Advertisement

Tag: ರಂಜಾನ್ ದರ್ಗಾ

ಹಿಂಸೆಯನ್ನು ಹತೋಟಿಯಲ್ಲಿಡಲು ಮಾನವೀಯತೆಯೇ ಬೇಕು

ಹುಲಿಗೆ ಆಕ್ರಮಣದ ನಖಗಳಿವೆ. ಆದರೆ ಹುಲ್ಲೆಗೆ ಸಂರಕ್ಷಣೆಯ ಕೊಂಬು ಮತ್ತು ವೇಗಶಕ್ತಿ ಇವೆ. ಇದೆಲ್ಲ ಇರುವಂಥದ್ದೆ. ಏಕೆಂದರೆ ಪ್ರಕೃತಿಯಲ್ಲಿನ ಹುಲಿ ಹುಲ್ಲೆಗಳು ಜೀವಜಾಲದಲ್ಲಿನ ಆಹಾರ ಸರಪಳಿಯ ನಿಯಮದಂತೆಯೆ ಬದುಕುತ್ತಿವೆ. ಆದರೆ ಆಂತರ್ಯದಲ್ಲಿ ಹುಲಿ, ಹುಲ್ಲೆಗಳಂತಿರುವ ಮಾನವರೂ ಇದ್ದಾರೆ. ಅವರಿಗೆ ಈ ಪ್ರಕೃತಿಯ ನಿಯಮ ಅನ್ವಯಿಸುವುದಿಲ್ಲ. ಆದ್ದರಿಂದ ಅವರು ಬದಲಾಗುಂಥ ವ್ಯವಸ್ಥೆ ರೂಪುಗೊಳ್ಳಬೇಕಿದೆ.

Read More

ದೌರ್ಬಲ್ಯಗಳಿಲ್ಲದ ಸ್ವಾಭಿಮಾನಿ ನನ್ನಪ್ಪನೇ ನನಗೆ ಮಾದರಿ

ಅಂದು ನನ್ನ ತಂದೆ ಸಂಭ್ರಮಿಸಿದ್ದು ಒಂದು ರೂಪಕವಾಗಿ ಮನದಲ್ಲಿ ಉಳಿದಿದೆ. ಅವರೆಲ್ಲ ಚೂಡಾ ತಿಂದ ಮೇಲೆ ಲಿಂಗಾಯತರಾದ ಶಿವಪ್ಪನವರಿಗೆ ಸಮೀಪದ ಲಿಂಗಾಯತರ ಮನೆಯಿಂದ ನೀರು ತಂದು ಕೊಟ್ಟ ನಂತರ ಅವರು ನೀರು ಕುಡಿದರು! ಆದರೆ ತಾಯಿ ಮಾಡಿಕೊಟ್ಟ ಚಹಾವನ್ನು ಎಲ್ಲರ ಜೊತೆ ಶಿವಪ್ಪ ಅವರೂ ಕುಡಿದರು. ಇದೆಲ್ಲ ನನಗೆ ವಿಚಿತ್ರ ಎನಿಸಿತು. ಅದೇ ನಳದ ನೀರು. ಲಿಂಗಾಯತರ ಮನೆಗೆ ಹೊಕ್ಕಾಗ ಅದು ಹೇಗೆ ಶುದ್ಧವಾಗುವುದು? ಆ ‘ಶುದ್ಧ’ ನೀರನ್ನು ನನ್ನ ತಂದೆ ತರುವಾಗ ಅಶುದ್ಧವಾಗುವುದಿಲ್ಲವೆ?

Read More

ನಾವು ಬೆಳಕಾಗಿರಬೇಕು ಇಲ್ಲವೆ ಶಾಂತವಾಗಿರಬೇಕು

ಮಾನವ ಸಹಜವಾಗಿ ಸೆಕ್ಯೂಲರ್ ಆಗಿರುತ್ತಾನೆ. ಆದರೆ ಅವನನ್ನು ಪ್ರಜ್ಞಾಪೂರ್ವಕವಾಗಿ ಕಮ್ಯೂನಲ್ ಮಾಡಿದರೂ ಅದು ಬಹಳದಿನ ಬಾಳಿಕೆ ಬರುವುದಿಲ್ಲ. ಮತ್ತೆ ಮತ್ತೆ ಜನ ಸಹಜತೆಯನ್ನು ಬಯಸುತ್ತಲೇ ಇರುತ್ತಾರೆ. ಹೀಗಾಗಿ ಕೋಮುವಾದಿಗಳು ಮತ್ತು ಮೂಲಭೂತವಾದಿಗಳ ಆಟ ನಿರಂತರವಾಗಿ ನಡೆಯುವುದಿಲ್ಲ. ಜನರು ವಿವಿಧ ಜಾತಿ ಮತ್ತು ಧರ್ಮಗಳ ಚೌಕಟ್ಟಿನಲ್ಲಿ ಸಿಲುಕಿದ್ದರೂ ದೈನಂದಿನ ಬದುಕಲ್ಲಿ ಇವೆಲ್ಲವುಗಳನ್ನು ಮೀರಿದವರೇ ಆಗಿರುತ್ತಾರೆ. ರಂಜಾನ್ ದರ್ಗಾ ‘ನೆನಪಾದಾಗಲೆಲ್ಲ ‘ ಸರಣಿಯ  20ನೇ ಕಂತಿನಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಅನಾವರಣಗೊಳಿಸಿದ್ದಾರೆ.

Read More

ಬೋರ್ಡಿಂಗ್ ನಲ್ಲಿ ಸರ್ವಧರ್ಮದ ಸೌಹಾರ್ದ ಗೀತ

ನನ್ನ ಬಾಲ್ಯಕಾಲದಲ್ಲಿ ಎಲ್ಲ ಸಮುದಾಯಗಳಲ್ಲಿ ಇಂಥ ಸಂವೇದನಾಶೀಲ ಮತ್ತು ನ್ಯಾಯನೀತಿಯ ಹಿರಿಯರು ಇದ್ದರು. ತಪ್ಪುಗಳು ಘಟಿಸಬಾರದು ಎಂಬುದಕ್ಕೆ ‘ನಾಲ್ಕು ಜನ ಏನಂದಾರು?’ ಎಂದು ತಪ್ಪು ದಾರಿ ಹಿಡಿಯುವ ಲಕ್ಷಣವುಳ್ಳವರಿಗೆ ಅವರು ಪ್ರಶ್ನಿಸುತ್ತಿದ್ದರು. ಅಂದಿನ ಕಾಲದಲ್ಲಿ ಸಮಾಜವೇ ದೈವವಾಗಿತ್ತು. ಹಿರಿಯರೇ ನ್ಯಾಯಾಧೀಶರಾಗಿದ್ದರು. ಇತರ ಅನುಭವಿಗಳೇ ವಕೀಲರಾಗಿದ್ದರು.

Read More

ಅಮ್ಮನ ನಂಬಿಕೆ, ಔಷಧಿಗಳ ಮಹಿಮೆಯಲ್ಲಿ ಕಳೆದ ಬಾಲ್ಯ

ಬಡ ಗಿರಾಕಿಗಳಿಂದ ಹಿಡಿದು ಶ್ರೀಮಂತ ಗಿರಾಕಿಗಳವರೆಗೆ ಅವರ ಶಕ್ತ್ಯನುಸಾರ ಹಣ್ಣುಗಳನ್ನು ಕೊಳ್ಳುತ್ತಿದ್ದರು. ಹಣ್ಣುಗಳನ್ನು ಕೊಳ್ಳುವಾಗ ರೇಟಿಗೆ ಸಂಬಂಧಿಸಿದ ಕೊಸರಾಟ ಮಜಾ ಅನಿಸುತ್ತಿತ್ತು. ಗಿರಾಕಿಗಳು ತಮ್ಮ ಎಲ್ಲ ತರ್ಕ ಉಪಯೋಗಿಸಿ ಕಡಿಮೆ ಬೆಲೆಗೆ ಕೇಳುತ್ತಿದ್ದರು. ಆ ಹಣ್ಣುಗಳನ್ನು ತರುವ ಕಷ್ಟ, ಅದಕ್ಕಾಗಿ ಮಾಡಿದ ಖರ್ಚು, ಗಿರಾಕಿಗಳು ಕೇಳುವ ಬೆಲೆಗಿಂತ ಹೆಚ್ಚಾಗಿದೆ ಎಂಬುದನ್ನು ಅಜ್ಜಿ ವಿವರಿಸುತ್ತಿದ್ದಳು. ಇಷ್ಟಕ್ಕಾದರೆ ಕೊಡು ಎಂದು ಹೇಳುತ್ತ ಗಿರಾಕಿಗಳು ಮುಂದೆ ಹೋದಂತೆ ಮಾಡುತ್ತಿದ್ದರು. ಅಜ್ಜಿ ಕರೆಯದೆ ಇದ್ದಾಗ ಮತ್ತೆ ವಾಪಸ್ ಬರುತ್ತಿದ್ದರು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ