ಕನ್ನಡದ ಒನಪು! ಜುಲೈ ತಿಂಗಳ ಈ ನೆನಪು: ಎಲ್.ಜಿ.ಮೀರಾ ಅಂಕಣ

ಅನಕೃ ಅವರ ಬರಹದ ಉದ್ದೇಶವು ಇಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಹಿಂದಿನ ಕಾಲದಿಂದ ನಂಬಿಕೊಂಡು ಬಂದ ಮೌಲ್ಯಗಳನ್ನು ಆಧುನಿಕ ಸಂದರ್ಭದಲ್ಲಿ ಅಳವಡಿಸಿಕೊಂಡು ಬಾಳುವ ವ್ಯಕ್ತಿಗಳು ಹೇಗಿರುತ್ತಾರೆ ಎಂಬ ಪ್ರಶ್ನೆಯನ್ನು ಅವರು ಎತ್ತಿಕೊಂಡಿದ್ದಾರೆ. ಅಂತಹ ಬಾಳನ್ನು ಬಾಳುವ ವ್ಯಕ್ತಿಗಳನ್ನು ಮತ್ತು ಅವರಿಗೆ ಎದುರಾಗುವ ಪ್ರತಿಕೂಲ ಸ್ವಭಾವದ ವ್ಯಕ್ತಿಗಳನ್ನು ಪಾತ್ರಗಳಾಗಿ ಇಟ್ಟುಕೊಂಡು, ಪರಸ್ಪರ ವಿರುದ್ಧ ಗುಣಗಳ ಸಂಘರ್ಷವನ್ನು ಚಿತ್ರಿಸಿ ಕೊನೆಗೆ ಒಳ್ಳೆಯದರ ಮುಂದೆ ಕೆಟ್ಟದ್ದು ಸೋಲುತ್ತದೆ ಎಂಬ ಶುಭಸಂದೇಶವನ್ನು ಸಾರುವ ಉಪಸಂಹಾರವನ್ನು ನೀಡಿದ್ದಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಸ್ವ ಅರಿವಿನ ಸದ್ಭಾವವೇ ಗುರು ಕಾರುಣ್ಯದ  ಮೂಲ ಮಂತ್ರ.:  ಡಾ. ರಾಜೇಂದ್ರಕುಮಾರ್ ಮುದ್ನಾಳ್ ಬರಹ

ನಮ್ಮನ್ನು ನಾವು ಅರಿತುಕೊಂಡಾಗ ಗುರುವನ್ನು ಅರಿತುಕೊಳ್ಳುವ ಪ್ರಜ್ಞೆ ಬಲಗೊಳ್ಳುತ್ತದೆ. ಗುರುವನ್ನು ಹೊರಗಡೆ ಹುಡುಕದೆ, ಒಳಗಡೆಯೇ ಹುಡುಕಬೇಕು. ಅಂದರೆ ಭೌತಿಕ ವಸ್ತುಗಳಲ್ಲಿ ಗುರುವನ್ನು ಕಾಣದೆ, ಅಂತರಾತ್ಮನಲ್ಲಿ ಬೆಳಕನ್ನು ಕಾಣಬೇಕು. ಗುರುವಿನ ಕೆಲಸ ಬೋಧಿಸುವುದು ಮಾತ್ರವಲ್ಲ, ನಮ್ಮಲ್ಲಿರುವ ಅಂತಃಶಕ್ತಿಯನ್ನು ಜಾಗೃತಗೊಳಿಸಿ ಗುರುವಿನೊಂದಿಗೆ ಅನುಸಂಧಾನದ ದಾರಿ ನಿರ್ಮಿಸಿಕೊಳ್ಳಬೇಕೆಂಬ ಆಲೋಚನೆಯೇ ದೊಡ್ಡದು.
ಗುರುಪೂರ್ಣಿಮೆಯ ನಿಮಿತ್ತ ಡಾ. ರಾಜೇಂದ್ರಕುಮಾರ್‌ ಕೆ. ಮುದ್ನಾಳ್‌ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ