ಲಸಿಕೆ ಪರ-ವಿರೋಧಗಳ ನಡುವೆ ಹಬ್ಬ, ಮಳೆ, ಗಡಿ ತೆರವು
ಈ ಮಧ್ಯೆ ಒಳ್ಳೆಯ ಸುದ್ದಿಯೆಂದರೆ ಕೇಂದ್ರ ಸರಕಾರವು ದೇಶದ ಅಂತಾರಾಷ್ಟ್ರೀಯ ಗಡಿಯನ್ನು ತೆರೆಯುವುದಾಗಿ ಘೋಷಿಸಿದೆ. ರಾಜಕೀಯ ಬರಡು ವಾತಾವರಣದಲ್ಲಿ ಈ ಘೋಷಣೆ ಒಂದಷ್ಟು ಸಂಚಲನವನ್ನು ಹುಟ್ಟಿಸಿದೆ. ನವೆಂಬರ್ ತಿಂಗಳಿನಲ್ಲಿ ಕ್ರಿಸ್ಮಸ್ ಹಬ್ಬದ ತಯಾರಿ ಆರಂಭವಾಗುತ್ತ ಜನರೆಲ್ಲರೂ ಹಬ್ಬದಾಚರಣೆಯ ಗುಂಗಿಗೆ ಜಾರುತ್ತಾರೆ. ವರ್ಷವಿಡೀ ದುಡಿದು ವರ್ಷದ ಕಡೆಯಲ್ಲಿ ಬರುವ ಈ ಆಂಗ್ಲೋ-ಯೂರೋಪಿಯನ್ ಹಬ್ಬದ ಸಮಯಕ್ಕಾಗಿ ರಜೆಯನ್ನು ಕಾದಿರಿಸಿ ಕಾತರಿಸುತ್ತಾರೆ.
ನದಿಯಂತೆ ಸಾಗುವ ಕತೆಗಳಿಗೆ ಮೂಲದ ಹಂಗೇಕೆ
ಎಲ್ಲವನ್ನೂ ಒಂದು ವ್ಯಾಖ್ಯಾನಕ್ಕೆ ಬಗ್ಗಿಸುವುದು, ನಮ್ಮ ಅನುಭವಕ್ಕೆಲ್ಲ ಹೆಸರಿಡುವುದು, ಖಚಿತತೆಗೆ ತಹತಹಿಸುವುದು ಅಥವಾ ಎಲ್ಲದಕ್ಕೂ ಸ್ಥಿರವಾಗಿರುವ ಕಠಿಣವಾಗಿರುವ ಉತ್ತರವೇ ಬೇಕೆಂದು ನಮಗೆ ಅನ್ನಿಸುವುದು, ಬದಲಾಗುತ್ತಿರುವ ಸಮಾಜದ ಅತಂತ್ರತೆಯನ್ನು ನಿಭಾಯಿಸುವ ತಂತ್ರಗಾರಿಕೆ ಇರಬಹುದು. ಹಿಂದಿನದನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ನಮ್ಮ ಅಧಿಕಾರ, ಸ್ಥಾನವನ್ನು ಉಳಿಸಿಕೊಳ್ಳುವ ಬಯಕೆಯಾಗಿಯೂ ಬಂದಿರಬಹುದು.
“ಭವಿಷ್ಯದ ಕರಾಳತೆಯನ್ನು ಮುಂಗಂಡ ಎರಡು ಕಾದಂಬರಿಗಳು”
ಜಾಗತಿಕ ಪ್ರಭುತ್ವದಡಿಯಲ್ಲಿರುವ ಹಕ್ಸಲೀಯ ಕಾದಂಬರಿಯಲ್ಲಿ ಗೋಚರಿಸುವ ಸಮಾಜದಲ್ಲಿ ಸಂಬಂಧಗಳಿರುವುದಿಲ್ಲ – ಅಲ್ಲಿರುವ ಸೂತ್ರವೆಂದರೆ ‘ಎಲ್ಲರೂ ಎಲ್ಲರ ಸಂಬಂಧಿ’. ಈ ಜಗತ್ತಿನಲ್ಲಿ ಮಕ್ಕಳು ತಾಯಿಯ ಗರ್ಭದಲ್ಲಲ್ಲ, ವಿಶಾಲ ಕೋಳಿಗೂಡುಗಳಂತಹ ‘ಕಾವುಮನೆ’ಗಳಲ್ಲಿ ಜನ್ಮ ಪಡೆಯುತ್ತಾರೆ. ಟ್ಯೂಬು, ಇನ್ಕ್ಯುಬೇಟರುಗಳಲ್ಲಿರುವಾಗಲೇ ಭ್ರೂಣಗಳನ್ನು ವರ್ಗಗಳಾಗಿ ವಿಂಗಡಿಸಿ, ಆಯಾ ವರ್ಗಗಳಿಗೆ ಹೊಂದುವಂತೆ ಮಾಡಲು ಅವುಗಳಿಗೆ ಹಾರ್ಮೋನುಗಳನ್ನು, ಕೆಮಿಕಲ್ಲುಗಳನ್ನು ನೀಡಲಾಗುತ್ತದೆ. ಕಮಲಾಕರ ಕಡವೆ ಅಂಕಣದಲ್ಲಿ ಬ್ರೇವ್ ನ್ಯೂ ವರ್ಲ್ಡ್ ಕಾದಂಬರಿಯ ವಿಶ್ಲೇಷಣೆ.
‘ಕಾವ್ಯಾ ಓದಿದ ಹೊತ್ತಿಗೆʼ: ಪುಟ್ಟ ಜಗತ್ತಿನ ದೇವರು ಅವನು
ಇದು ಭಾರತದ ಯಾವುದೇ ಊರಿನಲ್ಲೂ ನಡೆಯಬಹುದಾದ ಕಥೆಯೇ ಆದರೂ ಕೇರಳದ ಸಣ್ಣ ಊರಿನ ಪರಿಸರ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ನದಿ, ಮುರಿದ ದೋಣಿಗಳು, ಪಾಳು ಬಿದ್ದ ಮನೆಗಳು, ಅಂಗಡಿ ಮುಂದಿನ ಕಟ್ಟೆಗಳು, ಮಳೆ, ಕಥಕಳಿ ನೃತ್ಯ, ಜನಪದ, ಕಮ್ಯುನಿಸ್ಟ್ ಪಾರ್ಟಿ, ನಕ್ಸಲ್ ಭಯ ಇಂಥ ನೂರಾರು ಸಂಗತಿಗಳ ಜೊತೆಗೆ ಕಾದಂಬರಿ ಕುಸುರಿಗೊಂಡಿದೆ. ಎಲ್ಲಿಯೂ, ಒಂದೂ ಶಬ್ದವನ್ನು ವಾಚ್ಯವಾಗಿಸದೇ, ಮೇಲು ಮೇಲಿನ ಒಂದೂ ಸಂಗತಿಯನ್ನು ಹೇಳದೇ…”
ಹಲವು ಬದುಕಿನ ಕಥೆಗಳ ಎಳೆಗಳು
ತನ್ನ ತಂದೆ ಹೀಗೆ ಸಾಹುಕಾರು ಹೇಳಿದ ಕೆಲಸ ಮಾಡುತ್ತಾರೆ ಎಂದು ಮಗ ಯೋಚಿಸಿಯೂ ಇರಲಿಲ್ಲ. ಮನೆಯಲ್ಲಿ ಅವರ ಗತ್ತು ಗಾಂಭೀರ್ಯ ನೋಡಿದ್ದ ಮಗನಿಗೆ ಅಪ್ಪನ ಮಾತುಗಳು ಅರಗಿಸಿಕೊಳ್ಳಲು ಕಷ್ಟವಾಗಿತ್ತು. ಆಷ್ಟರೊಳಗೆ ಸಾಹುಕಾರರ ಮನೆ ಬಂದಿತು. ಸಾಹುಕಾರನ ಹೆಂಡತಿಯ ಎದುರಿಗೆ ಅಪ್ಪ ಕೈ ಕಟ್ಟಿ ಸಾಹುಕಾರರ ಬಗ್ಗೆ ಕೇಳಿದ್ದು ನೋಡಿ ಮಗನಿಗೆ ಕರುಳು ಹಿಂಡಿದಂತಾಗಿತ್ತು. ತನ್ನ ಅಪ್ಪನಿಗಿಂತ ಚಿಕ್ಕವಯಸ್ಸಿನ ಆ ಸಾಹುಕಾರ ಬಂದಾಗ ಅಪ್ಪ ಕೈ ಮುಗಿದು ಬಗೆ ಬಗೆಯಾಗಿ ಕೇಳಿಕೊಂಡಿದ್ದು ನೋಡಿ ಎದೆಯಲ್ಲಿ ಕೆಂಡ ಸುರಿದಂತಾಗಿತ್ತು.
ಪ್ರಶಾಂತ್ ಬೀಚಿ ಅಂಕಣ
ಸರಳ ಬರವಣಿಗೆ ಸಾಧ್ಯವಾದರೆ ಓದುವಿಕೆಯೂ ಸುಲಲಿತ
ಒಂದೇ ಶಬ್ದವನ್ನು ಸರಿಯಾಗಿಯೇ ಬೇರೆ ಬೇರೆ ರೀತಿಯಲ್ಲಿ ಬರೆಯಲು ಸಾಧ್ಯವಿದ್ದರೂ, ನಮಗೆ ಗೊತ್ತಿಲ್ಲದಂತೆಯೇ ಕನ್ನಡದಲ್ಲಿ ಕನ್ನಡ ಶಬ್ದಗಳ ಸ್ಪೆಲಿಂಗ್ ಇದೆ. ‘ತಂದೆʼಯನ್ನು ‘ತನ್ದೆ‘ ಎಂದು ಬರೆದರೆ ಅದು ‘ತಂದೆ’ಯ ತಪ್ಪು ಸ್ಪೆಲಿಂಗ್ ಆಗುತ್ತದೆ. ಇತ್ತೀಚೆಗೆ ಬಹಳಷ್ಟು ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ಎರಡು ಮೂರು ಒತ್ತಕ್ಷರ ಬಳಸಬೇಕಾಗುತ್ತದೆ. ಅದು ಓದುವುದಕ್ಕೆ ಸ್ವಲ್ಪ ಕಷ್ಟವಾಗುತ್ತದೆ. ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಏಕರೂಪವನ್ನು ತರುವ ಅವಶ್ಯಕತೆ ಇದೆ, ಇಲ್ಲದಿದ್ದರೆ ಒಬ್ಬಬ್ಬರೂ ಒಂದೊಂದು ರೀತಿ ಬರೆದು ಗೊಂದಲವೇರ್ಪಡುತ್ತದೆ.
‘ಇಂಗ್ಲೆಂಡ್ ಪತ್ರ’ದಲ್ಲಿ ಕೇಶವ ಕುಲಕರ್ಣಿ ಓದುವಿಕೆ ಮತ್ತು ಅಕ್ಷರ ಜೋಡಣೆಯ ಕುರಿತು ಬರೆದಿದ್ದಾರೆ.
ಕಾಡಿನ ಮನೆಯ ಅಕ್ಕರೆಯ ಕಾವು
ಕಾಜುಗಾರ ಅವರು ಕಾಜುವಾಡಾದ ಮನೆಯನ್ನು ಶಿಕ್ಷಕರಿಗೆ ಬಿಟ್ಟುಕೊಟ್ಟಿದ್ದಾರೆ. ಸದ್ಯಕ್ಕೆ ಅವರ ಮನೆ ಶಿಕ್ಷಕರಿಂದ ತುಂಬಿದೆ. ನಾಲ್ಕೈದು ಜನ ಶಿಕ್ಷಕ ,ಶಿಕ್ಷಕಿಯರು, ಒಂದೇ ಗ್ಯಾಸ್ ಒಲೆಯಲ್ಲಿ ತಯಾರಾಗುವ ಸಾಮೂಹಿಕ ಭೋಜನ. ಅದು ಬೇಕು ಇದು ಇರಲಿ ಎಂಬ ಯಾವುದೇ ತಗಾದೆ ಇಲ್ಲ. ಇದ್ದ ಸಾಮಾನು ಗಮನಿಸಿ ಆಯಾ ದಿನದ ಮೆನು ರೆಡಿಯಾಗುತ್ತಿತ್ತು. ಏಕೆಂದರೆ ಒಮ್ಮೊಮ್ಮೆ ಅಡುಗೆಗೆ ಬೇಕಾದ ಪದಾರ್ಥಗಳು ಅಣಶಿಯಲ್ಲಿ ಸಿಗುತ್ತಿರಲಿಲ್ಲ. ಅದನ್ನು ದೂರದ ಕುಂಬಾರವಾಡಾ, ಜೋಯಿಡಾದಿಂದ ತರಿಸಬೇಕಿತ್ತು. ಇದ್ದ ಸಾಮಾನಿನಲ್ಲಿಯೆ ‘ಅಗ್ದಿ’ ಬೆಸ್ಟ ಎನಿಸಿದ ‘ಉಂಚಾ ಕ್ವಾಲಿಟಿ’ಯ ಸಾಮಾನು ತೆಗೆದು ಆರಿಸಿ ಅಂಗಡಿಯ ದಿನಕರ ಮಾಮಾ ಅವರು ಮಾಸ್ತರರಿಗೆ..”
‘ಪ್ರೇಕ್ಷಕರಿಗೆ ರಂಗಭೂಮಿಯೇನೂ ಅನಿವಾರ್ಯವಲ್ಲ’
ರಂಗಭೂಮಿ ದಣಿದಿಲ್ಲ, ಬದಲಾಗಿ ತುಂಬ ಆ್ಯಕ್ಟಿವ್ ಆಗಿದೆ. ಈ ಕ್ಷೇತ್ರದಲ್ಲಿ ‘ಕೊಬ್ಬು’ ಖಂಡಿತ ಇದೆ ನಿಜ; ಆದರೆ ಅದೇ ಕೊಬ್ಬು ವಾಸ್ತವ ಮರೆಯುವಂತೆ ಮಾಡುತ್ತಿದೆ. ವಿಚಿತ್ರ ಅಂದರೆ ಇದು ರಂಗಭೂಮಿಯಲ್ಲಿ ತೊಡಗಿಸಿಕೊಂಡವರನ್ನು ದಣಿಸುವ ಬದಲು ತುಂಬ ಆ್ಯಕ್ಟಿವ್ ಮಾಡುತ್ತಿದೆ. ಯಾವ ಬಗೆಯ ಆ್ಯಕ್ಟಿವ್ನೆಸ್ ಅದು ಎಂದು ನಾವು ಗ್ರಹಿಸಬೇಕು. ತಮ್ಮ ಪ್ರಯೋಗಗಳ ಮೂಲಕ ಜನರ ಎದುರು ಸೋಲುತ್ತಿರುವ ಪ್ರಕ್ರಿಯೆಯೇ ಅವರನ್ನು ವಿಚಿತ್ರ ರೀತಿಯಲ್ಲಿ ಆ್ಯಕ್ಟಿವ್ ಮಾಡುತ್ತಿದೆ. -ರಂಗವಠಾರ ಅಂಕಣದಲ್ಲಿ ಎನ್. ಸಿ. ಮಹೇಶ್ ಅವರು ಡಾ. ಶ್ರೀಪಾದ ಭಟ್ ಅವರ ಲೇಖನಕ್ಕೆ ಪ್ರತಿಕ್ರಿಯೆ ದಾಖಲಿಸಿದ್ದಾರೆ.
ಗೋಡೆಯಿಂದ ಹಾರಿದ ಹಾವುಗಳು ಮತ್ತು ಗೋಡೆಗಂಟಿದ ಮನುಷ್ಯರು
ಊರಿನ ಪ್ರತಿ ಬೀದಿಯನ್ನೂ ಅಲಂಕರಿಸಿದ್ದ ಹೊಗೆಸೊಪ್ಪಿನ ಬ್ಯಾರಲ್ಗಳ ಪೈಕಿ ವರ್ಷಕ್ಕೆ ಒಂದಾದರೂ ಬೆಂಕಿಯೊಳಗೆ ಕುಣಿಯುವುದು ಕಾಯಂ ಆದಮೇಲೆ, ಅವುಗಳನ್ನು ಊರಿಂದ ಆಚೆ ಹಾಕುವ ಮಹಾ ಸಂಚಿಕೆಗಳು ಶುರುವಾದವು. ಫಯರ್ ಆಫೀಸಿನವರ ಎಚ್ಚರಿಕೆಗಳು, ಪೊಲೀಸಿನವರ ಖಾರದ ಮಾತು, ಬ್ಯಾರಲ್ ಸುತ್ತಮುತ್ತಲ ಮನೆಗಳ ಮಂದಿಯ ತಕರಾರುಗಳ ಫಲವಾಗಿ ಬಹುತೇಕ ಬ್ಯಾರಲ್ಗಳು ಸದ್ದಿಲ್ಲದಂತೆ ಊರಿಂದ ಆಚೆ ನಡೆದವು. ಹಾಗಂತ ಸಮಸ್ಯೆಗಳೂ ಊರಾಚೆ ನಡೆದು ಹೋದವು ಎನ್ನುವ ಹಾಗಿಲ್ಲ. ‘ಸೊಗದೆ’ ಅಂಕಣದಲ್ಲಿ ಸಹ್ಯಾದ್ರಿ ನಾಗರಾಜ್ ಹೊಗೆಸೊಪ್ಪು ಬ್ಯಾರಲ್ ಗಳ ಕುರಿತು ಬರೆದಿದ್ದಾರೆ.










