ರೆಂಬ್ರಾಂಟ್‌ನ ಕಣ್ಣಿಗೆ ಬಿದ್ದ ಹಾನ್ಸ್‌ಕೆನ್ ಎಂಬಾನೆಯ ಕತೆ-ವ್ಯಥೆ
ಬಿಗ್ ಬೇಬಿ ಕೆಡಾಕೆಸ್‌ನಲ್ಲಿ ಬಂದಿಳಿದಾಗ ಅವನನ್ನು ಭಾರೀ ಸಂಭ್ರಮದಿಂದ ಸ್ವಾಗತಿಸಲಾಯಿತು. ಆ ಸಂಭ್ರಮಾಚರಣೆಯ ಅಂಗವಾಗಿ ಪಟ್ಟಣದ ಮೇಯರ್ ಶಾಲಾ ಕಾಲೇಜುಗಳಿಗೆ ಮೂರು ದಿನದ ರಜೆಯನ್ನೂ ಘೋಷಿಸಿದನಂತೆ. ಮುಂದಿನ ಕೆಲ ತಿಂಗಳ ಕಾಲ, ನಮ್ಮ ಬೆಂಗಳೂರಿನ ಬಿಗ್ ಬೇಬಿ, ತನ್ನೆಲ್ಲಾ ಕುಟುಂಬದವರಿಂದ ಬೇರಾಗಿ, ಸ್ಪೇನಿನ ಸಾಲ್ವಡಾರ್ ಡಾಲಿಯ ಖಾಸಗಿ ಉದ್ಯಾನದಲ್ಲಿ ಒಬ್ಬನೇ ಸುತ್ತಾಡಿದನಂತೆ. ಆದರೆ, ಅವನು ಬೆಳೆದಂತೆ, ನೋಡಿಕೊಳ್ಳುವುದು ಕಷ್ಟವಾಗಿ, ಬಾರ್ಸೆಲೋನಾ ನಗರದ ಮೃಗಾಲಯಕ್ಕೆ ಅವನನ್ನು ರವಾನಿಸಲಾಯಿತಂತೆ.
Read More