Advertisement
ಶೆರ್ಲಿನ್ ಮಿಠಾಯಿ ಮನೆ; ಒನ್ ಅವರ್ ಬ್ಯುಸಿನೆಸ್ ಶಾಪ್: ಸುಮಾವೀಣಾ ಅಂಕಣ

ಶೆರ್ಲಿನ್ ಮಿಠಾಯಿ ಮನೆ; ಒನ್ ಅವರ್ ಬ್ಯುಸಿನೆಸ್ ಶಾಪ್: ಸುಮಾವೀಣಾ ಅಂಕಣ

ಶೆರ್ಲಿನ್ ಮಿಠಾಯಿ ಮನೆಯ ತಾತ ಟಾಕು ಠೀಕಾಗಿ ಡ್ರೆಸ್ ಮಾಡಿಕೊಂಡಿರುತ್ತಿದ್ದರು. ವ್ಯವಹಾರವನ್ನೂ ಪಕ್ಕಾ ಮಾಡುತ್ತಿದ್ದರು. ಐದು ಪೈಸೆಯನ್ನು ಕೊಡಬೇಕಾಗಿದ್ದರೂ  ಮುಖ  ನೆನಪಿನಲ್ಲಿಟ್ಟುಕೊಂಡು ಕೊಟ್ಟ ಅಂತೆಯೇ ವಸೂಲಿ ಮಾಡಿದ ಉದಾಹರಣೆಗಳು ಇವೆ. ಟೆಸ್ಟುಗಳಲ್ಲಿ ಔಟ್ ಆಫ್ ಬಂದಾಗ ಎದುರಾಳಿಗಳಿಗಿಂತ ಅರ್ಧ ಅಂಕ ಹೆಚ್ಚಾಗಿ ಬಂದರೂ ಆ ದಿನ ಶೆರ್ಲಿನ್ ಮಿಠಾಯಿ ಮನೆಯಲ್ಲಿ ಟೀನ್ ಏಜರುಗಳ ಟ್ರೀಟ್. ಟೀನೇಜಿನ ರಸಮಯ ಸಂಗತಿಗಳನ್ನು ಹಂಚಿಕೊಳ್ಳುವ  ರಸಮಯ ಪಾಯಿಂಟ್ ಸರ್ಲಿನ ಮಿಠಾಯಿ ಮನೆ ಆಗಿತ್ತು. ಅದರಲ್ಲಿ ಅಕೌಂಟ್ ತೆಗೆಯುವ ಅವಕಾಶವಿರಲಿಲ್ಲ.
ಸುಮಾವೀಣಾ
ಹೊಸ ಅಂಕಣ “ನುಡಿನಲಿವು”

“ಐಸ್ಕ್ರೀಮ್ ಪರ್ವತ ಏರಿ… ಚಾಕಲೇಟ್ ನದಿ ದಾಟಿ…… ನೂಡಲ್ಸ್ ಬಳ್ಳಿಗಳನ್ನು ಬಿಡಿಸಿಕೊಂಡು    ಕ್ರೀಮ್ ಬನ್‌ಗಗಳನ್ನು ಎಡವಿ ಎಡವೀ….. ಡೋನಟ್‌ಗಳ ನಡುವೆ ಸಿಕ್ಕಿಕೊಂಡು…. ಅಬ್ಬ…… ಅಲ್ಲಲ್ಲಿ ಪೇಸ್ಟ್ರಿಗಳ ಗುಡ್ಡವನ್ನು ಹತ್ತುತ್ತಾ…… ಇಳಿಯುತ್ತಾ….” ಎಂದು ಕಥೆ ಹೇಳುತ್ತಿದ್ದರೆ ಈಗಿನ ಮಕ್ಕಳು ಅದೆಷ್ಟು ಖುಷಿ ಪಡ್ತಾರೋ? ಅವರ  ಕಟವಾಯಿಗಳು ಜೊಲ್ಲಿನ  ಝರಿಗಳಾಗಿ ನೀರು ಸುರಿಸುತ್ತಲೇ ಇರುತ್ತವೆಯೇನೋ. ನಮ್ಮ ಮಕ್ಕಳಿಗೆ  ಜಂಕ್ ಫುಡ್ ಅಂದರೆ ಅಷ್ಟು ಇಷ್ಟ!  ಈಗಂತೂ ಎಲ್ಲವೂ ಅವರಿಗೆ ಸುಲಭವಾಗಿ ಸಿಗುತ್ತಿವೆ ಅಂದುಕೊಂಡ ಕೂಡಲೆ ಆನ್ಲೈನಲ್ಲಿ ಅರ್ಡರ್ ಮಾಡಿ ತರಿಸಿ ತಿನ್ನುತ್ತಾರೆ. ಆದರೆ… ಆದರೆ ನಮಗೆ ಹಾಗಿತ್ತೆ? ಇಲ್ಲ! ನಮ್ಮ ಕಾಲದ  ಚಾಕಲೇಟ್‌ಳೆ ಬೇರೆ ಬಿಡಿ ಕತ್ತರಿಸಿ ಉಪ್ಪುಖಾರ ಹಾಕಿದ ಕಿತ್ತಳೆಹುಳಿಯ  ಹುಳಿ ನೆನಪಿಸಿಕೊಳ್ಳುತ್ತಿದ್ದರೆ ಒಂದು ಕಣ್ಣು ಮುಚ್ಚುತ್ತದೆ. ನೆಲ್ಲಿಕಾಯಿಯ ಒಗರು, ಹುಳಿ ಮತ್ತೆಮತ್ತೆ ಬಾಯಿ ಚಪ್ಪರಿಸುವಂತೆ ಮಾಡುತ್ತದೆ.

ಮಧ್ಯಮವರ್ಗದ ಮಕ್ಕಳು ಅದರಲ್ಲೂ ಕನ್ನಡ ಶಾಲೆಯ ಮಕ್ಕಳು ಇದನ್ನು ಅನುಭವಿಸಿಯೇ ಇರುತ್ತಾರೆ.  ನಾನೋದಿದ  ಶಾಲೆಯಲ್ಲಿ ಮಧ್ಯಾಹ್ನ ಊಟದ  ಬೆಲ್ ಬಾರಿಸುತ್ತಿದ್ದಂತೆ ಮನೆಯಿಂದ ತಂದಿದ್ದ ಬುತ್ತಿ ಎಷ್ಟು ಬೇಗ ಮುಗಿಸುತ್ತಿದ್ದರೋ ತಿಳಿಯುತ್ತಿರಲಿಲ್ಲ. ಪ್ರೈಮರಿ ಶಾಲೆ ಮಕ್ಕಳಿಗೆ ಅವಕಾಶವಿಲ್ಲದ ಮಿಡಿಲ್ ಸ್ಕೂಲ್ ಹೈಸ್ಕೂಲ್  ವಿದ್ಯಾರ್ಥಿಗಳು ಮಾತ್ರ ಹೋಗಬಹುದಾದ ಒನ್ ಅವರ್ ಬ್ಯುಸಿನೆಸ್ ಮಾಡುತ್ತಿದ್ದ  ಶೆರ್ಲಿನ್ ಅಂಗಡಿಗೆ ಬಹುವಾಗಿ ಅಜ್ಜಿ ಅಂಗಡಿಗೆ ಮುತ್ತಿಗೆ ಹಾಕುತ್ತಿದ್ದರು.

ಅಲ್ಲಿ ಅಂಥಾ ಕೆಲಸವೇನು? ಎನ್ನಬಹುದು. ಪರೀಕ್ಷೆ ಹಾಳೆ, ಮ್ಯಾಪ್, ಗ್ರಾಫ್ ಶಿಟ್, ಪೆನ್ನಿಗೆ ಇಂಕ್ ತುಂಬಿಸಿ ಬರುವ ನೆಪದಲ್ಲಿ ಆ ಕಾಲದ ಫೇವರೇಟ್ ಜಾಮೂನ್, ಹಾಲ್ಕೋವ, ಕಡಲೆಮಿಠಾಯಿ, ಜೀರಿಗೆ ಮಿಠಾಯಿ, ಶುಂಠಿ ಪೆಪ್ಪರ್ ಮೆಂಟ್, ಕೊಬ್ಬರಿ ಮಿಠಾಯಿಗಳಿಗೆ ಮುಗಿ ಬೀಳುವುದು. ಶೆರ್ಲಿನ್ ಮಿಠಾಯಿ ಅಂಗಡಿ ಸ್ವಲ್ಪ ಸ್ಟಾಂಡರ್ಟ್ ಅಂಗಡಿಯಾಗಿತ್ತು. ಅಜ್ಜನ ಅಂಗಡಿ ಎಂದೂ ಕರೆಸಿಕೊಳ್ಳುತ್ತಿತ್ತು. ನಮ್ಮ ಮಿಠಾಯಿಗಳು ಅಲ್ಲಿ ಟಾಫಿಗಳಾಗುತ್ತಿದ್ದವು. ಬಿಸ್ಕೆಟ್ ಪ್ಯಾಕ್‌ಗಳು, ಬಬಲ್ ಗಮ್, ಲ್ಯಾಕ್ಟೊ, ಮಹಾಲ್ಯಾಕ್ಟೊ,  ಕಾಫಿಬೈಟ್, ಕಚ್ಚಾ ಮ್ಯಾಂಗೊ ಚಾಕಲೆಟ್‌ಗಳು  ವಿವಿಧ ನಮೂನೆಯ ಪ್ಲಾಸ್ಟಿಕ್ ಆಟಿಕೆಗಳಲ್ಲಿ ಇರುತ್ತಿದ್ದ ಜೀರಿಗೆ ಮಿಠಾಯಿ, ಬಿಳಿ ಕೆಂಪು ಬಣ್ಣದ ಕಡಲೆಬೀಜ ಮಿಠಾಯಿಗಳು ಇರುತ್ತಿದ್ದವು.  ಅಂಗಡಿಗಾಗಿಯೇ ಮಾಡಿದ ಸ್ಥಳ ನೋಟ್ ಬುಕ್, ಮ್ಯಾಪ್‌ಗಳು ರೆನಾಲ್ಡ್ಸ್ ಪೆನ್,  ಯೂಸ್ ಅಂಡ್ ಥ್ರೋ ಪೆನ್ಗಳು ಇರುತ್ತಿದ್ದವು.  ಶರ್ಲಿನ್ ಅದೇ ಮನೆ ಹುಡುಗಿ ನಮ್ಮದೆ   ತರಗತಿಯ    ಇಂಗ್ಲಿಷ್ ಮೀಡಿಯಮ್ ಹುಡುಗಿ. “ಇವಳಿಗೆ ಎಂಥ ಚಂದ ಅಲ್ಲಾ… ಏನು ಬೇಕಿದ್ರು ತೆಗೆದುಕೊಂಡು  ತಗೋಬಹುದು… ತಿನ್ನಬಹುದು…” ಎಂಬುದು ಇತರರ ಮಾತಿನ ಹೂರಣವಾಗಿರುತ್ತಿತ್ತು.  ಶೆರ್ಲಿನ್ ಮಿಠಾಯಿ ಮನೆಯ ತಾತ ಟಾಕು ಠೀಕಾಗಿ ಡ್ರೆಸ್ ಮಾಡಿಕೊಂಡಿರುತ್ತಿದ್ದರು. ವ್ಯವಹಾರವನ್ನೂ ಪಕ್ಕಾ ಮಾಡುತ್ತಿದ್ದರು. ಐದು ಪೈಸೆಯನ್ನು ಕೊಡಬೇಕಾಗಿದ್ದರೂ  ಮುಖ  ನೆನಪಿನಲ್ಲಿಟ್ಟುಕೊಂಡು ಕೊಟ್ಟ ಅಂತೆಯೇ ವಸೂಲಿ ಮಾಡಿದ ಉದಾಹರಣೆಗಳು ಇವೆ. ಟೆಸ್ಟುಗಳಲ್ಲಿ ಔಟ್ ಆಫ್ ಬಂದಾಗ ಎದುರಾಳಿಗಳಿಗಿಂತ ಅರ್ಧ ಅಂಕ ಹೆಚ್ಚಾಗಿ ಬಂದರೂ ಆ ದಿನ ಶೆರ್ಲಿನ್ ಮಿಠಾಯಿ ಮನೆಯಲ್ಲಿ ಟೀನ್ ಏಜರುಗಳ ಟ್ರೀಟ್. ಟೀನೇಜಿನ ರಸಮಯ ಸಂಗತಿಗಳನ್ನು ಹಂಚಿಕೊಳ್ಳುವ  ರಸಮಯ ಪಾಯಿಂಟ್ ಸರ್ಲಿನ ಮಿಠಾಯಿ ಮನೆ ಆಗಿತ್ತು. ಅದರಲ್ಲಿ ಅಕೌಂಟ್ ತೆಗೆಯುವ ಅವಕಾಶವಿರಲಿಲ್ಲ.  ಹಾಗಾಗಿ ಅಕೌಂಟ್  ಸಾಲಭ್ಯವಿರುವ ಅಜ್ಜಿ ಅಂಗಡಿಗೆ ಅರ್ಥಾತ್ ಕಿಟಕಿ ಅಂಗಡಿಗೆ ಅನೇಕರು ಹೋಗುತ್ತಿದ್ದರು.   ಅದು ಅಂಗಡಿ ಉದ್ದೇಶಕ್ಕೆ ಕಟ್ಟಿದ್ದ ಕಟ್ಟಡವಲ್ಲದ್ದರಿಂದ ಬೆಡ್ರೂಮಿನ ಮಂಚದ ಮೇಲೆಯೇ ತಿಂಡಿಗಳನ್ನು  ತಾತ್ಕಾಲಿಕವಾಗಿ ಜೋಡಿಸಿಕೊಂಡು ಕಿಟಕಿ ಸರಳುಗಳ ನಡುವೆಯೆ ವ್ಯಾಪಾರ ಮಾಡುತ್ತಿದ್ದರು. ಅಲ್ಲಿ ಬೋಟಿ,  ರಿಂಗ್ಸ್, ಪ್ರಾಣಿ ಮುಖದ ಬಿಸ್ಕೆಟ್‌ಗಳು, ಐದು ಪೈಸೆಗೆ ಒಂದರಂತೆ ಜಾಮೂನು, ಪ್ಯಾಕ್ ಮಾಡಿದ ಹುರಿದ ಬಟಾಣಿ ಸಿಗುತ್ತಿತ್ತು. ಐದು ರುಪಾಯಿ ನೋಟ್  ಕೊಟ್ಟರೆ ಅದುವೆ ಹೈ ನೋಟಿನ ವ್ಯಾಪಾರ ಅಲ್ಲಿ. ಅಕೌಂಟ್ ತೆರೆಯುವ ಸೌಲಭ್ಯ ಅಲ್ಲಿತ್ತು. ಅರ್ಥಾತ್ ಸಾಲ ಕೊಡುತ್ತಿದ್ದರು. ಫೆಬ್ರವರಿ ತಿಂಗಳಿನಲ್ಲಿ ಅಕೌಂಟ್ ಪೂರ ಕ್ಲೋಸ್ ಆಗುತ್ತಿದ್ದವು.  ಕೆಲವರು ನಿಷ್ಟರಾಗಿರುತ್ತಿದ್ದರು. ಇನ್ನು ಕೆಲವರು  ಯಾವುದೋ ಸೆಕ್ಷನ್ ಯಾವುದೋ ತರಗತಿ ಹೇಳಿ ಚನ್ನಾಗಿ ತಿಂದು ಬರುತ್ತಿದ್ದರು. ಅಜ್ಜಿ ಅಂಗಡಿಯವರು ವಸೂಲಿಗೆ ಕ್ಲಾಸ್ ಕ್ಲಾಸ್‌ಗೆ  ಬರುವಾಗಲೆ  ಹೀಗೂ ಆಗಿದ್ಯಾ ಅಂತ ತಿಳಿಯೋದು. ಈಗಿನ ಹಾಗೆ ಐಡಿ ಕಾರ್ಡ್‌ಗಳು ಇದ್ದರೆ ತೊಂದರೆ ಆಗುತ್ತಿರಲಿಲ್ಲವೇನೋ? ಒನ್ ಅವರ್ ಅಂಗಡಿಯವರ ಸರ್ಕಸ್ ನೋಡಿದ ನಮ್ಮ ಶಾಲೆಯವರು ಸುಮ್ಮನೆ ಬಿಡಲಿಲ್ಲ. ಐಸ್ಕ್ರೀಮ್ ಮಾಡಿ ಮಾರಿ ಬಿಸ್ಕೆಟನ ಮೇಲೆ ಹಾಕಿ ಕೊಡುತ್ತಿದ್ದರು. ಆದರೂ ನಮ್ಮ ವಿದ್ಯಾರ್ಥಿ ಸನ್ಮಿತ್ರರು ಹೋಗುತ್ತಿರಲಿಲ್ಲ ಬಿಡಿ!

ಇವೆಲ್ಲಕ್ಕಿಂತಲೂ  ಗಿವ್ ಅಂಡ್ ಟೇಕ್ ಪಾಲಿಸಿ ಅನುಸರಿಸುತ್ತಿದ್ದ ಅಜ್ಜಿ ಅಂಗಡಿ ಮಾತ್ರ ನಿಜಕ್ಕೂ ಚಂದವೆ  ಚಂದ!  ದುಡ್ಡಿದ್ದರೆ ಮಾತ್ರ ಹೋಗಬಹುದಾಗಿತ್ತು. ನಮ್ಮ ಪ್ಲೇ ಗ್ರೌಂಡಿನ ಗೇಟಿನ ಹತ್ತಿರ ಅಜ್ಜಿ ಬುಟ್ಟಿಯಲ್ಲಿ ತರುತ್ತಿದ್ದ   ಹುಳಿಕಿತ್ತಳೆ ಹಣ್ಣು, ಉಪ್ಪಿನಲ್ಲಿ ನೆನೆಸಿದ ನೆಲ್ಲಿಕಾಯಿ,  ಕತ್ತರಿಸಿ ಉಪ್ಪು ಮೆಣಸಿನ ಪುಡಿ ಹಾಕಿದ ಸೀಬೆಕಾಯಿಗೆ ಮುಗಿಬೀಳುತ್ತಿದ್ದವರು ಎಷ್ಟೋ ಮಂದಿ ಇರುತ್ತಿದ್ದರು. ‘’ಒಂದು ಎಕ್ಟ್ರ ಕೊಡಿ” ಎಂದು ಗೋಗರೆಯುತ್ತಾ  ಹಲವರು ಸಮಯವಾದರೂ ಅಲ್ಲೇ ಇರುತ್ತಿದ್ದರು. ಇದನ್ನೆಲ್ಲ ಗ್ರೌಂಡ್ ಲೀಡರ್ ಗಮನಿಸಿ ವರದಿ ಮಾಡಬೇಕಾಗಿತ್ತು. ಪ್ಲೇಗ್ರೌಂಡಿನ ಬಳಿ ಕುಳಿತಿರುತ್ತಿದ್ದ ಅಜ್ಜಿಯ ಬಳಿ ಸಿಗುತ್ತಿದ್ದ ಕಿತ್ತಳೆ ಹುಳಿ ನಮ್ಮ ಹುಡ್ಗೀರನ್ನು ಮೊದಲನೆ ಪಿರಿಯಡ್‌ವರೆಗೆ ಆಕ್ಟಿವ್ ಅಗಿ ಇರಿಸುತ್ತಿದ್ದವು.  ಆ ಮಜಾನೆ ಬೇರೆ! ಆ ರಸವೈಭವವನ್ನು ಎಂದೂ ಮರೆಯಲಾಗದು.  ಮಧ್ಯಾಹ್ನದ ತರಗತಿಗೆ ಗಂಟೆ ಬಾರಿಸಿದರೆ ಅದುವೆ ನಿರುತ್ಸಾಹದ ಗಂಟೆಯಾಗಿರುತ್ತಿತ್ತು.

ಬಡ ವಿದ್ಯಾರ್ಥಿಗಳು ಹಣ ತರುತ್ತಿರಲಿಲ್ಲ ಹೋಗುತ್ತಿರಲಿಲ್ಲ! ಶ್ರೀಮಂತರ ವಿದ್ಯಾರ್ಥಿಗಳಿಗೆ ಇಲ್ಲೆಲ್ಲಾ ಹೋಗುವುದು   ಸ್ಟೇಟಸ್‌ಗೆ  ಕುಂದು  ಎನ್ನುವ ಬಿಂಕವಿತ್ತು.  ಹಾಗಾಗಿ ಇಂಥ ಒನ್ ಅವರ್ ಬ್ಯುಸಿನೆಸ್ ಶಾಪುಗಳ ನಮ್ರ ಗ್ರಾಹಕರು ಮಧ್ಯಮ ವರ್ಗದ ವಿದ್ಯಾರ್ಥಿಗಳು. ಈ ತೆರನಾದ ಅಂಗಡಿಗಳು ಈಗಲೂ ಶಾಲೆಗಳ ಬಳಿ ಬದಲಾದ ತಿಂಡಿಗಳ ಜೊತೆಗೆ ಇದ್ದು ಅನಾರೋಗ್ಯ ಹರಡುವ  ಕೇಂದ್ರಗಳಾಗುತ್ತಿವೆ. ವಿಪರ್ಯಾಸವೆಂದರೆ ಇದೇ ಒನ್ ಅವರ್ ಬ್ಯುಸಿನೆಸ್ ಮಾಡುವ ದೊಡ್ಡದೊಡ್ಡ ಕಾಲೇಜುಗಳ ಬಳಿಯ ಕೆಲವು ಕಾಂಡಿಮೆಂಟ್ ಹೆಸರಿನ ಬೋರ್ಡ್ ಹಾಕಿಕೊಂಡು ಸಿಗರೇಟ್  ಡ್ರಗ್ಸ್ ಸರಬರಾಜು ಮಾಡುವ ಅಂಗಡಿಗಳ ಕೆಲಸುದ್ದಿಗಳು ಮೇಲಿಂದ ಮೇಲೆ ಕೇಳಿ ಬರುತ್ತಿವೆ. ಯಾವ ವರ್ಗದ ವಿದ್ಯಾರ್ಥಿಗಳು ಶಾಲೆ ಬಳಿಯ ಅಂಗಡಿಗಳಿಗೆ ಹೋಗುತ್ತಿರಲಿಲ್ಲವೋ ಅಂಥವರು ರೂಪಾಂತರಿತ ಕಾಂಡಿಮೆಂಟ್ಸುಗಳಿಗೆ ಹೋಗಿ ದುಶ್ಚಟಗಳ ದಾಸರಾಗುತ್ತಿದ್ದಾರೆ. ತಿಳಿದಿದ್ದರೂ ಕಾಲೇಜಿನವರು ಜಾಣಕುರುಡರಾಗಿದ್ದಾರೆ! ಕಾಳಜಿ ಮರೆತು ಹಣಕ್ಕಾಗಿ ಕಾಂಡಿಮೆಂಟ್ಸ್‌ಗಳು ದುಶ್ಚಟ ಹಬ್ಬಿಸುವ  ಕೇಂದ್ರಗಳಾಗುತ್ತಿವೆ.  ಟೀನ್ ಏಜಿನ ರಸಮಯಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದ ಶೆರ್ಲಿನ್ ಮಿಠಾಯಿ ಮನೆ ಎಲ್ಲಿ? ದುಶ್ಚಟಗಳ   ಕೂಟ ಬಲಿಸುವ  ಈ ಕಾಲದ  ಕೆಲ ಕಾಂಡಿಮೆಂಟ್ಸುಗಳೆಲ್ಲಿ?

About The Author

ಸುಮಾವೀಣಾ

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, 'ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ�‌ ಗೋಪಾಲ�‌ ಬರೆದ ಈ ಭಾನ�ವಾರದ ಕತೆ “ಆಟ�
https://tinyurl.com/5575hs6r

ಮದ�ವೆ ಮದ�ವೆ ಆ ಸಿಹಿ ಪದವೆ
ಲಾಸ�‌ ವೇಗಸ�‌ನ ‘ಲಿಟಲ� ವೈಟ� ವೆಡ�ಡಿಂಗ� ಚಾಪೆಲ�’ ಕ�ರಿತ� ಅಚಲ ಸೇತ� ಬರಹ
https://tinyurl.com/2v28abrv

ಭಾರತಕ�ಕೆ ಹತ�ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜ� ಅಂಕಣ “ಅನೇಕ ಅಮೆರಿಕಾ� ನಿಮ�ಮ ಓದಿಗೆ
https://tinyurl.com/35mrwwsn

ಭವ�ಯ ಟಿ.ಎಸ�. ಬರೆದ ಈ ದಿನದ ಕವಿತೆ

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ