ಸ್ವಾಭಿಮಾನದ ಗುಡ್ಡ
ಹೌದು
ನಾ ಸ್ಪರ್ಧಾಳು ಸೋತಿದ್ದೇನೆ ಗೆಲ್ಲುವ ಛಲವನ್ನಲ್ಲ
ಬದುಕು ಚಕ್ರವ್ಯೂಹ
ಹೌದು
ನಾ ಮೈಗಣ್ಣ ಕಳೆದಿದ್ದೇನೆ ಮೆಟ್ಟಿಲಾಗುವ ನಿಂದನೆಗಳನ್ನಲ್ಲ ಬೇವು ನಾಲಗೆಗೆ ವೈರಿ
ಹೌದು
ನಾ ಮುಂಗೋಪಿ
ಕ್ಷಮಿಸಿಬಿಡುತ್ತೇನೆ
ಅಳುವಿನೆಡೆಯ ಗಹಗಹಿಕೆಯನ್ನಲ್ಲ
ಹಲಸು ರುಚಿಗೊಡೆಯ
ಹೌದು
ನಾ ನಾಸ್ತಿಕ ಸಂಕೀರ್ತಿಸುತ್ತೇನೆ ಗೊಡ್ಡುತನಗಳನ್ನಲ್ಲ ಒಬ್ಬರಿಗಾದವರು ದೇವರೇ
ಹೌದು
ನಾ ಸ್ವಾಭಿಮಾನದ ಗುಡ್ಡ ಅಪೇಕ್ಷಿಸುತ್ತೇನೆ
ಬೆವರತ್ತದ ಉಪ್ಪನ್ನಲ್ಲ
ಹಸಿವು ಸನ್ಮಿತ್ರ

ಡಾ. ದಿಲೀಪ್ ಎನ್ಕೆ ಚಾಮರಾಜನಗರದ ಕೊಳ್ಳೇಗಾಲದವರು. ಋತುಮಾನಕ್ಕಷ್ಟೇ ಪ್ರೀತಿ (ಕವನ ಸಂಕಲನ), ಬಲಿಷ್ಠ (ಕಥಾ ಸಂಕಲನ), ಚೆಗ್ಗಿ- ಮಾರಿಕುಣಿತದ ಸೊಲು (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. “ಕನ್ನಡ ದಲಿತ ಕಥಾಸಾಹಿತ್ಯ : ಅಕ್ಷರಸ್ಥ ದಲಿತರ ತಲ್ಲಣಗಳು” ಇವರ ಪಿ.ಎಚ್.ಡಿ ಮಹಾಪ್ರಬಂಧ
