ಅನುಬಂಧವೊಂದು ಕೊರಳ ಉರುಳಾಗುವ ಹೊತ್ತು: ಮಾಲತಿ ಶಶಿಧರ್ ಅಂಕಣ
ಮಳೆ ನಿಂತ ಮಾರನೇ ದಿನದ ಸ್ವರ್ಗವೀಗ ಅಜ್ಜಿಯ ಕತೆಯಲ್ಲಿ ಬರುತ್ತಿದ್ದ ನರಕದಂತೆ ಭಾಸವಾಗುತ್ತಿದೆ. ಸೂರ್ಯ ಮುಳುಗಿದ ಮೇಲೆ ಹನಿ ಬೀಳುವ ಸದ್ದಿಗೆ ಪುಳಕಗೊಳ್ಳುತ್ತಿದ್ದ ಹೃದಯ ಅಕ್ಕ ಪಕ್ಕದವರಿಗೂ ಕೇಳಿಬಿಡುವಂತೆ ಒಡೆದುಕೊಳ್ಳಲು ಶುರು ಮಾಡಿದೆ. ನಿದ್ದೆಯೇ ಇಲ್ಲದ ಅವಳಿಗೀಗ ಅಲಾರಾಂ ಅವಶ್ಯಕತೆಯಿಲ್ಲ. ಹೊರಗೆ ಕಾಲಿಟ್ಟರೆ ಮುದ ಗೊಳಿಸುತ್ತಿದ್ದ ಚಳಿ ಈಗ ಬೆನ್ನ ಮೂಳೆಯನ್ನು ಕೊರೆಯುತ್ತದೆ.
ಮಾಲತಿ ಶಶಿಧರ್ ಬರೆಯುವ ಅಂಕಣ “ಹೊಳೆವ ನದಿ”ಯಲ್ಲಿ ಹೊಸ ಬರಹ
ಐವತ್ತರ ದಶಕದ ಕ್ರಿಕೆಟ್ನ ಧೀಮಂತರು: ಇ.ಆರ್. ರಾಮಚಂದ್ರನ್ ಅಂಕಣ
ಭಾರತ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆದಿಶೇಷರನ್ನು ಆಯ್ಕೆ ಮಾಡಲಾಗಿತ್ತು. ಆ ದಿನಗಳಲ್ಲಿ ಹೆಚ್ಚು ಕಡಿಮೆ ತಂಡದ ಸದಸ್ಯರೆಲ್ಲಾ ಬೊಂಬಾಯಿನವರಾಗಿದ್ದರು. ಬೇರೆ ರಾಜ್ಯಗಳಿಂದ ಒಬ್ಬರೋ ಇಬ್ಬರನ್ನೋ ಆಯ್ಕೆ ಮಾಡುತ್ತಿದ್ದರು. ಆಗ ತಂಡದಲ್ಲಿ ತಾರತಮ್ಯ ಮತ್ತು ಭೇದ ಭಾವನೆಗಳಿದ್ದು ಎಷ್ಟೋಸಲ ಬೇರೆ ರಾಜ್ಯದವರು ಟೀಮಿನ ಜೊತೆಗೆ ಪ್ರವಾಸಕ್ಕೆ ಹೋಗಲು ಹಿಂಜರಿಯುತ್ತಿದ್ದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಐವತ್ತರ ದಶಕದ ಕ್ರಿಕೆಟ್ನ ಧೀಮಂತರ ಕುರಿತ ಬರಹ ನಿಮ್ಮ ಓದಿಗೆ
ಲೋಕದ ಚಿಂತಿ ಯಾಕ ಮಾಡತಿ..?: ಎಸ್ ನಾಗಶ್ರೀ ಅಜಯ್ ಅಂಕಣ
ಹತ್ತು ಜನರ ನಡುವಿದ್ದೂ ಅವರಿವರಂತಾಗದೆ, ತಮ್ಮ ಮಿತಿಯಲ್ಲಿ ಆಗುವ ಸಕಲವನ್ನೂ ಸಂತೋಷ, ಸಮಾಧಾನದಿಂದ ಮಾಡುತ್ತಾ, ಮೆಚ್ಚುಗೆಗೂ ಹಾತೊರೆಯದೆ, ಯಾರನ್ನೂ ದೂರದೆ ಸಂತರಂತೆ ಬದುಕಿದವರಿದ್ದಾರೆ. ಮನೆಮನೆಗಳಲ್ಲಿ ಅಂತಹವರನ್ನು ಕಂಡಿರುತ್ತೇವೆ. ಸದಾ ಗಿಜಿಗುಡುವ ಮನೆ, ಬಂದು ಹೋಗುವವರು, ಓದಲೆಂದು, ಕೆಲಸಕ್ಕೆಂದು ಬಂದು ಉಳಿದ ಬಂಧುಗಳ ಮಕ್ಕಳು, ದೇವಸ್ಥಾನದ ಪ್ರಸಾದ, ಚರಪು ಮಾಡುವ ಜವಾಬ್ದಾರಿ, ರೋಗಿಗಳ ಆರೈಕೆ, ಹಿರಿಯರ ಕಾಳಜಿ, ದಿನಂಪ್ರತಿ ಹದಿನೈದು ಇಪ್ಪತ್ತು ಜನರಿಗೆ ಕಡಿಮೆಯಿಲ್ಲದಂತೆ ಊಟೋಪಚಾರ…
ಎಸ್ ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ
ಗ್ಲೋಬಲ್-ಲೋಕಲ್ ಊರುಗಳ ಉಪಕಥೆಗಳು: ವಿನತೆ ಶರ್ಮ ಅಂಕಣ
ಇವೆಲ್ಲವನ್ನು ಹಿಂದಿನ, ಎಂದಿನ ಕುತೂಹಲದಿಂದ ನೋಡುತ್ತಾ ನಿಲ್ಲುವ ನನ್ನನ್ನು ಅನುಮಾನದಿಂದ ನೋಡುವ ಜನರು ಜಾಸ್ತಿಯಾಗಿರುವುದು ಗಮನಕ್ಕೆ ಬರುತ್ತದೆ. ಯಾರು ನೀವು, ಇಲ್ಲಿ ಯಾಕೆ ನಿಂತು ನಮ್ಮನ್ನು ನೋಡುತ್ತಿದ್ದೀರಿ, ನಿಮ್ಮಷ್ಟಕ್ಕೆ ನೀವು ನಿಮ್ಮ ಕೆಲಸ ನೋಡಿಕೊಂಡು ಮುಂದೆ ಸಾಗಿ, ಎಂದು ಕೆಲವರು ಕೇಳುವಾಗ ಜನಜೀವನದ ಮನಸ್ಸುಗಳ ಬೇರುಗಳಿಗೆ ಅಂಟಿಕೊಂಡಿರುವ ಮಣ್ಣು ಸಡಿಲವಾಗಿರುವುದು ಕಾಣುತ್ತದೆ. ನಮ್ಮಷ್ಟಕ್ಕೆ ನಾವು, ನಿಮ್ಮಷ್ಟಕ್ಕೆ ನೀವು ಎನ್ನುವ ಮಾತನ್ನು ಕೇಳಿದಾಗ ಯಾಕೋ ಮುಂದುವರೆದ ಪಾಶ್ಚಾತ್ಯ ದೇಶ-ಸಮಾಜಗಳ ಬಂಡವಾಳಶಾಹಿ ಧೋರಣೆ ನೆನಪಾಗುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪೆಟ್ಟಿಗೆ ಅಂಗಡಿಯಲ್ಲಿ ಭದ್ರವಾದ ನೆನಪುಗಳು: ಮಾಲತಿ ಶಶಿಧರ್ ಅಂಕಣ
ಅವರು ದೂರ ಹೋಗುತ್ತಾ ಕಣ್ಮರೆಯಾಗುತ್ತಿದ್ದ ಹಾಗೆ ನನ್ನ ಕುಚುಕು ಗೆಳತಿಯರು ಒಗ್ಗಟ್ಟಿನಿಂದ ನನಗಿಂತಲೂ ಎತ್ತರದಲ್ಲಿದ್ದ ಬಾಗಿಲು ಹತ್ತಲು ಸಹಕರಿದ್ದರು. ಅದೇನಾಯಿತೋ ಏನೋ ಅಷ್ಟರಲ್ಲೇ ಹೋದ ತಾತ ಮಗ ಗಿರಿಯಣ್ಣನ ಜೊತೆ tvs ಲೂನಾದಲ್ಲಿ ಬರುವುದನ್ನು ಕಂಡ ನನ್ನ ಮಿತ್ರದ್ರೋಹಿಗಳು ನನ್ನನ್ನೊಬ್ಬಳನ್ನೇ ಬಿಟ್ಟು ಓಡಿ ಹೋಗಿ ಪಕ್ಕದಲ್ಲೇ ಇದ್ದ ತೃಪ್ತಿ ಕ್ಯಾಂಟೀನ್ ಕಟ್ಟಡದ ಮಹಡಿ ಹತ್ತಿ ಅವಿತುಕೊಂಡು ಬಿಟ್ಟರು. ಯಾರ ಸಹಾಯವು ಇಲ್ಲದೇ ಒಳಗಿಂದ ಹತ್ತಿ ಆಚೆ ನೆಗೆಯಲು ಬಾರದೆ ಪರದಾಡುತ್ತಿದ್ದ ನನ್ನನ್ನ ತಾತ ಒಂದೇ ಹಿಡಿತದಲ್ಲಿ ಎತ್ತಿ ಆಚೆ ಹಾಕಿದ್ದರು.
ಮಾಲತಿ ಶಶಿಧರ್ ಬರೆಯುವ “ಹೊಳೆವ ನದಿ” ಅಂಕಣ
ವರ್ಲ್ಡ್ ಟೆಸ್ಟ್ ಚಾಂಪಿಯನ್ಷಿಪ್: ಇ.ಆರ್. ರಾಮಚಂದ್ರನ್ ಅಂಕಣ
ಟೆಸ್ಟ್ ಕ್ರಿಕೆಟ್ ಚೆನ್ನಾಗಿ ಆಡದಿದ್ದರೆ, ಬಿಸಿಸಿಐಅನ್ನು ಬಹಳ ಭಾರತೀಯರೇ ದೂರುತ್ತಾರೆ. ಒಂದು ರೀತಿಯಲ್ಲಿ ಇದು ಸಹಜ. ಭಾರತ ಟೆಸ್ಟ್ ಮ್ಯಾಚ್ಗಳನ್ನು ಚೆನ್ನಾಗಿ ಆಡುತ್ತಿಲ್ಲ ಅದಕ್ಕೆ ಹಣದ ವಾಸನೆ ಬಂದಿದೆ, ಅಲ್ಲಿ ಆಡುವವರೆಲ್ಲಾ ಹಣದಾಸೆಯಿಂದ ಟೆಸ್ಟ್ ಚೆನ್ನಾಗಿ ಆಡುತ್ತಿಲ್ಲ ಎಂಬ ಮಾತೂ ಈಗೀಗ ಕೇಳಿಬರುತ್ತಿದೆ. ಈ ಮಧ್ಯೆ ಭಾರತ ಯಾವ ಕಪ್ /ಟ್ರೋಫಿ, ಅದರಲ್ಲೂ ಐಸಿಸಿ ಟ್ರೋಫಿಯನ್ನು ಕಳೆದ 10 ವರ್ಷದಿಂದ ಗೆದ್ದಿಲ್ಲ. ಅದಕ್ಕೆ ಎಷ್ಟೋ ಅಭಿಮಾನಿಗಳೂ ಐಪಿಎಲ್ನ ಜರಿಯುತ್ತಾರೆ!
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ
ಸಾವಿರ ಕಥೆಗಳ ಸಂಸಾರ: ಎಸ್. ನಾಗಶ್ರೀ ಅಜಯ್ ಅಂಕಣ
ಎಷ್ಟೋ ಕಥೆಗಳಲ್ಲಿ ನಾವೇ ಮುಖ್ಯವೋ, ಅಮುಖ್ಯವೋ ಒಂದು ಪಾತ್ರವಾಗಿ ಚಲಿಸುತ್ತಿರುತ್ತೇವೆ. ಅಸಲಿಗೆ ನಮ್ಮ ಸತ್ವಪರೀಕ್ಷೆಯಾಗುವುದು, ಇಂತಹ ದ್ವಂದ್ವಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಜವಾಬ್ದಾರಿ ನಮ್ಮ ಹೆಗಲೇರಿದಾಗ. ಹಾವು ಸಾಯಬಾರದು. ಕೋಲು ಮುರಿಯಬಾರದು ಎನ್ನುವ ನಾಜೂಕಯ್ಯರು ಹೇಗೋ ಬಚಾವಾಗುತ್ತಾರೆ. ಇದ್ದರೆ ಒಂದು ಕಡೆ. ಎರಡು ದೋಣಿಯ ಪಯಣ ನಮಗಲ್ಲ ಎನ್ನುವವರಿಗೆ ಸವಾಲು ಹೆಚ್ಚಿನದು. ಆದರೆ ಬಹಳಷ್ಟು ಸಲ ನಮ್ಮ ಪ್ರಯತ್ನಕ್ಕಿಂತ ಆ ಕ್ಷಣದ ಬಲವೇ ಹೆಚ್ಚಾಗಿ, ತುರ್ತು ಪರಿಸ್ಥಿತಿಯಲ್ಲಿ ಎರಡರಲ್ಲೊಂದು ತೀರ್ಮಾನವಾಗಿಬಿಟ್ಟಿರುತ್ತದೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ
ಬ್ರಿಸ್ಬೇನ್ – ಬೆಂಗಳೂರು ಕೊಂಡಿ ಕಥೆಗಳು: ವಿನತೆ ಶರ್ಮ ಅಂಕಣ
ಇಲ್ಲಿ ಕಾಣುವುದು ಹಳತೊಂದು ಸಮಾಜದ ಹೆಗ್ಗುರುತಾದ ಕಸುಬುಗಾರಿಕೆಗಳ ಮುಂದುವರಿಕೆ. ಇಪ್ಪತ್ತೊಂದನೇ ಶತಮಾನದ ಮಾಲ್, ಸೂಪರ್ ಮಾರ್ಕೆಟ್ ಮತ್ತು ಮೆಟ್ರೋಗಳ ಪ್ರಪಂಚದಲ್ಲಿ ಐಟಿ ಮತ್ತು ಗ್ಲೋಬಲ್ ಕಾರ್ಪೊರೇಟ್ ಪೈಪೋಟಿಗಳ ನಡುವೆ ಬದುಕುತ್ತಾ ಇನ್ನೂ ಕಂಗೊಳಿಸುತ್ತಿರುವ ಅಂಕುಡೊಂಕು ಪೇಟೆ ಬೀದಿಗಳಲ್ಲಿ ಕಾರ್ಯತತ್ಪರರಾಗಿರುವ ಸಾವಿರಾರು ಕಸುಬುದಾರರನ್ನು ನೋಡಿದರೆ ಕ್ಯಾಪಿಟಲಿಸ್ಟ್ ಪ್ರಪಂಚದ ಟೊಳ್ಳು, ಭ್ರಮೆ ಮನಸ್ಸಿಗೆ ತಟ್ಟುತ್ತದೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ
ಯಾರು ಹಿತವರು ನಮಗೆ?: ಗುರುಪ್ರಸಾದ ಕುರ್ತಕೋಟಿ ಅಂಕಣ
ಪಟ್ಟಣಗಳಲ್ಲಿ ಹಲವು ವರ್ಷಗಳು ಇದ್ದು ರೂಢಿಯಾದವರಿಗೆ ಹಳ್ಳಿಗೆ ಹೋಗಿ ಇರುವುದು ಅಷ್ಟು ಸುಲಭ ಅಲ್ಲ.. ಸೌಲಭ್ಯಗಳು ಅಲ್ಲಿ ಸುಧಾರಿಸಿವೆ, ಸಿಗ್ನಲ್ನಿಂದ ಹಿಡಿದು ಹಲವಾರು ವ್ಯವಸ್ಥೆಗಳು ಈಗ ಅಲ್ಲಿವೆಯಾದರೂ ಜನರ ಮನಸ್ಥಿತಿ ಹಾಗೂ ಕೆಲವು ಪ್ರಶ್ನೆಗಳು ಹೈರಾಣು ಮಾಡುತ್ತವೆ! ಆದರೆ ಕ್ರಮೇಣ ಅದನ್ನು ತಮಾಷೆಯಾಗಿ ತೆಗೆದುಕೊಂಡರೆ ನಮ್ಮ ತಲೆ ಹಾಳು ಮಾಡಿಕೊಳ್ಳುವುದು ತಪ್ಪುತ್ತದೆ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣದ ಹೊಸ ಬರಹ ನಿಮ್ಮ ಓದಿಗೆ










