ಬಸಪ್ಪ ಕಾಕಾನ ನೆನಪುಗಳು: ಶರಣಗೌಡ ಪಾಟೀಲ ಬರೆದ ಪ್ರಬಂಧ
ಬಸಪ್ಪ ಕಾಕಾನ ಮನಸ್ಸು ಕೂಡ ಬಿಳಿ ಬಟ್ಟೆಯಷ್ಟೇ ಶುಭ್ರಗಿತ್ತು. ಆತ ಬಿಳಿ ಬಟ್ಟೆ ಧರಿಸಿ ಹೊರಟರೆ ಥೇಟ ಸ್ವಾತಂತ್ರ್ಯ ಹೋರಾಟಗಾರ ಕಂಡಂತೆ ಕಾಣಿಸುತ್ತಿದ್ದ. ಎದುರಿಗೆ ಸಿಕ್ಕವರಿಗೆಲ್ಲ ಮಾತಾಡಿಸಿ ಊಟ ತಿಂಡಿ ಕೆಲಸ ಕಾರ್ಯದ ಬಗ್ಗೆ ವಿಚಾರಿಸುತ್ತಿದ್ದ. ಬಸಪ್ಪ ಕಾಕಾನ ಕುಟುಂಬವೂ ಚಿಕ್ಕದಾಗಿತ್ತು. ಒಬ್ಬನೇ ಮಗ ಆತನಿಗೆ ಅಂಗಡಿ ವ್ಯವಹಾರದ ಬಗ್ಗೆ ಯಾವದೂ ಗೊತ್ತಿರಲಿಲ್ಲ. ಬೇಕಂತಲೇ ಬಸಪ್ಪ ಕಾಕಾ ಗೊತ್ತು ಪಡಿಸಿರಲಿಲ್ಲ.
ಶರಣಗೌಡ ಬಿ. ಪಾಟೀಲ, ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ
ಅವ್ವ ಸಾಮಾನ್ಯಳು, ಅಸಮಾನ್ಯಳು!: ಮನು ಗುರುಸ್ವಾಮಿ ಬರಹ
ಕರುಳಬಳ್ಳಿಯನ್ನು ಕಡಿಯುವ ತಾಯಿ ಜಗದಲ್ಲುಂಟೆ? ಡಿ ವಿ ಜಿ ಅವರು ಒಂದುಕಡೆ ಹೇಳುತ್ತಾರೆ “ಕೊಲೆಗಡುಕ ಹುಲಿ ಸಲುಹದೇನ್ ಮರಿಗಳನು”. ಕ್ರೂರಪ್ರಾಣಿ, ಇತರ ಪ್ರಾಣಿಗಳನ್ನು ಕೊಂದು ತಿನ್ನುವ ಹುಲಿ ತನ್ನ ಮರಿಗಳ ವಿಚಾರ ಬಂದಾಗ ಎಷ್ಟು ಮುತುವರ್ಜಿ ವಹಿಸಿ ಸಲುಹಿ ಬೆಳೆಸುತ್ತದೆಯಲ್ಲವೆ? ಪ್ರಾಣಿಗಳೇ ಹೀಗೆಂದ ಮೇಲೆ ಇನ್ನೂ ವಿವೇಚನಾ ಶಕ್ತಿಯುಳ್ಳ ಮನುಷ್ಯ ಹೇಗೆ? ಇಲ್ಲಿ ಮಗು ನೀನು ಕರುಳಬಳ್ಳಿಯನ್ನು ಕಡಿಯಲು ಇಷ್ಟಪಡುವುದಿಲ್ಲ; ಬದಲಿಗೆ ಒಲವೂಡುತ್ತಿರುವೆ ಎನ್ನುತ್ತಿದೆ.
ತಾಯಿಯ ಕುರಿತಾದ ಕವಿತೆಗಳ ಕುರಿತು ಮನು ಗುರುಸ್ವಾಮಿ ಬರಹ
ನಗೆಗಡಲಲಿ ಚಿಂತನೆಯ ಅಲೆ: ರವಿಕುಮಾರ ಬರಹ
ನಾರಾಯಣ ಭಟ್ಟನ ಎಮ್ಮೆ ಸಂಸ್ಕಾರವೇ ಆಗಿರಲಿ ಅಥವಾ ಲೋಯರ್ ಸೆಕೆಂಡರಿಯನ್ನು ಮೊದಲ ಬಾರಿ ಕಟ್ಟಿ ಏಳು ಬಾರಿ ಫೇಲಾಗಿರುವ ರಂಗೇಗೌಡನ ಓದಿನ ವಿಚಾರವೇ ಆಗಿರಲಿ ಆದಿಕರ್ನಾಟಕದವನಾದ ಲಿಂಗನತ್ತ ವ್ಯಕ್ತವಾಗುವ ಶೀನಪ್ಪನ ಜೀವಪರ ಕಾಳಜಿಗಳೇ ಆಗಲಿ ನವಿರಾದ ಹಾಸ್ಯ ಅಂತರ್ಗತವಾಗಿ ಹರಿಯುತ್ತಲೇ ಇರುತ್ತದೆ. ಸಾಹಿತ್ಯವೂ ರಂಗಕೃತಿಯಾಗುವಾಗ ಸಹಜವಾಗಿಯೇ ಹಾಸ್ಯ ಇಮ್ಮಡಿಯಾಗಿ ಕೆಲವೆಡೆ ಹೆಚ್ಚೇ ಅನಿಸುವಂತಿದೆ.
ನಿರಂತರ ರಂಗ ತಂಡದ ‘ಗೊರೂರು’ ನಾಟಕದ ಕುರಿತು ರವಿಕುಮಾರ ಬರಹ
ಡೆಮೆನ್ಷಿಯಾದ ಮೂರು ಕತೆಗಳು: ಮುರಳಿ ಹತ್ವಾರ್ ಬರಹ
ತನ್ಮಾತ್ರ ಬಹುಶ ತನ್ನ ಕಾಲಕ್ಕೆ ಮೀರಿದ ಸಿನೆಮಾ. ಮಧ್ಯಮ ವರ್ಗದ ಕುಟುಂಬವೊಂದರ ಮುಖ್ಯಸ್ಥನಿಗೆ ಪ್ರಿ -ಸೆನೈಲ್ ಡಿಮೆನ್ಶಿಯಾ ಬಂದರೆ ಅದರಿಂದಾಗುವ ಆರ್ಥಿಕ, ಮಾನಸಿಕ, ಮತ್ತು ಸಾಮಾಜಿಕ ಹಿಂಸೆಗಳ ಪರಿಣಾಮಕಾರಿ ಚಿತ್ರಣ ಈ ಸಿನೆಮಾದಲ್ಲಿ ಮೂಡಿದೆ. ಪ್ರಿ-ಸೆನೈಲ್ ಡಿಮೆನ್ಷಿಯಾ ೬೫ ವರ್ಷಕ್ಕೆ ಮುನ್ನವೇ ಕಾಣಿಸಿಕೊಳ್ಳುವ ಡಿಮೆನ್ಷಿಯಾಗೆ ಕೊಟ್ಟ ಹೆಸರು.
“ಡೆಮೆನ್ಷಿಯಾ” ಎಂಬ ಕಾಯಿಲೆ ಸಾಮಾನ್ಯವಾಗುತ್ತಿರುವ ಈ ಸಮಯದಲ್ಲಿ ಅದರ ಕುರಿತಾದ ಚಲನಚಿತ್ರಗಳ ಕುರಿತು ಮುರಳಿ ಹತ್ವಾರ್ ಬರಹ ನಿಮ್ಮ ಓದಿಗೆ
ಯಾವುದೀ “ಮುಳ್ಳು, ನಾಲಿಗೆ…?”: ವಸಂತಕುಮಾರ್ ಕಲ್ಯಾಣಿ ಬರಹ
ಹಾಗಾಗಿ ಕೆಲವು ಗಂಡು ಮಕ್ಕಳು ಹೆಣ್ಣು ಮಕ್ಕಳು ಕೂತ ಭಾಗದಲ್ಲಿನ ಕೊನೆಯ ಬೆಂಚ್‌ಗಳಲ್ಲಿ ಕೂರಬೇಕಿತ್ತು. ಅವರ ಪೆನ್ನಿನಲ್ಲಿ ಇಂಕ್ ಖಾಲಿಯಾದಾಗ, ಒಬ್ಬಳು ಇನ್ನೊಬ್ಬಳಿಂದ ಸಾಲ ಪಡೆಯುತ್ತಿದ್ದಳು. ಅದು ಹೇಗೆಂದರೆ, ಪೆನ್ನಿನ ಮೇಲ್ ಭಾಗದ ತಿರುಪು ತಿರುಗಿಸಿಕೊಂಡು, ಕೆಳಮುಖವಾಗಿ ಇಟ್ಟುಕೊಂಡು ಪುನಃ ತಿರುಪು ಟೈಟ್ ಮಾಡುವಾಗ ಒಂದೊಂದೇ ತೊಟ್ಟು ಇಂಕ್ ಕೆಳಗೆ ಬೀಳುತ್ತಿತ್ತು, ಅದನ್ನು ಇಂಕ್ ಬೇಕಾದವರು ತಮ್ಮ ಪೆನ್ನನ್ನು ಸಿದ್ಧವಾಗಿಟ್ಟುಕೊಂಡು ನಾಜೂಕಾಗಿ ಒಳಗೆ ಬೀಳುವಹಾಗೆ ಮಾಡಿಕೊಂಡು, ಎಷ್ಟು ತೊಟ್ಟು ಬಿತ್ತು ಗಮನಿಸಿ, ಪುನಃ ಸಾಲ ವಾಪಸ್ ಮಾಡಬೇಕು.
ವಸಂತಕುಮಾರ್ ಕಲ್ಯಾಣಿ ಬರಹ
ಕಪ್ಪುಹಲಗೆಯ ಮೇಲಿನ ಬಣ್ಣದ ಅಕ್ಷರಗಳು…: ಆಶಾ ಜಗದೀಶ್ ಪ್ರಬಂಧ
ಒಮ್ಮೆ ಸೀರಿಯಸ್ಸಾಗಿ ನೋಟ್ಸ್ ಕರೆಕ್ಷನ್ ಮಾಡುತ್ತಾ ಕುಳಿತಿದ್ದೆ. ಆಗ ಇದ್ದಕ್ಕಿದ್ದಂತೆ ಜಗದೀಶ, ಜೋರು ಧ್ವನಿಯಲ್ಲಿ ಟೇಬಲ್ ಬಡಿಯುತ್ತಾ “ಚೆಲ್ಲಿದರೂ ಮಲ್ಲಿಗೆಯಾ… ಬಾಣಾಸೂರೇರೀ ಮ್ಯಾಲೆ…” ಅಂತ ಹಾಡತೊಡಗಿದ. ತಲೆ ಎತ್ತಿ ನೋಡಿದರೆ, ಅವ ಈ ಲೋಕದಲ್ಲಂತು ಇರಲಿಲ್ಲ. ಇದ್ದಕ್ಕಿದ್ದಂತೆ ಅವ ಪೆಚ್ಚಾದ. ಮಕ್ಕಳೆಲ್ಲ ಗೊಳ್ ಎಂದು ನಗತೊಡಗಿದರು. ಬಹುಶಃ ಬೇರೆಯ ಹೊತ್ತಾಗಿದ್ದರೆ ನಾನೂ ಅವನೊಂದಿಗೆ ಸೇರಿ ಯುಗಳ ಗೀತೆ ಹಾಡುತ್ತಿದ್ದೆನೇನೋ.
ಶಾಲಾ ಮಕ್ಕಳ ಜೊತೆಗಿನ ಅನುಭವದ ಕುರಿತು ಆಶಾ ಜಗದೀಶ್ ಪ್ರಬಂಧ ನಿಮ್ಮ ಓದಿಗೆ
ಜೀವಕ್ಕೊಂದು ಜೀವ…. : ರೂಪಶ್ರೀ ಕಲ್ಲಿಗನೂರ್ ಬರಹ
ಈಗ ಆಂಟಿ ಮಿಕ್ಕಿಯನ್ನು ವಾಕಿಂಗಿಗೆ ಕರೆದುಕೊಂಡು ಹೋಗುವುದಿಲ್ಲ. ಅಂಕಲ್ ಸಮಯ ಮಾಡಿಕೊಂಡು ಬೇಗ ಬಂದು ಆ ಕೆಲಸವನ್ನು ತಾವೇ ಮಾಡುತ್ತಾರೆ. ಆದರೆ ಚಂದೂ ಆಂಟಿಯ ಪ್ರೀತಿಯಿಂದ ಮಾತ್ರ ಮಿಕ್ಕಿಗೆ ರಿಯಾಯಿತಿ ದೊರೆತಿಲ್ಲ… ಯಾಕೆಂದರೆ ನಾಯಿಗಾಗಲೀ, ಮನುಷ್ಯನಿಗಾಗಲಿ ಯಾವತ್ತೂ ಯಾರದ್ದಾದರೂ ಸಾಂಗತ್ಯ ಬೇಕೆಬೇಕು. ಈಗ ವಯಸ್ಸಾದ ಕಾಲಕ್ಕೆ ಆಂಟಿಯೊಟ್ಟಿಗೆ ಬಹುತೇಕ ಇರುವುದು ಆ ನಾಯಿಯೆ. ಆದರೆ ಈಗ ಆ ನಾಯಿಗೂ ವಯಸ್ಸಾಗುತ್ತಿದೆ ಎನ್ನುವಾಗ, ಅವರ ಕಣ್ಣಲ್ಲಿ ತೆಳುವಾಗಿ ನೀರ ಪರದೆ ಕಾಣುತ್ತದೆ.
ರೂಪಶ್ರೀ ಕಲ್ಲಿಗನೂರ್ ಬರಹ ನಿಮ್ಮ ಓದಿಗೆ
ಗುಣ ಕೆಡಿಸಿದ ಹಣ!: ಶರಣಗೌಡ ಪಾಟೀಲ ಬರೆದ ಪ್ರಬಂಧ
ನಿವೃತ್ತಿ ನಂತರವೂ ಇವನು ಸುಮ್ಮನೆ ಕೂಡದೆ ನಿರಂತರ ಕೆಲಸ ಕಾರ್ಯದಲ್ಲಿ ಮಗ್ನನಾಗಿರುತಿದ್ದ. ಮುಂಜಾನೆ ಊಟ ಮುಗಿಸಿಕೊಂಡು ನಡು ಊರ ಕಟ್ಟೆ ಕಡೆ ಬಂದು ಸಮವಯಸ್ಕರ ಜೊತೆ ಮಳೆ ಬೆಳೆ ಊರು ಕೇರಿ ದೇಶಾವರಿ ಚರ್ಚೆ ಮಾಡುತಿದ್ದ. ಪಕ್ಕದ ಹೋಟಲಿನಿಂದ ಚಹಾ ತರಿಸಿ ತಾನೂ ಕುಡಿದು ಅವರಿಗು ಕುಡಿಸಿ ಖುಷಿ ಪಡುತಿದ್ದ. ಆಗಾಗ ಹೊಲ ಗದ್ದೆಗೂ ಹೋಗಿ ಆಳುಗಳಿಗೆ ಸಲಹೆ ಸೂಚನೆ ಕೊಡುತ್ತಿದ್ದ. ಇವನ ಕ್ರಿಯಾಶೀಲತೆ ನೋಡಿ ಅನೇಕರು ಆಶ್ಚರ್ಯ ಹೊರಹಾಕಿ “ಕುಬೇರಪ್ಪ ನಿವೃತ್ತನಾದರು ಸುಮ್ಮನೆ ಕೂಡೋದಿಲ್ಲ ಏನಾದರು ಮಾಡ್ತಿರ್ತಾನೆ ಶ್ರಮಜೀವಿ” ಅಂತ ವರ್ಣನೆ ಮಾಡುತ್ತಿದ್ದರು.
ಶರಣಗೌಡ ಬಿ. ಪಾಟೀಲ, ತಿಳಗೂಳ ಬರೆದ ಪ್ರಬಂಧ
“ನನ್ನ ಚಲಿಸದ ಕಾಲುಗಳನ್ನು ಹೊತ್ತ ಈ ಭೂಮಿಗೆ..”: ವಿಕ್ರಂ ಹತ್ವಾರ್ ಬರಹ
ಹೀಗೆ ಎಲ್ಲದಕ್ಕು ಕವಿಯ ಎಲ್ಲ ನಿವೇದನೆಯೂ ಕೊನೆಗೆ ‘ಕೇಳು ಓ ನನ್ನ ಹುಂಬ ಪ್ರಾಣವೇ ನಾನಿನ್ನೂ ನಿನ್ನನ್ನು ಚಕಿತಗೊಳಿಸುವುದಿದೆ’ ಎಂದು ಸವಾಲು ಎಸೆಯುತ್ತದೆ. ಅದು ಸ್ಪರ್ಧೆಯಲ್ಲ. ಅಲ್ಲಿ ಗೆಲ್ಲಬೇಕೆಂಬ ಅಥವ ಗೆದ್ದೇ ಗೆಲ್ಲುವೆ ಎನ್ನುವ ಠೇಂಕಾರವಿಲ್ಲ. ಪ್ರಾಣದ ಕೆನ್ನೆ ಚಿವುಟಿ ಕಣ್ಣು ಹೊಡೆದು ಅಣಕಿಸಿದಂತಿದೆ. ಇಂಥ ವಿರಳಾತಿ ವಿರಳ ಕವಿತೆಗಳ ಗುಚ್ಛವೇ ಅವಳ ಬಳಿ ಇತ್ತು…. ಪ್ರಕಟಿಸೋಣ ಅಂದೆ..
ನಾಗಶ್ರೀ ಶ್ರೀರಕ್ಷ ಕವಿತೆಗಳ ಕುರಿತು ವಿಕ್ರಂ ಹತ್ವಾರ್ ಬರಹ