Advertisement

Tag: kendasampige

ಬಾರ್ಬೆಡೋಸ್ ದೇಶದ ಕವಿ ಎಸ್ಟರ್ ಫಿಲಿಪ್ಸ್: ಎಸ್. ಜಯಶ್ರೀನಿವಾಸ ರಾವ್ ಸರಣಿ

ಫಿಲಿಪ್ಸ್ ಅವರ ಕವಿತೆಗಳಲ್ಲಿ ಅಪಾರವಾದ ಉದಾರ ಮನೋಭಾವವಿದೆ. ‘ವ್ಯಕ್ತಪಡಿಸಿದ ಪ್ರತಿಯೊಂದು ಕಲ್ಪನೆ ಅಥವಾ ಭಾವನೆಯು ಜನರು ಅಥವಾ ಅವರ ಸುತ್ತಲಿನ ಪ್ರಪಂಚದ ಮೇಲೆ ಅವಲಂಬಿತವಾಗಿರುವುದರಿಂದ ತನಗಾಗಿ ಮಾತ್ರ ಬರೆಯಲು ಎಂದಿಗೂ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ವೆಸ್ಟ್ ಇಂಡೀಸ್-ನ ಬಾರ್ಬೆಡೋಸ್ ದೇಶದ ಕವಿ ಎಸ್ಟರ್ ಫಿಲಿಪ್ಸ್-ರವರ (ESTHER PHILLIPS) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಹೆಣ್ಣಿನ ನಾಲ್ಕು ಕಷ್ಟಗಳು – ಅಂದು, ಇಂದು: ಡಾ. ಎಲ್. ಜಿ. ಮೀರಾ ಅಂಕಣ

ಪಿತೃಪ್ರಧಾನ ವ್ಯವಸ್ಥೆಯ ಬೇರುಗಳು ನಾವು ಅಂದುಕೊಂಡದ್ದಕ್ಕಿಂತ ಬಹಳ ಆಳವಾಗಿರುತ್ತವೆ. ಅವು ಗಂಡಸರ ಮನಸ್ಸಿನಲ್ಲಿ ಮಾತ್ರವಲ್ಲ ಹೆಂಗಸರ ಮನಸ್ಸಿನಲ್ಲೂ ಇರುತ್ತವೆ! ಏಕೆಂದರೆ ಸಾಮಾಜಿಕ ಮೌಲ್ಯಗಳ ಅಂತರಂಗೀಕರಣದ ಸ್ವರೂಪ ಹಾಗಿರುತ್ತದೆ. ಹೀಗಾಗಿ `ಉರಿಯದ ಒಲೆ, ಏಳದ ದೋಸೆ, ಬಯ್ಯುವ ಗಂಡ, ಅಳುವ ಮಗು’, ಪದಪುಂಜಗಳು ಇಂದಿನ ಹೆಣ್ಣಿನ ಮಟ್ಟಿಗೆ ಅನ್ವಯಿಸುತ್ತವೆಯೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತನೆಯ ಬರಹ

Read More

ಮಳೆ ತಂದ ನೆನಪಿನ ಚಿತ್ರಮಾಲೆ!!: ಭವ್ಯ ಟಿ.ಎಸ್. ಸರಣಿ

ಶಾಲೆಗೆ ಹೋದೊಡನೆ ನಮ್ಮ ಕೊಪ್ಪೆ ತೆಗೆದು, ತೊಯ್ದು ತೊಪ್ಪೆಯಾದ ಯೂನಿಫಾರಂ ಲಂಗಗಳನ್ನು ಹಿಂಡಿ ಕೊಡವಿಕೊಂಡು ಹೋಗಿ ತರಗತಿಯಲ್ಲಿ ಕೂರುತ್ತಿದ್ದೆವು. ಇಡೀ ದಿನ ಸುತ್ತೆಲ್ಲ ಬಟ್ಟೆಯ ಹಸಿವಾಸನೆ ಹರಡಿರುತ್ತಿತ್ತು. ಜೋರಾಗಿ ಮಳೆ ಬರುವಾಗ ಮೇಷ್ಟ್ರು ಪಾಠ ಮಾಡುತ್ತಿರುವಾಗಲೂ ಗಲಾಟೆ ಮಾಡುತ್ತಿದ್ದೆವು. ಇನ್ನೂ ಶಿಕ್ಷಕರು ಬರದ ತರಗತಿಯಲ್ಲಿ ‌ಮಳೆ ಸುರಿಯುವಾಗ ಮನಸೋ ಇಚ್ಛೆ ಕೂಗುತ್ತ ಮಳೆಯೊಂದಿಗೆ ಜುಗಲ್ ಬಂಧಿ ನಡೆಸುತ್ತಿದ್ದೆವು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಮಳೆದಿನಗಳಲ್ಲಿ ಶಾಲಾಮಕ್ಕಳ ಸಂಭ್ರಮದ ಕುರಿತ ಬರಹ ನಿಮ್ಮ ಓದಿಗೆ

Read More

ಏಳು ಸುತ್ತಿನ ಕೋಟೆಯ ನಡುವೆ ಜಾಂಬಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಜಾಂಬಿಯಾದ ಸುಮಾರು ಅರುವತ್ತೇಳು ಸಾವಿರ ಚದರ ಕಿಲೋಮೀಟರ್‌ಗಳಷ್ಟು ಕಾಡನ್ನು ಮೀಸಲು ಅರಣ್ಯ ಪ್ರದೇಶ ಎಂದು ಗುರುತಿಸಲಾಗಿದೆ. ಕಾಪರ್‌ಬೆಲ್ಟ್‌ನಲ್ಲಿ ವ್ಯಾಪಾರದ ಉದ್ದೇಶಕ್ಕಾಗಿಯೇ ಮರಗಳನ್ನು ನೆಡಲಾಗಿದೆ. ಇಲ್ಲಿ ಪ್ರಮುಖವಾಗಿ ಸಾಫ್ಟ್‌ವುಡ್ ಮರಗಳಿವೆ. ನೈಋತ್ಯ ಭಾಗದಲ್ಲಿ ಜಾಂಬೆಜಿ ನದಿತೀರದ ಪ್ರದೇಶಗಳಲ್ಲಿ ತೇಗದ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಜಾಂಬಿಯಾದಲ್ಲಿ ಅರಣ್ಯ ನಾಶವಾಗುತ್ತಿರುವುದಕ್ಕೆ ಪ್ರಮುಖ ಕಾರಣ ಅಡುಗೆಗಾಗಿ ಇದ್ದಿಲಿನ ಬಳಕೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಜಾಂಬಿಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ

Read More

ದೇಸೀಧ್ವನಿಯ ಕಥೆಗಳು: ಪ್ರಕಾಶ್‌ ಪುಟ್ಟಪ್ಪ ಕಥಾಸಂಕಲನಕ್ಕೆ ಡಾ. ಮಹೇಶ್ವರಿ ಯು. ಮುನ್ನುಡಿ

ಕತೆಗಾರಿಕೆಯ ಕೌಶಲವನ್ನು, ಕತೆಗಾರನ ಆಳವಾದ ಸಂವೇದನಾಶೀಲತೆಯನ್ನು, ಸಮಾಜಮುಖಿಯಾದ ನೈಜ ಕಾಳಜಿಯನ್ನು ಹೊಂದಿರುವ ಗಟ್ಟಿಯಾದ ಕಥಾವಸ್ತುವುಳ್ಳ ಇನ್ನಷ್ಟು ಕತೆಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿವೆ. ಪ್ರಕಾಶ ಅವರು ನೆಲಮೂಲದ ಸಂಸ್ಕೃತಿಯ ಸತ್ವದಿಂದ ವಿಶೇಷವಾಗಿ ಪುಷ್ಟಿಗೊಂಡವರು. ಆ ಘಮಲನ್ನೂ ಕ್ರೂರ ವಾಸ್ತವವನ್ನೂ ಜೊತೆಜೊತೆಯಾಗಿ ಕಟ್ಟಿಕೊಡುವ ‘ಕಂಡಾಯದೊಡೆಯ ಉಘೇಉಘೇ, ಐರನ್ ಆನೆಗಳು, ನಿಗಿನಿಗಿಕೆಂಡ ಮುಂತಾದ ಕತೆಗಳಲ್ಲದೆ ಭಿನ್ನಮಾದರಿಯ ಕತೆಗಳೂ ಈ ಸಂಗ್ರಹದಲ್ಲಿವೆ.. ಸಂಕಲನದ ಅತ್ಯುತ್ತಮ ಕತೆಗಳಲ್ಲಿ ಆ ಸತ್ವವೇ ಮೈದುಂಬಿದೆ.
ಪ್ರಕಾಶ್‌ ಪುಟ್ಟಪ್ಪ ಕಥಾಸಂಕಲನ ‘ಗಾಂಧಿಜೋಡಿನ ಮಳಿಗೆ’ಗೆ ಡಾ. ಮಹೇಶ್ವರಿ ಯು. ಮುನ್ನುಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ