Advertisement

Tag: ಕೆಂಡಸಂಪಿಗೆ

ಕಾಡ ತೊರೆಯ ಜಾಡು “ಕಡಿದಾಳು ಶಾಮಣ್ಣ”

ಮನಸ್ಸು ಮಾಡಿದ್ದರೆ ಅಥವಾ ಹಣಸಂಪಾದನೆಯ ಮಾರ್ಗ ಹಿಡಿದದ್ದರೆ ದೊಡ್ಡ ಶ್ರೀಮಂತರಾಗಬಹುದಿತ್ತು. ಅವರು ಒಂದು ಕಾಲದಲ್ಲಿ ಸ್ಥಾಪಿಸಿದ್ದ ಪ್ರೆಸ್ಸಿನ ಮೂಲಕವೋ ಇಲ್ಲಾ ಕೃಷಿಯ ಮೂಲಕವೋ ಧಾರಾಳ ಹಣಗಳಿಕೆ ಮಾಡಬಹುದಾಗಿತ್ತು. ಅಥವಾ ಸಂಗೀತದಲ್ಲಿ ಮುಂದುವರೆದಿದ್ದರೆ ಸರೋದ್‌ನಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಬಹುದಾಗಿತ್ತು. ಹೋರಾಟದ ಹಾದಿಯಲ್ಲಿ ನಡೆಯುತ್ತಿರುವಾಗ ತಾನಾಗಿಯೇ ಬಂದ ಅವಕಾಶವನ್ನು ನಿರಾಕರಣೆ ಮಾಡದಿದ್ದರೆ ಶಾಸಕರಾಗಬಹುದಾಗಿತ್ತು ಅಥವಾ ಕಾಲೇಜು ಉಪನ್ಯಾಸಕರಾಗಬಹುದಾಗಿತ್ತು. ಆದರೆ ಅದ್ಯಾವುದೂ ಆಗದೇ ಸಾಮಾನ್ಯ ರೈತನ ಜೀವನ ನಡೆಸಿದರು.
ಗಿರಿಧರ್‌ ಗುಂಜಗೋಡು ಅಂಕಣ

Read More

ತಿರುಮಲೇಶರ ಸೀಕ್ರೆಟ್ ಸಂಚಿ

ನೆನ್ನೆ ಬೆಳಿಗ್ಗೆ ಕವಿ-ಕಥೆಗಾರ, ಭಾಷಾಶಾಸ್ತ್ರಜ್ಞ ಕೆ.ವಿ.ತಿರುಮಲೇಶ್ ತೀರಿಹೋದರು. ಇಳಿವಯಸ್ಸಿನ ಅನಾರೋಗ್ಯದ ನೆವದಲ್ಲಿ ಈ ಸೂಕ್ಷ್ಮ ಸ್ವಭಾವದ ಆರ್ದ್ರಜೀವಿ ನಮ್ಮಿಂದ ಭೌತಿಕವಾಗಿ ದೂರಹೋದರು. ಧಾವಿಸಿದರು.. ಆದರೆ ನಿಧಾನವಾಗಿ. ಅವರು ಹೋದ ಮೇಲೆ ಅವರು ಧಾವಿಸಿದರು ಎಂದು ನಮಗನ್ನಿಸುವಂತೆ ನಮ್ಮನ್ನು ಬಿಟ್ಟು ಹೋದರು.
ಕೆ.ವಿ. ತಿರುಮಲೇಶ್‌ ಅವರ ವ್ಯಕ್ತಿತ್ವ ಹಾಗೂ ಬರಹದ ಕುರಿತು ಬರೆದಿದ್ದಾರೆ ಸಿಂಧೂರಾವ್‌ ಟಿ.

Read More

ಶಿವಕುಮಾರ ಚನ್ನಪ್ಪನವರ ಬರೆದ ಈ ಭಾನುವಾರದ ಕಥೆ

ಪೀರ್ಯಾಗ ಮತ್ತ ಹುರುಪೆದ್ದು ಯೋಳ್ನೆ ಪತ್ರ ಬರದಾಕಿದ್ದ. ಮ್ಯಾಲ ಒಂದ್ಲೈನು ಸರ್ಕಾರಿ ಕೇಲ್ಸ ದೇವ್ರ ಕೇಲ್ಸ ಅಂತಾ ಬರ್ದು ಕೆಳ್ಗ ತಮ್ಮ ಕಂಪ್ನಿ ಮಂಚಪ್ಪ ಮತ್ತ ಸರ್ಕಾರಿ ಲಂಚಪ್ಪನ ಇತಿಹಾಸನ ಬರ್ದಿದ್ದ. ಜೊತಿಗಿ ಅದ್ಕ ಸಂಭಂದಪಟ್ಟಂಗ ಎಕ್ಸೇಲ್ ಸಿಟ್ ಅಟ್ಯಾಚ್ ಮಾಡಿದ್ದ. ನಿನ್ನೆ ಅದು ಕಮೀಷನರ್ರ ಕೈಗಿ ಸಿಕ್ಕು ಲಂಚ್ಮಂಚ್ಚಪ್ಪರ್ನ ಸಿಕ್ಕ ಸಿಕ್ಕಾಂಗ ಉಗದಿದ್ರನ್ನಾದು ಸಹ ಗೊಣೇಶ ತುಂಬು ಹೃದಯದಿಂದ್ಲೇ ವಿವರ್ಸಿ, ಕುಷಿ ಪಟ್ಟಿದ್ದ. ಅಂವ್ಗ ಲೆರ್ಟ ಬರಿತಾರಂತ ಗೊತ್ತು ಆದ್ರ ಇವ್ನ ಬರಿತಾನಂತ ಮಾತ್ರ ಗೊತ್ತಿರ್ಲಿಲ್ಲ. ಪೀರ್ಯಾನೂ ಹೇಳಿದ್ದಿಲ್ಲ.
ಶಿವಕುಮಾರ ಚನ್ನಪ್ಪನವರ ಬರೆದ ಕಥೆ “ಲಂಚಪ್ಗೀರಿ ಲಂಚ್ಮಂಚ್ಚಪ್ಪೋರ ಕತಿ..”

Read More

ಇನ್ಸ್ಬ್ರುಕ್ ಎಂಬ ಮಾಯಾಲೋಕ

ನಾರ್ಡ್ ಕೆಟ್ಟೆಯಲ್ಲಿ ಪ್ರವಾಸಿಗರಿಗೋಸ್ಕರ “ಇಗ್ಲೂ” ಕೂಡ ಮಾಡಿ ಇಡಲಾಗಿತ್ತು. ಗಟ್ಟಿಯಾದ ಹಿಮದ ಇಟ್ಟಿಗೆಗಳಿಂದ ಕಟ್ಟಿದ ಪುಟ್ಟ ಮನೆಯೇ ಇಗ್ಲೂ. ತಾಪಮಾನ ಹೆಚ್ಚಿದ ಹಾಗೆ ಕರಗಿ ಹೋಗುವ ಈ ಮನೆ, ಬೇಸಿಗೆಯಲ್ಲಿ ಮಾಯವಾಗಿಬಿಡುತ್ತದೆ. ಮತ್ತೆ ಚಳಿಗಾಲದಲ್ಲಿ ಹೊಸದಾಳಿ ಹಿಮ ಬಿದ್ದು, ಗಟ್ಟಿಯಾದಮೇಲೆ ಪುನಃ ಕಟ್ಟಿಕೊಳ್ಳಬೇಕು. ಅಲ್ಲಿಗೆ ಹಿಂದಿನವರ ಕಾಲದಲ್ಲಿ ಪ್ರತಿವರ್ಷ ಹೊಸ ಮನೆ ಕಟ್ಟಿ, ಗೃಹಪ್ರವೇಶ ನಡೆಯುತ್ತಿತ್ತು ಅನ್ನಿಸುತ್ತದೆ!
“ದೂರದ ಹಸಿರು” ಸರಣಿಯಲ್ಲಿ ಇನ್ಸ್ಬ್ರುಕ್ ನಗರದಲ್ಲಿ ಓಡಾಡಿದ ಅನುಭವಗಳ ಬರೆದಿದ್ದಾರೆ ಗುರುದತ್ ಅಮೃತಾಪುರ

Read More

ಸಮೃದ್ಧ ಜೀವನಾನುಭವವೇ ಸಾಹಿತ್ಯದ ಜೀವ: ನಾ. ಮೊಗಸಾಲೆ

ತಲೆಮಾರು ಎನ್ನುವುದು ಮುಂದುವರಿಯುತ್ತಾ ಹೋದ ಹಾಗೆ ಕೌಶಲ್ಯ ಎನ್ನುವುದು ಹಿಂದಿಗಿಂತ ಹೆಚ್ಚು ಶಕ್ತ ಅಥವಾ ಹೆಚ್ಚೋ ಎಂಬಂತೆ ಮುಂದುವರಿಯುವುದು ನಮ್ಮ ಅನುಭವ ಅಥವಾ ಪ್ರಕೃತಿ ನಿಯಮ. ಪ್ರತಿಭೆ, ಕೌಶಲ್ಯ, ಮತ್ತು ಚಿಂತನೆಗಳಲ್ಲಿ ನಾವು ನಮ್ಮ ಹಿರಿಯರಿಗಿಂತ ಮುಂದುವರಿದಿದ್ದೇವೆ ಎನ್ನುವುದನ್ನು ನಾನೂ ನೀವೂ ಒಪ್ಪಿಕೊಳ್ಳುವುದಾದರೆ ನಮ್ಮ ಮುಂದಿನ ಪೀಳಿಗೆಯೂ ಖಂಡಿತ ನಮಗಿಂತ ಮುಂದಿರುತ್ತದೆ ಎನ್ನುವುದನ್ನು ಒಪ್ಪಬೇಕು.
ಡಾ. ನಾ. ಮೊಗಸಾಲೆಯವರೊಟ್ಟಿಗೆ ನಡೆಸಿದ ಮಾತುಕತೆಯನ್ನು ಹಂಚಿಕೊಂಡಿದ್ದಾರೆ ಡಾ. ಸುಭಾಷ್ ಪಟ್ಟಾಜೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ