Advertisement
ಸಂಜಯ್ ಚಿತ್ರದುರ್ಗ ಬರೆದ ಈ ದಿನದ ಕವಿತೆ

ಸಂಜಯ್ ಚಿತ್ರದುರ್ಗ ಬರೆದ ಈ ದಿನದ ಕವಿತೆ

ಸಂಕ್ರಾಂತಿ

ಹಬ್ಬದ ಹುರುಪಿಲ್ಲದ ಬಿಜಿನೆಸ್ಸು ಕ್ಲಾಸಿನ
ಬಿಳಿ ಕಾಲರಿನ ಬಿಜಿ ಜನಗಳ
ಮಧ್ಯೆ
ಕಿಚ್ಚು ಹಾರುವ ದನಗಳಿಗೆಲ್ಲಿದೆ
ಸಂಕ್ರಾಂತಿಯ ಭಾಗ್ಯ

ಹಬ್ಬ ಬಂದರೆ ಸಾಕು ಸಿಹಿ
ತಿಂಡಿ ಕೇಳುತ್ತಿದ್ದ ಪುಟ್ಟನಿಗೀಗ
ಪಬ್ಜಿಯದೇ ಧ್ಯಾನ
ಬತ್ತಾಸು ಬೇಕಾಗಿದೆಯಾ ಅವನಿಗೀಗ

ರಜೆ ಬಂದರೆ ಸಾಕು
ಊಟಿ ಹಾದಿ ಹಿಡಿಯುವ ಐಟಿ ತರುಣರಿಗೆ
ಹಬ್ಬದೂಟದ ರುಚಿಗೆ ಜೊಲ್ಲು
ಸುರಿಸಲಾದರೂ ಪುರುಸೊತ್ತೆಲ್ಲಿದೆ ಈಗ

ಹಳ್ಳಿಯ ಸಗಣಿ ವಾಸನೆಯೇ ಅಸಹ್ಯವೆನ್ನುವ
ಮೋರಿಯ ಪಕ್ಕದಲ್ಲೇ ಮನೆ ಕಟ್ಟಿಕೊಂಡ
ಮಹಾನಗರಗಳ ಮಂದಿಗೆ
ಸೂಪರ್ ಮಾಲಿನ ಎಳ್ಳು ಬೆಲ್ಲವೇ ಸರ್ವಸ್ವ

ಸಂಜಯ್‌ ಮೂಲತಃ ಚಿತ್ರದುರ್ಗ ಜಿಲ್ಲೆಯವರು.
ಸದ್ಯ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.
ಕನ್ನಡ ಸಾಹಿತ್ಯ, ಸಿನಿಮಾ ಮತ್ತು ಬರವಣಿಗೆಯಲ್ಲಿ ಆಸಕ್ತಿ.
ಕತೆ, ಕವನ, ಬಿಡಿ ಬರಹ ಹವ್ಯಾಸಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ