ಶಾಲಾ ಕಾಲೇಜು ದಿನಗಳ ಮೆಲುಕು
ತರಗತಿಯಲ್ಲಿ ಹೆಚ್ಚು ಅಂಕ ತೆಗೆಯುವ ಹಾಗೂ ಅತಿ ಕಡಿಮೆ ಅಂಕ ತೆಗೆಯುವ ವಿದ್ಯಾರ್ಥಿ ಇವರಿಗೆ ಸಮಾನ ಪ್ರೀತಿಪಾತ್ರರು. ನಾನು ಎರಡನೇ ಗುಂಪಿನ ಖಾಯಂ ಸದಸ್ಯ. ಶಾಲೆಯಿಂದ ಹೊರಗೆ ಸಿಕ್ಕಾಗ ಬಾರೋ ಅಂತ ಕೂಗುವರು. ಎಷ್ಟು ಸೋಶಿಯಲ್ ಸ್ಟಡಿಸ್ನಲ್ಲಿ ಈ ಸಲ…. ಅಂತ ಕೇಳುವರು. ನೂರಕ್ಕೆ ಹನ್ನೆರೆಡು ಸಾರ್ ಅನ್ನುತ್ತಿದ್ದೆ. ಹೇಗೆ ಓದುವೆ, ಯಾವ ಹೊತ್ತಿನಲ್ಲಿ ಓದುವುದು…. ಹೀಗೆ ವಿಷಯ ತಿಳಿದು ಅದರ ಪರಿಷ್ಕರಣೆ ಮಾಡುತ್ತಿದ್ದರು.
ಶಾಲಾ ಕಾಲೇಜು ಮೇಷ್ಟರೊಟ್ಟಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ ಎಚ್. ಗೋಪಾಲಕೃಷ್ಣ
ಸಂಬಂಧಗಳನ್ನು ಏಕೆ ತೊರೆಯಬೇಕು?
ಕೆಲವು ಸಂಬಂಧಗಳು ಅಪ್ರಜ್ಞಾಪೂರ್ವಕವಾಗಿ ಕಳೆದುಹೋಗಬಹುದು. ಇನ್ನು ಕೆಲವು ಅಸಹಾಯಕತೆಯಿಂದ ಕಳೆದುಹೋಗುಬಹುದು. ಆದರೆ ಕೆಲವು ಸಂಬಂಧಗಳನ್ನು ನಾವೇ ಪ್ರಜ್ಞಾಪೂರ್ವಕವಾಗಿ ಮುರಿಯಬೇಕಾಗುತ್ತದೆ. ಒಬ್ಬ ಗೆಳೆಯ ನನ್ನಿಂದ ಅನೇಕ ರೀತಿಯಲ್ಲಿ ಉಪಕೃತನಾಗಿದ್ದ, ಸ್ನೇಹಶೀಲವಾಗಿಯೂ ಇದ್ದ. ಆದರೆ ನನಗೆ ಏನೂ ಗೊತ್ತಾಗುತ್ತಿಲ್ಲ ಎನ್ನುವ ಭ್ರಮೆಯಲ್ಲಿ ನನ್ನ ವಿರುದ್ಧವಾಗಿ ಹಿಂದುಗಡೆ ಕೆಲಸ ಮಾಡುತ್ತಿದ್ದ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ನಾಲ್ಕನೆಯ ಪ್ರಬಂಧ ನಿಮ್ಮ ಓದಿಗೆ
ನೆರಿಗೆಬಿದ್ದ ನವಿಲುಗರಿ
ಮಲೆನಾಡಿಗೆ ಬಂದು ಬದುಕ ಕಟ್ಟಿಕೊಂಡ ಗಟ್ಟಿಗಿತ್ತಿ. ಇದೇ ಕಾರಣಕ್ಕೋ ಏನೋ ಕೆಲವೊಂದು ಭಾವ ಹೇಳದೆಯೂ ಅರ್ಥ ಮಾಡಿಕೊಂಡು ನಾನಿದ್ದೇನೆ ಎಂಬ ಗಟ್ಟಿ ಭಾವವನ್ನು ಬಿಗಿಯುತ್ತಿದ್ದಳು. ವಯಸ್ಸಿದ್ದಾಗ ಮನೆಗೆ ಬಂದವರನ್ನೆಲ್ಲಾ ಕೈಲಾದಷ್ಟು ಸತ್ಕರಿಸಿ, ಕೈಲಾಗದ ಇಳಿ ಮುಪ್ಪಲ್ಲಿಯೂ ಕಂಡವರನ್ನೆಲ್ಲ ಕರೆದು ಮಾತನಾಡಿಸಿ ಊರವರಿಗೆಲ್ಲರಿಗೂ ಹತ್ತಿರವಾಗಿದ್ದಳು. ಅಜ್ಜಿಯ ಈ ಅಂತಃಕರಣದ ಅಂತಃಶಕ್ತಿ ಅರಿವಾದದ್ದೇ ಅವಳು ಹೋದಾಗ.
ಹಿರಿಯರೊಟ್ಟಿಗಿನ ಮಾತುಗಳಲ್ಲಿ ಸಿಕ್ಕುವ ಜೀವನ ದರ್ಶನದ ಕುರಿತು ಬರೆದಿದ್ದಾರೆ ಶುಭಶ್ರೀ ಭಟ್ಟ
ಮುನ್ನೂರ ಅರವತ್ತೈದು ದಿನಗಳ ಹೊಸ ತಃಖ್ತೆ!
ಹೊಸದಿನಗಳಲ್ಲಿ ನೀವು ಬರೆಯುವ ದಿನಾಂಕದಲ್ಲಿ ಹಳೆ ಇಸ್ವಿ ಇಣುಕುತ್ತದೆ. ಮತ್ತೆ ಮತ್ತೆ ಹಳೆಯದನ್ನೇ ಬರೆದು ಛೇ ಎಂದು ತಿದ್ದುತ್ತೇವೆ. ಹೊಸದಕ್ಕೆ ಹೊಂದುಕೊಳ್ಳುವುದಕ್ಕೆ ಸಮಯಬೇಕು. ಹಳೆಯದನ್ನು ಬಿಡುವುದಕ್ಕೆ ಸಮಯ ಬೇಕು. ಈ ಹಳೆಯದು ಮತ್ತು ಹೊಸದರ ಸಂಬಂಧ ‘ನ್ಯೂ ಇಯರ್’ ದಿನ ಕೇಕ್ ಕತ್ತರಿಸಿ ತೆಗೆದಂತೆ ಅಲ್ಲ. ಹೊಸದರೊಳಗೆ ಹಳೆಯದು ಸೇರಿಕೊಳ್ಳಬೇಕು. ಹಳೆಯದರ ಒಡಲಿನಲ್ಲಿ ಹೊಸತರ ಗುಟ್ಟಿರಬೇಕು.
ಸದಾಶಿವ ಸೊರಟೂರು ಪ್ರಬಂಧ
ನನ್ನ ಉಂಡೆ ಪಂಚಮಿ ಕತೆ!
ಪಾಕ ಹದಕ್ಕೆ ಬಂದಂತೆನಿಸಿತು. ಅಷ್ಟೂ ಸಾಮಾಗ್ರಿ ಸುರುವಿ ಗೊಟ.. ಗೊಟ.. ಗೊಟಾಯಿಸಿ ಪರಾತಕ್ಕೆ ಸುರುವಿದೆ. ಈಗಲೆ ಕಟ್ಟುವದೋ.. ಆರಿದ ನಂತರವೋ..? ಮತ್ತೆ ಓವರ್ ಟು ಅವ್ವಾ.. ತಲೆ ಇದ್ದಲ್ಲಿಂದಲೆ ಓಡಿತು. ಆರಿದ ಮೇಲೆ ಉಂಡೆಯಾಗುವದಿಲ್ಲವೋ ಮಂಕೆ. ಉಂಡೆ ಬಂಡೆಯಾಗುತ್ತದೆ.. ಅವ್ವ ತಿಳಿ ಹೇಳಿದಂತಾಯಿತು. ಅಂಗೈಗೆ ಎಣ್ಣೆ ನೀರು ಸವರಿಕೊಂಡು ಸುಡು ಸುಡುವದನ್ನೆ ಎಳೆದುಕೊಂಡೆ. ಬರೆ ಕೊಟ್ಟಂತಾಯಿತು. ಹಾ.. ಎಂದಿತು ಜೀವ. ಅದು ನೋವೋ ಸುಖವೋ ಅಂತೂ ಉಂಡೆಗಳೆಂಬ ಗುಂಡುಗಳು ತಯಾರಾದವು.
ಲಿಂಗರಾಜ ಸೊಟ್ಟಪ್ಪನವರ್ ಬರೆದ ಪ್ರಬಂಧ ನಿಮ್ಮ ಓದಿಗೆ
ಭಾರತದ ಮೊದಲ ಮಕ್ಕಳ ಮೂಕಿ ಚಿತ್ರ ʻದಿ ಗಾರ್ಡ್ʼ
ಮಾತುಗಳು ಇರಬೇಕಾದ ಜಾಗದಲ್ಲಿ ಭಾವ ಸಂವೇದನೆ ಮತ್ತು ಸಂಜ್ಞೆಗಳನ್ನು ಪ್ರತಿಮಾತ್ಮಕವಾಗಿ ಸೃಷ್ಟಿಸಿ ಮೌನ ಪ್ರತಿಮೆ, ಭಾವರೂಪಕಗಳಲ್ಲೇ ಕತೆ ಹೇಳುವ ಪ್ರಯೋಗದಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಇದು ಹಿರಿಯರ ಚಿತ್ರವಾಗಿದ್ದರೂ ಅಷ್ಟೇನೂ ಮಹತ್ವ ಅಥವಾ ಹೊಸತನದ ವಿಶೇಷತೆ ಇದಕ್ಕೆ ಸಲ್ಲುತ್ತಿರಲಿಲ್ಲ. ಈ ರೀತಿಯ ಮಕ್ಕಳ ಚಿತ್ರವನ್ನು ನಿರ್ಮಿಸಿದ ದಾಖಲೆ ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ಇಲ್ಲ. ಹಾಗಾಗಿ ʻದಿ ಗಾರ್ಡ್ʼ ಚಿತ್ರ ಆ ಸ್ಥಾನವನ್ನು ತುಂಬಿ ಕನ್ನಡದ ಹೆಚ್ಚುಗಾರಿಕೆ ಮೆರೆದಿದೆ.
ಉಮೇಶ್ ಬಡಿಗೇರ ನಿರ್ದೇಶನದ ಭಾತರದ ಮೊದಲ ಮಕ್ಕಳ ಮೂಕಿ ಚಿತ್ರ ʻದಿ ಗಾರ್ಡ್ʼ ಕುರಿತು ಕುಮಾರ ಬೇಂದ್ರೆ ಬರಹ
ಪೊಟ್ಟಣದ ಮೆಲುಕಿನಲ್ಲಿ..
ಅಶ್ವತ್ಥ ಕಟ್ಟೆಯ ದೊಡ್ಡ ಮರದ ಕೊಂಬೆಗಳಲ್ಲಿ, ಬೀದಿಯ ಸುತ್ತಮುತ್ತಲ ಮನೆಗಳು, ಕಾಂಪೌಂಡ್ ಗೋಡೆಗಳ ಮೇಲೆ, ರಾಮಮಂದಿರದೊಳಗೆ ಹಾಗೂ ದಾರಿಯುದ್ದಕ್ಕೂ ಇರುತ್ತಿದ್ದ ಕೋತಿಗಳ ಗುಂಪಿನ ದಾಳಿಯ ಭೀತಿಯಲ್ಲೇ ದಿನಸಿ ಬ್ಯಾಗನ್ನು ಉದ್ದನೆಯ ಲಂಗದ ನೆರಿಗೆಗಳಲ್ಲಿ ಮುಚ್ಚಿಟ್ಟುಕೊಂಡು ಅವುಗಳಿಂದ ತಪ್ಪಿಸಿಕೊಂಡು ಮನೆಗೆ ಹೋಗುವಷ್ಟರಲ್ಲಿ ಹೈರಾಣಾಗುತ್ತಿದ್ದೆ.
ಎಂ.ಜಿ. ಶುಭಮಂಗಳ ಬರೆದ ಪ್ರಬಂಧ ನಿಮ್ಮ ಓದಿಗೆ
ಮುಸ್ಸಂಜೆಯ ಮಧುರವಾಗಿಸುವ ಪರಿ
ಅವರು ಅಪ್ಪನ ಚಡ್ಡಿ ದೋಸ್ತ್. ಅದೊಂದು ಕಾಲ್ ಇಡೀ ವಾತಾವರಣವನ್ನು ತಿಳಿಯಾಗಿಸಿತು. ಹೋದವರು ಹೋಗೇ ಬಿಟ್ಟರು. ಎಲ್ಲಿ ಹುಡುಕಿದರೂ ಸಿಗುವುದೂ ಇಲ್ಲ, ಹಿಂದಿರುಗಿ ಬರುವುದೂ ಇಲ್ಲ. ಆದರೆ ಇದ್ದವರು ಇನ್ನೂ ಇರಲೇ ಬೇಕಾದ ಅನಿವಾರ್ಯ. ತಮ್ಮ ಸಮಯ ಬರುವವರೆಗೆ… ಅದೂ ಇದ್ದಷ್ಟು ಕಾಲ ನೆಮ್ಮದಿಯಿಂದ ದಿನಗಳೆಯಬೇಕು ಎನಿಸಿ ಈ ರೀತಿ ಮಾಡಿದೆ. ಆದರೂ ಅಪ್ಪನ ಜೀವನೋತ್ಸಾಹ ಎಲ್ಲರಿಗೂ ಮಾದರಿಯಾಗುವಂತಿದೆ.
ಕಾವ್ಯಶ್ರೀ ಮಹಾಗಾಂವಕರ ಬರಹ ನಿಮ್ಮ ಓದಿಗೆ
ವೀರಭುಜಬಲದ ದುಂಡಿಯೋ… ಸುಕೋಮಲ ಸುಂದರಿಯೋ…
ಎರಡೂ ಕೈಗಳಿಗೂ ಅಮ್ರದ ದುಂಡಿಯನ್ನು ಪಟ್ಟಗಣಿಯಿಂದ ಸುತ್ತಿ ಬಿಗಿಯಾಗಿ ಹಿಡಿದುಕೊಂಡು ಮೊಣಕಾಲಿನವರೆಗೂ ತಿರಿವಿಕೊಂಡ. ಮೊಣಕಾಲಿನ ಮೇಲೆ ಜಪ್ಪಯ್ಯ ಎಂದರೂ ದುಂಡಿ ಒಂದಿಂಚೂ ಮೇಲೇಳಲಿಲ್ಲ. ಸ್ವಲ್ಪ ಸಾವರಿಸಿಕೊಂಡು ನರನಾಡಿಗಳಲ್ಲಿನ ಸಮಸ್ತ ಶಕ್ತಿಯನ್ನು ಒಟ್ಟು ಮಾಡಿ ಉಡ ಕೂಡಾ ನಾಚುವಂತೆ ಬಿಗಿಯಿಡಿದು ಬಿಲ್ಲಿನಂತೆ ಹಿಂದಕ್ಕೆ ಬಾಗಿ ದುಂಡಿಯನ್ನು ಮೇಲೆಳೆದುಕೊಂಡ.
ಮಂಜಯ್ಯ ದೇವರಮನಿ, ಸಂಗಾಪುರ ಬರೆದ ಪ್ರಬಂಧ ನಿಮ್ಮ ಓದಿಗೆ









