ಅಜ್ಜಿ ಹಿತ್ತಿಲೆಂಬ ಉಪವನ: ಸುಮಾವೀಣಾ ಅಂಕಣ
ಅಡುಗೆಮನೆಯಿಂದ ತರಕಾರಿ ಸಿಪ್ಪೆ ಅದೂ ಇದು ಎಸೆಯಲು ಚಿಕ್ಕ ಗುಂಡಿಯನ್ನು ಅಜ್ಜಿ ಮಾಡಿದ್ದಳು. ಆದರೆ ಮನದ ಕಸವನ್ನು ತಾನೇ ಹೊತ್ತು ತಿರುಗುತ್ತಿದ್ದಳು. ಹಿತ್ತಿಲ ನಡುವೆ ಅರಳುತ್ತಿದ್ದ ಗಂಟೆಹೂವಿನ ಗಿಡದತ್ತವೇ ಅಜ್ಜಿ ಹೆಚ್ಚು ಹೊತ್ತು ಕಳೆದಿದ್ದು. ಅದಾಗಲೇ ಅವಳಿಗೆ ಮರೆವು ಆವರಿಸಿತ್ತು, ಪಾರ್ಶ್ವವಾಯು ಪೀಡಿತಳಾಗಿ ಸ್ವಾದೀನ ಕಳೆದುಕೊಂಡಿದ್ದ ಬಲಗೈ ಬಳೆಕಳಚಿಕೊಂಡು, ಫಳಫಳನೆ ಹೊಳೆಯುತ್ತಿದ್ದ ಓಲೆಗಳನ್ನು ಕಳಚಿದ ಕಿವಿಗಳು ದೊಡ್ಡ ತೂತಿನೊಂದಿಗೆ ಬಿಕೋ ಅನ್ನಿಸುತ್ತಿದ್ದವು. ಎಡಗೈಯಲ್ಲಿ ಮಾಡಿಗೆ ಕಟ್ಟಿಇಳಿ ಬಿಟ್ಟ ಹಗ್ಗವನಿಡಿದು ಜಗ್ಗುತ್ತಿದ್ದ ಯಾವತ್ತೂ ಕನ್ನಡಕವನ್ನೇ ತೆಗೆದಿರದ ಆ ಮುಖ ನನ್ನಜ್ಜಿಯದಲ್ಲ.
ಸುಮಾವೀಣಾ ಬರೆಯುವ “ನುಡಿನಲಿವು” ಅಂಕಣ
ಬಾಡಿ ಶೇಮಿಂಗ್ ಎಂಬ ಪೀಡೆ!: ಸುಕನ್ಯಾ ಕನಾರಳ್ಳಿ ಅಂಕಣ
ಹೆಣ್ಣಾದವಳು ತೆಳ್ಳಗೆ ಬೆಳ್ಳಗೆ ಬಳುಕಬೇಕು ಎನ್ನುವುದು ಯಾರ ಕಣ್ಣಿನ ಹಿತಕ್ಕೋಸ್ಕರ? ಚರ್ಮದ ಬಣ್ಣದ ನೆಲೆಯಲ್ಲಿ ಅಂತೂ ಅದು ಇನ್ನಷ್ಟು ಘೋರ. ಕಪ್ಪು ಬಣ್ಣದವರಿಗೆ ಇನ್ನಿಲ್ಲದಂತ ಕೀಳರಿಮೆಯನ್ನು ಹುಟ್ಟಿಸಿದ್ದರ ಫಲವಾಗಿ ಫೇರ್ ಅಂಡ್ ಲವ್ಲಿ ಎಂಬ ಕಂಪೆನಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಾಪಾರಗಳಲ್ಲಿ ಒಂದಾಗಿ ಹೋಗಿದ್ದು ನಮ್ಮೆದುರಿನ ವಾಸ್ತವ. ಒಮ್ಮೆ ನನ್ನ ಸಹೋದ್ಯೋಗಿ ತಮ್ಮ ಮಗನಿಗೆ ಸಿಕ್ಕ ಹೆಣ್ಣಿನ ಬಗ್ಗೆ ಹೇಳುತ್ತಾ, ‘ಸ್ವಲ್ಪ ಕಪ್ಪಿದಾಳೆ, ಆದರೂ ಪರವಾಗಿಲ್ಲ, ಲಕ್ಷಣವಿದೆ,’ ಎಂದಾಗ ವಿದ್ಯಾವಂತ, ಪ್ರಜ್ಞಾವಂತ ಹೆಣ್ಮಕ್ಕಳೂ ಸಹ ಅದೇ ಹಳಸಲು ಮಂತ್ರವನ್ನ ಪಠಿಸುತ್ತಾರಲ್ಲ ಅಂತ ಆಶ್ಚರ್ಯವಾಗಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ
ಬಲುಘೋರವೋ ನಮ್ಮ ನಾಳೆ: ವಿನಾಯಕ ಅರಳಸುರಳಿ ಅಂಕಣ
ಎರೆಡು ದಶಕದಿಂದೀಚೆಗೆ ನಗರೀಕರಣದ ಹೆಸರಿನಲ್ಲಿ ತಾವು ಕಳೆದುಕೊಂಡಿರುವುದೇನೆನ್ನುವುದು ಇಲ್ಲಿ ಕನಿಷ್ಠ ಕೆಲ ಮಂದಿಗಾದರೂ ಅರ್ಥವಾಗಿದೆ. ‘ಕಳೆದುಕೊಳ್ಳುವಷ್ಟು ಹಸಿರೀಗ ನಮ್ಮ ಬಳಿ ಇಲ್ಲ’ ಎಂಬುದು ಅರಿವಾಗಿದೆ. ಆದರೆ ಸದಾ ಹಸಿರಿನ ನೆರಳಿನಲ್ಲೇ ಬದುಕುತ್ತಿರುವ, ಫಲಾಹಾರಗಳನ್ನು ನೇರ ಮರ-ಗಿಡಗಳಿಂದಲೇ ಕಿತ್ತು ತಿನ್ನುತ್ತಿರುವ ನಮ್ಮ ಹಳ್ಳಿಗರಲ್ಲೇಕೆ ಈ ಕನಿಷ್ಠ ಪ್ರಜ್ಞೆಯೂ ಇಲ್ಲ? ಹಸಿರಿನ ತಂಪು ತೊಟ್ಟಿಲುಗಳಂತಿದ್ದ ಹಳ್ಳಿಗಳೀಗ ಕಳೆದ ಕೆಲ ವರ್ಷಗಳಲ್ಲಿ ನಗರವಾಗುವ ಹುಚ್ಚು ಧಾವಂತಕ್ಕೆ ಬಿದ್ದಂತೆ ಬದಲಾಗುತ್ತಿದೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”
ಇಂದಿಗೂ ಬಂಧಿತಳಾದ ಹೆಣ್ಣು ಹಾಗೂ ನೇಮಿಚಂದ್ರರ ಕಥೆಗಳ ನೆನಪು…..: ಡಾ. ಎಲ್.ಜಿ. ಮೀರಾ ಅಂಕಣ
“…..ಮಹಿಳೆ ತನ್ನ ಕೆಲಸವನ್ನು ಮಾಡುವುದು ತನ್ನ ಖುಷಿಗೆ, ತನ್ನ ವಿದ್ಯೆ ಓದಿನ ಸದುಪಯೋಗಕ್ಕೆ, ತನ್ನದಾದ ಪ್ರತ್ಯೇಕ ವ್ಯಕ್ತಿತ್ವ ವಿಕಾಸಕ್ಕೆ, ತನ್ನ ಸಾಮರ್ಥ್ಯ, ಯೋಗ್ಯತೆಗಳ ಪೂರ್ಣ ಉಪಯೋಗಕ್ಕೆ ಎಂಬುದು ನಮ್ಮಲ್ಲಿ ಅಪರಿಚಿತ ವಿಷಯ… ಮಹಿಳೆಯ ಬಾಲ್ಯದಿಂದ ಯೌವನದವರೆಗೆ ಅಕೆಯ ಪ್ರತಿ ತಯಾರಿ ಎಂದೋ ಬರುವ ಗಂಡನ ಬೇಡಿಕೆ, ಬಯಕೆಗಳಿಗೆ ಅನುಕೂಲಕರವಾಗಿ ತನ್ನನ್ನು ತಾನು ರೂಪಿಸಿಕೊಳ್ಳುವುದು. ನಾನು ಚಿತ್ರಿಸಿದ ಸ್ತ್ರೀಪಾತ್ರವು ಇಂಥ ಎರಡನೆ ಅಸ್ತಿತ್ವವನ್ನೊಮ್ಮೆ ಝಾಡಿಸಿ, ಗಂಡ ಮಕ್ಕಳ ಬೆಳಕಲ್ಲೆ ಬೆಳಗಬೇಕಾದ ಗ್ರಹವಾಗಿ ತಾನೇನೂ ಉಳಿಯಬೇಕಿಲ್ಲ…
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತೆರಡನೆಯ ಬರಹ
ಶರೀಫ-ಬಿಶಪ್ಪ ಮತ್ತು ರಾಬಿನ್ ಹುಡ್: ಸುಕನ್ಯಾ ಕನಾರಳ್ಳಿ ಅಂಕಣ
ಬೆಳಕು ತೋರಿಸಿ, ಜ್ಞಾನವನ್ನು ಹೊಳೆಸಬೇಕಾದ ಆಧ್ಯಾತ್ಮ ಕೇಂದ್ರಗಳು ಶರೀಫನ ಜೊತೆ ಸೇರಿಕೊಂಡು ಸಮೂಹಸನ್ನಿ ಹಿಡಿಸುವಲ್ಲಿ ಯಶಸ್ವಿಯಾಗುತ್ತವೆ! ನಾನು ಹೈಸ್ಕೂಲ್ ಓದಿದ ಪಟ್ಟಣಕ್ಕೆ ಅಂದು ಇಂದಿರಾಗಾಂಧಿ ಬಂದಿದ್ದರು. ಭಾಷಣ ಕೇಳಲು ಉಸಿರು ಬಿಗಿ ಹಿಡಿದು ಓಡಿದ್ದೇ ಓಡಿದ್ದು. ಅಲ್ಲಿ ತಲುಪುವ ಹೊತ್ತಿಗೆ ಭಾಷಣ ಮುಗಿದು ಹೊಸದಾಗಿ ನಿರ್ಮಿತವಾಗಿದ್ದ ಹೆಲಿಪ್ಯಾಡಿನತ್ತ ಹೋದರು ಎಂದು ತಿಳಿದು ಹೊ ಎಂದು ಅತ್ತ ಕಡೆ ದೌಡಾಯಿಸಿದ್ದೆವು. ಇನ್ನೂ ಅರಿವು ಮೂಡಿರದ ವಯಸ್ಸು. ದಿನದ ಕೊನೆಯಲ್ಲಿ ಇದೆಂತಾ ಹುಚ್ಚಾಟ ಅಂತ ಅನ್ನಿಸಿದ್ದು ಮಾತ್ರ ನಿಜ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ತೈದನೆಯ ಬರಹ
ಆ ರಿಮೋಟು ನಮ್ಮ ಕೈಯಲ್ಲೇ ಇದೆ…: ವಿನಾಯಕ ಅರಳಸುರಳಿ ಅಂಕಣ
ಅದೇನೋ ಅಸಹನೆ… ಈ ಸಮಾಜದ ಮೇಲೆ. ಜನರ ಮೇಲೆ. ಸುತ್ತಲಿನವರ ಮೇಲೆ. ಕೊನೆಗೆ ನನ್ನ ಮೇಲೆಯೂ. ಇವೆಲ್ಲದರ ಮೂಲ ಎಲ್ಲೆಂದು ನೋಡುತ್ತ ಹೋದಂತೆ ಬಂದು ತಲುಪಿದ್ದು ದಿನದ ಕೆಲವೇ ಕೆಲವು ಕ್ಷಣಗಳ ಬಿಡುವಿನಲ್ಲಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿರುವ ಸೋಶಿಯಲ್ ಮೀಡಿಯಾದ ಎದುರು. ನೋಡುವ ಎಂದು ಅದರಲ್ಲಿನ ಜಾಳನ್ನೆಲ್ಲ ‘ನಾಟ್ ಇಂಟರೆಸ್ಟೆಡ್’ ಎಂದು ಬದಿಗೆ ಸರಿಸುತ್ತ ಬಂದೆ. ಕಮೆಂಟು ಸೆಕ್ಷನ್ನ ಬಾಗಿಲಿನ ಹಿಡಿಕೆಗೆ ಕೈ ತಗುಲಿಸಲೇ ಇಲ್ಲ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”
ಎರಡನೆಯದಕ್ಕೆ ನೆನಪು ನೂರೆಂಟು!: ಸುಕನ್ಯಾ ಕನಾರಳ್ಳಿ ಅಂಕಣ
ಮೊದಲನೆಯದಕ್ಕೆ ಬಾಯಿರುಚಿ ಅಂತೇನೂ ಇರಲಿಲ್ಲ. ಎರಡನೆದು ಮಹಾ ದೋಸೆಪ್ರಿಯೆ. ಮನೆಪಾಠದ ಮೇಷ್ಟ್ರು ಅಟ್ಟದ ಮೇಲೆ ದೊಡ್ಡ ಕುಟುಂಬದ ಅಷ್ಟೂ ಮಕ್ಕಳಿಗೆ ಪಾಠ ಹೇಳುತ್ತಿದ್ದರೆ, ಎರಡನೆದು ಕೆಳಗಿನ ಅಡಿಗೆ ಮನೆಯಿಂದ ಚೋಂಯ್ ಶಬ್ದ ಕೇಳಿಸಿದ್ದೇ ಎಷ್ಟು ದೋಸೆಗಳು ಕಾವಲಿ ಮೇಲೆ ಬಿದ್ದವು ಅಂತ ಮನಸ್ಸಿನಲ್ಲೇ ಎಣಿಸಿಕೊಂಡಿತ್ತು. ಪಾಠವೆಲ್ಲ ಮುಗಿದು ಮೇಷ್ಟ್ರು ಹೋದ ಮೇಲೆ ಎರಡನೆದು ದಡಬಡ ಅಟ್ಟದ ಮೆಟ್ಟಿಲು ಇಳಿದು ಹೋದರೆ ಅಡಿಗೆಮನೆಯಲ್ಲಿ ದೋಸೆ ಕಾವಲಿ ಎಲ್ಲೋ ಮಿಣ್ಣಗೆ ಕೂತಿದ್ದು ಕಂಡು ಹೊ ಎಂದು ಅಳಹತ್ತಿತಲ್ಲ!
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ
ಕೆ.ಎಸ್.ನ ಕಾವ್ಯದ ಸೊಲ್ಲು – ಕನ್ನಡತೋಟದ ಮಲ್ಲಿಗೆಯರಳು: ಎಲ್. ಜಿ. ಮೀರಾ ಅಂಕಣ
ಕೆ.ಎಸ್.ನ. ಅವರ `ಮೈಸೂರು ಮಲ್ಲಿಗೆ’ ಕವನ ಸಂಕಲನವು ನಮ್ಮ ಸಾಹಿತ್ಯ ಕ್ಷೇತ್ರದ ಒಂದು ಸುಕುಮಾರ ಬೆರಗು! ಹಿಂದಿರುಗಿ ನೋಡಿದರೆ ಇಂಥದೊಂದು ಘಟಿತ ಸಾಧ್ಯ ಆಗಿದ್ದು ಹೇಗೆ ಎಂದು ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ಹೌದು, ಡಾ.ಎಚ್.ಎಸ್.ವಿ. ಅವರು ಸರಿಯಾಗಿ ಗುರುತಿಸಿರುವಂತೆ ಆಚಾರ್ಯ ಬಿ.ಎಂ.ಶ್ರೀ ಅವರ ಯುಗಪ್ರವರ್ತಕ ಅನುವಾದ ಕೃತಿ `ಇಂಗ್ಲಿಷ್ ಗೀತಗಳು’ ಹಾಗೂ ತೀ.ನಂ.ಶ್ರಿ. ಅವರ `ಒಲುಮೆ’ ಕವನ ಸಂಕಲನಗಳ ಪ್ರಭಾವ `ಮೈಸೂರು ಮಲ್ಲಿಗೆ’ಯ ಮೇಲಿರುವ ಹಾಗಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತೊಂದನೆಯ ಬರಹ
ಶೆರ್ಲಿನ್ ಮಿಠಾಯಿ ಮನೆ; ಒನ್ ಅವರ್ ಬ್ಯುಸಿನೆಸ್ ಶಾಪ್: ಸುಮಾವೀಣಾ ಅಂಕಣ
ಶೆರ್ಲಿನ್ ಮಿಠಾಯಿ ಮನೆಯ ತಾತ ಟಾಕು ಠೀಕಾಗಿ ಡ್ರೆಸ್ ಮಾಡಿಕೊಂಡಿರುತ್ತಿದ್ದರು. ವ್ಯವಹಾರವನ್ನೂ ಪಕ್ಕಾ ಮಾಡುತ್ತಿದ್ದರು. ಐದು ಪೈಸೆಯನ್ನು ಕೊಡಬೇಕಾಗಿದ್ದರೂ ಮುಖ ನೆನಪಿನಲ್ಲಿಟ್ಟುಕೊಂಡು ಕೊಟ್ಟ ಅಂತೆಯೇ ವಸೂಲಿ ಮಾಡಿದ ಉದಾಹರಣೆಗಳು ಇವೆ. ಟೆಸ್ಟುಗಳಲ್ಲಿ ಔಟ್ ಆಫ್ ಬಂದಾಗ ಎದುರಾಳಿಗಳಿಗಿಂತ ಅರ್ಧ ಅಂಕ ಹೆಚ್ಚಾಗಿ ಬಂದರೂ ಆ ದಿನ ಶೆರ್ಲಿನ್ ಮಿಠಾಯಿ ಮನೆಯಲ್ಲಿ ಟೀನ್ ಏಜರುಗಳ ಟ್ರೀಟ್. ಟೀನೇಜಿನ ರಸಮಯ ಸಂಗತಿಗಳನ್ನು ಹಂಚಿಕೊಳ್ಳುವ ರಸಮಯ ಪಾಯಿಂಟ್ ಸರ್ಲಿನ ಮಿಠಾಯಿ ಮನೆ ಆಗಿತ್ತು.
ಸುಮಾವೀಣಾ ಹೊಸ ಅಂಕಣ “ನುಡಿನಲಿವು”










